Director Guruprasad: ನನ್ನ ಸಾವಿಗೆ ಅವ್ರೇ ಕಾರಣ; ಆವತ್ತೇ ಕೂಗಿ ಕೂಗಿ ಹೇಳಿದ್ರು ಗುರುಪ್ರಸಾದ್‌! ಏನಿದು ವೈರಲ್‌ ವಿಡಿಯೋ?
ಕನ್ನಡ ಸುದ್ದಿ  /  ಮನರಂಜನೆ  /  Director Guruprasad: ನನ್ನ ಸಾವಿಗೆ ಅವ್ರೇ ಕಾರಣ; ಆವತ್ತೇ ಕೂಗಿ ಕೂಗಿ ಹೇಳಿದ್ರು ಗುರುಪ್ರಸಾದ್‌! ಏನಿದು ವೈರಲ್‌ ವಿಡಿಯೋ?

Director Guruprasad: ನನ್ನ ಸಾವಿಗೆ ಅವ್ರೇ ಕಾರಣ; ಆವತ್ತೇ ಕೂಗಿ ಕೂಗಿ ಹೇಳಿದ್ರು ಗುರುಪ್ರಸಾದ್‌! ಏನಿದು ವೈರಲ್‌ ವಿಡಿಯೋ?

Director Guruprasad: ಈ ಹಿಂದೆ ಗುರುಪ್ರಸಾದ್ ಅವರು ಡೆತ್ ನೋಟ್ ಬರೆಯುತ್ತೇನೆ ಎಂದಿದ್ದರು. ಸಾಲದ ವಿಚಾರ ಹಾಗೂ ಬದುಕು ಕಷ್ಟ ಇದೆ ಎಂಬ ವಿಚಾರಗಳು ಬಂದಿದ್ದವು. ತುಂಬಾ ನೋವಿನಿಂದ ನಾನು ಈಗ ಡೆತ್ ನೋಟ್‌ ಬರಿತೀನಿ ಎಂದು ಕೂಗಿ ಹೇಳಿದ್ದರು. ಜೀವದ ಮೇಲೆ ತುಂಬಾ ಆಸೆ ಇರುವ ರೀತಿಯಲ್ಲಿ ಅಂದು ಮಾತನಾಡಿದ್ದರು.

ಅಂದು ಇದು ನನ್ನ ಡೆತ್ ನೋಟ್ ಎಂದು ಕೂಗಾಡಿದ್ದ ಡೈರೆಕ್ಟರ್‌ ಗುರುಪ್ರಸಾದ್
ಅಂದು ಇದು ನನ್ನ ಡೆತ್ ನೋಟ್ ಎಂದು ಕೂಗಾಡಿದ್ದ ಡೈರೆಕ್ಟರ್‌ ಗುರುಪ್ರಸಾದ್

ನಾನು ಸತ್ತರೂ ನಿಮಗೆ ಈ ಶಾಪ ತಟ್ಟಬೇಕು ಎಂದು ಹೇಳುತ್ತಾ ಕೋವಿಡ್‌ ಸಂದರ್ಭದಲ್ಲಿ ಗುರುಪ್ರಸಾದ್ ಅವರು ವಿಡಿಯೋ ಮಾಡಿದ್ದರು. ಅವರು ಮೃತರಾದ ಈ ಸಂದರ್ಭದಲ್ಲಿ ಮತ್ತೆ ಆ ವಿಡಿಯೋ ವೈರಲ್ ಆಗುತ್ತಿದೆ. ಡೈರೆಕ್ಟರ್ ಗುರುಪ್ರಸಾದ್ ಅವರಿಗೆ ಕೋವಿಡ್‌ ಪಾಸಿಟಿವ್ ಬಂದಿರುವಾಗ ರಾಜಕಾರಣಿಗಳಿಗೆ ಬೈದ ವಿಡಿಯೋದಲ್ಲಿ ಏನಿದೆ ನೋಡಿ. ಅಕಸ್ಮಾತ್ ನಾನು ತೀರಿ ಹೋದ್ರೆ ಹೇಳೋಕಾಗಲ್ಲ ಆ ಕಾರಣಕ್ಕಾಗಿ ಈಗಲೇ ವಿಡಿಯೋ ಮಾಡ್ತಾ ಇದೀನಿ ಎಂದು ಹೇಳುತ್ತಾ ರಾಜಕೀಯ ವ್ಯಕ್ತಿಗಳಿಗೆ ಛೀಮಾರಿ ಹಾಕಿ ವಿಡಿಯೋ ಮಾಡಿದ್ದರು.

ನಾನು ಸೋಯೋಕೆ ಮುಂಚೆ ಹೇಳಬೇಕಾದ ಮಾತು ಇದು ರಾಜಕೀಯದವರೆಲ್ಲ ನಿಯತ್ತಾಗಿ ಕೆಲಸ ಮಾಡಿ. ಕೋವಿಡ್‌ ಬಂದರೂ ನೀವೆಲ್ಲ ಪಾಠ ಕಲಿತಿಲ್ಲ ಎಂದು ಹೇಳಿದ್ದರು. ಹೀಗೆ ಹೇಳುತ್ತಾ ಕೋವಿಡ್‌ ಬಂದರೂ ನೀವೆಲ್ಲ ವ್ಯವಹಾರ ಮಾಡುತ್ತಿದ್ದೀರಿ. ಈಗಲೂ ಹಣ ಮಾಡುವುದೇ ನಿಮ್ಮ ಗುರಿ ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ನನ್ನ ಶಾಪ ಹಾಗೂ ನನ್ನ ನೋವು ನಿಮ್ಮನ್ನು ತಟ್ಟದೆ ಇರೋದಿಲ್ಲ ಎಂದು ಕೂಗಿದ್ದರು.

ನಾನು ನಿಮ್ಮ ಕುರಿತು ಈ ವಿಡಿಯೋ ಮಾಡಿದ್ದಕ್ಕೆ ನಾನು ಅಪ್ರಾಮಾಣಿಕನಾಗಿ ಯಾರ್ಯಾರಿಗೆ ಮೋಸ ಮಾಡಿದ್ದೀನಿ ಎಂಬುದನ್ನೆಲ್ಲ ಈಗ ಹುಡುಕಾಡ್ತೀರಾ, ಹುಡುಕಿಕೊಳ್ಳಿ ಎಂದಿದ್ದರು. ನಮ್ಮ ಸಾಲ ತೀರಿಸೋಕೆ, ನಮ್ಮ ಕರ್ತವ್ಯ ನಿಭಾಯಿಸೋದಕ್ಕೆ ಶ್ರಮದಿಂದ ದುಡಿಯೋ ನಮಗೆ ನೀವು ಈ ರೀತಿ ಮಾಡ್ತಾ ಇದ್ದೀರಾ. ನಿಮಗೆ ನೀವು ಕೋಟಿ ಮಾಡುವುದೇ ಮುಖ್ಯ ಅಲ್ವ? ಎಂದು ಹೇಳಿದ್ದರು. ನನಗೆ ಕರೋನಾ ತಂದು ಕೊಟ್ಟದ್ದಕ್ಕೆ ನಿಮಗೆಲ್ಲ ಶಾಪ ಇದೆ ಎಂದಿದ್ದರು.

ಒಬ್ಬ ಸತ್ರು ನಾನು ಜವಾಬ್ಧಾರಿ ಎನ್ನುವುದು ಮೋದಿ ಆದರೆ ಆ ಮೋದಿಯಿಂದ ನೀವು ಪಾಠ ಕಲಿಯಲಿಲ್ಲ ಎಂದಿದ್ದರು. ಸಿನಿಮಾ ಇಂಡಸ್ಟ್ರಿಯವರನ್ನೆಲ್ಲ ನೀವು ಸಾಯ್ಸತೀರಾ ಎಂದು ಹೇಳಿದ್ದರು. ಯಡಿಯೂರಪ್ಪ, ವಿಜಯೇಂದ್ರ, ಡಿ.ಕೆ ಶಿ ಇವರೆಲ್ಲರಿಗೂ ಹೆಸರು ಹೇಳಿ ಬೈದಿದ್ದರು. ನಾನು ಸಾಯೋ ಮುಂಚೆ ನಿಮಗೆ ಇದನ್ನೆಲ್ಲ ಹೇಳಿ ಬಿಡ್ತೀನಿ ಎಂದು ಕೂಗುತ್ತಾ ಹೇಳಿದ್ದರು. ಬದುಕಿನ ಮೇಲೆ ತುಂಬಾ ಆಸೆ ಇರುವ ರೀತಿಯಲ್ಲಿ ಅವರು ಅಂದು ಮಾತನಾಡಿದ್ದು, ಆ ವಿಡಿಯೋ ತುಣುಕನ್ನು ನಾವಿಲ್ಲಿ ಹಂಚಿಕೊಂಡಿದ್ದೇವೆ ಗಮನಿಸಿ.

ಅವನಿಗಿಂತ ಹೆಚ್ಚು ನಾನು ಸೇವೆ ಮಾಡ್ತೀನಿ ಅನ್ನೋತರ ಇರಬೇಕು ಎಂದು ಹೇಳಿದ್ದರು. ಶಕ್ತಿ ಇದ್ಯಾ? ನಾವು ಹುಲು ಮಾನವರು ಒಂದು ಇರುವೆಯಷ್ಟೇ ನಾವೆಲ್ಲರೂ. ಆದರೆ ನಮಗೆ ಮೆದುಳು ಚುರುಕಾಗಿದೆ ಅದಕ್ಕಾಗಿ ನಾವು ಈ ಮಟ್ಟಿಗೆ ಬದುಕುತ್ತಿದ್ದೇವೆ ಎಂದಿದ್ದರು. ನನಗ್ಯಾರ್ಯಾರ ಕನೆಕ್ಷನ್ ಇತ್ತು ಅನ್ನೋದನ್ನು ನೀವೀಗ ಮೊದಲು ಹುಡಕುತ್ತೀರಿ ಎಂದು ಹೇಳಿದ್ದಾರೆ. ತುಂಬಾ ನಿರಾಸೆ ಹಾಗೂ ತುಂಬಾ ಬೇಸರದಿಂದ ಮಾತನಾಡಿದ್ದರು.

ಪ್ರೊಡ್ಯೂಸರ್ ದುಡ್ ಹಾಕಿದಾರೆ ನಾನು ಬದುಕಿದ್ರೆ ಮಾತ್ರ ರಂಗನಾಥ ಸಿನಿಮಾ ಆಗೋದು ಎಂದು ಹೇಳುತ್ತಾರೆ. ಈಗ ನಾನು ಮಾತಾಡ್ತಾ ಇರೋದು ರಂಗನಾಥ ಪ್ರಮೋಷನ್ ಅಂತ ಕೆಲವರು ಹೇಳುತ್ತಾರೆ. ಆದರೆ ನಾನು ಪ್ರಮೋಷನ್ ಮಾಡ್ತಾ ಇಲ್ಲ. ನಾನು ಬದುಕಿದ್ರೆ ಮಾತ್ರ ಸಿನಿಮಾ ಎಂದು ಹೇಳುತ್ತಾರೆ. ಇನ್ನು ಡಾಕ್ಟರ್‌ ಸುಧಾಕರ್ ಅವರಿಗೆ ಕರ್ನಾಟಕದಲ್ಲಿ ಈ ಕೊವಿಡ್‌ ಸಂದರ್ಭದಲ್ಲಿ ಯಾರ್ಯಾರು ಸಾಯುತ್ತಾರೋ ಅವರೆಲ್ಲರ ಸಾವಿಗೆ ನೀವೇ ಕಾರಣ ಎಂದು ಹೇಳಿದ್ದರು. ಕೂಗಿ ಕೂಗಿ ಸಾವಿಗೆ ನೀವೇ ಕಾರಣ ಎಂದು ಹೇಳಿದ್ದರು.

ಆಗಲೇ ಅವರು ಆಡಿದ ಮಾತುಗಳಲ್ಲಿ ಸಾಲದ ವಿಚಾರ ಹಾಗೂ ಬದುಕು ಕಷ್ಟ ಇದೆ ಎಂಬ ವಿಚಾರಗಳು ಬಂದಿದ್ದವು. ತುಂಬಾ ನೋವಿನಿಂದ ನಾನು ಈಗ ಡೆತ್ ನೋಟ್‌ ಬರಿತೀನಿ ಎಂದು ಹೇಳಿದ್ದರು. ಜೀವದ ಮೇಲೆ ತುಂಬಾ ಆಸೆ ಇರುವ ರೀತಿಯಲ್ಲಿ ಅಂದು ಮಾತನಾಡಿದ್ದರು.

Whats_app_banner