ಕನ್ನಡ ಸುದ್ದಿ  /  Entertainment  /  Vikrant Rona Movie Trending On Ott Placed Top 3

Vikrant Rona Trending on OTT: ರಕ್ಕಮ್ಮ ಡಾನ್ಸ್‌ ಮಾಡಿದವ್ರಿಗೆ ಚಿತ್ರತಂಡ ನೀಡಿದ ಬಹುಮಾನವೆಷ್ಟು?; ಒಟಿಟಿ ಟ್ರೆಂಡಿಂಗ್‌ನಲ್ಲಿ ‘ರೋಣ’...

‘ವಿಕ್ರಾಂತ್ ರೋಣ’ ಜೀ5 ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ. ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರೀ ಕಂಟೆಂಟ್ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ರಕ್ಕಮ್ಮ ಡಾನ್ಸ್‌ ಮಾಡಿದವ್ರಿಗೆ ಚಿತ್ರತಂಡ ನೀಡಿದ ಬಹುಮಾನವೆಷ್ಟು?; ಒಟಿಟಿ ಟ್ರೆಂಡಿಂಗ್‌ನಲ್ಲಿ ʼರೋಣʼ...
ರಕ್ಕಮ್ಮ ಡಾನ್ಸ್‌ ಮಾಡಿದವ್ರಿಗೆ ಚಿತ್ರತಂಡ ನೀಡಿದ ಬಹುಮಾನವೆಷ್ಟು?; ಒಟಿಟಿ ಟ್ರೆಂಡಿಂಗ್‌ನಲ್ಲಿ ʼರೋಣʼ...

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ 'ವಿಕ್ರಾಂತ್‌ ರೋಣ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್‌ ಸೇರಿದೆ. ಕಿಚ್ಚನ ಸಿನಿಕರಿಯರ್ ನ ವಿಭಿನ್ನ ಸಿನಿಮಾ ಎನಿಸಿಕೊಂಡ ಈ ಚಿತ್ರ ಜುಲೈ 28 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಸಿನಿಮಾಗೆ ಚಿತ್ರರಸಿಕರು ಜೈಕಾರ ಹಾಕಿದ್ದರು. ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ 'ವಿಕ್ರಾಂತ್‌ ರೋಣ' ಕಿಚ್ಚನ ಬರ್ತ್‌ಡೇ ಪ್ರಯುಕ್ತ Zee5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಸಹ ಆರಂಭಿಸಿತ್ತು.

ಇದೀಗ ಇದೇ ‘ವಿಕ್ರಾಂತ್ ರೋಣ’ ಜೀ5 ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ. ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರೀ ಕಂಟೆಂಟ್ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಕೇವಲ 24 ಗಂಟೆಯಲ್ಲಿ 500 ಮಿಲಿಯನ್ಸ್ ಮಿನಿಟ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿತ್ತು. ಇದೇ ಸಿನಿಮಾ 1000ಕ್ಕೂ ಹೆಚ್ಚು ಮಿಲಿಯನ್ಸ್ ಮಿನಿಟ್ಸ್‌ ಸ್ಟ್ರೀಮಿಂಗ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಅಲ್ಲದೇ ಕಳೆದ ಮೂರು ವಾರಗಳಿಂದ ಜೀ5 ಒಟಿಟಿಯಲ್ಲಿ ಟ್ರೆಂಡಿಂಗ್ ಟಾಪ್ 3 ಸ್ಥಾನ ಕೂಡ ಗಿಟ್ಟಿಸಿಕೊಂಡಿದೆ.

ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದವರಿಗೆ ಉಡುಗೊರೆ..

#VikranthronaZEE5Contest ನಡಿ ಜೀ5 ಒಟಿಟಿ ಸಂಸ್ಥೆ ರಕ್ಕಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಬಹುಮಾನ ಹಾಗೂ ಪ್ರಮುಖ 10 ಸ್ಪರ್ಧಿಗಳಿಗೆ ಉಡುಗೊರೆ ಹಾಗೂ ಸುದೀಪ್ ವೈಯಕ್ತಿಕ ಪಾತ್ರ ಕೊಡುವುದಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ರಕ್ಕಮ್ಮ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಹಣ ಹಾಗೂ 10 ಜನಕ್ಕೆ ಕಿಚ್ಚನ ಕಡೆಯಿಂದ ಪತ್ರ ಹಾಗೂ ಉಡುಗೊರೆ ನೀಡಲಾಗಿದೆ.

ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಯಲ್ಲಿಯೂ ಬಿಡುಗಡೆಯಾಗಿದ್ದ ಈ ಸಿನಿಮಾ, ವಿಶೇಷ ಎಂಬಂತೆ 3ಡಿಯಲ್ಲಿಯೂ ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಇನ್ನೂ ಸಹ ಚಿತ್ರಮಂದಿರದಲ್ಲಿ 25 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿರುವ 'ವಿಕ್ರಾಂತ್‌ ರೋಣ' ಚಿತ್ರ, ಇದೀಗ ಒಟಿಟಿಯಲ್ಲಿಯೂ ಮೋಡಿ ಮಾಡುತ್ತಿದೆ.

ಜುಲೈ 28ರಂದು ಬಿಗ್ ಸ್ಕ್ರೀನ್ ನಲ್ಲಿ ದಿಬ್ಬಣ ಹೊರಟಿದ್ದ ವಿಕ್ರಾಂತ್ ರೋಣನಿಗೆ ಸುದೀಪಿಯನ್ಸ್ ಬಹುಪರಾಕ್ ಎಂದಿದ್ದರು. ತ್ರಿಡಿಯಲ್ಲಿ ಕಿಚ್ಚನ ನಯಾ ಅವತಾರ ಕಣ್ತುಂಬಿಕೊಂಡು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಬಿಟೌನ್ ಬೊಂಬೆ ಜಾಕ್‌ಲೀನ್‌ ಫರ್ನಾಂಡಿಸ್, ಅನೂಪ್ ಭಂಡಾರಿ, ನೀತಾ ಅಶೋಕ್ ಸೇರಿ ಹಲವರು ಅಭಿನಯಿಸಿದ್ದರು. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲೂ ಕೋಟಿ-ಕೋಟಿ ಕಮಾಯಿ ಮಾಡಿತ್ತು.

ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಿಸಿದ್ದ ರಾ ರಾ ರಕ್ಕಮ್ಮ ಹಾಡು ಹಿಟ್ ಲೀಸ್ಟ್ ಸೇರಿತ್ತು. ಬಿ ಅಜನೀಶ್ ಲೋಕನಾಥ್ ಸಂಗೀತವಿದ್ದ ಎಲ್ಲಾ ಹಾಡುಗಳು ಪ್ರೇಕ್ಷಕನ ಗಮನಸೆಳೆದಿದ್ದವು. ಸಿಲ್ವರ್ ಸ್ಕ್ರೀನ್ ನಲ್ಲಿ ಗುಮ್ಮನ ಆರ್ಭಟ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಮನೆಯಲ್ಲಿಯೇ ಕುಳಿತು Zee 5 ಒಟಿಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

IPL_Entry_Point