ಜಗತ್ತಿನ ಅತ್ಯಂತ ದುಬಾರಿ ರಿಯಾಲಿಟಿ ಶೋ: ಈ ಆಟದ ಮುಂದೆ ಬಿಗ್‌ಬಾಸ್‌, ಗೇಮ್‌ ಆಫ್‌ ಥ್ರೋನ್ಸ್‌, ಸ್ಕ್ವಿಡ್‌ ಗೇಮ್‌ ಲೆಕ್ಕಕ್ಕಿಲ್ಲ ಗುರೂ!
ಕನ್ನಡ ಸುದ್ದಿ  /  ಮನರಂಜನೆ  /  ಜಗತ್ತಿನ ಅತ್ಯಂತ ದುಬಾರಿ ರಿಯಾಲಿಟಿ ಶೋ: ಈ ಆಟದ ಮುಂದೆ ಬಿಗ್‌ಬಾಸ್‌, ಗೇಮ್‌ ಆಫ್‌ ಥ್ರೋನ್ಸ್‌, ಸ್ಕ್ವಿಡ್‌ ಗೇಮ್‌ ಲೆಕ್ಕಕ್ಕಿಲ್ಲ ಗುರೂ!

ಜಗತ್ತಿನ ಅತ್ಯಂತ ದುಬಾರಿ ರಿಯಾಲಿಟಿ ಶೋ: ಈ ಆಟದ ಮುಂದೆ ಬಿಗ್‌ಬಾಸ್‌, ಗೇಮ್‌ ಆಫ್‌ ಥ್ರೋನ್ಸ್‌, ಸ್ಕ್ವಿಡ್‌ ಗೇಮ್‌ ಲೆಕ್ಕಕ್ಕಿಲ್ಲ ಗುರೂ!

ಇದು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ರಿಯಾಲಿಟಿ ಶೋ. ಸಾವಿರಾರು ಸ್ಪರ್ಧಿಗಳು ಭಾಗವಹಿಸುವ ಈ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ 4 ದಶಲಕ್ಷ ಡಾಲರ್‌ ನಗದು ಬಹುಮಾನ ದೊರಕುತ್ತದೆ. ಒಂದು ಖಾಸಗಿ ದ್ವೀಪವೂ ಬಹುಮಾನವಾಗಿ ದೊರಕುತ್ತದೆ.

ಜಗತ್ತಿನ ಅತ್ಯಂತ ದುಬಾರಿ ರಿಯಾಲಿಟಿ ಶೋ
ಜಗತ್ತಿನ ಅತ್ಯಂತ ದುಬಾರಿ ರಿಯಾಲಿಟಿ ಶೋ

ಒಟಿಟಿಯಲ್ಲಿ ಈಗ ಎಲ್ಲೆಡೆ ಸ್ಕ್ವಿಡ್‌ ಗೇಮ್‌ ಹವಾ ಇದೆ. 2021ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಕ್ವಿಡ್‌ ಗೇಮ್‌ ಬಿಡುಗಡೆಯಾದಾಗ ಎಲ್ಲರೂ ಅಚ್ಚರಿಪಟ್ಟಿದ್ದರು. ಇತ್ತೀಚೆಗೆ ಈ ಇದರ ಎರಡನೇ ಸರಣಿಯೂ ಬಿಡುಗಡೆಯಾಗಿದೆ. ಹಣಕಾಸು ತೊಂದರೆಯಲ್ಲಿರುವ ಜನರನ್ನು ಕರೆತಂದು ಅವರಿಂದ ಮಾರಣಾಂತಿಕ ಆಟ ಆಡಿಸುವುದು ಸ್ಕ್ವಿಡ್‌ ಗೇಮ್‌ನ ಕಾನ್ಸೆಪ್ಟ್‌ ಆಗಿತ್ತು. ಇಂತಹ ಆಟ ನೋಡಲು ಶ್ರೀಮಂತ ವರ್ಗ ಕಾಯುತ್ತಿತ್ತು. ಈ ಸರಣಿ ಬಗ್ಗೆ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿದೆ. ಆದರೆ, ಈ ಸುದ್ದಿಯಲ್ಲಿ ಹೇಳ್ತಿರೋದು ಜಗತ್ತಿನ ಅತ್ಯಂತ ದುಬಾರಿ ರಿಯಾಲಿಟಿ ಶೋ "ಸ್ಕ್ವಿಡ್‌ ಗೇಮ್‌" ಅಲ್ಲ, ಅದಕ್ಕಿಂತಲೂ ದುಬಾರಿ ಗೇಮ್‌ ಶೋ ಬಗ್ಗೆ!

ಜಗತ್ತಿನ ದುಬಾರಿ ರಿಯಾಲಿಟಿ ಶೋ

ಯೂಟ್ಯೂಬರ್‌ ಮಿಸ್ಟರ್‌ ಬೀಸ್ಟ್‌ ತನ್ನ ಮೊದಲ ರಿಯಾಲಿಟಿ ಟಿವಿ ಗೇಮ್‌ ಶೋ "ಬೀಸ್ಟ್‌ ಗೇಮ್ಸ್‌" ಆರಂಭಿಸಿದ್ದಾನೆ. ಬೀಸ್ಟ್‌ ಗೇಮ್ಸ್‌ನಲ್ಲಿ ಸ್ಪರ್ಧಿಗಳಿಗೆ ಅನೇಕ ಸವಾಲುಗಳು ಇರುತ್ತವೆ. ಸ್ಕ್ವಿಡ್‌ ಗೇಮ್ಸ್‌ನಂತೆ ಸಾವಿನ ಬೆದರಿಕೆ ಇಲ್ಲ. ಇದು ಜಗತ್ತಿನ ಅತಿದೊಡ್ಡ ರಿಯಾಲಿಟಿ ಶೋ ಎನ್ನಲಾಗುತ್ತಿದೆ. "ಈ ಯೂಟ್ಯೂಬರ್‌ ತನ್ನ ಸ್ವಂತ ಹಣ 100 ದಶಲಕ್ಷ ಡಾಲರ್‌ ಅನ್ನು ಈ ರಿಯಾಲಿಟಿ ಶೋಗಾಗಿ ಹೂಡಿಕೆ ಮಾಡಿದ್ದಾನೆ. ಈ ಹೂಡಿಕೆಯು 5 ದಶಲಕ್ಷ ಡಾಲರ್‌ ಬಹುಮಾನ, ಲ್ಯಾಂಬೋರ್ಗಿನಿ ಕಾರು, ಖಾಸಗಿ ದ್ವೀಪದ ಬಹುಮಾನ ಒಳಗೊಂಡಿಲ್ಲ" ಎಂದು ದಿ ಬಿಸ್ನೆಸ್‌ ಇನ್‌ಸೈಡರ್‌ ವರದಿ ಮಾಡಿದೆ.

ಈ ಕಾರ್ಯಕ್ರಮವು ಡಬ್ಲ್ಯುಎಂಎಸಿ ಮಾಸ್ಟರ್ಸ್‌ನಂತಹ ಇತರೆ ರಿಯಾಲಿಟಿ ಟಿವಿ ಶೋಗಳಿಗಿಂತ ದೊಡ್ಡಮಟ್ಟದ್ದಾಗಿದೆ. ಡಬ್ಲ್ಯುಎಂಎಸಿ ಮಾಸ್ಟರ್ಸ್‌ಗೆ 1995ರಲ್ಲಿ 11 ದಶಲಕ್ಷ ಡಾಲರ್‌ ಖರ್ಚಾಗಿತ್ತು. ಆದರೆ, ಬೀಸ್ಟ್ ಗೇಮ್ಸ್‌ನ ಬಜೆಟ್ ಸ್ಕ್ವಿಡ್ ಗೇಮ್ (22 ದಶಲಕ್ಷ ಡಾಲರ್‌), ಗೇಮ್ ಆಫ್ ಥ್ರೋನ್ಸ್ (50 ದಶಲಕ್ಷ ಡಾಲರ್‌) ಮತ್ತು ದಿ ಲಾಸ್ಟ್ ಆಫ್ ಅಸ್ (90-100 ಮಿಲಿಯನ್ ಡಾಲರ್‌) ಸೇರಿದಂತೆ ಜಗತ್ತಿನ ಅನೇಕ ಬೃಹತ್‌ ಟಿವಿ ಸರಣಿಗಳಿಗಿಂತಲೂ ಹೆಚ್ಚು ದುಬಾರಿ.

ಬೀಸ್ಟ್‌ ಗೇಮ್ಸ್‌ ಕುರಿತು

ಬೀಸ್ಟ್ ಗೇಮ್ಸ್ ಎನ್ನುವುದು ಸ್ಪರ್ಧಾ ಸರಣಿಯಾಗಿದ್ದು ಡಿಸೆಂಬರ್ 19 ರಂದು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಜಿಮ್ಮಿ ಡೊನಾಲ್ಡ್‌ಸನ್ ಯಾನೆ ಮಿಸ್ಟರ್ ಬೀಸ್ಟ್‌ ಈ ರಿಯಾಲಿಟಿ ಶೋದ ರೂವಾರಿ. ಈ ಪ್ರದರ್ಶನವು ಸವಾಲುಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಗೆಲ್ಲುವ ಅವಕಾಶ ಸ್ಪರ್ಧಿಗಳಿಗೆ ನೀಡುತ್ತದೆ. ಸ್ಕ್ವಿಡ್‌ ಗೇಮ್‌ಗೂ ಈ ಗೇಮ್‌ಗೂ ಇರುವ ವ್ಯತ್ಯಾಸವೇನೆಂದರೆ ಇಲ್ಲಿ ಸಾವಿನ ಬೆದರಿಕೆ ಇಲ್ಲ. ಪ್ರತಿ ಸಂಚಿಕೆಯಲ್ಲಿ ಒಬ್ಬ ಸ್ಪರ್ಧಿಗೆ ಹೊರಹೋಗುವ ಅವಕಾಶ ನೀಡಲಾಗುತ್ತದೆ. ಆ ರೀತಿ ಹೊರಹೋಗುವವರಿಗೆ 80 ಸಾವಿರ ಡಾಲರ್‌ ನೀಡಲಾಗುತ್ತದೆ. ಮೊದಲ ಸೀಸನ್‌ ಹತ್ತು ಸಂಚಿಕೆಗಳನ್ನು ಒಳಗೊಂಡಿದೆ. ವಾರಕ್ಕೊಮ್ಮೆ ಪ್ರಸಾರವಾಗುತ್ತದೆ.

ಬೀಸ್ಟ್‌ ಗೇಮ್ಸ್‌ ವಿವಾದ

ಮಿಸ್ಟರ್‌ಬೀಸ್ಟ್ (ಜಿಮ್ಮಿ ಡೊನಾಲ್ಡ್‌ಸನ್) ಅವರ ಕನಸಿನ ಕೂಸು ಬೀಸ್ಟ್‌ ಗೇಮ್ಸ್‌ 700 ದಶಲಕ್ಷ ಡಾಲರ್‌ ಸಂಪಾದಿಸುವ ಗುರಿಯನ್ನು ಹೊಂದಿದೆಯಂತೆ. 1 ಸಾವಿರ ಸ್ಪರ್ಧಿಗಳು 5 ದಶಲಕ್ಷ ಡಾಲರ್‌ಗಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಇದೀಗ ಶೋನ ಸಿಬ್ಬಂದಿಗಳು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. "ಚಿತ್ರೀಕರಣದ ಸಮಯದಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಟೊರೊಂಟೊದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುವಾಗಲೂ ಸಿಬ್ಬಂದಿಗಳಿಗೆ ಕೆಲಸ ಮಾಡಲು ತಿಳಿಸಲಾಗಿತ್ತಂತೆ. ಗೋದಾಮಿನ ಸಿಬ್ಬಂದಿ ಹವಾನಿಯಂತ್ರಣವಿಲ್ಲದ 90-ಡಿಗ್ರಿ ಉಷ್ಠಾಂಶದಲ್ಲಿ ಕೆಲಸ ಮಾಡಿದ್ದಾರಂತೆ. ಕೆಲವು ವರದಿಗಳ ಪ್ರಕಾರ ಬೀಸ್ಟ್‌ ಗೇಮ್ಸ್‌ ಸಿಬ್ಬಂದಿಗಳು ವಾರದಲ್ಲಿ 80 ಗಂಟೆ ದುಡಿಯಬೇಕಂತೆ. ಲೈಂಗಿಕ ಕಿರುಕುಳ, ಸರಿಯಾಗಿ ವೇತನ ಪಾವತಿಸದೆ ಇರುವುದು, ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇರುವುದು ಸೇರಿದಂತೆ ಅನೇಕ ತೊಂದರೆಗಳನ್ನು ಉದ್ಯೋಗಿಗಳು ಅನುಭವಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner