ಭಾರತಕ್ಕೆ 3 ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟ ಶಂಕರ್ ಮಹಾದೇವನ್, ಉಸ್ತಾದ್ ಜಾಕಿರ್ ಹುಸೇನ್, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
Grammy Awards 2024: 66ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಖುಷಿಯ ಸಂಗತಿಯೆಂದರೆ, ಭಾರತಕ್ಕೆ ಮೂರು ಗ್ರ್ಯಾಮಿ ಅವಾರ್ಡ್‌ಗಳು ಲಭಿಸಿವೆ. ಜಾಕಿರ್ ಹುಸೇನ್ ಮತ್ತು ಶಂಕರ್ ಮಹಾದೇವನ್ ಅವರಿಗೆ ಗ್ರ್ಯಾಮಿ ಅವಾರ್ಡ್ ದೊರಕಿದೆ.
Grammy Awards 2024: 66ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಖುಷಿಯ ಸಂಗತಿಯೆಂದರೆ, ಭಾರತಕ್ಕೆ ಮೂರು ಗ್ರ್ಯಾಮಿ ಅವಾರ್ಡ್‌ಗಳು ಲಭಿಸಿವೆ. ಜಾಕಿರ್ ಹುಸೇನ್ ಮತ್ತು ಶಂಕರ್ ಮಹಾದೇವನ್ ಅವರ ಫ್ಯೂಷನ್ ಬ್ಯಾಂಡ್‌ಗಳಿಗೆ ಗ್ರ್ಯಾಮಿ ಅವಾರ್ಡ್ ದೊರಕಿದೆ. ಶಕ್ತಿ ಬ್ಯಾಂಡ್‌ನ ದೀಸ್ ಮೊಮೆಂಟ್ ಎಂಬ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ಅವಾರ್ಡ್ ದೊರಕಿದೆ.
ಗ್ರ್ಯಾಮಿ ಅವಾರ್ಡ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತ ಫೋಟೋ ಹಂಚಿಕೊಳ್ಳಲಾಗಿದೆ. ಶಂಕರ್ ಮಹಾದೇವನ್ ಮತ್ತು ಬ್ಯಾಂಡ್‌ನ ಇನ್ನೊಬ್ಬರು ಸದಸ್ಯರಾದ ಗಣೇಶ್ ರಾಜಾಗೋಪಾಲನ್ ಅವರು ಪ್ರಶಸ್ತಿ ಸ್ವೀಕರಿಸುವ ಕ್ಷಣದ ಚಿತ್ರ ಇದಾಗಿದೆ. "ಬೆಸ್ಡ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ಗೆಲುವು ಪಡೆದ ಶಕ್ತಿ ಬ್ಯಾಂಡ್‌ನ ದೀಸ್ ಮೊಮೆಂಟ್‌ಗೆ ಅಭಿನಂದನೆಗಳು" ಎಂದು ಗ್ರ್ಯಾಮಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
"ಧನ್ಯವಾದ ಬಾಯ್ಸ್, ಧನ್ಯವಾದ ದೇವರೇ, ಕುಟುಂಬ, ಸ್ನೇಹಿತರು ಮತ್ತು ಭಾರತಕ್ಕೆ ಧನ್ಯವಾದ. ಭಾರತಕ್ಕೆ ಇದು ಖುಷಿಯ ಕ್ಷಣ, ನಾನು ಈ ಪ್ರಶಸ್ತಿಯನ್ನು ನನ್ನ ಪತ್ನಿಗೆ ಅರ್ಪಿಸುವೆ. ನನ್ನ ಸಂಗೀತದ ಪ್ರತಿಯೊಂದು ನೋಟ್ ಅನ್ನು ಈಕೆಗೆ ಸಮರ್ಪಿಸುವೆ" ಎಂದು ಶಂಕರ್ ಮಹಾದೇವನ್ ಅವರು ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದಾಗ ಸಭೆಯಲ್ಲಿ ಕರತಾಡನ ಮೊಳಗಿತು.
ಕಳೆದ ವರ್ಷ ಜೂನ್ 30ರಂದು ದೀಸ್ ಮೊಮೆಂಟ್ ಆಲ್ಬಂ ಬಿಡುಗಡೆಯಾಗಿತ್ತು. ಇದರಲ್ಲಿ ಎಂಟು ಹಾಡುಗಳಿದ್ದವು. ಜಾನ್ ಮೆಕ್ಲಾಫ್ಲಿನ್ (ಗಿಟಾರ್ ಸಿಂಥ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ಗಾಯನಕಾರ), ವಿ ಸೆಲ್ವಗಣೇಶ್ (ತಾಳವಾದ್ಯ), ಮತ್ತು ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ). ಅವರು ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಅವರಂತಹ ಇತರ ಕಲಾವಿದರು ಈ ಆಲ್ಬಂನಲ್ಲಿದ್ದರು.
ಇದೇ ಸಮಯದಲ್ಲಿ ಜಾಕಿರ್ ಹುಸೇನ್ ಅವರು ಬೆಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್ ಅವರೊಂದಿಗೆ 'ಪಾಷ್ಟೋ' ಗೆ ನೀಡಿದ ಕೊಡುಗೆಗಾಗಿ 'ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾಮೆನ್ಸ್" ಗ್ರ್ಯಾಮಿ ಪ್ರಶಸ್ತಿ ಪಡೆದರು. ಈ ಆಲ್ಬಂನಲ್ಲಿ ರಾಕೇಶ್ ಚೌರಾಸಿಯಾ ಕೊಳಲು ವಾದಕರಾಗಿದ್ದರು. ಹುಸೇನ್ ಅವರು ಒಂದೇ ರಾತ್ರಿಯಲ್ಲಿ ಮೂರು ಗ್ರ್ಯಾಮಿಗಳನ್ನು ಪಡೆದರೆ, ಚೌರಾಸಿಯಾ ಎರಡು ಪ್ರಶಸ್ತಿಗಳನ್ನು ಪಡೆದರು. 66ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ಸ್ 2024 ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ಒಟ್ಟು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಭಾರತಕ್ಕೆ ತಂದುಕೊಟ್ಟ ಶಂಕರ್ ಮಹಾದೇವನ್, ಜಾಕಿರ್ ಹುಸೇನ್ ಮತ್ತು ಇತರೆ ಸಂಗೀತಗಾರರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಗ್ರ್ಯಾಮಿ ಪ್ರಶಸ್ತಿಯು ಜಗತ್ತಿನ ಪ್ರತಿಷ್ಠಿತ ಸಂಗೀತ ಪ್ರಶಸ್ತಿಯಾಗಿದೆ.
ವಿಭಾಗ