ಹಂಸಲೇಖ ಈ ಬಾರಿ ‘ಸರಿಗಮಪ’ ಸಿಂಗಿಂಗ್ ರಿಯಾಲಿಟಿ ಶೋದಲ್ಲಿ ಇರ್ತಾರಾ? ಇಲ್ವಾ? ನಿಮ್ಮ ಪ್ರಶ್ನೆಗೆ ಇಲ್ಲೇ ಇದೆ ಉತ್ತರ
ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರದಿಂದ (ಡಿಸೆಂಬರ್ 14) 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಬಾರಿ ಒಂದು ಹೊಸತನದೊಂದಿದೆ ಈ ರಿಯಾಲಿಟಿ ಶೋ ಮನರಂಜಿಸಲು ಸಿದ್ಧವಾಗಿದೆ.
ಜೀ ಕನ್ನಡವಾಹಿನಿಯಲ್ಲಿ 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ಆರಂಭವಾಗಿ ಹಲವು ವರ್ಷಗಳೇ ಕಳೆದವು ಮೊದಲು ವಯೋಮಾನ ನಿಗದಿ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈ ಬಾರಿ 6 ರಿಂದ 60 ವರ್ಷದ ಒಳಗಿನ ಎಲ್ಲ ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಸಾಕಷ್ಟು ಜನ ತಮ್ಮ ಹಾಡುಗಳನ್ನು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ಗಳಿಸಿದ್ದಾರೆ. ಹೀಗಿರುವಾಗ ಈ ಬಾರಿ ಯಾರು ಈ ಹಾಡುಗಾರರನ್ನು ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ಈ ಬಾರಿ ಸಮಾಜಿಕ ಜಾಲತಾಣದ ಮೂಲಕ ಜನರೇ ಹಾಡುಗಾರರನ್ನು ಆಯ್ಕೆ ಮಾಡಿದ್ದಾರೆ. ಅದಾದ ನಂತರದಲ್ಲಿ ಆ 60 ಹಾಡುಗಾರರಲ್ಲಿ ಹೆಚ್ಚು ಲೈಕ್ ಪಡೆದ 40 ಜನರನ್ನು ಆಯ್ಕೆ ಮಾಡಿ ಮೆಗಾ ಆಡಿಷನ್ ಮಾಡಲಾಗಿದೆ. ಅದರಲ್ಲಿ ಯಾರು ಆಯ್ಕೆ ಆಗಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಮೆಗಾ ಆಡಿಷನ್ ಸುತ್ತಿನಲ್ಲಿ ಸುಮಾರು 20 ಸ್ಪರ್ಧಿಗಳು ಆಯ್ಕೆಯಾಗುವ ಸಾಧ್ಯತೆ ಇದೆ.
ಈ ಸುತ್ತಿನಲ್ಲಿ ವಿಕಯ್ ಪ್ರಕಾಶ್, ರಾಜೇಶ್ ಕೃಷ್ಣ ಹಾಗೂ ಅರ್ಜುನ್ ಜನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾದರೆ ಈ ಬಾರಿ ಮಹಾಗುರುಗಳು ‘ಸರಿಗಮಪ’ ಶೋನಲ್ಲಿ ಇರೋದಿಲ್ವಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರ ಎಂಬಂತೆ ಈ ಬಾರಿ ನಾವು ಅವರ ಆಶಿರ್ವಾದವನ್ನು ಪಡೆದುಕೊಂಡೇ ಈ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ ಎಂದು ಅನುಶ್ರೀ ಹೇಳಿದ್ದಾರೆ. ಹಾಗೂ ಜೀ ತಂಡ ಕೂಡ ಅದನ್ನೇ ಹೇಳಿದೆ.
ಈ ಬಗ್ಗೆ ವಿಜಯ್ ಪ್ರಕಾಶ್ ಹೇಳಿದ್ದೇನು?
ಜೀ ಕನ್ನಡವಾಹಿನಿ ಏರ್ಪಡಿಸಿದ್ದ ಪ್ರೆಸ್ ಮೀಟ್‌ನಲ್ಲಿ ಈ ಬಗ್ಗೆ ಮಾತನಾಡಿದ ವಿಜಯ್ ಪ್ರಕಾಶ್ ಅವರು “ಹಂಸಲೇಖ ಅವರು ಇಲ್ಲೇ ಇದ್ದಾರೆ. ಅವರು ಸದಾ ನಮ್ಮೊಟ್ಟಿಗೆ ಇರುತ್ತಾರೆ. ಅವರ ಆಶಿರ್ವಾದ ಯಾವಾಗಲೂ ಈ ಕಾರ್ಯಕ್ರಮದ ಮೇಲೆ ಇರುತ್ತದೆ. ಅಷ್ಟೇ ಅಲ್ಲ ಅವರು ಖಂಡಿತ ಮತ್ತೆ ಬರುತ್ತಾರೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಹೇಳಿದ್ದಾರೆ. ಆದರೆ ಈಗ ಆರಂಭದ ದಿನಗಳಲ್ಲಂತೂ ಅವರು ಕಾಣಿಸಿಕೊಂಡಿಲ್ಲ.
ತೀರ್ಪುಗಾರರು
ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿರುವುದು ಈ ಆವೃತ್ತಿಯ ಮತ್ತೊಂದು ಹೈಲೈಟ್ ಆಗಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಈ ಸೀಸನ್ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಶೋನಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಿರದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ಮತ್ತಷ್ಟು ಪ್ರೇರೇಪಿಸಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವೀಕ್ಷಕರು ಜೀ಼ಕನ್ನಡ 'ಸರಿಗಮಪ' ಇನ್ಸ್ಟಾಗ್ರಾಂನ ಅಧಿಕೃತ ಪೇಜ್ನಲ್ಲಿ ಪೋಸ್ಟ್ ಮಾಡುವ ಆಡಿಷನ್ ವೀಡಿಯೋಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆಮಾಡಿದ್ದಾರೆ ಮತ್ತು ಅತೀ ಹೆಚ್ಚು ಲೈಕ್ ಗಳಿಸಿರುವ ಸ್ಪರ್ಧಿಗಳು ಮೆಗಾ ಆಡಿಷನ್‌ಗೆ ಬಡ್ತಿ ಪಡೆದಿದ್ದಾರೆ.
ಹೊಸತನದೊಂದಿಗೆ ಸರಿಗಮಪ
ಗಾಯಕರನ್ನು ನೀಡಿರುವ ಈ 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ಮತ್ತಷ್ಟು ಹೊಸತನದೊಂದಿಗೆ ನಿಮ್ಮನ್ನು ಮನರಂಜಿಸಲು ಇದೇ ಡಿಸೆಂಬರ್ 14 ರಿಂದ 7:30ಕ್ಕೆ ನಿಮ್ಮ ಮುಂದೆ ಬರುತ್ತಿದೆ. 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ.