Chhaava: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡ್ಯಾನ್ಸ್ ಸೀಕ್ವೆನ್ಸ್ ಡಿಲೀಟ್ ಮಾಡುತ್ತೇವೆ; ನಿರ್ದೇಶಕ ಲಕ್ಷ್ಮಣ್ ಉಟೇಕರ್
ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಅವರ ಆಕ್ಷೇಪಣೆಯ ನಂತರ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ವಿಕ್ಕಿ ಕೌಶಲ್ ಅವರ ನೃತ್ಯದ ದೃಶ್ಯವನ್ನು ಛಾವಾ ಸಿನಿಮಾದಿಂದ ತೆಗೆದುಹಾಕಲಿದ್ದೇನೆ ಎಂದಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ಅವರ ಬದುಕು ಕಟ್ಟಿಕೊಡುವ ಐತಿಹಾಸಿಕ ಚಿತ್ರ ‘ಛಾವಾ’ಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಸಂಭಾಜಿ ಪಾತ್ರಧಾರಿ ವಿಕ್ಕಿ ಕೌಶಲ್ ಮತ್ತು ಸಂಭಾಜಿ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಅಭಿನಯಿಸಿದ್ದ ರಶ್ಮಿಕಾ ಅವರ ನೃತ್ಯದ ಸನ್ನಿವೇಶವನ್ನು ತೆಗೆದುಹಾಕಲು ನಿರ್ದೇಶಕ ಲಕ್ಷ್ಮಣ್ ಉಟೇಕರ್ ನಿರ್ಧರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮರಾಠಿ ಭಾಷೆ ಮತ್ತು ಕೈಗಾರಿಕೆ ಖಾತೆಗಳ ಸಚಿವರಾಗಿರುವ ಉದಯ್ ಸಮಂತ್ ಅವರ ಆಕ್ಷೇಪಣೆಯ ನಂತರ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ನಿರ್ದೇಶಕ ಲಕ್ಷ್ಮಣ್ ಉಟೇಕರ್ ಹೇಳಿದ್ದೇನು?
ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ರಾಜ್ ಠಾಕ್ರೆ ಅವರನ್ನು ಭೇಟಿಯಾದ ನಂತರ, ಛಾವಾ ಚಿತ್ರದಿಂದ ನೃತ್ಯದ ದೃಶ್ಯವನ್ನು ತೆಗೆದುಹಾಕಲು ನಿರ್ಧರಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ‘ನಾನು ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದೇನೆ. ಅವರು ಅತ್ಯಾಸಕ್ತಿಯ ಓದುಗ ಮತ್ತು ಅಧ್ಯಯನಶೀಲ ವ್ಯಕ್ತಿ. ಅವರಿಂದ ಕೆಲವು ಸಲಹೆಗಳು ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡಿದ್ದೇನೆ. ಅವರ ಮಾತುಗಳು ನನಗೆ ತುಂಬಾ ಸಹಾಯಕವಾಗಿವೆ. ಅವರನ್ನು ಭೇಟಿಯಾದ ನಂತರ, ಸಂಭಾಜಿ ಮಹಾರಾಜ್ ಲೆಜಿಮ್ ನೃತ್ಯ ಮಾಡುತ್ತಿದ್ದ ದೃಶ್ಯಗಳನ್ನು ತೆಗೆಯಲು ನಿರ್ಧರಿಸಿದ್ದೇನೆ” ಎಂದು ಹೇಳಿರುವ ಬಗ್ಗೆ ’ಇಂಡಿಯಾ ಟುಡೆ' ವರದಿ ಮಾಡಿದೆ.
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡ್ಯಾನ್ಸ್ ಸೀಕ್ವೆನ್ಸ್ ಅನ್ನು ಸಿನಿಮಾದಿಂದ ಡಿಲೀಟ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಲೆಜಿಮ್ ಡ್ಯಾನ್ಸ್ ದೊಡ್ಡ ವಿಷಯವಲ್ಲ. ಆ ಲೇಜಿಮ್ ನೃತ್ಯಕ್ಕಿಂತ ಸಂಭಾಜಿ ಮಹಾರಾಜರು ಬಹಳ ದೊಡ್ಡವರು. ಹಾಗಾಗಿ ನಾವು ಆ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕುತ್ತೇವೆ ಎಂದಿದ್ದಾರೆ.
ಸಂಭಾಜಿ ಮಹಾರಾಜ್ ಘನತೆಯೇ ಮುಖ್ಯ
ಸಂಭಾಜಿ ಮಹಾರಾಜರ ಚಿತ್ರಣವು ಶಿವಾಜಿ ಸಾವಂತ್ ಅವರ ಛಾವಾ ಪುಸ್ತಕದಿಂದ ಪ್ರೇರಿತವಾಗಿದೆ ಎಂಬ ಬಗ್ಗೆ ಅವರು ವಿವರಿಸಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜರ ಪರಂಪರೆಗಿಂತ ಲೇಜಿಮ್ ನೃತ್ಯವು ಹೆಚ್ಚು ಮಹತ್ವದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಮಾತಿನಲ್ಲಿ ಸಿನಿಮಾದಲ್ಲಿ ಸಂಭಾಜಿಗೆ ಎಷ್ಟು ಗೌರವ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಜನವರಿ 29 ರಂದು ವಿಶೇಷ ಪ್ರೀಮಿಯರ್ ಶೋ
ಚಲನಚಿತ್ರ ಬಿಡುಗಡೆಯ ಮೊದಲು ಇತಿಹಾಸಕಾರರು ವೀಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು. ಜನವರಿ 29 ರಂದು ವಿಶೇಷ ಪ್ರೀಮಿಯರ್ ಶೋ ಅನ್ನು ಆಯೋಜಿಸಲಾಗಿದೆ ಎಂದು ಉಟೇಕರ್ ಉಲ್ಲೇಖಿಸಿದ್ದಾರೆ. ಇದರಲ್ಲಿ ಇತಿಹಾಸಕಾರರು ಮತ್ತು ತಜ್ಞರು ಸಿನಿಮಾ ನೋಡಿ ಅಭಿಪ್ರಾಯ ತಿಳಿಸಲಿದ್ದಾರೆ ಎಂದಿದ್ದಾರೆ.
