ಕನ್ನಡ ಸುದ್ದಿ  /  ಮನರಂಜನೆ  /  ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌; ಆರ್ಟಿಕಲ್‌ 370 ನಟಿಯ ಮಗುವಿನ ಹೆಸರು ವೇದವಿದ್‌, ಮಗುವಿನ ಹೆಸರಿನ ಅರ್ಥ ತಿಳಿಯಿರಿ

ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌; ಆರ್ಟಿಕಲ್‌ 370 ನಟಿಯ ಮಗುವಿನ ಹೆಸರು ವೇದವಿದ್‌, ಮಗುವಿನ ಹೆಸರಿನ ಅರ್ಥ ತಿಳಿಯಿರಿ

ಬಾಲಿವುಡ್‌ ದಂಪತಿ ಯಾಮಿ ಗೌತಮ್‌ ಮತ್ತು ಆದಿತ್ಯ ಧರ್‌ ಗಂಡು ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಯಾಮಿ ಗೌತಮ್‌ಗೆ ಮೇ 10ರಂದು ಗಂಡು ಮಗು ಜನಿಸಿದೆ. ಇಂದು ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗುವಿಗೆ ವೇದಾವಿದ್‌ ಎಂದು ನಾಮಕರಣ ಮಾಡಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌
ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌

ಬೆಂಗಳೂರು: ಆರ್ಟಿಕಲ್‌ 370 ನಟಿ ಯಾಮಿ ಗೌತಮ್‌ ಮತ್ತು ಚಲನಚಿತ್ರ ನಿರ್ಮಾಪಕ ಪತಿ ಆದಿತ್ಯ ಧರ್ ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅಂದರೆ ಮೇ 10ರಂದು ಯಾಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ವೇದವಿದ್‌ ಎಂದು ಹೆಸರಿಟ್ಟಿರುವುದಾಗಿ ಇದೀಗ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ಅಕ್ಷಯ ತೃತೀಯದಂದು (ಮೇ 10) ಯಾಮಿತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಮ್ಮನಾದ ಖುಷಿಯಲ್ಲಿ ಯಾಮಿ ಗೌತಮ್‌

"ಅಕ್ಷಯ ತೃತೀಯದ ಶುಭ ದಿನದಂದು ನಮ್ಮ ಪ್ರೀತಿಯ ಮಗ ವೇದವಿದ್ ಅವರ ಆಗಮನವನ್ನು ಘೋಷಿಸಲು ರೋಮಾಂಚನಗೊಂಡಿದ್ದೇವೆ. ದಯವಿಟ್ಟು ನಿಮ್ಮ ಆಶೀರ್ವಾದ ಮತ್ತು ಪ್ರೀತಿಯ ಮಳೆಯನ್ನು ಅವನ ಮೇಲೆ ಸುರಿಸಿ" ಎಂದು ಯಾಮಿ ಗೌತಮ್‌ ಮತ್ತು ಆದಿತ್ಯ ಧರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವೇದವಿದ್‌ ಹೆಸರಿನ ಅರ್ಥವೇನು?

ಯಾಮಿ ಗೌತಮ್‌ ಮತ್ತು ಆದಿತ್ಯ ಧರ್‌ ತಮ್ಮ ಪುಟ್ಟ ಮಗುವಿಗೆ ವೇದವಿದ್‌ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿನ ಅರ್ಥವೇನು ಎಂಬ ಕುತೂಹಲ ಸಾಕಷ್ಟು ಜನರಲ್ಲಿ ಇರಬಹುದು. ಶಿವಪುರಾಣದ ಪ್ರಕಾರ ವೇದವಿದ್‌ ಎಂದರೆ ವೇದವನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿರುವವನು (someone who is well versed with the vedas).

"ಸೂರ್ಯ ಆಸ್ಪತ್ರೆಯ ಅದ್ಭುತ ವೈದ್ಯಕೀಯ ತಂಡಕ್ಕೆ, ವಿಶೇಷವಾಗಿ ಡಾ.ಭೂಪೇಂದರ್ ಅವಸ್ಥಿ ಮತ್ತು ಡಾ.ರಂಜನಾ ಧನು ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಬಯಸುತ್ತೇವೆ. ಅವರಿಂದಾಗಿ ನಾವು ಈ ಸಂತೋಷದ ಸಂಭ್ರಮಕ್ಕೆ ಸಾಕ್ಷಿಯಾದೆವು" ಎಂದು ದಂಪತಿ ಜಂಟಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

"ನಾವು ಪಿತೃತ್ವದ ಈ ಸುಂದರ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ನಮ್ಮ ಮಗನಿಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ. ಈ ಮಗು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಹೆಮ್ಮೆಯ ದೀಪವಾಗಿ ಬೆಳೆಯುತ್ತದೆ ಭರವಸೆ ಮತ್ತು ನಂಬಿಕೆಯನ್ನು ನಾವು ಹೊಂದಿದ್ದೇವೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಯಾಮಿ ದಂಪತಿಯ ಈ ಪೋಸ್ಟ್‌ಗೆ ಅವರ ಸ್ನೇಹಿತರು, ಅಭಿಮಾನಿಗಳು ಅಭಿನಂದನೆಯ ಮಹಾಪೂರವನ್ನೇ ಸುರಿಸಿದ್ದಾರೆ. ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ರಣವೀರ್ ಸಿಂಗ್ ಅವರು ಅಭಿನಂದನೆ ತಿಳಿಸಿದ್ದಾರೆ. "ಬಹುತ್ ಬಹುತ್ ಬಹುತ್ ಸಾರಾ ಪ್ಯಾರ್! (ನಿಮ್ಮೆಲ್ಲರಿಗೂ ತುಂಬಾ ಪ್ರೀತಿ) ದೇವರು ಆಶೀರ್ವದಿಸಲಿ" ಎಂದು ರಣವೀರ್‌ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ. "ಅಭಿನಂದನೆಗಳು... ದೇವರು ಆಶೀರ್ವದಿಸಲಿ" ಎಂದು ನಟ ಮೃಣಾಲ್ ಠಾಕೂರ್ ಬರೆದಿದ್ದಾರೆ. ಅವರ ವಿಕ್ಕಿ ಡೋನರ್ ಸಹನಟ ಆಯುಷ್ಮಾನ್ ಖುರಾನಾ ಕೂಡ "ಹೃತ್ಪೂರ್ವಕ ಅಭಿನಂದನೆಗಳು" ಎಂದು ಬರೆದಿದ್ದಾರೆ.

ಯಾಮಿ ಮತ್ತು ಆದಿತ್ಯ 2021 ರ ಜೂನ್‌ ತಿಂಗಳಲ್ಲಿ ವಿವಾಹವಾಗಿದ್ದಾರೆ.ಈ ವರ್ಷದ ಫೆಬ್ರವರಿಯಲ್ಲಿ ನಡೆದ ತಮ್ಮ ಚಿತ್ರ ಆರ್ಟಿಕಲ್ 370 ರ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುವ ದೊಡ್ಡ ಸುದ್ದಿಯನ್ನು ಘೋಷಿಸಿದ್ದರು.

ಯಾಮಿ ಗೌತಮ್‌ ನಟನೆಯ ಆರ್ಟಿಕಲ್‌ 370 ಸಿನಿಮಾ ಈ ವರ್ಷ ಬಿಡುಗಡೆಯಾಗಿತ್ತು. ಯಾಮಿ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಆರ್ಟಿಕಲ್‌ 370 ರದ್ದತಿಯ ಹಿಂದಿನ ಕಾರಣಗಳು, ರದ್ದತಿಯ ಹಿಂದಿನ ಶ್ರಮ ಸೇರಿದಂತೆ ಸಾಕಷ್ಟು ವಿಚಾರಗಳ ಕುರಿತು ಈ ಸಿನಿಮಾ ಮಾಹಿತಿ ನೀಡಿತ್ತು.

ಟಿ20 ವರ್ಲ್ಡ್‌ಕಪ್ 2024