ಹಾಲಿವುಡ್ ಹುಷಾರ್, ನಾವು ಬರ್ತಿದ್ದೇವೆ ಎಂದ ಯಶ್ ಫ್ಯಾನ್ಸ್: ಸೋಷಿಯಲ್ ಮೀಡಿಯಾದಲ್ಲೀಗ ಟಾಕ್ಸಿಕ್ ಹವಾ
ನಟ ಯಶ್ ಅಭಿನಯದ ಪ್ಯಾನ್ ವರ್ಲ್ಡ್ ಟಾಕ್ಸಿಕ್ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬಗೆಬಗೆ ಕಾಮೆಂಟ್ ಮೂಲಕ ಸಂಭ್ರಮಿಸುತ್ತಿದ್ದಾರೆ. "ಡಿಯರ್ ಹಾಲಿವುಡ್ ನಾವೀಗ ಬರ್ತಿದ್ದೇವೆ" ಎಂದು ಕೆಲವರು ಕಾಮೆಂಟ್ ಹಾಕಿದರೆ, "2026 ನಮ್ಮದೇ" ಎಂದೂ ಬೀಗುತ್ತಿದ್ದಾರೆ.

Toxic Movie Release Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 1 ಮತ್ತು 2ರ ಯಶಸ್ಸಿನ ಬಳಿಕ ಯಶ್ ಪುನರಾಗಮನವಾಗುತ್ತಿದೆ. ಈ ಕಾರಣಕ್ಕೂ ಟಾಕ್ಸಿಕ್ ಹವಾ ಜೋರಾಗಿದೆ. ಚಿತ್ರದ ಸಣ್ಣ ಸಣ್ಣ ಝಲಕ್ ಹೊರಬಿದ್ದಾಗಲೇ ಸಂಭ್ರಮಿಸಿದ್ದ ಫ್ಯಾನ್ಸ್, ಇದೀಗ ಅಚ್ಚರಿಯ ರೀತಿಯಲ್ಲಿ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕವನ್ನೇ ಘೋಷಣೆ ಮಾಡಿದೆ ಚಿತ್ರ ನಿರ್ಮಾಣ ತಂಡ. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಇದೀಗ #TaxicTheMovie ಟ್ರೆಂಡ್ ಆಗುತ್ತಿದೆ.
ಟಾಕ್ಸಿಕ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದೀಗ ಸರ್ಪ್ರೈಸ್ ರೀತಿಯಲ್ಲಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, 2026ರ ಮಾರ್ಚ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಯುಗಾದಿ ಮತ್ತು ಈದ್ ಹಬ್ಬದ ಜತೆಗೆ ಸತತ ನಾಲ್ಕು ರಜೆಗಳಿರುವ ದಿನವನ್ನೇ ಟಾರ್ಗೆಟ್ ಮಾಡಿರುವ ಟಾಕ್ಸಿಕ್, ಗ್ರ್ಯಾಂಡ್ ಆಗಿಯೇ ತೆರೆಗೆ ಬರಲಿದೆ. ಈ ನಡುವೆ ಟ್ವಿಟ್ಟರ್‌ನಲ್ಲಿ ಟಾಕ್ಸಿಕ್ ಅಬ್ಬರವೂ ಜೋರಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಟ್ರೆಂಡಿಂಗ್
ನಟ ಯಶ್ ಅಭಿನಯದ ಪ್ಯಾನ್ ವರ್ಲ್ಡ್ ಟಾಕ್ಸಿಕ್ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬಗೆಬಗೆ ಕಾಮೆಂಟ್ ಮೂಲಕ ಸಂಭ್ರಮಿಸುತ್ತಿದ್ದಾರೆ. "ಡಿಯರ್ ಹಾಲಿವುಡ್ ನಾವೀಗ ಬರ್ತಿದ್ದೇವೆ" ಎಂದು ಕೆಲವರು ಕಾಮೆಂಟ್ ಹಾಕಿದರೆ, "2026 ನಮ್ಮದೇ" ಎಂದೂ ಬೀಗುತ್ತಿದ್ದಾರೆ. ಏಕೆಂದರೆ ಟಾಕ್ಸಿಕ್ ಮಾತ್ರವಲ್ಲದೆ, ಯಶ್ ನಟನೆಯ ರಾಮಾಯಣ ಸಿನಿಮಾ ಸಹ 2026ರ ದೀಪಾವಳಿಗೆ ತೆರೆಗೆ ಬರಲಿದೆ.
"2026ರ ಮಾರ್ಚ್ 19ರಂದು ಬಾಕ್ಸ್ ಆಫೀಸ್ ದಾಖಲೆಗಳು ಪುಡಿಪುಡಿಯಾಗಲಿವೆ", "Aದಿಂದ Zವರೆಗೂ ಭಾರತದ ಯಾವೆಲ್ಲ ರೆಕಾರ್ಡ್‌ಗಳಿವೆ ಅವೆಲ್ಲವೂ ಟಾಕ್ಸಿಕ್ ಬಳಿಕ ಧೂಳಿಪಟವಾಗಲಿವೆ" "19ಕ್ಕೆ ಯುಗಾದಿ, 20ಕ್ಕೆ ಶುಕ್ರವಾರ, 21ಕ್ಕೆ ರಮ್‌ಜಾನ್, 22ಕ್ಕೆ ಭಾನುವಾರ.. ರಾಮನವಮಿ ಪ್ರಯುಕ್ತ ಲಾಂಗ್ ವೀಕೆಂಡ್. ಭಾರತದ ಬಾಕ್ಸ್ ಆಫೀಸ್ ರೂಲ್ ಮಾಡಲು ಟಾಕ್ಸಿಕ್ ಮೂಲಕ ಬರ್ತಿದ್ದಾರೆ ಯಶ್", "ರಾಕಿ ಭಾಯ್.. ನೀನ್ಯಾವತ್ತೂ ನಮ್ಮನ್ನು ಅತೃಪ್ತಿಗೊಳಿಸಲ್ಲ", "19-3-2026ರಂದು ಎಲ್ಲ ದಾಖಲೆಗಳು ಮತ್ತೆ ಬರೆಯಲಾಗುತ್ತದೆ", "ಅನಿರೀಕ್ಷಿತ ಸ್ವೀಟ್ ಶಾಕ್", "ಏನ್ ಬಾಸ್ ಹಿಂಗೆ ಸರ್ಪ್ರೈಸ್ ಕೊಟ್ಬಿಟ್ರಿ" ಎಂದು ಬಗೆಬಗೆ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ ಫ್ಯಾನ್ಸ್.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೂಟಿಂಗ್ ಆಗುತ್ತಿರುವ ಟಾಕ್ಸಿಕ್ ಸಿನಿಮಾ, ಇನ್ನುಳಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ ರಿಲೀಸ್ ಆಗಲಿದೆ. ಇದರ ಜತೆಗೆ ಬೇರೆ ಬೇರೆ ವಿದೇಶಿ ಭಾಷೆಗೂ ಈ ಸಿನಿಮಾ ಡಬ್ ಆಗಿ ತೆರೆಕಾಣುವ ಸಾಧ್ಯತೆಗಳಿವೆ. ಈಗಾಗಲೇ ಬೆಂಗಳೂರು, ಗೋವಾ ಮತ್ತು ಮುಂಬೈನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಭಾರತೀಯ ನಟರ ಜತೆಗೆ ಹಾಲಿವುಡ್ ಕಲಾವಿದರೂ ಈ ಚಿತ್ರದ ಭಾಗವಾಗಿದ್ದಾರೆ.
