ಕನ್ನಡ ಸುದ್ದಿ  /  Entertainment  /  Viral Video Karimani Malika Ninallanti Singer Shabbir Dange Folk Style Song Rmy

ಕರಿಮಣಿ ಮಾಲಿಕ ನಿನಲ್ಲಂತಿ.. ಅಂತು ಇಂತು ಮುಗಿಸ್ಯಾಕ ನಿಂತಿ ನನ್ನ ಸಂತಿ; ಗಾಯಕ ಶಬ್ಬೀರ್ ಡಾಂಗೆ ಜಾನಪದ ಶೈಲಿಯ ಹಾಡು ವೈರಲ್

Shabbir Dange: ಗಾಯಕ ಶಬ್ಬೀರ್ ಡಾಂಗೆ ಅವರ ಧ್ವನಿಯಲ್ಲಿ ಕರಿಮಣಿ ಮಾಲಿಕ ನಿನಲ್ಲಂತಿ ಹಾಡನ್ನು ಜಾನಪದ ಶೈಲಿಯಲ್ಲಿ ಕೇಳಿ. ಇವರ ಹಾಡು ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಾಯಕ ಶಬ್ಬೀರ್ ಡಾಂಗೆ ಅವರ ಧ್ವನಿಯಲ್ಲಿ ಕರಿಮಣಿ ಮಾಲಿಕ ನಿನಲ್ಲಂತಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಾಯಕ ಶಬ್ಬೀರ್ ಡಾಂಗೆ ಅವರ ಧ್ವನಿಯಲ್ಲಿ ಕರಿಮಣಿ ಮಾಲಿಕ ನಿನಲ್ಲಂತಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಉಪೇಂದ್ರ ಸಿನಿಮಾದಲ್ಲಿನ ಹಾಡು ಓನನ್ನ ನೀನಲ್ಲ ಕರಿಮಣಿ ಮಾಲಿಕ ನಿನಲ್ಲ (Karmani Malika ninalla) ಹಾಡುವ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ಅಷ್ಟೇ ವಿದೇಶಿಗರ ಬಾಯಲ್ಲೂ ಈ ಹಾಡನ್ನು ಹಾಡಿರುವುದನ್ನು ನೋಡಿದ್ದೇವೆ. ಆದರೆ ಖ್ಯಾತ ಜಾನಪದ ಗಾಯಕರಾದ ಶಬ್ಬೀರ್ ಡಾಂಗೆ ಅವರು ತಮ್ಮ ಶೈಲಿಯಲ್ಲಿ ಈ ಹಾಡನ್ನು ಹಾಡಿದ್ದಾರೆ.

ಕರಿಮಣಿ ಮಾಲಿಕ ನಿನಲ್ಲಂತೆ ಅಂತು ಇಂತು ಮುಗಿಸ್ಯಾಕ ನಿಂತಿ ನೀ ನನ್ನ ಸಂತಿ ಎಂದು ಹಾಡಿದ್ದಾರೆ. ಶಬ್ಬೀರ್ ಅವರ ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ 24 ಗಂಟೆಯಲ್ಲಿ 12 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಕಳೆದ 7 ದಿನಗಳಲ್ಲಿ ಈ ವಿಡಿಯೋಗೆ 2.32 ಲಕ್ಷ ಲೈಕ್ಸ್ ಪಡೆದಿದೆ.

ಶಬ್ಬೀರ್ ಡಾಂಗೆ ಅವರ ಕರಿಮಣಿ ಮಾಲಿಕ ನಿನಲ್ಲಂತೆ ಅಂತು ಇಂತು ಮುಗಿಸ್ಯಾಕ ನಿಂತಿ ನೀ ನನ್ನ ಸಂತಿ ಹಾಡಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಏಷ್ಟೇ ಜಾನಪದ ಹಾಡು ಹಾಡಿದರು ನಿಮ್ಮನ್ನ ಮೀರಿಸುವವರು ಯಾರು ಇಲ್ಲಾ ಎಂದು ಸಂತೋಷ್ ಎಂಬುವರು ಪ್ರತಿಕ್ರಿಸಿದ್ದಾರೆ. ಹಾಡು ಎಲ್ಲೋ ಕೇಳಿದ ಹಾಗಿದ್ದರೂ, ನಿಮ್ಮ ವಾಕ್ಸ್ ಸಕ್ಕತ್ ಎಂದು ಚಂದ್ರ ಎಂಬುವರು ಹೇಳಿದ್ದಾರೆ. ನಿಮ್ಮ ಈ ವಾಯ್ಸ್ ಗೆ ಯಾರ ದೃಷ್ಟಿನೂ ಬೀಳದೆ ಇರಲಿ ಸರ್ ಅಂತ ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸಾಹಿತ್ಯಕ್ಕೆ ಸಾವಿಲ್ಲ, ಸಾಹಿತ್ಯಗಾರನಿಗೂ , ಸಾವಿಲ್ಲ,ಹೊಸ ಹುರುಪಿನಿಂದ ಹೆಚ್ಚು ಸಾಹಿತ್ಯ ಬರಲಿ ಎಂದು ಮತ್ತೊಮ್ಮೆ ನೆಟ್ಟಿಗರು ಹಾರೈಸಿದ್ದಾರೆ.

ಕಳೆದ ಕೆಲವು ದಿನಗಳಲಿಂದ ಕರಿಮಣಿ ಮಾಲಿಕ ನೀನಲ್ಲ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಎರಡೂವರೆ ದಶಕ್ಕೂ ಹಳೆಯದಾದ ಉಪೇಂದ್ರ ಸಿನಿಮಾದ ಹಾಡುವ ಈಗ ವೈರಲ್ ಆಗಿತ್ತು. ಕರಿಮಣಿ ಮಾಲಿಕ ನೀನಲ್ಲ ಎಂದರೆ ಮತ್ತ್ಯಾರು ಎನ್ನುವ ಶೈಲಿ, ಕರಿಮಣಿ ಮಾಲಿಕ ರಾವುಲ್ಲಾ ಹೀಗೆ ಈ ಹಾಡಿನ ಹೊಸ ಹೊಸ ದಾಟಿಗಳನ್ನು ನೀಡುತ್ತಿದ್ದು, ಸದ್ಯಕ್ಕೆ ಜಾಲತಾಣಗಳಲ್ಲಿ ರೀಲ್ಸ್, ವಿಡಿಯೊಗಳ ಮೂಲಕ ಜನರನ್ನ ರಂಜಿಸುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point