Yuva Title Teaser: 'ಯುವ ಪರ್ವ ಆರಂಭ'.. ಯುವ ರಾಜ್‌ಕುಮಾರ್‌ ಮೊದಲ ಸಿನಿಮಾ ಟೈಟಲ್‌ ಟೀಸರ್‌ ರಿಲೀಸ್‌.. ಹೇಗಿದೆ ರೆಸ್ಪಾನ್ಸ್‌?
ಕನ್ನಡ ಸುದ್ದಿ  /  ಮನರಂಜನೆ  /  Yuva Title Teaser: 'ಯುವ ಪರ್ವ ಆರಂಭ'.. ಯುವ ರಾಜ್‌ಕುಮಾರ್‌ ಮೊದಲ ಸಿನಿಮಾ ಟೈಟಲ್‌ ಟೀಸರ್‌ ರಿಲೀಸ್‌.. ಹೇಗಿದೆ ರೆಸ್ಪಾನ್ಸ್‌?

Yuva Title Teaser: 'ಯುವ ಪರ್ವ ಆರಂಭ'.. ಯುವ ರಾಜ್‌ಕುಮಾರ್‌ ಮೊದಲ ಸಿನಿಮಾ ಟೈಟಲ್‌ ಟೀಸರ್‌ ರಿಲೀಸ್‌.. ಹೇಗಿದೆ ರೆಸ್ಪಾನ್ಸ್‌?

''ಅವನನ್ನು ಹೊಡೆಯೋಕೆ ಅಂತ ಒಂದು ಗ್ಯಾಂಗ್‌ ಕಾಯುತ್ತಿತ್ತು, ಅವನನ್ನು ತಡೆಯೋಕೂ ಒಂದು ಗ್ಯಾಂಗ್‌ ಇತ್ತು'' ಎಂಬ ಧ್ವನಿಯಿಂದ ಟೀಸರ್‌ ಆರಂಭವಾಗುತ್ತದೆ. ''ನೀವು ದಾಟಿರೋದು ಬ್ಲಡ್‌ ಲೈನ್‌, ರಕ್ತ ಹರಿದೇ ಹರಿಯುತ್ತದೆ'' ಎಂಬ ಯುವ ರಾಜ್‌ಕುಮಾರ್‌ ಡೈಲಾಗ್‌ ಮೂಲಕ ಟೀಸರ್‌ ಅಂತ್ಯವಾಗುತ್ತದೆ.

'ಯುವ' ಟೈಟಲ್‌ ಟೀಸರ್‌ ರಿಲೀಸ್‌
'ಯುವ' ಟೈಟಲ್‌ ಟೀಸರ್‌ ರಿಲೀಸ್‌ (PC: Hombale Films)

ಡಾ. ರಾಜ್‌ ಕುಮಾರ್‌ ಕುಟುಂಬ ಹಾಗೂ ಅಪ್ಪು ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯವ ರಾಜ್‌ಕುಮಾರ್‌ ಅಭಿನಯದ ಮೊದಲ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆ ಆಗಿದೆ. ಇಂದು ಸಂಜೆ (ಮಾ. 3) ಹೊಂಬಾಳೆ ಫಿಲ್ಮ್ಸ್‌ ತನ್ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೈಟಲ್‌ ಅನೌನ್ಸ್‌ಮೆಂಟ್‌ ಟೀಸರ್‌ ರಿಲೀಸ್‌ ಮಾಡಿದೆ.

ಯುವ ರಾಜ್‌ಕುಮಾರ್‌ ಮೊದಲ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆ ಆಗಿ 2 ಗಂಟೆಗಳಲ್ಲಿ 2 ಮಿಲಿಯನ್‌ ವ್ಯೂವ್ಸ್‌ ಪಡೆದುಕೊಂಡು ಹವಾ ಕ್ರಿಯೇಟ್‌ ಮಾಡಿದೆ. ಯುವ, ಮೊದಲ ಚಿತ್ರಕ್ಕೆ ಡಾ. ರಾಜ್‌ಕುಮಾರ್‌ ಅವರ ಹಳೆ ಸಿನಿಮಾದ ಹೆಸರು ಇಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಅದರೆ ಕೊನೆಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ತಮ್ಮ ಚಿತ್ರಕ್ಕೆ 'ಯುವ' ಎಂಬ ಹೆಸರನ್ನೇ ಫೈನಲ್‌ ಮಾಡಿದ್ದಾರೆ. ಟೀಸರ್‌ ಲಿಂಕನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌ 'ಯುವ ಪರ್ವ ಆರಂಭ' ಎಂದು ಬರೆದುಕೊಂಡಿದೆ.

''ಅವನನ್ನು ಹೊಡೆಯೋಕೆ ಅಂತ ಒಂದು ಗ್ಯಾಂಗ್‌ ಕಾಯುತ್ತಿತ್ತು, ಅವನನ್ನು ತಡೆಯೋಕೂ ಒಂದು ಗ್ಯಾಂಗ್‌ ಇತ್ತು'' ಎಂಬ ಧ್ವನಿಯಿಂದ ಟೀಸರ್‌ ಆರಂಭವಾಗುತ್ತದೆ. ''ನೀವು ದಾಟಿರೋದು ಬ್ಲಡ್‌ ಲೈನ್‌, ರಕ್ತ ಹರಿದೇ ಹರಿಯುತ್ತದೆ'' ಎಂಬ ಯುವ ರಾಜ್‌ಕುಮಾರ್‌ ಡೈಲಾಗ್‌ ಮೂಲಕ ಟೀಸರ್‌ ಅಂತ್ಯವಾಗುತ್ತದೆ. ಈ ನಡುವೆ ಆಕ್ಷನ್‌ ದೃಶ್ಯಗಳು ಸಿನಿಪ್ರಿಯರಿಗೆ ಥ್ರಿಲ್‌ ನೀಡುತ್ತಿದೆ. ಇದರ ಜೊತೆಗೆ ಹಿನ್ನೆಲೆ ಸಂಗೀತಕ್ಕೆ ಎಲ್ಲರೂ ಫಿದಾ ಆಗಿದ್ಧಾರೆ. ಹಾಗೇ ಟೀಸರ್‌ ಕೊನೆಗೆ ಚಿತ್ರತಂಡ ಇದೇ ವರ್ಷ ಡಿಸೆಂಬರ್‌ 22 ರಂದು ಸಿನಿಮಾ ರಿಲೀಸ್‌ ದಿನಾಂಕ ಕೂಡಾ ಅನೌನ್ಸ್‌ ಮಾಡಿದೆ. ಒಟ್ಟಿನಲ್ಲಿ ಈ ಟೀಸರ್‌ ಸಾಕಷ್ಟು ಕುತೂಹಲ ಸೃಷ್ಟಿಸಿರುವುದಂತೂ ನಿಜ.

ಅಭಿಮಾನಿಗಳು ಟೀಸರ್‌ ನೋಡಿ ಹೇಳಿದ್ದೇನು..?

ಅಭಿಮಾನಿಗಳು ಯುವ ಟೀಸರ್‌ ಮೆಚ್ಚಿ ಕಮೆಂಟ್‌ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ನಾವು ಗೆಲ್ಲಿಸಿದರೆ, ಅದೇ ನಾವು ಅಪ್ಪು ಅವರಿಗೆ ಕೊಡುವ ಗಿಫ್ಟ್‌, ಇನ್ಮುಂದೆ ಅಪ್ಪು ಅವರ ಡಾನ್ಸ್ ಮತ್ತು ಫೈಟನ್ನು ಯುವ ರಾಜ್‌ಕುಮಾರ್‌ ಅವರಲ್ಲಿ ನೋಡುತ್ತೇವೆ, ಹಿನ್ನೆಲೆ ಸಂಗೀತ ಬೆಂಕಿ, ಅಜನೀಶ್‌ ಲೋಕನಾಥ್‌ ಅವರೇ ನಿಜಕ್ಕೂ ಬಿಜಿಎಂ ಚೆನ್ನಾಗಿದೆ, ಕನ್ನಡ ಇಂಡಸ್ಟ್ರಿಯ ಹೊಸ ಆಯುಧ, ಇಂದಿನಿಂದ ಹೊಸ ಪರ್ವ ಆರಂಭ ಎಂದೆಲ್ಲಾ ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ.

'ಯುವ' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದು ಪುನೀತ್‌ ರಾಜ್‌ಕುಮಾರ್‌ ಅವರಿಗೆ ರಾಜಕುಮಾರ ಹಾಗೂ ಯುವರತ್ನ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಅಜನೀಶ್‌ ಲೋಕನಾಥ್‌ ಅವರದ್ದು, ಶ್ರೀಷಾ ಕುಡುವಳ್ಳಿ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

Whats_app_banner