ಹಾರರ್ ಚಿತ್ರದಿಂದ ಹಿಡಿದು ಕ್ರೈಂ ಥ್ರಿಲ್ಲರ್ ವರೆಗೆ.. ಎರಡೇ ದಿನಗಳಲ್ಲಿ ಒಟಿಟಿಗೆ ಕಾಲಿಟ್ಟಿವೆ ಎರಡು ಡಜನ್ ಸಿನಿಮಾ, ವೆಬ್‌ಸಿರೀಸ್‌ಗಳು
ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜೀ5, ಜಿಯೋ ಹಾಟ್‌ಸ್ಟಾರ್ ಸೇರಿ ಇನ್ನೂ ಹಲವು ಒಟಿಟಿಗಳಲ್ಲಿ ಎರಡೇ ದಿನಗಳ ಅವಧಿಯಲ್ಲಿ ಒಟ್ಟು 23ಕ್ಕೂ ಅಧಿಕ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಿವೆ. ಆ ಎಲ್ಲ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜೀ5, ಜಿಯೋ ಹಾಟ್‌ಸ್ಟಾರ್ ಸೇರಿ ಇನ್ನೂ ಹಲವು ಒಟಿಟಿಗಳಲ್ಲಿ ಎರಡೇ ದಿನಗಳ ಅವಧಿಯಲ್ಲಿ ಒಟ್ಟು 23ಕ್ಕೂ ಅಧಿಕ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಿವೆ. ಹಾರರ್, ಕಾಮಿಡಿ, ಕ್ರೈಂ ಥ್ರಿಲ್ಲರ್ ಸೇರಿ ಇನ್ನೂ ಹಲವು ಬಗೆಯ ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳು ಪ್ರಸಾರ ಆರಂಭಿಸಿವೆ. ಆ ಸಿನಿಮಾಗಳು ಯಾವವು? ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ನೆಟ್‌ಫ್ಲಿಕ್ಸ್ ಒಟಿಟಿ
- ರಾನ್ಸಮ್ ಕೆನ್ಯೋನ್ (ವೆಸ್ಟರ್ನ್ ರೊಮ್ಯಾನ್ಸ್ ಫ್ಯಾಮಿಲಿ ಡ್ರಾಮಾ ವೆಬ್ ಸೀರಿಸ್)- ಏಪ್ರಿಲ್ 17
- ಇಸ್ತಾಂಬುಲ್ ಎನ್‌ಸೈಕ್ಲೋಪೀಡಿಯಾ (ಟರ್ಕಿಶ್ ಫ್ಯಾಮಿಲಿ ಡ್ರಾಮಾ ವೆಬ್ ಸೀರಿಸ್)- ಏಪ್ರಿಲ್ 17
- ಐ ಹೋಸ್ಟೇಜಿ (ಇಂಗ್ಲೀಷ್ ಕ್ರೈಮ್ ಥ್ರಿಲ್ಲರ್ ಡ್ರಾಮಾ ಚಿತ್ರ)- ಏಪ್ರಿಲ್ 18
- ಓಕ್ಲಹೋಮಾ ಸಿಟಿ ಬಾಂಬಿಂಗ್: ಅಮೇರಿಕನ್ ಟೆರರ್ (ಇಂಗ್ಲೀಷ್ ಡಾಕ್ಯುಮೆಂಟರಿ ಮೂವಿ)- ಏಪ್ರಿಲ್ 18
ಅಮೆಜಾನ್ ಪ್ರೈಮ್ ಒಟಿಟಿ
- ಟುಕ್ ಟುಕ್ (ತೆಲುಗು ಕಾಮಿಡಿ ಫ್ಯಾಂಟಸಿ ಹಾರರ್ ಸಿನಿಮಾ)- ಏಪ್ರಿಲ್ 18
- ಖೌಫ್ (ಕನ್ನಡ ಡಬ್ಬಿಂಗ್ ಹಿಂದಿ ಹಾರರ್ ಮಿಸ್ಟರಿ ಥ್ರಿಲ್ಲರ್ ವೆಬ್ ಸೀರಿಸ್)- ಏಪ್ರಿಲ್ 18
- ಪೀಟರ್ ಪಾನ್ಸ್ ನೆವರ್‌ಲ್ಯಾಂಡ್ ನೈಟ್‌ಮೇರ್ (ಇಂಗ್ಲೀಷ್ ಹಾರರ್ ಫ್ಯಾಂಟಸಿ ಥ್ರಿಲ್ಲರ್ ಮೂವಿ)- ಏಪ್ರಿಲ್ 18
- ವಿಷ್ಣುಪ್ರಿಯ (ಕನ್ನಡ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ)- ಏಪ್ರಿಲ್ 18
- ದಿ ನಾರೋ ರೋಡ್ ಟು ದಿ ಡೀಪ್ ನಾರ್ತ್ (ಇಂಗ್ಲೀಷ್ ಹಿಸ್ಟಾರಿಕಲ್ ಫಿಕ್ಷನ್ ವೆಬ್ ಸೀರಿಸ್)- ಏಪ್ರಿಲ್ 18
- ಜೆಂಟಿಲ್ ಉಮೆನ್ (ತಮಿಳು ಮಿಸ್ಟರಿ ಥ್ರಿಲ್ಲರ್ ಚಿತ್ರ) ಏಪ್ರಿಲ್ 18
ಜಿಯೋ ಹಾಟ್‌ಸ್ಟಾರ್ ಒಟಿಟಿ
- ಮೇರಿ ಹಸ್ಬೆಂಡ್ ಕಿ ಬೀವಿ (ಹಿಂದಿ ರೊಮ್ಯಾಂಟಿಕ್ ಕಾಮಿಡಿ ಮೂವಿ)- ಏಪ್ರಿಲ್ 18
- ಲಾ ಅಂಡ್ ಆರ್ಡರ್: ಆರ್ಗನೈಜ್ಡ್ ಕ್ರೈಮ್ ಸೀಸನ್ 5 (ಇಂಗ್ಲೀಷ್ ಇನ್ವೆಸ್ಟಿಗೇಷನ್ ಲೀಗಲ್ ಥ್ರಿಲ್ಲರ್ ಡ್ರಾಮಾ ವೆಬ್ ಸೀರಿಸ್)- ಏಪ್ರಿಲ್ 18
- ದಿ ವೇ ಐ ಸೀ ಇಟ್ (ಇಂಗ್ಲೀಷ್ ಡಾಕ್ಯುಮೆಂಟರಿ ಚಿತ್ರ)- ಏಪ್ರಿಲ್ 18
ಜೀ5 ಒಟಿಟಿ
- ದಾವೀದ್ (ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ)- ಏಪ್ರಿಲ್ 18
- ಲಾಗೌಟ್ (ಹಿಂದಿ ಸೈಬರ್ ಕ್ರೈಮ್ ಥ್ರಿಲ್ಲರ್ ಡ್ರಾಮಾ ಸಿನಿಮಾ)- ಏಪ್ರಿಲ್ 18
ಲಯನ್ಸ್ ಗೇಟ್ ಪ್ಲೇ ಓಟಿಟಿ
- ಫೈಟ್ ಆರ್ ಫ್ಲೈಟ್ (ಇಂಗ್ಲೀಷ್ ಆಕ್ಷನ್ ಥ್ರಿಲ್ಲರ್ ಮೂವಿ)- ಏಪ್ರಿಲ್ 17
- ಮುರ್‌ಮುರ್ (ತಮಿಳು ಹಾರರ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ)- ಏಪ್ರಿಲ್ 17
ಸನ್ ಎನ್‌ಎಕ್ಸ್‌ಟಿ ಒಟಿಟಿ
- ಕಟ್ಟಿಸ್ ಗ್ಯಾಂಗ್ (ಮಲಯಾಳಂ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಮೂವಿ)- ಏಪ್ರಿಲ್ 18
- ಅಂ ಅಃ (ಮಲಯಾಳಂ ಫ್ಯಾಮಿಲಿ ಮಿಸ್ಟರಿ ಥ್ರಿಲ್ಲರ್ ಡ್ರಾಮಾ ಚಿತ್ರ)- ಏಪ್ರಿಲ್ 18
ಶಿವಂಗಿ ಲಯನೆಸ್ (ತಮಿಳು ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಚಿತ್ರ)- ಆಹಾ ಒಟಿಟಿ- ಏಪ್ರಿಲ್ 17
ಜೇನ್ ಸೀಸನ್ 3 (ಇಂಗ್ಲೀಷ್ ಅಡ್ವೆಂಚರ್ ಡ್ರಾಮಾ ವೆಬ್ ಸೀರಿಸ್)- ಆಪಲ್ ಪ್ಲಸ್ ಟಿವಿ ಒಟಿಟಿ- ಏಪ್ರಿಲ್ 18
ಗ್ರಾಂಡ್ ಟೂರ್ (ಇಂಗ್ಲೀಷ್ ಅಡ್ವೆಂಚರ್ ಡ್ರಾಮಾ ಚಿತ್ರ)- ಮೂಬಿ ಒಟಿಟಿ- ಏಪ್ರಿಲ್ 18
ಕುತೂಹಲ ಮೂಡಿಸಿದ ಸಿನಿಮಾಗಳು
ಏಪ್ರಿಲ್ 17 ಮತ್ತು 18 ಎರಡು ದಿನಗಳಲ್ಲಿ 23 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಿವೆ. ಇವುಗಳಲ್ಲಿ ಟುಕ್ ಟುಕ್, ಪೀಟರ್ ಪಾನ್ಸ್ ನೆವರ್‌ಲ್ಯಾಂಡ್ ನೈಟ್‌ಮೇರ್, ಖೌಫ್, ಶಿವಂಗಿ ಲಯನೆಸ್ ವಿಶೇಷ ಎನಿಸಿವೆ. ಕನ್ನಡದ ವಿಷ್ಣುಪ್ರಿಯ, ತಮಿಳಿನ ಜೆಂಟಿಲ್ ಉಮೆನ್, ಹಿಂದಿಯ ಮೇರಿ ಹಸ್ಬೆಂಡ್ ಕಿ ಬೀವಿ, ಮಲಯಾಳಂನ ದಾವೀದ್, ಲಾಗೌಟ್, ಮುರ್‌ಮುರ್, ಕಟ್ಟಿಸ್ ಗ್ಯಾಂಗ್, ಅಂ ಅಃ ಸಿನಿಮಾಗಳು ಸಹ ಕುತೂಹಲ ಕೆರಳಿಸಿವೆ. ಇವುಗಳಲ್ಲಿ ಬಹುತೇಕ ಕಂಟೆಂಟ್‌ಗಳು ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿವೆ.