ಗೌತಮ್ ದಿವಾನ್ ಮನೆಯಲ್ಲಿ ದಿಯಾಳಿಗೆ ಮಲ್ಲಿ ಕಾಟ; ಭೂಮಿಕಾಳಿಂದ ಹಳ್ಳಿ ಹೆಂಗಸು ನಂಜಮ್ಮಳ ಹುಡುಕಾಟ- ಅಮೃತಧಾರೆ ಸೀರಿಯಲ್
ಅಮೃತಧಾರೆ ಧಾರಾವಾಹಿಯ ಮೇ 23ರ ಸಂಚಿಕೆಯಲ್ಲಿ ಚಮಕ್‌ಚಲ್ಲೋ ದಿಯಾ ಮತ್ತು ಜೈದೇವ್ ಚಕ್ಕಂದ ಆಡುತ್ತಿದ್ದಾರೆ. ಈ ಸಮಯದಲ್ಲಿ ಜೈದೇವ್ ಇಲ್ಲದೆ ಇರುವಾಗ ದಿಯಾಳಿಗೆ ಮಲ್ಲಿಯಿಂದ ಸರಿಯಾದ ಏಟು ಬಿದ್ದಿದೆ.

ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ದಿಯಾ ಮತ್ತು ಜೈದೇವ್ ಚಕ್ಕಂದ ಆಡುವಾಗ ಮಲ್ಲಿ ಎಂಟ್ರಿ ನೀಡಿದ್ದಾಳೆ. ಈ ಸಮಯದಲ್ಲಿ ಮಲ್ಲಿಯು ದಿಯಾಳಿಗೆ ಸರಿಯಾದ ಪಾಠ ಕಲಿಸಿದ್ದಾಳೆ. ಇನ್ನೊಂದೆಡೆ ಕನಕದುರ್ಗಾ ಗೆಸ್ಟ್ ಹೌಸ್‌ನಲ್ಲಿ ಗೌತಮ್ ಟೀಮ್ ಎಂಜಾಯ್ ಮಾಡುತ್ತಿದೆ. ಒಬ್ಬರೊಬ್ಬರ ಕಾಲು ಎಳೆಯುತ್ತ ತಮಾಷೆ ಮಾಡುತ್ತ ಮಜಾ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಭೂಮಿಕಾಳಿಗೆ ಹುಟ್ಟುವ ಮಗುವಿನ ಕುರಿತೂ ಚರ್ಚೆಯಾಗಿದೆ. "ನನಗೆ ಹೆಣ್ಣು ಮಗು ಬೇಕು. ಅವಳಿಗೆ ರಾಜಕುಮಾರಿ ಎಂದು ಹೆಸರು ಇಡುವೆ" ಎಂದು ಗೌತಮ್ ಹೇಳುತ್ತಾರೆ. ಹೆಣ್ಣು ಮಗು ಅಲ್ಲಾ, ಗಂಡು ಮಗು ಆಗೋದು... ರಾಜಕುಮಾರ ಎಂದು ಹೆಸರು ಇಡುವೆ ಎಂದು ಭೂಮಿಕಾ ಹೇಳುತ್ತಾರೆ. ಹೀಗೆ ಗಂಡು ಮತ್ತು ಹೆಣ್ಣು ಮಗು ಎಂದು ಚರ್ಚೆ ನಡೆಯುತ್ತದೆ. "ನಿಮಗೆ ಗಂಡು-ಹೆಣ್ಣು ಇಬ್ಬರೂ ಹುಟ್ಟಲಿ, ಅವಳಿಜವಳಿ ಮಗು ಹುಟ್ಟಲಿ" ಎಂದು ಆನಂದ್ ಹೇಳುತ್ತಾನೆ.
ಮಲ್ಲಿಯಿಂದ ದಿಯಾಳಿಗೆ ಗೂಸಾ
ಜೈದೇವ್ ಐದು ನಿಮಿಷದಲ್ಲಿ ಬರ್ತಿನಿ ಎಂದು ಹೋಗಿದ್ದಾನೆ. ಇದೇ ಸಮಯದಲ್ಲಿ ದಿಯಾಳ ಕೋಣೆಗೆ ಮಲ್ಲಿ ಬಂದಿದ್ದಾಳೆ. ಸೀರೆಯೊಂದನ್ನು ತೆಗೆದುಕೊಂಡು ಮಲ್ಲಿ ಹಿಂದಿನಿಂದ ಬಂದು ದಿಯಾಳ ಕಣ್ಣಿಗೆ ಕಟ್ಟಿದ್ದಾಳೆ. "ಹೋ ಬ್ಲೈಂಡ್ ಫೋಲ್ಡ್ ಮಾಡಿ ರೋಮಾನ್ಸ್ ಮಾಡ್ತೀರಾ ಜೈ. ಚೆನ್ನಾಗಿರುತ್ತೆ, ಸರ್‌ಪ್ರೈಸ್ ಎಲಿಮೆಂಟ್" ಎಂದು ದಿಯಾ ಹೇಳುತ್ತಾಳೆ. ಅವಳಿಗೆ ಈ ರೀತಿ ಹಿಡಿದಿರುವುದು ಮಲ್ಲಿ ಎಂದು ಗೊತ್ತಿಲ್ಲ. ದಿಯಾಳನ್ನು ಬೆಡ್‌ಗೆ ಕೆಡವಿ ಗೂಸಾ ನೀಡ್ತಾಳೆ ಮಲ್ಲಿ.
ಇನ್ನೊಂದೆಡೆ ಸದಾಶಿವನ ಮನೆಯಲ್ಲಿ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ಇವತ್ತು ಜೀವನ್ ಕುಡಿದು ಬಂದರೆ ಬಾಗಿಲು ತೆಗೆಯಬಾರದು. ಅವನು ಹೊರಗೆ ಮಲಗಲಿ ಎಂದು ಹೇಳುತ್ತಾಳೆ ಅಪೇಕ್ಷಾ. "ಆಕಾಶದ ಎತ್ತರ ಹಾರಿದ ವಿಮಾನ ನೆಲಕ್ಕೆ ಬರಲೇಬೇಕು. ಅವನೂ ಕೂಡ ದಾರಿಗೆ ಬರುತ್ತಾನೆ. ಈಗ ಏನೂ ಮಾಡೋದು ಬೇಡ" ಎಂದು ಸದಾಶಿವ ಹೇಳುತ್ತಾರೆ. ಹೀಗೆ ಸಾಕಷ್ಟು ಚರ್ಚೆ ಮಾಡುತ್ತಾರೆ.
ದಿಯಾಳಿಗೆ ಮಲ್ಲಿಯ ಏಟು ಬೀಳುತ್ತದೆ. ಬಳಿಕ ಮಲ್ಲಿ ಅಲ್ಲಿಂದ ಹೋಗುತ್ತಾಳೆ. ದಿಯಾ ಎದ್ದು ಎಲ್ಲಾ ಕಡೆ ಹುಡುಕುತ್ತಾಳೆ. ಯಾರು ಹೊಡೆದದ್ದು ಎಂದು ಭಯಗೊಳ್ಳುತ್ತಾಳೆ. ಆಗ ಬೇಬಿ ಎನ್ನುತ್ತಾ ಜೈದೇವ್ ಬಂದಾಗ ಭಯಗೊಳ್ಳುತ್ತಾಳೆ. "ಜಿರಳೆ ನೋಡಿ ಭಯಪಟ್ಟೆಯಾ" ಎನ್ನುತ್ತಾನೆ. ಹೌದು ಅನ್ನುತ್ತಾಳೆ. ಬಾ ಪಾರ್ಟಿ ಮಾಡೋಣ ಎಂದು ಕುಳಿತುಕೊಳ್ಳುತ್ತಾನೆ. ದಿಯಾಳ ಭಯ ಹೋಗಿರೋದಿಲ್ಲ. ಈ ಮನೆಯಲ್ಲಿ ನಾವಿಬ್ಬರೇ ಇರೋದಲ್ವ ಎಂದು ಕೇಳುತ್ತಾಳೆ. ಯಾರೂ ಇಲ್ಲ ಬೇಬಿ ಎನ್ನುತ್ತಾನೆ. ಕುಡಿಯುತ್ತಾರೆ. "ನನಗೆ ಯಾರು ಹೊಡೆದದ್ದು. ಬೇರೆ ಯಾರೋ ಇದ್ದಾರ. ಜೈದೇವ್‌ಗೆ ಈ ವಿಷಯ ಹೇಳೋದ ಬೇಡ್ವ" ಎಂದು ಯೋಚಿಸುತ್ತಾಳೆ.
ಜೈದೇವ್ ಮಲಗಿದ ಬಳಿಕ ಆನಂದ್ ಮತ್ತು ಭೂಮಿಕಾ ಹೊರಗೆ ಹೋಗುತ್ತಾರೆ. ಇನ್ನೊಂದೆಡೆ ಹಳ್ಳಿ ಹೆಂಗಸು ನಂಜಿ ಮನೆಯ ಚಿತ್ರಣ ಇರುತ್ತದೆ. ಆಕೆಯ ಗಂಡ ಕುಡಿದು ಬರುತ್ತಾನೆ. ನಂಜಿ ಬಾಗಿಲು ತೆಗೆಯುವುದಿಲ್ಲ. ಗೌತಮ್ ಹಾಸಿಗೆಯಲ್ಲಿ ನೋಡಿದಾಗ ಭೂಮಿಕಾ ಕಾಣಿಸುವುದಿಲ್ಲ. ಹುಡುಕುತ್ತಾನೆ. ಹೊರಗೆ ಎಲ್ಲೂ ಇರುವುದಿಲ್ಲ. ಅಪರ್ಣಾಳ ಬಳಿ ಕೇಳಿದಾಗ ಅವರಿಬ್ಬರು ಹೊರಗೆ ಹೋದ್ರು ಅನ್ನುತ್ತಾಳೆ.
ಧಾರಾವಾಹಿ ಹೆಸರು: ಅಮೃತಧಾರೆ.
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
ವಿಭಾಗ