ಕನ್ನಡ ಸುದ್ದಿ  /  Entertainment  /  Vikrant Rona On Hotstar Vikrant Rona Streaming In Tamil, Telugu And Hindi

Vikrant Rona OTT Release: Zee5 ಬಳಿಕ ಈ ಒಟಿಟಿಯಲ್ಲಿಯೂ ವಿಕ್ರಾಂತ್‌ ರೋಣ ಸ್ಟ್ರೀಮಿಂಗ್‌ ಶುರು..

ಸುದೀಪ್ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಕೇವಲ 24 ಗಂಟೆಯಲ್ಲಿ 500 ಮಿಲಿಯನ್ಸ್ ಮಿನಿಟ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿತ್ತು. ಇದೀಗ ಇದೇ ಸಿನಿಮಾ ಬೇರೆ ಒಟಿಟಿ ವೇದಿಕೆಗೆ ಹೊರಡಲು ಸಿದ್ಧತೆ ನಡೆಸಿದೆ.

Zee5 ಬಳಿಕ ಈ ಒಟಿಟಿಯಲ್ಲಿಯೂ ವಿಕ್ರಾಂತ್‌ ರೋಣ ಸ್ಟ್ರೀಮಿಂಗ್‌ ಶುರು..
Zee5 ಬಳಿಕ ಈ ಒಟಿಟಿಯಲ್ಲಿಯೂ ವಿಕ್ರಾಂತ್‌ ರೋಣ ಸ್ಟ್ರೀಮಿಂಗ್‌ ಶುರು.. (Twitter/ Disney+ Hotstar)

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ 'ವಿಕ್ರಾಂತ್‌ ರೋಣ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್‌ ಸೇರಿದೆ. ಕಿಚ್ಚನ ಸಿನಿಕರಿಯರ್ ನ ವಿಭಿನ್ನ ಸಿನಿಮಾ ಎನಿಸಿಕೊಂಡ ಈ ಚಿತ್ರ ಜುಲೈ 28 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಸಿನಿಮಾಗೆ ಚಿತ್ರರಸಿಕರು ಜೈಕಾರ ಹಾಕಿದ್ದರು. ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ 'ವಿಕ್ರಾಂತ್‌ ರೋಣ' ಕಿಚ್ಚನ ಬರ್ತ್‌ಡೇ ಪ್ರಯುಕ್ತ Zee5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಸಹ ಆರಂಭಿಸಿತ್ತು.

ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರೀ ಕಂಟೆಂಟ್ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸುದೀಪ್ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಕೇವಲ 24 ಗಂಟೆಯಲ್ಲಿ 500 ಮಿಲಿಯನ್ಸ್ ಮಿನಿಟ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿತ್ತು. ಇದೀಗ ಇದೇ ಸಿನಿಮಾ ಬೇರೆ ಒಟಿಟಿ ವೇದಿಕೆಗೆ ಹೊರಡಲು ಸಿದ್ಧತೆ ನಡೆಸಿದೆ.

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಶುರು...

ಹೌದು, ವಿಕ್ರಾಂತ್‌ ರೋಣ ಸಿನಿಮಾದ ಕನ್ನಡ ಅವತರಣಿಕೆ ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದೇ ಚಿತ್ರದ ತೆಲುಗು, ತಮಿಳು ಮತ್ತು ಹಿಂದಿ ಅವತರಣಿಕೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ಗೆ ಸಮಯ ಕೂಡಿ ಬಂದಿದೆ. ಇಂದು ರಾತ್ರಿಯಿಂದಲೇ (ಸೆ. 16) ಪ್ರಸಾರವಾಗಲಿದೆ ಎಂದು ಸ್ಟ್ರೀಮಿಂಗ್‌ ಪಾರ್ಟನರ್‌ ಡಿಸ್ನಿ ಹಾಟ್‌ಸ್ಟಾರ್‌ ತನ್ನ ಅಧಿಕೃತ ಟ್ವಿಟರ್‌ ಪುಟದಲ್ಲಿ ಶೇರ್‌ ಮಾಡಿಕೊಂಡಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಯಲ್ಲಿಯೂ ಬಿಡುಗಡೆಯಾಗಿದ್ದ ಈ ಸಿನಿಮಾ, ವಿಶೇಷ ಎಂಬಂತೆ 3ಡಿಯಲ್ಲಿಯೂ ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಇನ್ನೂ ಸಹ ಚಿತ್ರಮಂದಿರದಲ್ಲಿ 25 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿರುವ 'ವಿಕ್ರಾಂತ್‌ ರೋಣ' ಚಿತ್ರ, ಇದೀಗ ಜೀ5 ಬಳಿಕ ಹಾಟ್‌ಸ್ಟಾರ್‌ನಲ್ಲಿಯೂ ಮೋಡಿ ಮಾಡಲಿದೆ.

ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗಿದ್ದ 'ವಿಕ್ರಾಂತ್‌ ರೋಣ' ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಕ್‌ಲೀನ್ ಫರ್ನಾಂಡಿಸ್​ ಸುದೀಪ್ ಜೊತೆಗೆ ಹೆಜ್ಜೆ ಹಾಕಿದ್ದರು. "ರಾ ರಾ ರಕ್ಕಮ್ಮ.." ಹಾಡು ಸಹ ಸೂಪರ್ ಹಿಟ್ ಲಿಸ್ಟ್ ಸೇರಿತ್ತು. ಸ್ಪೆಷಲ್ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದ ಜಾಕಿಗೆ ಕನ್ನಡಿಗರು ಮನಸೋತಿದ್ದರು.

IPL_Entry_Point