Annayya Serial: ಒಂದೆಡೆ ರಶ್ಮಿಗೆ ನಿಶ್ಚಿತಾರ್ಥ, ಇನ್ನೊಂದೆಡೆ ಶಿವು ಪ್ರೀತಿ ಪಾರುಗೆ ತಿಳಿಯುವ ಸಮಯ; ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಸತ್ಯ ಅರ್ಥ ಆಗುವ ಸಮಯ ಬಂದಾಗಿದೆ. ಇನ್ನು ಶಿವು ತಂಗಿ ನಿಶ್ಚಿತಾರ್ಥ ಮಾಡಿ ತುಂಬಾ ಸಂತೋಷದಲ್ಲಿದ್ದಾನೆ. ಮುಂದೇನಾಗಿದೆ ನೀವೇ ನೋಡಿ.
ಅಣ್ಣಯ್ಯ ಧಾರಾವಾಹಿಯಲ್ಲಿ ಎರಡು ಮುಖ್ಯ ಬೆಳವಣಿಗೆಗಳೂ ಒಂದೇ ಬಾರಿ ಆಗುತ್ತಿದೆ. ಇತ್ತ ರಶ್ಮಿ ಮದುವೆ ನಿಶ್ಚಯವಾದರೆ, ಇನ್ನೊಂದೆಡೆ ಅಣ್ಣಯ್ಯ ನಿಜವಾಗಿ ಪ್ರೀತಿಸಿದ ಹುಡುಗಿ ಯಾರು ಎಂಬ ಸತ್ಯ ಪಾರುಗೆ ತಿಳಿಯುವ ಸಂದರ್ಭ ಎದುರಾಗಿದೆ. ಹೀಗಿರುವಾಗ ವೀಕ್ಷಕರಿಗೆ ಧಾರಾವಾಹಿ ನೋಡಲು ಆಸಕ್ತಿ ಹೆಚ್ಚಿದೆ. ಯಾವೆಲ್ಲ ಬೆಳವಣಿಗೆ ಧಾರಾವಾಹಿಯಲ್ಲಿ ಆಗಿದೆ ಎಂಬ ನೋಟ ಇಲ್ಲಿದೆ ಗಮನಿಸಿ. ರಶ್ಮಿ ಒಂದಷ್ಟು ಆಭರಣವನ್ನು ತಂದು ಪಾರು ಕೈಗೆ ಇಡುತ್ತಾಳೆ. ಅತ್ತಿಗೆ ಇದನ್ನು ಜೋಪಾನವಾಗಿ ಇಟ್ಟುಕೊಳ್ಳಿ ಎಂದು ಹೇಳುತ್ತಾಳೆ. ಆಗ ಪಾರು ಸರಿ ಎಂದು ಎಲ್ಲಿಡಬೇಕು ಎಂದು ಆಲೋಚನೆ ಮಾಡುತ್ತಾಳೆ. ಆಗ ರಾಣಿ ಅವಳಿಗೊಂದು ಜಾಗ ಹೇಳುತ್ತಾಳೆ.
ಪಾರುಗಿದು ಸತ್ಯ ಗೊತ್ತಾಗುವ ಸಮಯ
ಆ ಜಾಗಕ್ಕೆ ತುಂಬಾ ದಿನದಿಂದ ಯಾರೂ ಹೋಗಿಲ್ಲ ಎನ್ನುವ ಹಾಗಿದೆ. ಹೀಗಿರುವಾಗ ಪಾರು ಆ ಆಭರಣವನ್ನು ಇಡೋದಕ್ಕೆ ಹೋಗ್ತಾಳೆ. ಅಲ್ಲಿ ಒಂದು ತುಂಬಾ ಹಳೆ ಪೆಟ್ಟಿಗೆ ಇರುತ್ತದೆ. ಆ ಪೆಟ್ಟಿಗೆಯನ್ನು ತೆಗೆಯುತ್ತಾಳೆ. ಅದರ ಮೇಲೆ ಧೂಳು ಮುತ್ತಿಕೊಂಡಿರುತ್ತದೆ. ಧೂಳನ್ನು ತೆಗೆದು ಆ ಪೆಟ್ಟಿಗೆಯನ್ನು ಓಪನ್ ಮಾಡುತ್ತಾಳೆ. ಆಗ ಅದರಲ್ಲಿ ಒಂದಷ್ಟು ವಸ್ತುಗಳು ಅವಳಿಗೆ ಸಿಗುತ್ತವೆ. ಅವುಗಳನ್ನೆಲ್ಲವನ್ನೂ ತಾನು ಈ ಮೊದಲೇ ನೋಡಿದ್ದೇನೆ ಎಂದು ಅವಳಿಗೆ ನೆನಪಾಗುತ್ತದೆ. ಯಾಕೆಂದರೆ ಅದರಲ್ಲಿರುವುದೆಲ್ಲವೂ ಅವಳದೇ ವಸ್ತುಗಳಾಗಿರುತ್ತದೆ.
ಶಿವು ಪ್ರೀತಿ ಪಾರು
ಅವಳ ಕಾಲ್ಗೆಜ್ಜೆ, ಅವಳು ಬಳಸುತ್ತಿದ್ದ ಸ್ಟೆತಸ್ಕೋಪ್, ಆಟ ಆಡುತ್ತಿದ್ದ ಆಟಿಕೆಗಳು ಮತ್ತು ನವಿಲು ಗರಿ ಹಾಗೂ ಅವರಿಬ್ಬರ ಫೋಟೋ ಆ ಪೆಟ್ಟಿಗೆಯಲ್ಲಿ ಇರುತ್ತದೆ. ಅದನ್ನೆಲ್ಲ ನೋಡಿ ಅವಳಿಗೆ ಶಾಕ್ ಆಗಿದೆ. ಹಾಗಾದ್ರೆ ಶಿವು ಪ್ರೀತಿಸುತ್ತಿದ್ದ ಹುಡುಗಿ ತಾನೇನಾ ಎಂಬ ಅನುಮಾನ ಈಗ ಅವಳಿಗೆ ಆರಂಭವಾಗಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.