Youtube Free Movie: ಕೋಟ್ಯಧಿಪತಿಯ ಕಣ್ತೆರೆಸಿದ ಐಶ್ವರ್ಯಾ; ಪುನೀತ್‌ ರಾಜ್‌ಕುಮಾರ್‌, ರಮ್ಯಾ ನಟಿಸಿದ ಸಿನಿಮಾ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Youtube Free Movie: ಕೋಟ್ಯಧಿಪತಿಯ ಕಣ್ತೆರೆಸಿದ ಐಶ್ವರ್ಯಾ; ಪುನೀತ್‌ ರಾಜ್‌ಕುಮಾರ್‌, ರಮ್ಯಾ ನಟಿಸಿದ ಸಿನಿಮಾ ಇಲ್ಲಿದೆ ನೋಡಿ

Youtube Free Movie: ಕೋಟ್ಯಧಿಪತಿಯ ಕಣ್ತೆರೆಸಿದ ಐಶ್ವರ್ಯಾ; ಪುನೀತ್‌ ರಾಜ್‌ಕುಮಾರ್‌, ರಮ್ಯಾ ನಟಿಸಿದ ಸಿನಿಮಾ ಇಲ್ಲಿದೆ ನೋಡಿ

Youtube Free Movie: ಯೂಟ್ಯೂಬ್‌ನಲ್ಲಿ ಒಂದೊಳ್ಳೆಯ ಹಳೆಯ ಕನ್ನಡ ಸಿನಿಮಾ ನೋಡಲು ಬಯಸುವವರು ಪುನೀತ್‌ ರಾಜ್‌ಕುಮಾರ್‌, ರಮ್ಯಾ, ಮೀರಾ ಜಾಸ್ಮಿನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅರಸು ಸಿನಿಮಾ ( Arasu Kannada Full Movie) ನೋಡಬಹುದು. ಈ ಸಿನಿಮಾದ ಲಿಂಕ್‌ ಮತ್ತು ಅರಸು ಸಿನಿಮಾದ ಸ್ಟೋರಿ ಇಲ್ಲಿದೆ.

Youtube Free Movie: ಕೋಟ್ಯಧಿಪತಿಯ ಕಣ್ತೆರೆಸಿದ ಐಶ್ವರ್ಯಾ; ಪುನೀತ್‌ ರಾಜ್‌ಕುಮಾರ್‌, ರಮ್ಯಾ ನಟಿಸಿದ ಸಿನಿಮಾ ಇಲ್ಲಿದೆ ನೋಡಿ
Youtube Free Movie: ಕೋಟ್ಯಧಿಪತಿಯ ಕಣ್ತೆರೆಸಿದ ಐಶ್ವರ್ಯಾ; ಪುನೀತ್‌ ರಾಜ್‌ಕುಮಾರ್‌, ರಮ್ಯಾ ನಟಿಸಿದ ಸಿನಿಮಾ ಇಲ್ಲಿದೆ ನೋಡಿ

Arasu Kannada Full Movie: ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟಿಸಿದ ಸಿನಿಮಾಗಳನ್ನು ಒಟಿಟಿಗಳಲ್ಲಿ, ಯೂಟ್ಯೂಬ್‌ನಲ್ಲಿ ನೋಡಲು ಸಾಕಷ್ಟು ಜನರು ಬಯಸುತ್ತಾರೆ. ಅಪ್ಪು ನಟಿಸಿದ ಹಲವು ಸಿನಿಮಾಗಳಲ್ಲಿ ಅರಸು ಕೂಡ ಪ್ರಮುಖವಾದದ್ದು. ಈ ಸಿನಿಮಾದಲ್ಲಿ ದರ್ಶನ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿದ್ದಾರೆ. ಅರಸು ಮನೆತನದ ಶ್ರೀಮಂತ ಯುವಕನೊಬ್ಬನಿಗೆ ಕಷ್ಟ ಎಂದರೆ ಏನೆಂದು ತಿಳಿದಿರುವುದಿಲ್ಲ. ಆತ ಸ್ವಂತ ದುಡಿಮೆಗೆ ಮುಂದಾದಗ ಸ್ವಂತ ಪರಿಶ್ರಮದಿಂದ ನೂರು, ಐನೂರು, ಸಾವಿರ ರೂಪಾಯಿ ಗಳಿಸುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಈ ಸಮಯದಲ್ಲಿ ಈತನ ಜತೆ ಯುವತಿಯೊಬ್ಬಳು ಇರುತ್ತಾಳೆ. ಈತನನ್ನು ಗೊತ್ತಿಲ್ಲದೆ ಪ್ರೀತಿಸಿದ ಆ ಯುವತಿಯನ್ನು ಮದುವೆಯಾಗಬೇಕೆ? ನನ್ನನ್ನು ಮದುವೆಯಾಗಲು ಬಯಸಿದ ಯುವತಿಯನ್ನು ಮದುವೆಯಾಗಬೇಕೇ ಎಂಬ ಗೊಂದಲ ಈ ನಾಯಕನಿಗೆ ಕಾಡುತ್ತದೆ. ಕೊರಿಯನ್‌ ಡ್ರಾಮಾಗಳಲ್ಲಿರುವಂತೆ ಶ್ರೀಮಂತ ವ್ಯಕ್ತಿಯ ಕಥೆಯನ್ನು ಈ ಅರಸು ಸಿನಿಮಾ ಹೊಂದಿದೆ. ಒಂದಲ್ಲ, ಎರಡಲ್ಲ, ಹಲವು ಬಾರಿ ನೋಡಿದರೂ ಬೋರ್‌ ಹೊಡೆಸದ ಸಿನಿಮಾ ಇದಾಗಿದೆ. ಈ ಕನ್ನಡ ಸೂಪರ್‌ ಹಿಟ್‌ ಸಿನಿಮಾವನ್ನು ನೀವು ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದು.

ಅರಸು ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ನೋಡಿ

ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ಅರಸು ಸಿನಿಮಾವು ಯೂಟ್ಯೂಬ್‌ನಲ್ಲಿದೆ. ಉತ್ತಮ ಗುಣಮಟ್ಟದ ವಿಡಿಯೋವನ್ನು ಎಸ್‌ಜಿವಿ ಡಿಜಿಟಲ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಸಿನಿಮಾ ನೋಡಲು ಬಯಸುವವರು ಈ ಕೆಳಗೆ ನೀಡಲಾಗಿರುವ ವಿಡಿಯೋ ಬಟನ್‌ ಪ್ಲೇ ಮಾಡಿ.

ಅರಸು ಸಿನಿಮಾದ ಪಾತ್ರವರ್ಗ

ಕನ್ನಡದ ಬ್ಲಾಕ್‌ಬಸ್ಟರ್‌ ಅರಸು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್, ರಮ್ಯಾ, ಮೀರಾ ಜಾಸ್ಮಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ, ಶ್ರೀನಿವಾಸ ಮೂರ್ತಿ, ಕೋಮಲ್, ಆದಿ ಲೋಕೇಶ್, ಸತ್ಯಜಿತ್, ಪಿ. ಎನ್. ಸತ್ಯ, ಶಂಕರ್ ರಾವ್, ದರ್ಶನ್ ತೂಗುದೀಪ್ (ವಿಶೇಷ ಪಾತ್ರದಲ್ಲಿ), ಆದಿತ್ಯ (ವಿಶೇಷ ಪಾತ್ರದಲ್ಲಿ) ಮತ್ತು ಶ್ರಿಯಾ ಶರಣ್ (ವಿಶೇಷ ಪಾತ್ರದಲ್ಲಿ) ನಟಿಸಿದ್ದಾರೆ.

ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದ ಸಿನಿಮಾ

ಅರಸು ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಮನೋಜ್ಞವಾಗಿ ನಟಿಸಿದ್ದಾರೆ. ಅಪ್ಪುವಿಗೆ ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತ್ತು. ಈ ಚಲನಚಿತ್ರವನ್ನು ಹಿಂದಿಯಲ್ಲಿ ಜಿಂದಾ ದಿಲಿ ಮತ್ತು ಮರಾಠಿಯಲ್ಲಿ ಪ್ರೇಮಚಿ ಸತ್ವ ಪರೀಕ್ಷಾ ಎಂದು ಡಬ್ ಮಾಡಲಾಗಿದೆ.

ಅರಸು ಸಿನಿಮಾದ ಕಥೆಯೇನು?

ಈ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ "ಶಿವರಾಜ್‌ ಅರಸ್‌" ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಮಂತ ವ್ಯಾಪಾರ ಕುಟುಂಬದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಜನಿಸಿದ ಈತನಿಗೆ ಉದ್ಯಮ, ಬಿಸ್ನೆಸ್‌ ಬಗ್ಗೆ ಏನೂ ತಿಳಿದಿಲ್ಲ. ಹೊರಜಗತ್ತಿನ ಅರಿವಿಲ್ಲ. ಕಂಪನಿಯ ವ್ಯವಹಾರ ನೋಡಲು ಈತನಿಗೆ ಆಸಕ್ತಿ ಇಲ್ಲ. ಅಮೆರಿಕದಲ್ಲಿ ಐಷಾರಾಮಿ ಬದುಕು ನೋಡಿದ್ದ ಈತನಿಗೆ ಭಾರತ ಕೆಟ್ಟದ್ದಾಗಿ ಕಾಣಿಸುತ್ತದೆ. ಆತ ತನ್ನ ಕಂಪನಿಯ ಉದ್ಯೋಗಿ ರಾಮಣ್ಣನ ಮಗಳು ಶ್ರುತಿಯನ್ನು ಪ್ರೀತಿಸುತ್ತಾನೆ. ಆಕೆಗೆ ಪ್ರೊಪೋಸ್‌ ಮಾಡುತ್ತಾನೆ. ಆದರೆ, ಆಕೆಗೆ ಈತನ ಜೀವನಶೈಲಿ ಇಷ್ಟವಿಲ್ಲ. ಈತನ ಲೈಫ್‌ಸ್ಟೈಲ್‌ ಅನ್ನು ಟೀಕಿಸುತ್ತಾಳೆ. ನಿನಗೆ ಸ್ವಂತ 5 ಸಾವಿರ ರೂಪಾಯಿ ಗಳಿಸುವ ಶಕ್ತಿ ಇಲ್ಲ ಎನ್ನುತ್ತಾಳೆ. ಕಂಪನಿಯ ಯಾವುದೇ ನೆರವು ಪಡೆಯದೆ ಸ್ವಂತ ದುಡಿಮೆಯಿಂದ ಕನಿಷ್ಠ 5 ಸಾವಿರ ರೂಪಾಯಿ ಸಂಪಾದನೆ ಮಾಡಿ ತೋರಿಸು ಎಂದು ಸವಾಲು ಹಾಕುತ್ತಾಳೆ. ಇದೇನು ದೊಡ್ಡ ಕೆಲಸ ಎಂದುಕೊಂಡು ಹೊರಗೆ ಬಂದ ಅರಸುಗೆ ನಿಜವಾದ ಬದುಕಿನ ದರ್ಶನವಾಗುತ್ತದೆ. ಐದು ಸಾವಿರ ರೂಪಾಯಿ ಸಂಪಾದನೆ ಮಾಡುವುದು ತಾನು ಅಂದುಕೊಂಡಷ್ಟು ಸುಲಭವಲ್ಲ ಎಂದು ಅರಿವಾಗುತ್ತದೆ.

ಹಸಿವಾದಗ ಬಾಳೆಹಣ್ಣು ಮಾರುತ್ತಿರುವ ಮುದುಕಿಯಿಂದ ಬಾಳೆಹಣ್ಣು ಪಡೆದು ತಿನ್ನುತ್ತಾನೆ. ಈ ಬಾಳೆಹಣ್ಣಿಗೆ ಪ್ರತಿಯಾಗಿ ಒಂದು ತಿಂಗಳ ಬಳಿಕ 20 ಸಾವಿರ ರೂಪಾಯಿ ನೀಡುವುದಾಗಿ ಹೇಳುತ್ತಾನೆ. ಹುಡುಗ ಹುಚ್ಚನಿರಬಹುದು ಎಂದು ಅಜ್ಜಿ ಅಂದುಕೊಳ್ಳುತ್ತಾಳೆ. ಈತನಿಗೆ ಸಾಮಾನ್ಯ ಯುವತಿ ಐಶ್ವರ್ಯಾಳ ಪರಿಚಯವಾಗುತ್ತದೆ. ರೌಡಿಗಳು ಆಕೆಯ ಮನೆ ಮೇಲೆ ದಾಳಿ ಮಾಡಿದಾಗ ಸಹಾಯ ಮಾಡುತತಾನೆ. ಆಕೆ ಕೆಲಸ ಮಾಡುವ ಸೀರೆ ಅಂಗಡಿಯಲ್ಲಿ ಸೇಲ್ಸ್‌ ರೆಪ್ರಸೆಂಟೇಟಿವ್‌ ಆಗಿ ಕೆಸ ಮಾಡುತ್ತಾನೆ. ಐಶ್ವರ್ಯಾಳ ಚಿಕ್ಕ ಕೋಣೆಯಲ್ಲಿ ಕಷ್ಟಪಟ್ಟು ಬದುಕುತ್ತಾನೆ. ಐಶ್ವರ್ಯಾ ಈತನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಐಶ್ವರ್ಯಾಳಿಂದ ಈತನಿಗೆ ಬದುಕು ಏನೆಂದು ಅರ್ಥವಾಗಿದೆ. ಆಕೆಗೆ ಈತನ ಮೇಲೆ ಲವ್‌ ಆಗಿದೆ. ಆದರೆ, ಮುಂದೊಂದು ದಿನ ಶ್ರುತಿ ಮತ್ತು ಐಶ್ವರ್ಯಾ ಬೆಸ್ಟ್‌ ಫ್ರೆಂಡ್ಸ್‌ ಎಂದು ಇವನಿಗೆ ತಿಳಿಯುತ್ತದೆ. ನೀವು ಈ ಸಿನಿಮಾ ನೋಡಿದ್ದರೆ ಈ ಕಥೆಯ ಮುಂದಿನ ಭಾಗ ನಿಮಗೆ ನೆನಪಿರಬಹುದು. ಸಿನಿಮಾ ನೋಡದೆ ಇದ್ದರೆ ಇಲ್ಲಿ ನೀಡಿರುವ ವಿಡಿಯೋ ಮೂಲಕ ಅರಸು ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner