OTT Releases This Week: ಒಟಿಟಿಗೆ ಎಂಟ್ರಿ ಕೊಟ್ಟ ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2; ಈ 11 ಸಿನಿಮಾ, ವೆಬ್‌ಸಿರೀಸ್‌ಗಳೂ ಇಂದಿನಿಂದಲೇ
ಕನ್ನಡ ಸುದ್ದಿ  /  ಮನರಂಜನೆ  /  Ott Releases This Week: ಒಟಿಟಿಗೆ ಎಂಟ್ರಿ ಕೊಟ್ಟ ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2; ಈ 11 ಸಿನಿಮಾ, ವೆಬ್‌ಸಿರೀಸ್‌ಗಳೂ ಇಂದಿನಿಂದಲೇ

OTT Releases This Week: ಒಟಿಟಿಗೆ ಎಂಟ್ರಿ ಕೊಟ್ಟ ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2; ಈ 11 ಸಿನಿಮಾ, ವೆಬ್‌ಸಿರೀಸ್‌ಗಳೂ ಇಂದಿನಿಂದಲೇ

OTT Releases This Week: ಒಟಿಟಿ ವೀಕ್ಷಕರು ಈ ವಾರ ಟಾಪ್‌ ರೇಟೆಡ್‌ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳನ್ನು ಕಣ್ತುಂಬಿಕೊಳ್ಳಬಹುದು. ತಮಿಳಿನ ವಿಜಯ್‌ ಸೇತುಪತಿ ನಟನೆಯ ವಿಡುದಲೈ ಪಾರ್ಟ್‌ 2 ಚಿತ್ರದಿಂದ ಹಿಡಿದು, ಟಾಲಿವುಡ್‌, ಬಾಲಿವುಡ್‌ ಜತೆಗೆ ಹಾಲಿವುಡ್‌ ಕಂಟೆಂಟ್‌ಗಳು ಇಂದು (ಜ. 17) ಹಲವು ಒಟಿಟಿಗಳಲ್ಲಿ ಬಿಡುಗಡೆ ಆಗಿವೆ.

ಒಟಿಟಿಯಲ್ಲಿ ಈ ವಾರ ಯಾವೆಲ್ಲ ಸಿನಿಮಾಗಳು ಪ್ರಸಾರವಾಗಲಿವೆ
ಒಟಿಟಿಯಲ್ಲಿ ಈ ವಾರ ಯಾವೆಲ್ಲ ಸಿನಿಮಾಗಳು ಪ್ರಸಾರವಾಗಲಿವೆ

OTT Releases This Week: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಮತ್ತು ಮಕ್ಕಳ್‌ ಸೆಲ್ವನ್‌ ವಿಜಯ್‌ ಸೇತುಪತಿ ಕಾಂಬಿನೇಷನ್‌ನ ವಿಡುದಲೈ ಪಾರ್ಟ್‌ 2 ಸಿನಿಮಾ ಕೊನೆಗೂ ಒಟಿಟಿ ಅಂಗಳ ಪ್ರವೇಶಿಸಿದೆ. ಡಿಸೆಂಬರ್‌ 20ರಂದು ತೆರೆಗೆ ಬಂದಿದ್ದ ಈ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದರೂ, ಕಲೆಕ್ಷನ್‌ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಈಗ ಇದೇ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡ ಒಂದು ತಿಂಗಳಿಗೆ ಒಟಿಟಿಗೆ ಆಗಮಿಸಿದೆ. 

ಖ್ಯಾತ ಬರಹಗಾರ ಜಯಮೋಹನ್‌ ಅವರ ಕಾದಂಬರಿಯನ್ನೇ ಆಧರಿಸಿ ವಿಡುದಲೈ ಸರಣಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವೆಟ್ರಿಮಾರನ್‌. ಪಿರಿಯಾಡಿಕ್‌ ಡ್ರಾಮಾ ಶೈಲಿಯ ಮೂಡಿಬಂದ ಈ ಚಿತ್ರಕ್ಕೆ ಇಳಯರಾಜಾ ಸಂಗೀತ ನೀಡಿದ್ದು. ವೆಲ್ರಾಜ್ ಛಾಯಾಗ್ರಹಣವಿದೆ. ಮೊದಲ ಭಾಗದಲ್ಲಿ ವಾಥಿಯಾರ್‌ ಬಂಧನದ ಮೂಲಕ ಸಿನಿಮಾ ಮುಗಿದಿತ್ತು. ಎರಡನೇ ಭಾಗದಲ್ಲಿ ಬಂಧನವಾದ ವಾಥಿಯಾರ್ ಯಾರು?‌ ಅವನ ಹಿನ್ನೆಲೆ ಮತ್ತು ಹೋರಾಟ ಹೇಗಿತ್ತು ಎಂಬ ಕಥೆಯೇ ಹೈಲೈಟ್‌.  

ಯಾವ ಒಟಿಟಿಯಲ್ಲಿ ವಿಡುದಲೈ ಪಾರ್ಟ್‌ 2 ವೀಕ್ಷಣೆ?

ವಿಡುದಲೈ ಪಾರ್ಟ್‌ 1 ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ಜೀ 5 ಪಡೆದುಕೊಂಡಿತ್ತು. ಇದೀಗ ಎರಡನೇ ಭಾಗದ ಹಕ್ಕುಗಳೂ ಜೀ5 ಪಾಲಾಗಿವೆ. ಅದರಂತೆ ಇಂದಿನಿಂದ (ಜ 17) ಜೀ5 ಒಟಿಟಿಯಲ್ಲಿ ವಿಡುದಲೈ ಪಾರ್ಟ್‌ 2 ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ಸಿನಿಮಾಗಳ ಜತೆಗೆ ಬೇರೆ ಬೇರೆ ಒಟಿಟಿ ವೇದಿಕೆಗಳಲ್ಲಿಯೂ ಹತ್ತಾರು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಪ್ರಸಾರ ಆರಂಭಿಸಿವೆ.  ಒಂದೇ ದಿನದಲ್ಲಿ 11 ಕಂಟೆಂಟ್‌ಗಳು ಸ್ಟ್ರೀಮಿಂಗ್‌ ಆಗುತ್ತಿವೆ. ಅವುಗಳಲ್ಲಿ ಹಾರರ್, ಆಕ್ಷನ್, ಕಾಮಿಡಿ, ಕ್ರೈಮ್ ಥ್ರಿಲ್ಲರ್, ಫ್ಯಾಂಟಸಿ ಥ್ರಿಲ್ಲರ್‌ಗಳು ಸೇರಿವೆ. ಇಲ್ಲಿವೆ ಸಿನಿಮಾ, ವೆಬ್‌ಸಿರೀಸ್‌ಗಳು. 

ನೆಟ್‌ಫ್ಲಿಕ್ಸ್‌  ಒಟಿಟಿ

  • ಬ್ಯಾಕ್ ಇನ್ ಆಕ್ಷನ್ (ಇಂಗ್ಲಿಷ್ ಆಕ್ಷನ್ ಕಾಮಿಡಿ ಡೈರೆಕ್ಟ್ ಒಟಿಟಿ ಫಿಲ್ಮ್)- ಜನವರಿ 17
  • ದಿ ರೋಶನ್ಸ್ (ಹೃತಿಕ್ ರೋಷನ್ ಫ್ಯಾಮಿಲಿ ಡಾಕ್ಯುಮೆಂಟರಿ ಹಿಂದಿ ಸರಣಿ) - ಜನವರಿ 17

ಆಹಾ ಒಟಿಟಿ

  • ಅನ್ ಸ್ಟಾಪಬಲ್ ಸೀಸನ್ 4 ರಾಮ್ ಚರಣ್ ಎಪಿಸೋಡ್ (ತೆಲುಗು ಟಾಕ್ ಶೋ) - ಜನವರಿ 17
  • ವನ್ಸ್ ಅಪಾನ್ ಎ ಟೈಮ್ ಇನ್ ಮದ್ರಾಸ್ (ತಮಿಳು ಕ್ರೈಮ್ ಥ್ರಿಲ್ಲರ್ ಸಿನಿಮಾ)- ಜನವರಿ 17

ಅಮೆಜಾನ್ ಪ್ರೈಮ್ ಒಟಿಟಿ: ವಾಂಟ್ ಟು ಟಾಕ್ (ಹಿಂದಿ ಥ್ರಿಲ್ಲರ್ ಡ್ರಾಮಾ ಚಿತ್ರ) - ಜನವರಿ 17

ಜಿಯೋ ಸಿನೆಮಾ ಒಟಿಟಿ: ಹಾರ್ಲೆ ಕ್ವಿನ್ ಸೀಸನ್ 5 (ಇಂಗ್ಲಿಷ್ ಅನಿಮೇಟೆಡ್ ಆಕ್ಷನ್ ವೆಬ್ ಸರಣಿ) -  ಜನವರಿ 17

ಲಯನ್ಸ್ ಗೇಟ್ ಪ್ಲೇ ಒಟಿಟಿ: ಹೆಲ್ಬಾಯ್ ದಿ ಕ್ರಾಕ್ಡ್ ಮ್ಯಾನ್ (ಹೆಲ್ಬಾಯ್ 4) (ಹಾಲಿವುಡ್ ಹಾರರ್ ಆಕ್ಷನ್ ಥ್ರಿಲ್ಲರ್ ಚಿತ್ರ)- ಜನವರಿ 17

ಜೀ 5 ಒಟಿಟಿ: ವಿದುತಲೈ ಪಾರ್ಟ್ 2 (ತಮಿಳು ಆಕ್ಷನ್ ಡ್ರಾಮಾ ಮೂವಿ)- ಜನವರಿ 17

ಮನೋರಮಾ ಮ್ಯಾಕ್ಸ್: ಐ ಆಮ್ ಕಥಲನ್ (ಮಲಯಾಳಂ ಹಾಸ್ಯ ಚಿತ್ರ) - ಜನವರಿ 17

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌: ಪವರ್ ಆಫ್ ಪಾಂಚ್ (ಹಿಂದಿ ಫ್ಯಾಂಟಸಿ ವೆಬ್‌ಸಿರೀಸ್‌) - ಜನವರಿ 17

ಒಟ್ಟು 11 ಸಿನಿಮಾ, ವೆಬ್‌ಸಿರೀಸ್‌ಗಳು

ಈ ವಾರ ಒಟ್ಟು 11 ಚಿತ್ರಗಳು ಮತ್ತು ವೆಬ್ ಸರಣಿಗಳು ಒಟಿಟಿಯಲ್ಲಿ ಪ್ರಸಾರವಾಗಲಿವೆ. ವಿಜಯ್ ಸೇತುಪತಿ ಅವರ ವಿಡುತಲೈ ಪಾರ್ಟ್‌ 2 ಸಿನಿಮಾ ಕುತೂಹಲ ಮೂಡಿಸಿದೆ. ಈ ಸಿನಿಮಾ ಕನ್ನಡಕ್ಕೂ ಡಬ್‌ ಆಗಿ ಸ್ಟ್ರೀಮಿಂಗ್‌ ಆರಂಭಿಸಿದೆ. ಇದಲ್ಲದೆ, ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಪಾತಾಳ್‌ ಲೋಕ್ ಸೀಸನ್ 2, ಹಾಲಿವುಡ್ ಹಾರರ್‌ ಆಕ್ಷನ್ ಚಿತ್ರ ಹೆಲ್ ಬಾಯ್ ದಿ ಕ್ರಾಕ್ಡ್ ಮ್ಯಾನ್, ಹಿಂದಿ ಫ್ಯಾಂಟಸಿ ವೆಬ್ ಸರಣಿ ಪವರ್ ಆಫ್ ಪಾಂಚ್, ಮಲಯಾಳಂ ಹಾಸ್ಯ ಚಿತ್ರ ಐ ಆಮ್ ಕಥಲನ್ ವಿಶೇಷ ಎನಿಸಿಕೊಂಡಿವೆ. 

ಕುತೂಹಲ ಕೆರಳಿಸಿದ ಕಂಟೆಂಟ್‌ಗಳು

ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ ವನ್ಸ್ ಅಪಾನ್ ಎ ಟೈಮ್ ಇನ್ ಮದ್ರಾಸ್ ಕುತೂಹಲ ಮೂಡಿಸಿದರೆ, ಅಭಿಷೇಕ್ ಬಚ್ಚನ್ ಅವರ  ಐ ವಾಂಟ್ ಟು ಟಾಕ್ ಕೂಡ ಆಸಕ್ತಿದಾಯಕ ಸಿನಿಮಾ ಸಾಲಿನಲ್ಲಿದೆ. 

Whats_app_banner