IIFA 2025: ಐಫಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಲು ಕಾದವರಿಗೆ ಇಲ್ಲಿದೆ ಖುಷಿ ಸುದ್ದಿ; ಮಾರ್ಚ್ 16ರಂದು ಮನೆಯಲ್ಲೇ ವೀಕ್ಷಿಸಿ
IIFA 2025: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನೋಡಬೇಕೆಂದು ಕಾದಿದ್ದರೆ ನಿಮಗೊಂದು ಖುಷಿ ವಿಚಾರ ಇದೆ. ಮಾರ್ಚ್ 16ರಂದು ನೀವು ಮನೆಯಲ್ಲೇ ಕಾರ್ಯಕ್ರಮ ವೀಕ್ಷಿಸಬಹುದು.

IIFA 2025: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನೋಡಬೇಕು ಎಂದು ಸಾಕಷ್ಟು ಜನ ಕಾತರದಿಂದ ಕಾಯುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮದ ಕೆಲ ತುಣುಕುಗಳು ಮಾತ್ರ ವೈರಲ್ ಆಗಿತ್ತು. ದೂರದರ್ಶನದಲ್ಲೂ IIFA 2025 ಕಾರ್ಯಕ್ರಮದ ಪ್ರಸಾರ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿತ್ತು. ಅದರಂತೆ ಇದೀಗ IIFA 2025ರ ಪ್ರಶಸ್ತಿ ಪ್ರಧಾನ ಸಮಾರಂಭದ ಪ್ರಸಾರವನ್ನು ದೂರರ್ಶನದಲ್ಲಿ ಮಾಡಲಾಗುತ್ತದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಜನರಿಗೆ ಈ ಸಂಗತಿ ಖುಷಿ ತಂದಿದೆ. ಹಾಗಾದರೆ, ಯಾವ ವಾಹಿನಿಯಲ್ಲಿ ಇದು ಪ್ರಸಾರವಾಗುತ್ತದೆ? ಯಾವಾಗ ಪ್ರಸಾರವಾಗುತ್ತದೆ? ಎಂಬಿತ್ಯಾದಿ ಮಾಹಿತಿನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಜೀ ಟಿವಿಯಲ್ಲಿ ಪ್ರಸಾರ
ಕಳೆದ ವಾರಾಂತ್ಯದಲ್ಲಿ ಜೈಪುರದಲ್ಲಿ ನಡೆದ IIFA 2025ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನೋಡಲು ಕಾತರದಿಂದ ಕಾಯುತ್ತಿರುವ ಎಲ್ಲರಿಗೂ ಶುಭ ಸಮಾಚಾರವಿದೆ. IIFA ಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ZEE TV ಯೊಂದಿಗೆ ಜಂಟಿ ಪೋಸ್ಟ್ ಮಾಡಿದೆ. ZEE TVಯಲ್ಲಿ IIFA 2025ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವೀಕ್ಷಿಸಬಹುದು ಎಂಬ ಮಾಹಿತಿ ಅದರಲ್ಲಿದೆ.
ಮಾರ್ಚ್ 16ರಂದು ವೀಕ್ಷಿಸಿ
ಸಮಾರಂಭದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಮಾರ್ಚ್ 16ರಂದು ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ. ದೂರದರ್ಶನ ಮಾತ್ರವಲ್ಲದೆ ಒಟಿಟಿಯಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಒಟಿಟಿಯಲ್ಲಿ ಯಾವ ದಿನಾಂಕದಂದು ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಐಫಾ ಅವಾರ್ಡ್ 2025
ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ತನ್ನ 25ನೇ ವರ್ಷವನ್ನು ಆಚರಿಸಿದೆ. ಮಾರ್ಚ್ 8 ಮತ್ತು 9, ಶನಿವಾರ ಮತ್ತು ಭಾನುವಾರ ಈ ಸಮಾರಂಭ ಜೈಪುರದಲ್ಲಿ ನಡೆದಿದೆ. ಐಫಾ 2025 ಡಿಜಿಟಲ್ ಪ್ರಶಸ್ತಿಗಳನ್ನು ಶನಿವಾರ ನೀಡಲಾಗಿದ್ದು, ಚಲನಚಿತ್ರ ಪ್ರಶಸ್ತಿಗಳ ಸಮಾರಂಭವನ್ನು ಭಾನುವಾರ ನಡೆಸಲಾಗಿದೆ. ಭಾನುವಾರದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಾರ್ತಿಕ್ ಆರ್ಯನ್ ಮತ್ತು ಕರಣ್ ಜೋಹರ್ ನಡೆಸಿಕೊಟ್ಟಿದ್ದರು.
ವಿಜೇತರ ಪೂರ್ಣ ಪಟ್ಟಿಯನ್ನು ಇಲ್ಲಿದೆ.
ಅತ್ಯುತ್ತಮ ಚಿತ್ರ - ಲಾಪತಾ ಲೇಡೀಸ್
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ) - ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 3)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ) - ನಿತಾಂಶಿ ಗೋಯೆಲ್ (ಲಾಪತಾ ಲೇಡೀಸ್)
ಅತ್ಯುತ್ತಮ ನಿರ್ದೇಶನ - ಕಿರಣ್ ರಾವ್ (ಲಾಪತಾ ಲೇಡೀಸ್)
ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ರಾಘವ್ ಜುಯಾಲ್ (ಕಿಲ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ) - ಜಾಂಕಿ ಬೋಡಿವಾಲಾ (ಶೈತಾನ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ) - ರವಿ ಕಿಶನ್ (ಲಾಪತಾ ಲೇಡೀಸ್)
ಜನಪ್ರಿಯ ವಿಭಾಗದಲ್ಲಿ ಅತ್ಯುತ್ತಮ ಕಥೆ (ಮೂಲ) - ಬಿಪ್ಲಬ್ ಗೋಸ್ವಾಮಿ (ಲಾಪಾತಾ ಲೇಡೀಸ್)
ಅತ್ಯುತ್ತಮ ಕಥೆ (ಅಡಾಪ್ಟೇಶನ್) - ಶ್ರೀರಾಮ್ ರಾಘವನ್, ಅರಿಜಿತ್ ಬಿಸ್ವಾಸ್, ಪೂಜಾ ಲಧಾ ಸೂರ್ತಿ, ಮತ್ತು ಅನುಕೃತಿ ಪಾಂಡೆ (ಮೆರ್ರಿ ಕ್ರಿಸ್ಮಸ್)
ಅತ್ಯುತ್ತಮ ಚೊಚ್ಚಲ ನಿರ್ದೇಶನ - ಕುನಾಲ್ ಕೆಮ್ಮು (ಮಡಗಾಂವ್ ಎಕ್ಸ್‌ಪ್ರೆಸ್)
ಬೆಸ್ಟ್ ಡೆಬ್ಯುಟ್ (ಪುರುಷ) - ಲಕ್ಷ್ಯ ಲಾಲ್ವಾನಿ (ಕಿಲ್)
ಬೆಸ್ಟ್ ಡೆಬ್ಯುಟ್ (ಮಹಿಳೆ) - ಪ್ರತಿಭಾ ರಂತ (ಲಾಪತಾ ಲೇಡೀಸ್)
ಅತ್ಯುತ್ತಮ ಸಂಗೀತ ನಿರ್ದೇಶಕ - ರಾಮ್ ಸಂಪತ್ (ಲಾಪತಾ ಲೇಡೀಸ್)
ಅತ್ಯುತ್ತಮ ಸಾಹಿತ್ಯ - ಪ್ರಶಾಂತ್ ಪಾಂಡೆ (ಲಾಪತಾ ಲೇಡೀಸ್‌ನಿಂದ ಸಜ್ನಿ)
ಅತ್ಯುತ್ತಮ ಗಾಯಕ (ಪುರುಷ) - ಜುಬಿನ್ ನೌಟಿಯಲ್ (ಆರ್ಟಿಕಲ್ 370 ರಿಂದ ದುವಾ)
ಅತ್ಯುತ್ತಮ ಗಾಯಕಿ (ಮಹಿಳೆ) - ಶ್ರೇಯಾ ಘೋಷಾಲ್ (ಭೂಲ್ ಭುಲೈಯಾ 3 ರಿಂದ ಅಮಿ ಜೆ ತೋಮರ್ 3.0)
ಅತ್ಯುತ್ತಮ ಧ್ವನಿ ವಿನ್ಯಾಸ - ಸುಬಾಷ್ ಸಾಹೂ, ಬೊಲೊಯ್ ಕುಮಾರ್ ಡೊಲೊಯ್, ರಾಹುಲ್ ಕರ್ಪೆ (ಕಿಲ್)
ಅತ್ಯುತ್ತಮ ಚಿತ್ರಕಥೆ - ಸ್ನೇಹಾ ದೇಸಾಯಿ (ಲಾಪತಾ ಲೇಡೀಸ್)
ಅತ್ಯುತ್ತಮ ಸಂಭಾಷಣೆ - ಅರ್ಜುನ್ ಧವನ್, ಆದಿತ್ಯ ಧರ್, ಆದಿತ್ಯ ಸುಹಾಸ್ ಜಂಭಾಲೆ, ಮೋನಾಲ್ ಥಾಕರ್ (ಆರ್ಟಿಕಲ್ 370)
ಅತ್ಯುತ್ತಮ ಸಂಕಲನ - ಜಬೀನ್ ಮರ್ಚೆಂಟ್ (ಲಾಪತಾ ಲೇಡೀಸ್)
ಅತ್ಯುತ್ತಮ ಛಾಯಾಗ್ರಹಣ - ರಫೇ ಮಹಮೂದ್ (ಕಿಲ್)
ಅತ್ಯುತ್ತಮ ನೃತ್ಯ ಸಂಯೋಜನೆ - ಬಾಸ್ಕೋ-ಸೀಸರ್ (ಬ್ಯಾಡ್ ನ್ಯೂಜ್‌ನ ತೌಬಾ ತೌಬಾ)
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ - ರೆಡ್ ಚಿಲ್ಲಿಸ್ VFX (ಭೂಲ್ ಭುಲೈಯಾ 3)
ಭಾರತೀಯ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ - ರಾಕೇಶ್ ರೋಷನ್
