ತನ್ನ ಚಾಲಕನ ಮದುವೆಯಲ್ಲಿ ನೇಹಾ ಕಕ್ಕರ್‌ ಭಾಗಿ; ವಧುವಿಗೆ ಚಿನ್ನದ ಸರ ಉಡುಗೊರೆ ನೀಡಿದ ಗಾಯಕಿಗೆ ಶಹಬ್ಬಾಸ್‌ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಮನರಂಜನೆ  /  ತನ್ನ ಚಾಲಕನ ಮದುವೆಯಲ್ಲಿ ನೇಹಾ ಕಕ್ಕರ್‌ ಭಾಗಿ; ವಧುವಿಗೆ ಚಿನ್ನದ ಸರ ಉಡುಗೊರೆ ನೀಡಿದ ಗಾಯಕಿಗೆ ಶಹಬ್ಬಾಸ್‌ ಎಂದ ನೆಟ್ಟಿಗರು

ತನ್ನ ಚಾಲಕನ ಮದುವೆಯಲ್ಲಿ ನೇಹಾ ಕಕ್ಕರ್‌ ಭಾಗಿ; ವಧುವಿಗೆ ಚಿನ್ನದ ಸರ ಉಡುಗೊರೆ ನೀಡಿದ ಗಾಯಕಿಗೆ ಶಹಬ್ಬಾಸ್‌ ಎಂದ ನೆಟ್ಟಿಗರು

ಗಾಯಕಿ ನೇಹಾ ಕಕ್ಕರ್ ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ಇತ್ತೀಚೆಗೆ ತಮ್ಮ ಚಾಲಕನ ಮದುವೆಗೆ ಹಾಜರಾಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಸೊಗಸಾದ ಕಪ್ಪು ಬಣ್ಣದ ಉಡುಪು ಧರಿಸಿದ್ದ ಗಾಯಕಿ ವೇದಿಕೆಯಲ್ಲಿ ನವವಿವಾಹಿತರಿಗೆ ಶುಭ ಹಾರೈಸಿದ್ದಾರೆ.

ತನ್ನ ಚಾಲಕನ ಮಗಳ ಮದುವೆಯಲ್ಲಿ ನೇಹಾ ಭಾಗಿ
ತನ್ನ ಚಾಲಕನ ಮಗಳ ಮದುವೆಯಲ್ಲಿ ನೇಹಾ ಭಾಗಿ

ಗಾಯಕಿ ನೇಹಾ ಕಕ್ಕರ್ ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ಇತ್ತೀಚೆಗೆ ತಮ್ಮ ಚಾಲಕನ ಮದುವೆಗೆ ಹಾಜರಾಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಸೊಗಸಾದ ಕಪ್ಪು ಬಣ್ಣದ ಉಡುಪು ಧರಿಸಿದ್ದ ಗಾಯಕಿ ವೇದಿಕೆಯಲ್ಲಿ ನವವಿವಾಹಿತರಿಗೆ ಶುಭ ಹಾರೈಸಿದ್ದಾರೆ. ಪಾಪರಾಜಿ ವೈರಲ್ ಭಯಾನಿ ಹಂಚಿಕೊಂಡಿರುವ ವೈರಲ್ ವಿಡಿಯೋದಲ್ಲಿ ಕಕ್ಕರ್ ಸಿಂಗ್, ಅವರ ಸಹೋದರ ಟೋನಿ ಕಕ್ಕರ್ ಮತ್ತು ಅವರ ತಾಯಿ ನಿತಿ ಕಕ್ಕರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿರುವುದನ್ನು ನೋಡಬಹುದು. ಸಿನಿಮಾ ನಟಿಯರು, ಗಾಯಕರು, ಗಾಯಕಿಯರು ಖ್ಯಾತಿ ಪಡೆದ ಬಳಿಕ ತಮ್ಮ ಕೆಲಸಗಾರರ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ಅಪರೂಪ. ಆದರೆ, ಗಾಯಕಿ ನೇಹಾ ಕಕ್ಕರ್‌ ಕುಟುಂಬ ಸಮೇತ ಆಗಮಿಸಿ ಎಲ್ಲರ ಹೃದಯ ಗೆದ್ದಿದ್ದಾರೆ.

ಗಾಯಕಿ ನೇಹಾ ಕಕ್ಕರ್ ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ದಂಪತಿ ಕೈಕೈ ಹಿಡಿದು ವೇದಿಕೆಗೆ ಆಗಮಿಸಿ, ವಧು ವರರಿಗೆ ಶುಭಾಶಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮನಾಲಿ ಟ್ರಾನ್ಸ್ ಗಾಯಕಿ ವಧುವಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು. ನಂತರ ನೃತ್ಯ ಮಹಡಿಯಲ್ಲಿ ತಮ್ಮ ಕುಟುಂಬದೊಂದಿಗೆ ಕುಳಿತು ನೃತ್ಯ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಅತಿಥಿಗಳು ಕಕ್ಕರ್ ಅವರೊಂದಿಗೆ ಚಿತ್ರಗಳು ಮತ್ತು ಸೆಲ್ಫಿಗಳನ್ನು ಕ್ಲಿಕ್ ಮಾಡಲು ಮುಗಿಬಿದ್ದಿದ್ದಾರೆ.

ಪಾಪರಾಜಿ ವೈರಲ್ ಭಯಾನಿ ಹಂಚಿಕೊಂಡ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. "ಇವರದ್ದು ಸುಂದರವಾದ ವಿನಮ್ರ ವ್ಯಕ್ತಿತ್ವ. ಸಮಾಜದ ಗಣ್ಯ ವ್ಯಕ್ತಿಗಳು ಹೀಗಿರಬೇಕು" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಯಾವುದೇ ಹಮ್ಮು ಬಿಮ್ಮುಇಲ್ಲದೆ ತಮ್ಮ ಮನೆಯ ಕಾರ್ಯ ಎಂಬಂತೆ ಭಾಗವಹಿಸಿದ್ದು ನೋಡಿ ಖುಷಿಯಾಯಿತು ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕಳೆದ ತಿಂಗಳು ಸೋನು ಕಕ್ಕರ್, ನೇಹಾ ಮತ್ತು ಟೋನಿಯ ಅಕ್ಕ ತಮ್ಮ ಒಡಹುಟ್ಟಿದವರೊಂದಿಗೆ ಬೇರ್ಪಡುವುದಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. "ಇಬ್ಬರು ಪ್ರತಿಭಾನ್ವಿತ ಸೂಪರ್‌ಸ್ಟಾರ್‌ಗಳಾದ ಟೋನಿ ಕಕ್ಕರ್ ಮತ್ತು ನೇಹಾ ಕಕ್ಕರ್ ಅವರಿಗೆ ನಾನು ಇನ್ನು ಮುಂದೆ ಸಹೋದರಿಯಲ್ಲ ಎಂದು ನಿಮಗೆಲ್ಲರಿಗೂ ತಿಳಿಸಲು ತುಂಬಾ ದುಃಖವಾಗುತ್ತಿದೆ. ಇದು ನನಗೆ ತುಂಬಾ ನೋವು ತಂದಿದೆ" ಎಂದು ನೇಹಾಳ ಅಕ್ಕ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದರು. ಇದು ಸಾಕಷ್ಟು ಸಂಚಲನ ಮೂಡಿಸಿತ್ತು. ಇದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ಈ ಪೋಸ್ಟ್‌ ಅನ್ನು ಸೋಷಿಯಲ್‌ ಮೀಡಿಯಾದಿಂದ ಡಿಲೀಟ್‌ ಮಾಡಿದ್ದರು. ಇದಾದ ಬಳಿಕ ಇವರು ಯಾವುದೇ ಸೃಷ್ಟಿಕರಣ ನೀಡಿರಲಿಲ್ಲ. ಇದು ಅಭಿಮಾನಿಗಳಿಗೆ ಗೊಂದಲ ಉಂಟು ಮಾಡಿತ್ತು.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in