ಲಕ್ಷ್ಮೀ ನಿವಾಸ ಸೀರಿಯಲ್ ಭಾವನಾ ಪಾತ್ರಕ್ಕೆ ಅಮೃತಧಾರೆ ಧಾರಾವಾಹಿಯ ಭೂಮಿಕಾ ಎಂಟ್ರಿ, ವೆಂಕಿ ಪಾತ್ರವೂ ಬದಲು
Lakshmi Nivasa Serial: ತಮಿಳಿನಲ್ಲಿ ಗಟ್ಟಿಮೇಳಂ ಹೆಸರಿನಲ್ಲಿ ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ ರಿಮೇಕ್ ಆಗುತ್ತಿದೆ. ಇದೇ ಸೀರಿಯಲ್‌ನ ಹೊಸ ಪ್ರೋಮೋ ಇದೀಗ ಜೀ ತಮಿಳು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಿಡುಗಡೆ ಆಗಿದೆ. ಫೇಸ್‌ಬುಕ್‌ನಲ್ಲಿ ಈ ಪ್ರೋಮೋ ಬಿಡುಗಡೆ ಆಗುತ್ತಿದ್ದಂತೆ, ಕನ್ನಡದ ವೀಕ್ಷಕರ ಕಣ್ಣರಳಿವೆ.

Lakshmi Nivasa Serial Remade in Tamil: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಕನ್ನಡಿಗರ ಮನೆಮಾತಾಗಿದೆ. ಮಧ್ಯಮ ವರ್ಗದ ಕುಟುಂಬದ ಮನೆ ಕಟ್ಟೋ ಕನಸಿನ ಸುತ್ತ ಸಾಗುವ ಈ ಕಥೆಯಲ್ಲಿ, ಇನ್ನೂ ಹಲವು ಕಥೆಗಳು ಕವಲುಗಳಾಗಿ ನೋಡುಗರನ್ನು ರಂಜಿಸುತ್ತಿವೆ. ಹೆಣ್ಣು ಮಕ್ಕಳ ಮದುವೆ ಮಾಡಿದರೆ ಸಾಕಪ್ಪ ಎಂದು ಜೀವ ಸವೆಸುವ ಲಕ್ಷ್ಮೀ ಒಂದು ಕಡೆಯಾದರೆ, ಕನಸಿನ ಮನೆ ಕಟ್ಟಲು ಹೆಣಗಾಡುವ ಮನೆ ಯಜಮಾನ ಶ್ರೀನಿವಾಸ ಇನ್ನೊಂದು ಕಡೆ. ಹೀಗೆ ಸಾಗುವ ಈ ಲಕ್ಷ್ಮೀ ನಿವಾಸ ಸೀರಿಯಲ್ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8ರಿಂದ 9ರ ವರೆಗೆ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ತಮಿಳಿಗೆ ರಿಮೇಕ್ ಆಯ್ತು ಲಕ್ಷ್ಮೀ ನಿವಾಸ
ಈಗಾಗಲೇ 400ಕ್ಕೂ ಅಧಿಕ ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಲಕ್ಷ್ಮೀ ನಿವಾಸ, ಟಿಆರ್‌ಪಿ ವಿಚಾರದಲ್ಲಿಯೂ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಟೈಮ್ ಬದಲಾದ ಬಳಿಕ, ಟಿಆರ್‌ಪಿಯಲ್ಲಿಯೂ ಪುಟ್ಟಕ್ಕ ಕುಸಿತ ಕಂಡಿತ್ತು. ಈ ಬದಲಾವಣೆಯಿಂದ ನಂತರದ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಸೀರಿಯಲ್ ಟಿಆರ್‌ಪಿಯಲ್ಲಿ ನಂಬರ್ 1 ಸ್ಥಾನದಲ್ಲಿ ಬಂದು ಕೂತಿದೆ. ಇಂತಿಪ್ಪ ಧಾರಾವಾಹಿ ಇದೀಗ ತಮಿಳಿಗೂ ರಿಮೇಕ್ ಆಗುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ತಮಿಳು ಸೀರಿಯಲ್‌ನಲ್ಲಿ ಕನ್ನಡದ ಮೂವರು ಕಲಾವಿದರೂ ನಟಿಸುತ್ತಿದ್ದಾರೆ.
ಗಟ್ಟಿಮೇಲಂ ಸೀರಿಯಲ್ ಪ್ರೋಮೋ
ವೆಂಕಿ ಪಾತ್ರದಲ್ಲಿ ಅಮೃತಧಾರೆ ಆನಂದ್
ತಮಿಳಿನಲ್ಲಿ ಗಟ್ಟಿಮೇಳಂ ಹೆಸರಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ರಿಮೇಕ್ ಆಗುತ್ತಿದೆ. ಇದೇ ಸೀರಿಯಲ್‌ನ ಹೊಸ ಪ್ರೋಮೋ ಇದೀಗ ಜೀ ತಮಿಳು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಿಡುಗಡೆ ಆಗಿದೆ. ಫೇಸ್‌ಬುಕ್‌ನಲ್ಲಿ ಈ ಪ್ರೋಮೋ ಬಿಡುಗಡೆ ಆಗುತ್ತಿದ್ದಂತೆ, ವೀಕ್ಷಕರ ಕಣ್ಣರಳಿವೆ. ಅದಕ್ಕೆ ಕಾರಣ; ಅಮೃತಧಾರೆ ಸೀರಿಯಲ್ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಮತ್ತು ವೆಂಕಿ ಪಾತ್ರದಲ್ಲಿ ಅದೇ ಅಮೃತಧಾರೆ ಸೀರಿಯಲ್‌ನ ಆನಂದ್ ನಟಿಸುತ್ತಿದ್ದಾರೆ. ಅಷ್ಟಕ್ಕೇ ಮುಗಿದಿಲ್ಲ, ಅಮೃತಧಾರೆ ಸೀರಿಯಲ್‌ನಲ್ಲಿ ಆನಂದ್ ಪತ್ನಿ ಅಪರ್ಣಾ ಪಾತ್ರಧಾರಿ ರಾಯಲ್ ಸ್ವಾತಿ ಸಹ ನಟಿಸುತ್ತಿದ್ದಾರೆ.
ಭಾವನಾ ಪಾತ್ರದಲ್ಲಿ ಛಾಯಾ ಸಿಂಗ್
ಒಟ್ಟಾರೆ ಕನ್ನಡದ ಅದರಲ್ಲೂ ಅಮೃತಧಾರೆಯ ಸೀರಿಯಲ್ ಮೂವರು ಕಲಾವಿದರು ಇದೀಗ ಜೀ ತಮಿಳಿನ, ಅದರಲ್ಲೂ ಲಕ್ಷ್ಮೀ ನಿವಾಸ ಸೀರಿಯಲ್‌ನ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರವನ್ನು ತಮಿಳಿನಲ್ಲಿ ಛಾಯಾ ಸಿಂಗ್ ನಿಭಾಯಿಸುತ್ತಿದ್ದಾರೆ. ಲಕ್ಷ್ಮೀ, ಶಿವರಾಮನ್, ತುಳಸಿ, ವೆಟ್ರಿ, ಮಹೇಶ್, ಅಂಜಲಿ ಅನ್ನೋ ಪಾತ್ರಗಳು ಈ ಸೀರಿಯಲ್‌ನಲ್ಲಿವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ಬಿಡುಗಡೆ ಆಗಿದ್ದೇ ತಡ, ಸಾಕಷ್ಟು ಮಂದಿ ಇದು ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನ ರಿಮೇಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಭಾಗ