Rachitha Mahalakshmi: ರಚಿತ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆ...ಪತಿಯೊಂದಿಗಿನ ಮನಸ್ತಾಪ, ಮಕ್ಕಳು ಪಡೆಯುವ ಬಗ್ಗೆ ರಚಿತ ಹೇಳಿದ್ದಿಷ್ಟು!
ಕನ್ನಡ ಸುದ್ದಿ  /  ಮನರಂಜನೆ  /  Rachitha Mahalakshmi: ರಚಿತ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆ...ಪತಿಯೊಂದಿಗಿನ ಮನಸ್ತಾಪ, ಮಕ್ಕಳು ಪಡೆಯುವ ಬಗ್ಗೆ ರಚಿತ ಹೇಳಿದ್ದಿಷ್ಟು!

Rachitha Mahalakshmi: ರಚಿತ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆ...ಪತಿಯೊಂದಿಗಿನ ಮನಸ್ತಾಪ, ಮಕ್ಕಳು ಪಡೆಯುವ ಬಗ್ಗೆ ರಚಿತ ಹೇಳಿದ್ದಿಷ್ಟು!

ಈ ಜೋಡಿ ಇನ್ನೂ ಕಾನೂನಿನ ಪ್ರಕಾರ ದೂರಾಗಿಲ್ಲ. ಆದ್ದರಿಂದ ಇಬ್ಬರೂ ಮುನಿಸು ಮರೆತು ಮತ್ತೆ ಒಂದಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಆದರೆ ಕಮಲ್‌ ಹಾಸನ್‌ ಜೊತೆಗಿನ ಸಂಭಾಷಣೆ ಬಳಿಕ, ಮಗುವಿಗೆ ಜನ್ಮ ನೀಡುವ ಬದಲಿಗೆ ದತ್ತು ತೆಗೆದುಕೊಳ್ಳುವ ಪ್ಲಾನ್‌ ಮಾಡಿದ್ದಾರೆ ಎಂದರೆ ರಚಿತಾಗೆ ಮತ್ತೆ ದಿನೇಶ್‌ ಜೊತೆ ಬದುಕುವ ಆಸೆ ಎಲ್ಲ ಎಂಬುದು ತಿಳಿಯುತ್ತಿದೆ.

ಬಿಗ್‌ಬಾಸ್‌ನಲ್ಲಿ ತಮ್ಮ ನಿರ್ಧಾರ ಹಂಚಿಕೊಂಡ ರಚಿತ ಮಹಾಲಕ್ಷ್ಮಿ
ಬಿಗ್‌ಬಾಸ್‌ನಲ್ಲಿ ತಮ್ಮ ನಿರ್ಧಾರ ಹಂಚಿಕೊಂಡ ರಚಿತ ಮಹಾಲಕ್ಷ್ಮಿ (PC: Rachitha Mahalakshmi Facebook)

ಕರ್ನಾಟಕದಿಂದ ಪರಭಾಷೆಗೆ ಹೋಗಿ ಗುರುತಿಸಿಕೊಂಡಿರುವ ನಟಿಯರಲ್ಲಿ ರಚಿತ ಮಹಾಲಕ್ಷ್ಮಿ ಕೂಡಾ ಒಬ್ಬರು. ರಚಿತ, ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಧಾರಾವಾಹಿ ಹಾಗೂ ಸಿನಿಮಾಗಳು. ಇಲ್ಲಿರುವಾಗಲೇ ಅವರಿಗೆ ತಮಿಳಿನಲ್ಲಿ ಉತ್ತಮ ಅವಕಾಶ ದೊರೆತಿದ್ದರಿಂದ ಚೆನ್ನೈಗೆ ಹೋದರು. ಅಲ್ಲಿ ಸಹನಟನನ್ನು ಪ್ರೀತಿಸಿ ಮದುವೆಯಾದರು. ಆದರೆ ಈಗ ರಚಿತ, ತಮ್ಮ ಪತಿ ದಿನೇಶ್‌ ಅವರಿಂದ ದೂರಾಗಿದ್ದಾರೆ.

ತಮಿಳಿನ ವಿಜಯ್‌ ಟಿವಿಯಲ್ಲಿ ಪ್ರಸಾರವಾಗುತಿದ್ದ 'ಶರವಣನ್‌ ಮೀನಾಕ್ಷಿ' ಧಾರಾವಾಹಿಯ ನಂತರ ರಚಿತಾಗೆ ತಮಿಳಿನಲ್ಲಿ ಅಭಿಮಾನಿಗಳು ಹೆಚ್ಚಾದರು. ಇದಾದ ನಂತರ ಕೂಡಾ ಅವರು ಅನೇಕ ತಮಿಳು ಧಾರಾವಾಹಿಗಳಲ್ಲಿ ನಟಿಸಿದರು. ರಚಿತ ಸದ್ಯಕ್ಕೆ ಕಮಲ್ ಹಾಸನ್‌ ನಡೆಸಿಕೊಡುತ್ತಿರುವ ತಮಿಳು ಬಿಗ್‌ ಬಾಸ್‌ ಸೀಸನ್‌ 6 ರ ಸ್ಪರ್ಧಿಯಾಗಿದ್ದಾರೆ. 60 ದಿನಗಳು ಮುಗಿದಿದ್ದು ಗ್ರಾಂಡ್‌ ಫಿನಾಲೆಗೆ 40 ದಿನಗಳು ಬಾಕಿ ಇವೆ. ಅತ್ತ ರಚಿತ ಮಹಾಲಕ್ಷ್ಮಿ ಬಿಗ್‌ ಬಾಸ್‌ ಮನೆಯಲ್ಲಿ ಇದ್ದರೆ ಇತ್ತ ಅವರ ವೈಯಕ್ತಿಕ ವಿಚಾರವೇ ಸಾಕಷ್ಟು ಚರ್ಚೆಯಾಗುತ್ತಿದೆ. ರಚಿತ, 2013 ರಲ್ಲಿ ಪ್ರಸಾರವಾಗುತ್ತಿದ್ದ 'ಪಿರಿವೊಮ್‌ ಸಂದಿಪ್ಪೊಮ್‌' ಧಾರಾವಾಹಿಯಲ್ಲಿ ತಮ್ಮೊಂದಿಗೆ ನಟಿಸಿದ್ದ ಸಹನಟ ದಿನೇಶ್‌ ಗೋಪಾಲಸ್ವಾಮಿ ಅವರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ನಂತರ ಕೂಡಾ ಈ ಜೋಡಿ ಮತ್ತೊಮ್ಮೆ 'ನಾಚಿಯಾರ್‌ಪುರಮ್‌' ಎಂಬ ಧಾರಾವಾಹಿಯಲ್ಲಿ ಜೊತೆಗೆ ನಟಿಸಿದರು.

ಆದರೆ ರಚಿತ ಹಾಗೂ ದಿನೇಶ್‌ ಇಬ್ಬರೂ ದೂರಾಗಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಸುದ್ದಿ ಹಬ್ಬಿತ್ತು. ಇದನ್ನು ಕೇಳಿದವರು ಶಾಕ್‌ ಆಗಿದ್ದರು. ಇದು ಸುಳ್ಳು ಎಂದುಕೊಂಡವರೇ ಹೆಚ್ಚು. ಆದರೆ ಸಂದರ್ಶನವೊಂದರಲ್ಲಿ ರಚಿತ ತಾವು ಪತಿಯಿಂದ ದೂರಾದ ವಿಚಾರವನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು. ತಾವು ನಟಿಸಿದ ಧಾರಾವಾಹಿಯೊಂದರಲ್ಲಿ ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಬೆಳೆಸುವ ಮಹಿಳೆಯ ಪಾತ್ರದ ಬಗ್ಗೆ ರಚಿತ ಹೇಳಿಕೊಂಡು, ಈ ಪಾತ್ರ ನನಗೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾಗಿ ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಇತ್ತ ಕೆಲವು ದಿನಗಳ ಹಿಂದೆ ಬಿಗ್‌ ಬಾಸ್‌ನಲ್ಲಿ ರಚಿತ ತಮ್ಮ ಸಹಸ್ಪರ್ಧಿಗಳೊಂದಿಗೆ ದಿನೇಶ್‌ ಹೆಸರು ಹೇಳದೆ ತಾವು ಸಂಬಂಧದಿಂದ ದೂರ ಉಳಿದಿರುವುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದರು. ಕಮಲ್‌ ಹಾಸನ್‌ ಜೊತೆ ಮಾತನಾಡುವಾಗ ರಚಿತಾ, ತನಗೆ 35 ವರ್ಷ ವಯಸ್ಸಾದಾಗ ಹೆಣ್ಣು ಮಗುವೊಂದರನ್ನು ದತ್ತು ಪಡೆಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ನಾನಿನ್ನೂ ಹಣಕಾಸಿನ ವಿಚಾರದಲ್ಲಿ ಫಿಟ್‌ ಆಗಬೇಕು. ಮಗುವನ್ನು ದತ್ತು ಪಡೆಯಲು ಇನ್ನೂ ಮೂರು ವರ್ಷಗಳು ಕಾಯಬೇಕು ಎಂದು ಹೇಳಿಕೊಂಡಿದ್ದರು.

ಇನ್ನು ಇದೇ ವಿಚಾರವಾಗಿ ದಿನೇಶ್‌ ಅವರ ಬಳಿ ಕೇಳಿದಾಗ ಕೆಲವೊಂದು ಭಿನ್ನಾಭಿಪ್ರಾಯಗಳು ನಮ್ಮಿಬ್ಬರನ್ನು ಬೇರೆ ಮಾಡಿತು, ಆದರೆ ಇದು ಹೆಚ್ಚು ದಿನ ಮುಂದುವರೆಯುವುದಿಲ್ಲ. ಎಂದು ಹೇಳಿದ್ದರು. ಅಲ್ಲದೆ ರಚಿತಾ ಬಿಗ್‌ ಬಾಸ್‌ಗೆ ಹೋಗುವಾಗ ಆಕೆಗೆ ವಿಶ್‌ ಕೂಡಾ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ನೋಡಿದ ಅಭಿಮಾನಿಗಳು ಈ ಜೋಡಿ ಮತ್ತೆ ಒಂದಾಗಬಹುದಾ ಎಂದು ಕಾಯುತ್ತಿದ್ದಾರೆ. ಏಕೆಂದರೆ ಈ ಜೋಡಿ ಇನ್ನೂ ಕಾನೂನಿನ ಪ್ರಕಾರ ದೂರಾಗಿಲ್ಲ. ಆದ್ದರಿಂದ ಇಬ್ಬರೂ ಮುನಿಸು ಮರೆತು ಮತ್ತೆ ಒಂದಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಆದರೆ ಕಮಲ್‌ ಹಾಸನ್‌ ಜೊತೆಗಿನ ಸಂಭಾಷಣೆ ಬಳಿಕ, ಮಗುವಿಗೆ ಜನ್ಮ ನೀಡುವ ಬದಲಿಗೆ ದತ್ತು ತೆಗೆದುಕೊಳ್ಳುವ ಪ್ಲಾನ್‌ ಮಾಡಿದ್ದಾರೆ ಎಂದರೆ ರಚಿತಾಗೆ ಮತ್ತೆ ದಿನೇಶ್‌ ಜೊತೆ ಬದುಕುವ ಆಸೆ ಎಲ್ಲ ಎಂಬುದು ತಿಳಿಯುತ್ತಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಚಿತಾ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ

ಆಗ್ಗಾಗ್ಗೆ ಇಂತಹ ವಿವಾದಗಳು ನಡೆಯುತ್ತಲೇ ಇರುತ್ತದೆ. ಈಗ ನಡೆಯುತ್ತಿರುವ ಚರ್ಚೆಯೇ ಅಸಭ್ಯವಾಗಿದೆ. ದೀಪಿಕಾ ಒಳ್ಳೆ ನಟಿ. ಸಿನಿಮಾದಲ್ಲಿ ನಾಯಕಿಯನ್ನು ಚೆನ್ನಾಗಿ ತೋರಿಸಬೇಕೆಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ರೀತಿ ವಿವಾದ ಮಾಡುವುದನ್ನು ನಿಲ್ಲಿಸಬೇಕು. ಜನರು ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಿಸಿದ್ದಾರೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಹೊಸ ವರ್ಷದ ಕ್ಯಾಲೆಂಡರ್‌ನಲ್ಲಿ ವಿಷ್ಣುವರ್ಧನ್ ಅವರನ್ನು ಹೊಸ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು ಯುವಕರ ಪ್ರತಿನಿಧಿ, ಮಾತೃಪ್ರೇಮಿ, ಸಿಂಹರೂಪಿ, ಕನ್ನಡಪರ ಹೋರಾಟಗಾರ, ದಾನವೀರ ಶೂರ, ಮಹಿಳಾಪರ, ವೃಕ್ಷಪ್ರೇಮಿ, ಸಂತ, ರೈತ, ಸಂಗೀತ ಪ್ರೇಮಿ, ದೇಶಭಕ್ತ, ವಿಷ್ಣುವರ್ಧನ್ ಹಾಗೂ ಕಟೌಟ್ ಜಾತ್ರೆಯ ಕಾನ್ಸೆಪ್ಟ್‌ಗಳನ್ನು ಈ ಕೋಟಿಗೊಬ್ಬ ಕ್ಯಾಲೆಂಡರ್‌ ಹೊಂದಿದೆ. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

Whats_app_banner