ಸಸ್ಪೆನ್ಸ್ ಥ್ರಿಲ್ಲರ್ ಮಲಯಾಳಂ ಸಿನಿಮಾ ಕನ್ನಡದಲ್ಲಿ ಉಚಿತವಾಗಿ ನೋಡಿ; ಪೃಥ್ವಿರಾಜ್ ಸುಕುಮಾರನ್, ಆದಿತಿ ಬಾಲನ್ ನಟನೆ
ಕೋಲ್ಡ್ ಕೇಸ್ ಎನ್ನುವುದು 2021ರ ಮಲಯಾಳಂ ಭಾಷೆಯ ಥ್ರಿಲ್ಲರ್ ಹಾರರ್ ಸಿನಿಮಾ. ತನು ಬಾಲಕ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಆದಿತಿ ಬಾಲನ್ ನಟಿಸಿದ್ದಾರೆ. ಈ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಕನ್ನಡ ಡಬ್ಬಿಂಗ್ ವರ್ಷನ್‌ನಲ್ಲಿ ನೋಡಬಹುದು.

ಕನ್ನಡದಲ್ಲಿ ಮಲಯಾಳಂ ಸಿನಿಮಾಗಳನ್ನು ಉಚಿತವಾಗಿ ನೋಡಲು ಸಾಕಷ್ಟು ಜನರು ಬಯಸುತ್ತಾರೆ. ಎಲ್ಲರಿಗೂ ಒಟಿಟಿಗೆ ಹಣ ಹಾಕುವ ಶಕ್ತಿ ಅಥವಾ ಮನಸ್ಸು ಇರುವುದಿಲ್ಲ. ಯೂಟ್ಯೂಬ್‌ನಲ್ಲಿ ಯಾವುದಾದರೂ ಒಳ್ಳೆಯ ಸಿನಿಮಾ ಇದ್ದರೆ ನೋಡೋಣ ಎಂದು ಹುಡುಕಾಟ ನಡೆಸುತ್ತಾ ಇರುತ್ತಾರೆ. ಎಲ್ಲಾದರೂ ನೀವು ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರಾಗಿದ್ದರೆ ಪೃಥ್ವಿರಾಜ್ ಸುಕುಮಾರನ್ ನಟನೆಯ ಒಂದೊಳ್ಳೆಯ ಸಿನಿಮಾವನ್ನು ಇಲ್ಲಿ ನೀಡಿದ್ದೇವೆ. ಅಂದಹಾಗೆ, ಆ ಸಿನಿಮಾದ ಹೆಸರು ಕೋಲ್ಡ್ ಕೇಸ್.
ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ
ಕೋಲ್ಡ್ ಕೇಸ್ ಎನ್ನುವುದು 2021ರ ಮಲಯಾಳಂ ಭಾಷೆಯ ಥ್ರಿಲ್ಲರ್ ಹಾರರ್ ಸಿನಿಮಾ. ತನು ಬಾಲಕ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಆದಿತಿ ಬಾಲನ್ ನಟಿಸಿದ್ದಾರೆ. ಪೂಜಾ ಮೋಹನರಾಜ್, ಅನಿಲ್ ನೆಡುಮಂಗಡ, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಆನಂದ್, ಮತ್ತು ರಾಜೇಶ್ ಹೆಬ್ಬಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಥಾವಸ್ತುವು ಐಪಿಎಸ್ ಅಧಿಕಾರಿ ಎಂ. ಸತ್ಯಜಿತ್ (ಪೃಥ್ವಿರಾಜ್) ಮತ್ತು ತನಿಖಾ ಪತ್ರಕರ್ತೆ ಮೇಧಾ ಪದ್ಮಜಾ (ಅದಿತಿ) ಇವರಿಬ್ಬರು ಒಂದೇ ಬಾರಿ ನಡೆಸುವ ಎರಡು ನಿಗೂಢ ಕೊಲೆ ಪ್ರಕರಣದ ಬೆನ್ನು ಹತ್ತುತ್ತದೆ. ಇವರಿಬ್ಬರು ಪ್ರತ್ಯೇಕ ಪ್ರತ್ಯೇಕವಾಗಿ ತನಿಖೆ ಮಾಡುತ್ತಾರೆ. ಅಂತಿಮವಾಗಿ ಇವರಿಬ್ಬರು ಎದುರಾಗುತ್ತಾರೆ.
ಕೋಲ್ಡ್ ಕೇಸ್ ಸಿನಿಮಾವು ಕೊರೊನಾ ಕಾರಣದಿಂದ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜೂನ್ 30, 2021ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ತಿರುವನಂತಪುರದಲ್ಲಿ ಶೂಟಿಂಗ್ ಮಾಡಲಾಗಿತ್ತು. ಸುಮಾರು 36 ದಿನ ಶೂಟಿಂ ಮಾಡಲಾಗಿತ್ತು. ಗಿರೀಶ್ ಗಂಗಾಧರನ್ ಮತ್ತು ಜೊಮನ್ ಟಿ ಜಾನ್ ಅವರು ಜತೆಯಾಗಿ ಸಿನಿಮಾಟೋಗ್ರಫಿ ಮಾಡಿದ್ದರು. ಸಮೀರ್ ಮಹಮ್ಮದ್ ಸಂಕಲನವಿತ್ತು.
ಕೋಲ್ಡ್ ಕೇಸ್ ಸಿನಿಮಾ ಕನ್ನಡದಲ್ಲಿ ನೋಡಿ
ಈ ಸಿನಿಮಾವನ್ನು ನೋಡಲು ಯೂಟ್ಯೂಬ್‌ನಲ್ಲಿ cold case kannada dubbed full movie ಎಂದು ಹುಡುಕಬಹುದು. ಮ್ಯಾಂಗೋ ಕನ್ನಡ ಚಾನೆಲ್‌ನಲ್ಲಿ ಈ ಸಿನಿಮಾವಿದೆ.
ಕೋಲ್ಡ್ ಕೇಸ್ ಪಾತ್ರವರ್ಗ
ಪೃಥ್ವಿರಾಜ್ ಸುಕುಮಾರನ್ ಅವರು ಎಸಿಪಿ ಎಂ. ಸತ್ಯಜಿತ್ ಐಪಿಎಸ್ ಮತ್ತು ಸ್ವತಂತ್ರ ಪತ್ರಕರ್ತೆ ಮೇಧಾ ಪದ್ಮಜಾ ಪಾತ್ರದಲ್ಲಿ ಅದಿತಿ ಬಾಲನ್ ನಟಿಸಿದ್ದಾರೆ. ನೀಲಾ ಮಾರುತನ್ ಐಪಿಎಸ್, ಪ್ರೊಬೇಷನರ್ ಅಧಿಕಾರಿಯಾಗಿ ಪೂಜಾ ಮೋಹನರಾಜ್, ಸಿಐ , ಸಿಯಾದ್ ಮುಹಮ್ಮದ್ ಆಗಿ ಅನಿಲ್ ನೆಡುಮಂಗಾಡ್ ಮತ್ತು ಅಂಧ ನಿಗೂಢ ಸಂಶೋಧಕಿ ಜರಾ ಜಚ್ಚೈ ಪಾತ್ರದಲ್ಲಿ ಸುಚಿತ್ರಾ ಪಿಳ್ಳೈ ನಟಿಸಿದ್ದಾರೆ. ಇವಾ ಮಾರಿಯಾ ಪಾತ್ರದಲ್ಲಿ ಆತ್ಮೀಯ ರಾಜನ್, ಫೋರೆನ್ಸಿಕ್ ಸರ್ಜನ್ ಡಾ. ಮಹೇಶ್ ಪಾತ್ರದಲ್ಲಿ ರಾಜೇಶ್ ಹೆಬ್ಬಾರ್, ಡಾ.ಆಧವನ್ ಪದ್ಮನಾಭನ್ ಪಾತ್ರದಲ್ಲಿ ಆನಂದ್, ಡಾ. ಸನಾ ನವಾಸ್ ಪಾತ್ರದಲ್ಲಿ ಡಾ. ದಿವ್ಯಾ, ಡಿಸಿಪಿ ಮಾಲಿನಿ ರಾಜು ಐಪಿಎಸ್ ಪಾತ್ರದಲ್ಲಿ ನೀತಾ ಪ್ರಾಮಿ, ಎಸ್‌ಐ ಸತೀಶ್ ಆಗಿ ಶಿಬು ಲಬನ್, ಸಿಐ ರಾಜಪ್ರಕಾಶ್ ಆಗಿ ಬಿಲಾಸ್ ನಾಯರ್, ಎಸ್‌ಐ ಅಜಿತ್‌ಕುಮಾರ್ ಪಾತ್ರದಲ್ಲಿ ಜಿಬಿನ್ ಗೋಪಿನಾಥ್, ಮೇಧಾ ಅವರ ತಾಯಿ ಪದ್ಮಜಾ ಪಾತ್ರದಲ್ಲಿ ಪಾರ್ವತಿ ಟಿ ನಟಿಸಿದ್ದಾರೆ.


