ಕನ್ನಡ ಸುದ್ದಿ  /  Entertainment  /  Vijay Raghavendra Starrer Raghu Trailer Released Rsm

Raghu Trailer Released: 'ರಾಘು' ಟ್ರೇಲರ್‌ ರಿಲೀಸ್‌: ಸೋಲೋ ಚಿನ್ನಾರಿ ಮುತ್ತನಿಗೆ ಸಾಥ್‌ ನೀಡಿದ ಶಿವಣ್ಣ

ಇದೊಂದು ರೀತಿ ಸೋಲೋ ಆಕ್ಟಿಂಗ್‌ ಸಿನಿಮಾ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಈ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದೆ. ಹೊಸ ಬಗೆಯ ಥ್ರಿಲ್ ನೀಡುವ ಚಿತ್ರದಲ್ಲಿ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ರಾಘು ಟ್ರೇಲರ್‌ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ.

'ರಾಘು' ಟ್ರೇಲರ್‌ ರಿಲೀಸ್‌
'ರಾಘು' ಟ್ರೇಲರ್‌ ರಿಲೀಸ್‌

ದಕ್ಷಿಣ ಚಿತ್ರರಂಗದಲ್ಲೀಗ ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರ ಬಹಳ ಜೋರಾಗಿದೆ. ಇದರ ಜೊತೆ ಜೊತೆಗೆ ಜನರು ಪ್ರಯೋಗಾತ್ಮಕ ಸಿನಿಮಾಗಳನ್ನೂ ಮೆಚ್ಚುತ್ತಿದ್ದಾರೆ. ಈ ಸಾಲಿನಲ್ಲಿ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಹೊಸ ಸಿನಿಮಾ ಬಂದು ನಿಂತಿದೆ. ಈ ಸಿನಿಮಾ ಇದೇ ಏಪ್ರಿಲ್‌ 28ಕ್ಕೆ ತೆರೆ ಮೇಲೆ ಬರುತ್ತಿದೆ.

ವಿಜಯ್‌ ರಾಘವೇಂದ್ರ ಅವರ ಹೊಸ ಚಿತ್ರಕ್ಕೆ ರಾಘು ಎಂದು ಹೆಸರಿಡಲಾಗಿದೆ. ಎಂ. ಆನಂದ್‌ ರಾಜ್‌ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಟಿಸಿರುವುದು ವಿಜಯ ರಾಘವೇಂದ್ರ ಮಾತ್ರ. ಇದೊಂದು ರೀತಿ ಸೋಲೋ ಆಕ್ಟಿಂಗ್‌ ಸಿನಿಮಾ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಈ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದೆ. ಹೊಸ ಬಗೆಯ ಥ್ರಿಲ್ ನೀಡುವ ಚಿತ್ರದಲ್ಲಿ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ರಾಘು ಟ್ರೇಲರ್‌ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ. ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಡಿಗಳಿರುತ್ತದೆ. ಆದರೆ ಇವನ ದಾರಿಯಲ್ಲಿ ಆಪತ್ತು ಎಂಬ ಅಡ್ಡ ದೊಡ್ಡ ಗೋಡೆ ನಿಂತಿತ್ತು ಎಂಬ ಪಂಚಿಂಗ್ ಡೈಲಾಗ್ ಮೂಲಕ ರಾಘು ಟ್ರೇಲರ್ ತೆರೆದುಕೊಳ್ಳಲಿದೆ. ಶಿವಣ್ಣನ ವಾಯ್ಸ್, ವಿಜಯ್ ರಾಘವೇಂದ್ರ ಆಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನ ಸೆಳೆಯುತ್ತಿದೆ.

ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ರಾಘು ಸಿನಿಮಾ ಬಗ್ಗೆ ಮಾತಾನಾಡಲು ತುಂಬಾ ಅಂಶವಿದೆ. 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್‌, ಸಾಂಗ್ ನೋಡಿ ನಾವೆಲ್ಲಾ ಖುಷಿ ಪಡುತ್ತಿದ್ದೇವೆ. ನೀವೆಲ್ಲರೂ ಅದರ ಬಗ್ಗೆ ಮಾತನಾಡಲು ಏಪ್ರಿಲ್‌ 28 ಬರಬೇಕು. ಇಡೀ ಚಿತ್ರದಲ್ಲಿ ಒಬ್ಬನೇ ಕಲಾವಿದ ನಿಮ್ಮೆಲ್ಲರನ್ನು ರಂಜಿಸುತ್ತಿದ್ದಾನೆ. ಸಿನಿಮಾ ನೋಡಿ ಬೆಂಬಲಿಸಿ, ಖಂಡಿತ ಸಿನಿಮಾ ನಿಮ್ಮೆಲ್ಲರಿಗೂ ಇಷ್ಟವಾಗಲಿದೆ ಎಂದು ವಿಜಯ ರಾಘವೇಂದ್ರ ಮನವಿ ಮಾಡಿದ್ದಾರೆ.

'ರಾಘು' ಚಿತ್ರತಂಡ
'ರಾಘು' ಚಿತ್ರತಂಡ

ನಿರ್ದೇಶಕ ಎಂ. ಆನಂದ್ ರಾಜ್ ಮಾತನಾಡಿ, ರಾಘು ಪಯಣಕ್ಕೆ ಬೆಂಬಲ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಎಲ್ಲಾ ಆಕ್ಟರ್ಸ್ಸ್ ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಅದರಲ್ಲಿ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಎಣೆದು ಸಿನಿಮಾ ಮಾಡುವುದು ಸ್ವಲ್ಪ ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಚಿತ್ರವಾಗಿದ್ದು, ಸೋಲೋ ಆಕ್ಟರ್ ಕಥೆಯಾಗಿದ್ದರೂ ಹಾಡುಗಳು, ಫೈಟ್‌, ಟ್ವಿಸ್ಟ್ ಎಲ್ಲವೂ ಇದೆ. ಇದೇ 28ಕ್ಕೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದರು.

ನಿರ್ಮಾಪಕ ರನ್ವಿತ್ ಶಿವಕುಮಾರ್ ಮಾತನಾಡಿ, ರಾಘು ಬರೀ ಸಿನಿಮಾವಲ್ಲ. ನಮ್ಮ ತಂಡಕ್ಕೆ ಒಂದು ಎಮೋಷನ್. ಹೊಸ ತಂಡ ಹೊಸ ಪ್ರೊಡಕ್ಷನ್ ಜೊತೆ ಬಂದಾಗ ಜನರಿಗೆ ತಲುಪಿಸಲು ಇರುವ ಸೇತುವ ಮಾಧ್ಯಮ. ಆರಂಭದಿಂದ ಇಲ್ಲಿವರೆಗೂ ಅದೇ ಪ್ರೀತಿ ತೋರಿಸುತ್ತಿದ್ದೀರ. ಅಂದುಕೊಂಡತೆ ಅಚ್ಚುಕಟ್ಟಾಗಿ ಸಿನಿಮಾ ಮುಗಿಸಿಕೊಂಡಿದ್ದೇವೆ. ದೊಡ್ಮನೆಯಿಂದ ಬೆಂಬಲ ಸಿಕ್ಕಿದೆ. ಶಿವಣ್ಣ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಕನ್ನಡಕ್ಕೆ ನಮ್ಮ ತಂಡದಿಂದ ಒಳ್ಳೆ ಸಿನಿಮಾ ಕೊಟ್ಟಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಅಭಿಷೇಕ್ ಕೋಟ ಮಾತನಾಡಿ, ರಾಘು ಸರ್ ಅದ್ಭುತ ಕಲಾವಿದರು. ಆನಂದ್‌ ಅವರಿಗೆ ಧನ್ಯವಾದ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಸಿನಿಮಾ ಮಾಡಿ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದರು. ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಅಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳೀಧರ್‌ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ ಅಲೋಕ್‌ ಧ್ವನಿ ನೀಡಿದ್ದಾರೆ.

IPL_Entry_Point