ಮುಫಾಸಾ: ದಿ ಲಯನ್ ಕಿಂಗ್ ಒಟಿಟಿ ಬಿಡುಗಡೆ ಯಾವಾಗ? ಎಲ್ಲಿ ಸ್ಟ್ರೀಮ್ ಆಗಬಹುದು? ಇಲ್ಲಿದೆ ನೋಡಿ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  ಮುಫಾಸಾ: ದಿ ಲಯನ್ ಕಿಂಗ್ ಒಟಿಟಿ ಬಿಡುಗಡೆ ಯಾವಾಗ? ಎಲ್ಲಿ ಸ್ಟ್ರೀಮ್ ಆಗಬಹುದು? ಇಲ್ಲಿದೆ ನೋಡಿ ಉತ್ತರ

ಮುಫಾಸಾ: ದಿ ಲಯನ್ ಕಿಂಗ್ ಒಟಿಟಿ ಬಿಡುಗಡೆ ಯಾವಾಗ? ಎಲ್ಲಿ ಸ್ಟ್ರೀಮ್ ಆಗಬಹುದು? ಇಲ್ಲಿದೆ ನೋಡಿ ಉತ್ತರ

ದಿ ಲಯನ್ ಕಿಂಗ್ ಹೊಸ ಅವತಾರದಲ್ಲಿ ಮತ್ತೆ ಬಂದಿದೆ. ಸಾಕಷ್ಟು ಜನರು ಮುಫಾಸಾ: ದಿ ಲಯನ್ ಕಿಂಗ್ ನೋಡಲು ಕಾತರರಾಗಿದ್ದರು. ಒಮ್ಮೆ ನೋಡಿದವರೂ ಕೂಡ ಮತ್ತೆ ತಾವು ಮನೆಯಲ್ಲಿ ಕೂತು ಒಟಿಟಿಯಲ್ಲಿ ಯಾವಾಗ ನೋಡಬಹುದು ಎಂದು ಹುಡುಕಾಟ ನಡೆಸುತ್ತಿದ್ದಾರೆ.

ಮುಫಾಸಾ: ದಿ ಲಯನ್ ಕಿಂಗ್ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?
ಮುಫಾಸಾ: ದಿ ಲಯನ್ ಕಿಂಗ್ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

ಮುಫಾಸಾ: ಲಯನ್ ಕಿಂಗ್ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಸಾಕಷ್ಟು ಜನರು ಈ ಸಿನಿಮಾವನ್ನು ನೋಡಲೇಬೇಕು ಎಂದು ಕಾದಿದ್ದಾರೆ. ಇನ್ನು ಥಿಯೇಟರ್‌ನಲ್ಲಿ ನೋಡಿದರೂ ಮತ್ತೊಮ್ಮೆ ನಾವು ಮನೆಯಲ್ಲಿ ನೋಡಬೇಕು ಎಂಬ ಆಸೆ ಹುಟ್ಟಿಸುವಂತ ಸಿನಿಮಾ ಇದು. ಇದರ ಹಿಂದಿನ ಸಿರೀಸ್‌ಗಳನ್ನು ನೋಡಿದವರೆಲ್ಲರೂ ಮುಂದಿನ ಭಾಗವನ್ನು ನೋಡಲು ಕಾತರದಿಂದ ಕಾದಿದ್ದರು. ಇನ್ನು ಈಗಾಗಲೇ ವಿಕ್ಷಕರು ಒಟಿಟಿ ಬಿಡುಗಡೆ ಯಾವಾಗ ಎಂದು ಹುಡುಕಾಟ ನಡೆಸುತ್ತಿದ್ದಾರೆ.

ಯಾವ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ?

ಡಿಸೈಡರ್‌ನ ವರದಿಯ ಪ್ರಕಾರ, 'ಮುಫಾಸಾ: ದಿ ಲಯನ್ ಕಿಂಗ್' ಚಿತ್ರವನ್ನು ಡಿಸ್ನಿ ನಿರ್ಮಿಸಿರುವುದರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡುವ ಸಾಧ್ಯತೆ ತುಂಬಾ ಕಡಿಮೆ ಇದೆ ಎನ್ನಲಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 'ಮುಫಾಸಾ: ದಿ ಲಯನ್ ಕಿಂಗ್' ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ.

200 ಮಿಲಿಯನ್ ಬಜೆಟ್‌ನಲ್ಲಿ ನಿರ್ಮಿಸಲಾದ ಬ್ಯಾರಿ ಜೆಂಕಿನ್ಸ್ ನಿರ್ದೇಶನದ ಈ ಚಿತ್ರವು ಡಿಸೆಂಬರ್ 20ರಂದು ತೆರೆಕಂಡಿದೆ. ಚಲನಚಿತ್ರವು ಫೋಟೋ-ರಿಯಲಿಸ್ಟಿಕ್ ಆಗಿ ಅನಿಮೇಟೆಡ್ ಆಗಿದೆ. ಡಿಸೆಂಬರ್ 9ರಂದು ಯುಎಸ್‌ನಲ್ಲಿ ಇದರ ಪ್ರಥಮ ಪ್ರದರ್ಶನ ನಡೆದಿತ್ತು. ಆಸ್ಕರ್ ವಿಜೇತ ಬ್ಯಾರಿ ಜೆಂಕಿನ್ಸ್ ನಿರ್ದೇಶಿಸಿದ ಮತ್ತು ವಾಲ್ಟ್ ಡಿಸ್ನಿ ಪಿಕ್ಚರ್ಸ್ ನಿರ್ಮಿಸಿದ ಈ ಚಲನಚಿತ್ರವು ಭಾರತದಲ್ಲಿನ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಮುಫಾಸಾ: ದಿ ಲಯನ್ ಕಿಂಗ್ ಹೇಗಿದೆ?

ಸಿನಿಮಾ ಆರಂಭಿಕ ಹಂತಗಳಲ್ಲಿ ಉತ್ತಮವಾಗಿ ಕಾಣುತ್ತದೆ. ಎರಡು ಮರಿಗಳ ನಡುವಿನ ಸ್ನೇಹವನ್ನು ಹೃತ್ಪೂರ್ವಕ ಕ್ಷಣಗಳು ಚೆನ್ನಾಗಿ ತೋರಿಸಲಾಗಿದೆ. ವಿಶೇಷವಾಗಿ ಎಳೆಯ ಸಿಂಹಗಳ ತಮಾಷೆಯ ತುಂಟಾಟದ ಸಮಯದ ಕ್ಲೋಸ್-ಅಪ್ ಹಾಗೂ ತುಂಬಾ ಕೂಲ್ ಆಗಿ ಕಾಣುವಂತೆ ಮಾಡಲಾಗಿದೆ. ಆದರೆ ಕಥೆಯು ಮುಂದುವರೆದಂತೆ ಇಷ್ಟವಾಗುವುದಿಲ್ಲ ಎಂದು ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

2019 ರ ಬ್ಲಾಕ್‌ಬಸ್ಟರ್ ಆದ ಲಯನ್ ಕಿಂಗ್ ಸಾಕಷ್ಟು ಅಭಿಮಾನಿಗಳನ್ನು ಹುಟ್ಟುಹಾಕಿಕೊಂಡಿದೆ. ಸಿಂಬಾನ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತೊಮ್ಮೆ ಮುಫಾಸಾಗೆ ಧ್ವನಿ ನೀಡಿದ್ದಾರೆ.

ಹಿಂದಿ ಆವೃತ್ತಿಗೆ ಧ್ವನಿಯಾದವರು

ಮುಫಾಸಾ - ಶಾರುಖ್ ಖಾನ್; ಸಿಂಬಾ - ಆರ್ಯನ್ ಖಾನ್; ಯುವ ಮುಫಾಸಾ - ಅಬ್ರಾಮ್ ಖಾನ್; ಟಿಮೊನ್ - ಶ್ರೇಯಸ್ ತಲ್ಪಾಡೆ; ಪುಂಬಾ - ಸಂಜಯ್ ಮಿಶ್ರಾ; ಟಕಾ - ಮೀಯಾಂಗ್ ಚಾಂಗ್; ರಫಿಕಿ - ಮಕರಂದ್ ದೇಶಪಾಂಡೆ

ಒಟಿಟಿಗೆ ಯಾವಾಗ ಬರಲಿದೆ?

ಇಂಡಿಯಾ ಟೈಮ್ಸ್ ಪ್ರಕಾರ ಅನಿಮೇಟೆಡ್ ಮೂವಿ ಮಾರ್ಚ್ 2025ರಲ್ಲಿ ಒಟಿಟಿಗೆ ಬರಬಹುದು ಎಂದು ಊಹಿಸಲಾಗಿದೆ. ಥಿಯೇಟರ್ ಮತ್ತು ಒಟಿಟಿಯ ನಡುವೆ ಮೂರು ತಿಂಗಳ ಅಂತರವನ್ನು ಕಾಯ್ದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

Whats_app_banner