Viduthalai Part 2 OTT: ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2 ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ವೀಕ್ಷಣೆ ಎಲ್ಲಿ? ಹೀಗಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  Viduthalai Part 2 Ott: ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2 ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ವೀಕ್ಷಣೆ ಎಲ್ಲಿ? ಹೀಗಿದೆ ಮಾಹಿತಿ

Viduthalai Part 2 OTT: ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2 ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ವೀಕ್ಷಣೆ ಎಲ್ಲಿ? ಹೀಗಿದೆ ಮಾಹಿತಿ

Viduthalai Part 2 OTT Release Date: ವಿಜಯ್ ಸೇತುಪತಿ, ವೆಟ್ರಿಮಾರನ್ ಕಾಂಬಿನೇಷನ್‌ನ ರಾಜಕೀಯ ಹಿನ್ನೆಲೆಯ ಕಾದಂಬರಿ ಆಧರಿತ ವಿಡುದಲೈ ಪಾರ್ಟ್‌ 2 ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಯಾವ ಒಟಿಟಿ, ಯಾವಾಗಿನಿಂದ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ? ಇಲ್ಲಿದೆ ಮಾಹಿತಿ.

ವಿಡುದಲೈ ಪಾರ್ಟ್‌ 2 ಚಿತ್ರದ ಒಟಿಟಿ ಬಿಡುಗಡೆ ಯಾವಾಗ
ವಿಡುದಲೈ ಪಾರ್ಟ್‌ 2 ಚಿತ್ರದ ಒಟಿಟಿ ಬಿಡುಗಡೆ ಯಾವಾಗ (Image\ Imdb)

Viduthalai Part 2 OTT: ವೆಟ್ರಿಮಾರನ್‌ ಮತ್ತು ವಿಜಯ್‌ ಸೇತುಪತಿ ಕಾಂಬಿನೇಷನ್‌ನಲ್ಲಿ ಮೂಡಿಬಂದ ವಿಡುದಲೈ ಪಾರ್ಟ್‌ 2 ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಮುಂದುವರಿಸಿದೆ. ವಿಜಯ್‌ ಸೇತುಪತಿ ಸಿನಿಮಾ ಎಂಬ ಕಾರಣಕ್ಕೆ ಮತ್ತು ವೆಟ್ರಿಮಾರನ್‌ ನಿರ್ದೇಶನದ ಸಿನಿಮಾ ಎಂಬ ಉಮೇದಿಗೋ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿತ್ತು. ಅದರಂತೆ, ಡಿ 20ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಈ ಹಿಂದಿನ ವಿಡುದಲೈ ಪಾರ್ಟ್‌ 1 ಚಿತ್ರದ ಮುಂದುವರಿದ ಭಾಗವಾಗಿದ್ದರಿಂದ ಕುತೂಹಲ ಮೂಡಿಸಿತ್ತು. ಇದೀಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.

ಮೊದಲ ಭಾಗದಲ್ಲಿ ಕಾನ್‌ಸ್ಟೇಬಲ್ ಕುಮಾರೇಸನ್‌ ಮೇಲೆ ಇಡೀ ಕಥೆ ಕೇಂದ್ರಿಕೃತವಾಗಿತ್ತು. ವಿಡುದಲೈ ಭಾಗ 2 ಸಿನಿಮಾದಲ್ಲಿ ಪೆರುಮಾಳ್ ವಾಥಿಯಾರ್‌ ಅವರ ಬದುಕಿನ ಪುಟವನ್ನು ತೆರೆದಿದ್ದಾರೆ ನಿರ್ದೇಶಕರು. ವ್ಯವಸ್ಥೆಯ ದಬ್ಬಾಳಿಕೆಯ ವಿರುದ್ಧ ಹೋರಾಡುವ ಕ್ರಾಂತಿಕಾರಿ ನಾಯಕನಾಗಿ ಸೇತುಪತಿ ಕಂಡಿದ್ದಾರೆ. ಬರಹಗಾರ ಜಯಮೋಹನ್‌ ಅವರ ಕಾದಂಬರಿಯನ್ನು ಆಧರಿಸಿ ವಿಡುದಲೈ 2 ಸಿನಿಮಾ ನಿರ್ದೇಶನ ಮಾಡಿದ್ದಾರೆ ವೆಟ್ರಿಮಾರನ್‌. ಪಿರಿಯಾಡಿಕ್‌ ಡ್ರಾಮಾ ಶೈಲಿಯಲ್ಲಿ ಮೂಡಿಬಂದ ಈ ಚಿತ್ರಕ್ಕೆ ಇಳಯರಾಜಾ ಸಂಗೀತ ನೀಡಿದ್ದು, ವೆಲ್ರಾಜ್ ಛಾಯಾಗ್ರಹಣವಿದೆ.

ಕಲೆಕ್ಷನ್‌ ಕುಸಿತ

ವೀಕ್ಷಕರಿಂದ ಪಾಸಿಟಿವ್‌ ಪ್ರತಿಕ್ರಿಯೆ ಗಿಟ್ಟಿಸಿಕೊಂಡ ವಿಡುದಲೈ 2 ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿ ಕೊಂಚ ಮಂಕಾಗಿತ್ತು. ಆರಂಭದ ಒಂದೆರಡು ದಿನ ಮಾತ್ರ ಹೇಳಿಕೊಳ್ಳುವಂಥ ಕಲೆಕ್ಷನ್‌ ಮಾಡಿದ್ದನ್ನು ಬಿಟ್ಟರೆ, ನಂತರದ ದಿನಗಳಲ್ಲಿ ಕಲೆಕ್ಷನ್‌ ಇಳಿಮುಖವಾಗಿತ್ತು. ಈ ಚಿತ್ರ, ಬಿಡುಗಡೆಯಾದ 9 ದಿನಗಳಲ್ಲಿ ಕೇವಲ 50.36 ಕೋಟಿ ರೂ. ಮಾತ್ರ ಗಳಿಸಲಷ್ಟೇ ಶಕ್ತವಾಗಿದೆ. ಈ ನಡುವೆ ಇದೇ ಸಿನಿಮಾ ಒಟಿಟಿಗೆ ಯಾವಾಗ ಬರಬಹುದು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ಒಟಿಟಿ ಬಿಡುಗಡೆ ಯಾವಾಗ?

ತಮಿಳು ಕ್ರೈಮ್ ಥ್ರಿಲ್ಲರ್ ವಿಡುದಲೈ ಪಾರ್ಟ್‌ 2 ಜನವರಿ 17 ರಂದು ಒಟಿಟಿ ಅಂಗಳ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮೊದಲ ಭಾಗವೂ ಇದೇ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿತ್ತು. ಇದೀಗ ಪಾರ್ಟ್‌ 2 ಡಿಜಿಟಲ್‌ ಹಕ್ಕುಗಳನ್ನು ಜೀ 5 ಒಟಿಟಿ ಪಡೆದುಕೊಂಡಿದ್ದು, ಜನವರಿ ಮೂರನೇ ವಾರದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎನ್ನಲಾಗುತ್ತಿದೆ. ತಮಿಳಿನ ಜತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ಸ್ಟ್ರೀಮ್‌ ಆಗಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

----

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope