ಹಳ್ಳಿ ಹೆಂಗಸು ಕರೆ ಮಾಡಿದಾಗ ಶಕುಂತಲಾದೇವಿಗೆ ದಿಗಿಲು, ಅಮೃತಧಾರೆಯಲ್ಲಿ ಪಂಕಜಾಳ ಚಿದಂಬರ ರಹಸ್ಯ ಬಹಿರಂಗ ಶೀಘ್ರ
ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಂಕಜಾ ಯಾರು ಎಂಬ ಚಿದಂಬರ ರಹಸ್ಯದ ಬೆನ್ನುಹತ್ತಿದ್ದಾಳೆ ಭೂಮಿಕಾ. ಪಂಕಜಾಳ ಹಳ್ಳಿಯ ಮಹಿಳೆಯೊಬ್ಬಳು ದಿವಾನ್ ಮನೆಗೆ ಕರೆ ಮಾಡಿದಾಗ ಶಕುಂತಲಾದೇವಿಗೆ ದಿಗಿಲು ಶುರುವಾಗಿದೆ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಇಂದು ಸಾಕಷ್ಟು ಘಟನೆಗಳು ನಡೆದಿವೆ. ಶಕಂತಲಾದೇವಿಯ ಹುಟ್ಟುಹಬ್ಬದ ನಿಮಿತ್ತ ಆಟವೊಂದನ್ನು ಭೂಮಿಕಾ ಆಡಿಸಿದ್ದಾಳೆ. ಭೂಮಿಕಾ ತಂತ್ರದಿಂದ ತಮ್ಮ ಹೆಸರಿನ ಬಗ್ಗೆ ಮತ್ತು ತಮ್ಮ ಊರಿನ ಬಗ್ಗೆ ಆಡುವ ಆಟದ ಮೂಲಕ ಪಂಕಜಾಳ ರಹಸ್ಯ ತಿಳಿಯಲು ಪ್ರಯತ್ನಿಸಿದ್ದಾರೆ. ಪಂಕಜಾ ಎಂಬ ಹೆಸರು ಹೇಳಿದಾಗ ಶಕುಂತಲಾದೇವಿ ಮುಖದಲ್ಲಿ ಬದಲಾವಣೆಯಾದರೂ ಅದು ರಹಸ್ಯ ಕಂಡುಹಿಡಿಯಲು ಸಾಕಾಗುವುದಿಲ್ಲ. ಇದಾದ ಬಳಿಕ ಶಕುಂತಲಾದೇವಿ ಹೆಸರು ಬಂದಾಗ ಅವರ ಬಗ್ಗೆ, ಊರಿನ ಬಗ್ಗೆ ಹೇಳಲು ಹೇಳುತ್ತಾರೆ. ಶಕುಂತಲಾದೇವಿ ತಾನು ವಿಜಯನಗರ ರಾಜವಂಶದವಳು ಎನ್ನುತ್ತಾರೆ. ಆಗ ಶಕುಂತಲಾ ಗೆಳತಿಯೊಬ್ಬರು ರಾಜಮನೆತನದ ಗೆಳತಿ ನನಗೆ ಒಬ್ಬಳು ಇದ್ದಾಳೆ. ಅವಳು ನಿಮಗೆ ಸಂಬಂಧಿಯಾಗಬೇಕೆ ಎಂದು ಕೇಳುತ್ತಾರೆ. ಇಲ್ಲ ಆ ಕಾಲದ ಯಾವುದೋ ಸಾಮಂತರ ವಂಶದವಳು ಎನ್ನುತ್ತಾರೆ. ಹೀಗೆ ಈ ಆಟದಲ್ಲಿ ಪಂಕಜಾ ಯಾರು ಎಂಬ ಚಿದಂಬರ ರಹಸ್ಯ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.
ಭೂಮಿಕಾಳ ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್ ಮಾತನಾಡುತ್ತಾರೆ. ಜೀವನ್‌ನನ್ನು ಸರಿ ಪಡಿಸುವುದು ಹೇಗೆ ಎಂದು ಅಪೇಕ್ಷಾ ಮಂದಾಕಿನಿ ಬಳಿ ಚರ್ಚಿಸುತ್ತಾಳೆ. ಈತನನ್ನು ಹೀಗೆಯೇ ಬಿಟ್ಟರೆ ಇನ್ನಷ್ಟು ಕೆಡಬಹುದು ಎಂದೆಲ್ಲ ಮಾತನಾಡುತ್ತಾರೆ. "ಎಲ್ಲವೂ ಸಹವಾಸ ದೋಷ. ಅದು ತಾನಾಗಿಯೇ ಸರಿಯಾಗಬೇಕು" ಎಂದು ಸದಾಶಿವ ಹೇಳುತ್ತಾರೆ.
ಪಂಕಜಾಳ ರಹಸ್ಯ ತಿಳಿಯಲು ಪ್ರಯತ್ನ
ಅನಂದ್ ಮತ್ತು ಭೂಮಿಕಾ ಮಾತನಾಡುತ್ತಾರೆ. ನಮ್ಮ ಪ್ಲ್ಯಾನ್ ಪ್ಲಾಪ್ ಆಯ್ತು ಎಂದು ಮಾತನಾಡುತ್ತಾರೆ. "ಇವರಿಗೆ ಏನೋ ಲಿಂಕ್ ಇದೆ. ಅದನ್ನು ಕಂಡುಹಿಡಿಯಬೇಕು. ಆ ಸರ್ಟಿಫಿಕೇಟ್‌ನಲ್ಲಿ ಇರುವ ಊರಿನ ಬಗ್ಗೆ ತಿಳಿದುಕೊಂಡು ಅಲ್ಲಿನ ಯಾವುದಾದರೂ ಬ್ಯಾಂಕ್, ಪೊಲೀಸ್ ಅಧಿಕಾರಿಗಳ ಸಹಾಯ ಪಡೆಯಬಹುದು" ಎಂದು ಭೂಮಿಕಾ ಹೇಳುತ್ತಾಳೆ. ಆನಂದ್‌ಗೆ ಅದು ಸರಿ ಅನಿಸುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಆನಂದ್ ಅಲ್ಲಿನ ಗ್ರಾಮಪಂಚಾಯಿತಿಯ ನಂಬರ್ ಕಲೆಕ್ಟ್ ಮಾಡುತ್ತಾನೆ. ಆ ಸಂಖ್ಯೆಗೆ ಭೂಮಿಕಾ ಕಾಲ್ ಮಾಡುತ್ತಾಳೆ.
ಗ್ರಾಮಪಂಚಾಯಿತಿಯ ಅಕೌಂಟೆಂಟ್ ಕಾಲ್ ರಿಸೀವ್ ಮಾಡುತ್ತಾರೆ. "ನಾನು ಪಂಕಜಾ ಅಂತ. ನಿಮ್ಮ ಊರಿನವಳೇ. ನನಗೆ ಒಂದಿಷ್ಟು ಮಾಹಿತಿ ಬೇಕಿತ್ತು" ಎನ್ನುತ್ತಾಳೆ ಭೂಮಿಕಾ. "ಸರಿ ನಾನು ಊರಲ್ಲಿ ವಿಚಾರಿಸಿ ಹೇಳುವೆ" ಎನ್ನುತ್ತಾರೆ ಗ್ರಾಮಪಂಚಾಯತಿಯ ಅಕೌಂಟೆಂಟ್. "ನನ್ನ ಹೆಸರು ಪಂಕಜಾ. ವಯಸ್ಸು ಸುಮಾರು ಅರುವತ್ತು" ಎಂದು ಕೂಡ ಭೂಮಿಕಾ ಹೇಳುತ್ತಾಳೆ. "ಏನು ಅತ್ತಿಗೆ ಇಷ್ಟೊಂದು ರೀಲ್ ಬಿಡ್ತೀರಿ" ಎಂದು ಆನಂದ್ ಹೇಳುತ್ತಾನೆ. "ನೀವು ನಿಮ್ಮ ಮೊಬೈಲ್ ನಂಬರ್ ಕೊಡುವ ಬದಲು ಲ್ಯಾಂಡ್‌ಲೈನ್ ಯಾಕೆ ಕೊಟ್ರಿ" ಎಂದು ಕೇಳುತ್ತಾನೆ. "ನನ್ನ ನಂಬರ್ ಕೊಟ್ರೆ ಮುಂದೆ ನಾನೇ ಹುಡುಕಿದ್ದು ಅಂತ ಗೊತ್ತಾಗುತ್ತದೆ" ಎಂದು ಭೂಮಿಕಾ ಹೇಳುತ್ತಾಳೆ.
ಹಳ್ಳಿ ಹೆಂಗಸಿಗೆ ಪಂಕಜಾ ಗೊತ್ತು ಅಂತೆ
ಆ ಪುಟ್ಟ ಊರಲ್ಲಿ ಹೆಂಗಸರು ಮಾತನಾಡುತ್ತಾ ಇರುತ್ತಾರೆ. ಅಲ್ಲಿಗೆ ಗ್ರಾಮ ಪಂಚಾಯತಿಯವ ಬಂದು "ಇಲ್ಲಿ ನಿಮಗೆ ಪಂಕಜಾ ಅಂತ ಗೊತ್ತಾ?" ಎಂದು ಕೇಳುತ್ತಾನೆ. "ಜಲಜ ಗೊತ್ತು, ವನಜ ಗೊತ್ತು, ಪಂಕಜ ಗೊತ್ತಿಲ್ಲ" ಎಂದು ಮಹಿಳೆಯರು ಹೇಳುತ್ತಾರೆ. ದೂರದಲ್ಲಿದ್ದ ವಯಸ್ಸಾದ ಮಹಿಳೆಯೊಬ್ಬರು ಇದನ್ನು ಕೇಳಿಸಿಕೊಳ್ಳುತ್ತಾರೆ. "ಅವರು ಊರು ಬಿಟ್ಟು ತುಂಬಾ ವರ್ಷ ಆಯ್ತಂತೆ. ಅವರ ಕಡೆಯವರು ಗೊತ್ತಾ ಅಂತ ವಿಚಾರಿಸ್ತಾ ಇದ್ದೀನಿ" ಎನ್ನುತ್ತಾರೆ. ಮಹಿಳೆಯರು ಗೊತ್ತಿಲ್ಲ ಅನ್ನುತ್ತಾರೆ. ಅಧಿಕಾರಿ ಹೋಗಬೇಕೆನ್ನುವಷ್ಟರಲ್ಲಿ ಅಲ್ಲೇ ಇದ್ದ ಅಜ್ಜಿ "ಹೋಯ್, ನಿಂತ್ಕೋಲ್ಲಾ, ನೀನು ಪಂಕಜಾಳ ಬಗ್ಗೆ ಕೇಳಿದೆ ಅಲ್ವಾ. ನನಗೆ ಅವಳು ಗೊತ್ತು" ಎನ್ನುತ್ತಾಳೆ. "ಸರಿ ಅವಳಿಗೆ ಫೋನ್ ಮಾಡಿ ಕೊಡ್ತಿನಿ, ಮಾತನಾಡು" ಎನ್ನುತ್ತಾರೆ. ಅವಳು ಮಾತನಾಡುತ್ತಾರೆ. ಫೋನ್ ಶಕುಂತಲಾದೇವಿ ಮನೆಗೆ ಬರುತ್ತದೆ. ಅಲ್ಲಿ ಅಜ್ಜಮ್ಮ ಫೋನ್ ರಿಸೀವ್ ಮಾಡುತ್ತಾರೆ.
ಭೂಪತಿ, ಜೈದೇವ್ ಮಾತನಾಡುತ್ತಿದ್ದಾರೆ. "ನಿನ್ನೆ ದಿಯಾ ಬಂದು ಅತ್ತಳು. ಅವಳು ಮದುವೆಯಾಗಲು ಕಾಯುತ್ತಿದ್ದಾಳೆ. ನೀನು ಬೇಗ ಮದುವೆಯಾಗು" ಎಂದು ಭೂಪತಿ ಹೇಳುತ್ತಾರೆ. "ನನಗೂ ಮದುವೆಯಾಗಬೇಕೆಂದು ಇದೆ ಅಂಕಲ್, ಆದರೆ, ಅದು ಸದ್ಯ ಆಗುತ್ತಿಲ್ಲ" ಎಂದು ಜೈದೇವ್ ತನ್ನ ಕಷ್ಟ ಹೇಳಿಕೊಳ್ಳುತ್ತಾನೆ.
ಶಕುಂತಲಾದೇವಿಗೆ ದಿಗಿಲು
ಗೌತಮ್ ದಿವಾನ್‌ಗೆ ಮನೆಗೆ ಕಾಲ್ ಮಾಡುತ್ತಾರೆ. ಅಜ್ಜಿ ತೆಗೆಯುತ್ತಾಳೆ. "ಇಲ್ಲಿ ಪಂಕಜಾ ಅನ್ನೋರು ಇಲ್ಲ" ಎಂದು ಅಜ್ಜಿ ಹೇಳುತ್ತಾರೆ. "ಯಾರು ನನ್ನ ಹಳೆಯ ಹೆಸರು ಹೇಳುವುದು" ಎಂದು ಶಕುಂತಲಾದೇವಿ ಯೋಚಿಸುತ್ತಾರೆ. "ನಾನು ಗೌತಮ್ ದಿವಾನ್ ಅಜ್ಜಿ" ಎನ್ನುತ್ತಾರೆ. "ಹಂಗಾದ್ರೆ ಪಂಕಜಾ ದೊಡ್ಡ ಮನೆಯಲ್ಲಿ ಸೆಟಲ್ ಆಗಿದ್ದಾಳೆ" ಎಂದು ಊರಿನ ಹೆಂಗಸು ಯೋಚಿಸುತ್ತಾರೆ. "ಪಂಕಜಾ ಅಂತ ಯಾರು ಕಾಲ್ ಮಾಡಿದ್ರು. ನನಗೆ ಮತ್ತೆ ಕಾಲ್ ಮಾಡಿದ್ರೂ ಮಾಡಬಹುದು" ಎಂದು ಶಕುಂತಲಾ ಯೋಚಿಸುತ್ತಾಳೆ. ಸೀರಿಯಲ್ ಮುಂದುವರೆಯುತ್ತದೆ.