Bigg Boss Winner Hanumantha: ಚಿಲ್ಲೂರುಬಡ್ನಿ ತಾಂಡಾದಿಂದ ಬಿಗ್‌ ಬಾಸ್‌ ವಿನ್ನರ್‌ವರೆಗೆ; ಯಾರು ಈ ಹಾವೇರಿ ಹಮ್ಮೀರ ಹನುಮಂತ ಲಮಾಣಿ?
ಕನ್ನಡ ಸುದ್ದಿ  /  ಮನರಂಜನೆ  /  Bigg Boss Winner Hanumantha: ಚಿಲ್ಲೂರುಬಡ್ನಿ ತಾಂಡಾದಿಂದ ಬಿಗ್‌ ಬಾಸ್‌ ವಿನ್ನರ್‌ವರೆಗೆ; ಯಾರು ಈ ಹಾವೇರಿ ಹಮ್ಮೀರ ಹನುಮಂತ ಲಮಾಣಿ?

Bigg Boss Winner Hanumantha: ಚಿಲ್ಲೂರುಬಡ್ನಿ ತಾಂಡಾದಿಂದ ಬಿಗ್‌ ಬಾಸ್‌ ವಿನ್ನರ್‌ವರೆಗೆ; ಯಾರು ಈ ಹಾವೇರಿ ಹಮ್ಮೀರ ಹನುಮಂತ ಲಮಾಣಿ?

who is Hanumantha Lamani: ಕರ್ನಾಟಕದ ಜನತೆಗೆ ಹನುಮಂತ ಲಮಾಣಿಯ ಪರಿಚಯವಾಗಿದ್ದೇ ಅವರ ಗಾಯನದಿಂದ. 2019ರಲ್ಲಿ ಸರಿಗಮಪ ಸೀಸನ್‌ 15 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹನುಮಂತನ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದ ಶುರುವಾದ ಅವರ ಯಶಸ್ಸಿನ ಪಯಣ ಇದೀಗ ಕರ್ನಾಟಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಗೆಲ್ಲುವ ಹಂತಕ್ಕೆ ಬಂದು ನಿಂತಿದೆ.

ಯಾರು ಈ ಹಾವೇರಿ ಹಮ್ಮೀರ ಹನುಮಂತ ಲಮಾಣಿ?
ಯಾರು ಈ ಹಾವೇರಿ ಹಮ್ಮೀರ ಹನುಮಂತ ಲಮಾಣಿ?

Bigg Boss Winner Hanumantha Lamani: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದೆನಿಸಿಕೊಂಡಿರುವ ಬಿಗ್‌ ಬಾಸ್‌ ಕನ್ನಡದ 11ನೇ ಆವೃತ್ತಿಯ ವಿಜೇತರಾಗಿ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ. ವಿವಿಧ ಕ್ಷೇತ್ರಗಳ 20 ಸ್ಪರ್ಧಿಗಳನ್ನು ಒಳಗೊಂಡಿದ್ದ ‌ಈ ಸಲದ ಬಿಗ್ ಬಾಸ್‌ನಲ್ಲಿ, ಘಟಾನುಘಟಿಗಳೇ ದಂಡೇ ಇತ್ತು. ಬಲಿಷ್ಠ ಸ್ಪರ್ಧಿಗಳ ನಡುವೆ, ಚಾಣಾಕ್ಷ ಆಟಗಾರರೂ ಬಿಗ್‌ ಬಾಸ್‌ ಮನೆ ಪ್ರವೇಶಕ್ಕೂ ಮೊದಲೇ, ಒಂದಷ್ಟು ಪಟ್ಟುಗಳನ್ನು ಕಲಿತು ಬಂದಿದ್ದರು. ಆದರೆ, ಅದ್ಯಾವುದರ ಅರಿವೇ ಇಲ್ಲದೆ, ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಸೈಲೆಂಟ್‌ ಆಗಿ ಬಂದು, ಈಗ ಕಪ್‌ ಗೆದ್ದು ಎಲ್ಲರ ಹುಬ್ಬೇರಿಸಿದ್ದಾರೆ ಹಾವೇರಿಯ ಹಮ್ಮೀರ ಹನುಮಂತ ಲಮಾಣಿ!

ಅಷ್ಟಕ್ಕೂ ಈ ಹನುಮಂತ ಯಾರು?

ಅಪ್ಪಟ ಹಳ್ಳಿಗಾಡಿನ ಹುಡುಗ ಈ ಹನುಮಂತು. ವಿದ್ಯೆ ಅಷ್ಟಕಷ್ಟೇ. ವಿದ್ಯೆ ಕಡಿಮೆ ಇದ್ದರೂ ಕುರಿಕಾಯುತ್ತ, ಅದೇ ಕುರಿಗಳ ನಡುವೆ ಬಂಜಾರ ಸಮುದಾಯದ ಹಾಡು, ಭಜನೆ ಪದಗಳನ್ನು ಹಾಡುತ್ತ, ಸಂಗೀತದಲ್ಲಿ ಮುಂದುವರಿದು ಗುರುತಿಸಿಕೊಂಡ. ಕರ್ನಾಟಕದ ಜನತೆಗೆ ಹನುಮಂತ ಲಮಾಣಿಯ ಪರಿಚಯವಾಗಿದ್ದೇ ಅವರ ಗಾಯನದಿಂದ. 2019ರ ಸರಿಗಮಪ ಸೀಸನ್‌ 15 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹನುಮಂತನ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದ ಶುರುವಾದ ಅವರ ಯಶಸ್ಸಿನ ಪಯಣ ಇದೀಗ ಕರ್ನಾಟಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಗೆಲ್ಲುವ ಹಂತಕ್ಕೆ ಬಂದು ನಿಂತಿದೆ.

ಜೀ ಕನ್ನಡದಿಂದ ಬೆಳಕಿಗೆ ಬಂದ ಪ್ರತಿಭೆ

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಅನ್ನೋ ತಾಂಡಾದಿಂದ ಬಂದವರು ಈ ಹನುಮಂತು. ಬಂಜಾರ ಸಮುದಾಯದವರೇ ಹೆಚ್ಚಿರುವ (ಲಂಬಾಣಿ) ಚಿಲ್ಲೂರು ಬಡ್ನಿ ಗ್ರಾಮದಲ್ಲಿ, ಆ ಗ್ರಾಮದಲ್ಲಿ ಎಲ್ಲರ ನೆಚ್ಚಿನ ಯುವಕ ಈ ಹನುಮಂತ. 1993ರ ಅಕ್ಟೋಬರ್‌ 7ರಂದು ಜನಿಸಿರುವ ಹನುಮಂತ, ಗಾಯನದ ಮೂಲಕ ಮುಂದುವರಿದು, ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಮತ್ತಷ್ಟು ಮಗದಷ್ಟು ಜನಜನಿತನಾಗಿದರು. ಆರಂಭದಲ್ಲಿ ಇವರ ಪ್ರತಿಭೆಗೆ ಸಾಣೆ ಹಿಡಿದಿದ್ದು ಜೀ ಕನ್ನಡದ ಸರಿಗಮಪ ವೇದಿಕೆ.

ಗಾಯನ ಮಾತ್ರವಲ್ಲ ಡಾನ್ಸ್‌ನಲ್ಲೂ ಮುಂದು

2019ರಲ್ಲಿನ ಸರಿಗಮಪ ಸೀಸನ್‌ 15ರಲ್ಲಿ ಭಾಗವಹಿಸಿದ್ದ ಹನುಮಂತು, ತಮ್ಮ ಗ್ರಾಮ್ಯ ಸೊಗಡಿನ ಹಾಡುಗಳ ಮೂಲಕವೇ ತೀರ್ಪುಗಾರರಿಗೆ ಪ್ರಿಯವಾದರು. ಸಂಗೀತ ಕಲಿತು ಬಂದ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು, ಫಿನಾಲೆ ತಲುಪಿದರು. ಅಚ್ಚರಿಯ ರೀತಿಯಲ್ಲಿ ಮೊದಲ ರನ್ನರ್‌ ಆಗಿ ಹನುಮಂತ ಹೊರಹೊಮ್ಮಿದರು. ಅಲ್ಲಿಗೆ ಹನುಮಂತನ ಲಕ್‌ ಬದಲಾಯಿತು. ಸುಮ್ಮನಾಗಲಿಲ್ಲ. ಗಾಯನ ಅಷ್ಟೇ ಅಲ್ಲ ಡಾನ್ಸ್‌ನಲ್ಲೂ ನಾನು ಮುಂದಿದ್ದೇನೆ ಎಂದು ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿಯೂ ಸೈ ಎನಿಸಿಕೊಂಡರು. ನೃತ್ಯ ಬಾರದಿದ್ದರೂ, ನುರಿತ ಘಟಾನುಘಟಿ ಡಾನ್ಸರ್‌ ಜತೆ ಸೆಣಸಿ ಸೆಮಿಫಿನಾಲೆ ವೇದಿಕೆ ತಲುಪಿ ಭೇಷ್‌ ಎನಿಸಿಕೊಂಡರು.

ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲೂ ಕಮಾಲ್

ಜೀ ಕನ್ನಡದಿಂದಲೇ ಬೆಳಕಿಗೆ ಬಂದ ಈ ಪ್ರತಿಭೆ, ರಿಯಾಲಿಟಿ ಶೋಗಳ ಮೂಲಕವೇ ಮನೆ ಮನೆ ಮಾತಾದ. ಡಾನ್ಸ್‌ ಕರ್ನಾಟಕ ಡಾನ್ಸ್‌ ಮುಗಿಯುತ್ತಿದ್ದಂತೆ, ಕಳೆದ ವರ್ಷ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿಯೇ ಭಾಗವಹಿಸಿ ಅಲ್ಲಿಯೂ ತನ್ನ ಆಟ ಆಡಿ ಕರುನಾಡ ಮನಕದ್ದ ಈ ಹನುಮಂತ. ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ರಚಿತಾ ರಾಮ್‌ ತೀರ್ಪುಗಾರರ ನೆಚ್ಚಿನ ಸ್ಪರ್ಧಿಯಾಗಿಯೂ ಹನುಮಂತ ಗುರುತಿಸಿಕೊಂಡಿದ್ದರು. ಅದಾದ ಮೇಲೆ ಕಾಮಿಡಿ ಕಿಲಾಡಿಗಳು ಶೋನಲ್ಲಿಯೂ ನಗಿಸುವ ಕಾಯಕಕ್ಕೂ ಕೈ ಹಾಕಿದರು. ಒಟ್ಟಿನಲ್ಲಿ ಮುಟ್ಟಿದ್ದೆಲ್ಲ ಚಿನ್ನ ಅನ್ನೋ ರೀತಿಯಲ್ಲಿ ಭಾಗವಹಿಸಿದ ಶೋಗಳಲ್ಲಿ ವಿಜೇತರಾಗಿಯೇ ಹೊರಹೊಮ್ಮುತ್ತಿದ್ದಾರೆ ಹನುಮಂತ ಲಮಾಣಿ.

 

Whats_app_banner