ವಿಡಾಮುಯರ್ಚಿ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಅಜಿತ್ ಕುಮಾರ್ ಸಿನಿಮಾಗೆ ಪ್ರಶಂಸೆ ಸಿಕ್ಕಷ್ಟು ಹಣ ಸಿಗಲಿಲ್ಲ
ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ‘ವಿಡಾಮುಯರ್ಚಿ’ ಸಿನಿಮಾ ನಿನ್ನೆ (ಫೆ. 6) ಬಿಡುಗಡೆಯಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಗಳಿಸಿದ್ದೆಷ್ಟು ಎಂಬ ಮಾಹಿತಿ ಇಲ್ಲಿದೆ.

ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ‘ವಿಡಾಮುಯರ್ಚಿ’ 1997ರಲ್ಲಿ ಬಿಡುಗಡೆಯಾದ ಅಮೇರಿಕನ್ ಚಲನಚಿತ್ರ ಬ್ರೇಕ್‌ಡೌನ್ ಚಿತ್ರದ ಕಥೆಯನ್ನು ಆಧರಿಸಿದೆ. ನಿರ್ದೇಶಕ ಮಾಗಿಜ್ ತಿರುಮೇನಿ ಈ ಕಥೆಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ಸಾಕಷ್ಟು ಪಾಸಿಟಿವ್ ಟಾಕ್ ಪಡೆದುಕೊಂಡಿದ್ದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಹಣ ಗಳಿಸುವಲ್ಲಿ ಕೊಂಚ ವಿಫಲವಾಗಿದೆ. ಸಕ್ನಿಲ್ಕ್ ಪ್ರಕಾರ, ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ನಟಿಸಿರುವ ಈ ಚಿತ್ರವು ತನ್ನ ಮೊದಲ ದಿನದಂದು ಭಾರತದಲ್ಲಿ 15.99 ಕೋಟಿ ಹಣ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ಮೊದಲ ದಿನದ ಕಲೆಕ್ಷನ್ ವಿವರ
ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡುಬಂದಿದ್ದು, ಬೆಳಿಗ್ಗೆ 58.81%, ಮಧ್ಯಾಹ್ನ 60.27% ಮತ್ತು ಸಂಜೆ ಪ್ರದರ್ಶನಗಳಿಗೆ 54.79%, ತಿರುಚ್ಚಿ ಮತ್ತು ಪಾಂಡಿಚೇರಿಯಲ್ಲಿ ಚೆನ್ನೈಗಿಂತ 92.00% ಮತ್ತು 91.67% ರಷ್ಟು ಹೆಚ್ಚಿನ ಗಳಿಕೆ ದಾಖಲಾಗಿದ್ದರೆ, ಚೆನ್ನೈನಲ್ಲಿ 88.33% ರಷ್ಟು ಗಳಿಕೆ ಕಂಡುಬಂದಿದೆ. ಅಜಿತ್ ಅವರ ಹಿಂದಿನ ಚಿತ್ರ, 2023 ರ ' ತುನಿವು' , ತನ್ನ ಮೊದಲ ದಿನದಂದು ಭಾರತದಲ್ಲಿ 24.4 ಕೋಟಿ ಗಳಿಸಿತ್ತು. ಆದರೆ ‘ವಿಡಾಮುಯರ್ಚಿ’ ‘ತುನಿವು’ ಸಿನಿಮಾಗಿಂತ ಕಡಿಮೆ ಹಣ ಗಳಿಸಿದೆ.
ವಾರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತದೆಯೇ? ಅಥವಾ ಇದೇ ರೀತಿ ಮುಂದುವರಿಯಲಿದಿಯೇ? ಎಂದು ಕಾದು ನೋಡಬೇಕಿದೆ. ಸಿನಿಮಾ ಚೆನ್ನಾಗಿದೆ ಎಂಬ ವಿಮರ್ಶೆಗಳು ಲಭ್ಯವಾದ ನಂತರವೂ ಗಳಿಕೆಯಲ್ಲಿ ಕೊಂಚ ಹಿಂದಿರುವುದು ಆಶ್ಚರ್ಯಕರವಾಗಿದೆ. ಮೊದಲ ದಿನದ ಮೊದಲ ಪ್ರದರ್ಶನದ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆಯೂ ಜೋರಾಗಿತ್ತು.
ಅಜಿತ್ ಅವರ ಅಭಿನಯವೇ ಹೆಚ್ಚು ಮೆಚ್ಚುಗೆ ಪಡೆದಿದೆ
ಅಜೆರ್ಬೈಜಾನ್‌ನಲ್ಲಿ ಕುಖ್ಯಾತ ಗುಂಪಿನಿಂದ ತನ್ನ ಪತ್ನಿ ಅಪಹರಿಸಲ್ಪಟ್ಟ ನಂತರ ರಕ್ಷಣಾ ಕಾರ್ಯಾಚರಣೆಗೆ ಹೊರಟ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಅಜಿತ್ ರೆಗ್ಯುಲರ್ ಆಗಿ ತೋರಿಸಿದ ಎಲ್ಲಾ ಇಮೇಜ್‌ಗಳನ್ನೂ ಈ ಸಿನಿಮಾದಲ್ಲಿ ಮುರಿದಿದ್ದಾರೆ. ಈ ಸಿನಿಮಾದಲ್ಲಿ ಎಲ್ಲ ಸಿನಿಮಾಗಳಿಗಿಂತ ಭಿನ್ನವಾಗಿ ಅಭಿನಯಿಸಿದ್ದಾರೆ. ಸಂಪೂರ್ಣವಾಗಿ ವಿಭಿನ್ನ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳಿಗಿಂತಲೂ ಈ ಸಿನಿಮಾದಲ್ಲಿ ಅಜಿತ್ ಅವರ ಅಭಿನಯವೇ ಹೆಚ್ಚು ಮೆಚ್ಚುಗೆ ಪಡೆದಿದೆ. ಹೆಂಡತಿಯನ್ನು ಕಳೆದುಕೊಳ್ಳುವ ದೃಶ್ಯಗಳಲ್ಲಿ ಅವರ ಅಭಿನಯವು ಅವರ ಅನುಭವದ ಪ್ರಬುದ್ಧತೆಯನ್ನು ತೋರಿಸುವಂತಿದೆ. ಸೌಂದರ್ಯ ದೇವತೆಯಂತೆ ಬಂದ ತ್ರಿಷಾ ನಟನೆಯಲ್ಲಿ ನ್ಯಾಯ ಒದಗಿಸಿದ್ದಾರೆ. ಖಳನಾಯಕನಾಗಿ ಅರ್ಜುನ್ ಮತ್ತು ಆರವ್‌ಗಿಂತ ರೆಜಿನಾ ಅಭಿನಯ ಉತ್ತಮವಾಗಿದೆ.
ಮಗಿಜ್ ತಿರುಮೇನಿ ಅಜಿತ್ ಅವರ ಎಲ್ಲಾ ಹಳೆಯ ಇಮೇಜ್‌ಗಳನ್ನು ಮುರಿದು ಹೊಸ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಆನಂದದಾಯಕವಾಗಿದೆ. ದೃಶ್ಯ ಭಾಷೆಯ ಮೂಲಕ ಕಥೆಯನ್ನು ಪ್ರಸಾರ ಮಾಡುವ ರೀತಿ ಅದ್ಭುತವಾಗಿದೆ.
