ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಿಂದ ಸಿಗುವ ಸಂಭಾವನೆ ಎಷ್ಟು, ಡಿಕೆಡಿ ಶೋದಿಂದ ಹೊರಬಂದಿದ್ದೇಕೆ? ಉತ್ತರ ನೀಡಿದ ಸಹನಾ ಪಾತ್ರಧಾರಿ ಅಕ್ಷರಾ
Puttakkana Makkalu Serial: ಮದುವೆ, ಬ್ರೇಕಪ್, ಡಿವೋರ್ಸ್, ಕಿರುತೆರೆಯ ಸಂಭಾವನೆ ಸೇರಿದಂತೆ ಸಾಕಷ್ಟು ವಿಷಯದ ಬಗ್ಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಹನಾ ಪಾತ್ರಧಾರಿ ನಟಿ ಅಕ್ಷರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Puttakkana Makkalu Sahana Interview: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಎಷ್ಟೇ ಸಾರಿ ಸತ್ಯ ಹೇಳಿದರೂ ಗಂಡ ನನ್ನನ್ನು ನಂಬಲೇ ಇಲ್ಲ, ತಾಯಿಯನ್ನು ನಂಬಿದ ಅನ್ನೋ ಕಾರಣಕ್ಕೆ ಸಹನಾ ಡಿವೋರ್ಸ್ ತಗೊಂಡಿದ್ದಾಳೆ. ಗಂಡನಿಗೆ ಅವಳು ಮತ್ತೆ ಚಾನ್ಸ್ ಕೊಡಲಿಲ್ಲ. ಸಹನಾ ಪಾತ್ರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ತಿದೆ. ಸಹನಾ ಪಾತ್ರಧಾರಿ ನಟಿ ಅಕ್ಷರಾ ಅವರು ಇಂದಿನ ಮದುವೆ, ರಿಲೇಶನ್‌ಶಿಪ್, ಡಿವೋರ್ಸ್ ಬಗ್ಗೆ ಪಂಚಮಿ ಟಾಕ್ಸ್ ಯುಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
- ಬ್ರೇಕಪ್, ಡಿವೋರ್ಸ್ ಜಾಸ್ತಿ ಆಗ್ತಿದೆ.
ಅಹಂಕಾರದಿಂದ ರಿಲೇಶನ್‌ಶಿಪ್ ಬ್ರೇಕ್ ಆಗ್ತಿದೆ ಅಂತ ಅನಿಸ್ತಿದೆ. ಇನ್ನೂ ಅನೇಕ ಕಾರಣಗಳು ಇರುತ್ತವೆ. ಅದನ್ನು ನಾನು ಹೇಳೋಕೆ ಆಗೋದಿಲ್ಲ.
- ನಟಿಯಾಗಿ ಸ್ವತಂತ್ರವಾಗಿ ಸಂಪಾದನೆ ಮಾಡುತ್ತಿದ್ದೀರಿ. ಈ ಜರ್ನಿಯಿಂದ ಏನು ಕಲಿತಿದ್ದೀರಿ?
ನಟನೆಯಿಂದ ಹಿಡಿದು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ದುಡ್ಡಿನ ಬೆಲೆ ಗೊತ್ತಾಗಿದೆ. ನಾನು ದುಡಿಯುತ್ತಿದ್ದೇನೆ, ನನ್ನ ಮನೆಯಲ್ಲಿ ಇನ್ನೂ ನನ್ನ ಸಂಭಾವನೆ ಬಗ್ಗೆ ಕೇಳಿಲ್ಲ. ನಾನು ಮನೆಯವರಿಗೆ ದುಡ್ಡು ಕೊಟ್ಟರ್ತೀನಿ, ಅವರು ಕೂಡ ನನಗೆ ಹಣ ಕೊಟ್ಟಿರುತ್ತಾರೆ.
- ಸಹನಾ ಸೆಲ್ಫ್ ಡಿಫೆನ್ಸ್ ಕಲಿಯುತ್ತಾಳೆ. ಈ ಬಗ್ಗೆ ಏನು ಹೇಳ್ತೀರಿ?
ಇಂದು ಅತ್ಯಾಚಾರ, ಚುಡಾಯಿಸುವ ಕೇಸ್ ಜಾಸ್ತಿ ಆಗ್ತಿದೆ. ಹೀಗಾಗಿ ಹೆಣ್ಣು ಮಕ್ಕಳು ಸೆಲ್ಫ್ ಡಿಫೆನ್ಸ್ ಕಲಿಯೋದು ತುಂಬ ಮುಖ್ಯ.
- ಸಮಾಜದಲ್ಲಿ ಇಂದು ಎರಡನೇ ಮದುವೆ ಬಗ್ಗೆ ಕೆಲವರ ವಿರೋಧ ಇದೆ.
ಮೊದಲ ಮದುವೆಯಲ್ಲಿ ಕೆಲವರಿಗೆ ಮೋಸ ಆಗಿರುತ್ತದೆ, ಮತ್ತೆ ಮದುವೆ ಆಗೋಕೆ ಅವರಿಗೆ ಇಷ್ಟ ಇರೋದಿಲ್ಲ. ಇನ್ನೊಂದು ಕಡೆ ನಾನು ಒಂದು ರಿಲೇಶನ್‌ಶಿಪ್‌ನಲ್ಲಿ ಚೆನ್ನಾಗಿದ್ದೆ. ಹೀಗಾಗಿ ಮತ್ತೆ ಮದುವೆ ಆಗೋಕೆ ಕೆಲವರಿಗೆ ಆಸಕ್ತಿ ಇರುತ್ತದೆ. ಹೀಗಾಗಿ ಎರಡನೇ ಮದುವೆ ಆಗೋದು ಅವರವರಿಗೆ ಬಿಟ್ಟಿದ್ದು. ಹೊರಗಡೆಯವರು ಮದುವೆ ಆಗಿ ಅಂತ ಹೇಳೋದು, ಮದುವೆ ವಿಚಾರದಲ್ಲಿ ಜಡ್ಜ್ ಮಾಡೋದು ತಪ್ಪಾಗುತ್ತದೆ.
- ಕಿರುತೆರೆ ಹೇಗಿದೆ ಸೋಷಿಯಲ್ ಮೀಡಿಯಾ ಬಗ್ಗೆ ನಿಮ್ಮ ಮಾತು.
ಸ್ಪರ್ಧೆ ಜಾಸ್ತಿ ಆಗಿದೆ. ಇನ್ನೊಂದು ಕಡೆ ಧಾರಾವಾಹಿ ನೋಡುವವರ ಸಂಖ್ಯೆ ಕಡಿಮೆ ಆಗಿದೆ ಎನ್ನುವ ಭಾವನೆ ಆಗಿದೆ. ಇಂದು ಏನೇ ಮಾಡಿದರೂ ಆದಷ್ಟು ಬೇಗ ಆಚೆ ಬರುತ್ತದೆ. ಸೋಶಿಯಲ್ ಮೀಡಿಯಾದಿಂದ ಬಳಕೆಯೂ ಆಗುತ್ತಿದೆ, ದುಷ್ಪ್ರಯೋಜನವೂ ಆಗುತ್ತಿದೆ.
- ಇಂದಿನ ಟ್ರೇಂಡ್ ಬಗ್ಗೆ ನಿಮ್ಮ ಮಾತು..
ನಾನು ಈ ರೀತಿಯ ಪಾತ್ರಗಳನ್ನು ಮಾಡಬಲ್ಲೆ ಎಂದು ತೋರಿಸಿಕೊಳ್ಳಲು ಫೋಟೋಶೂಟ್ ನಡೆಯುತ್ತದೆ. ನನಗೆ ಟ್ರೆಡಿಷನಲ್ ಪಾತ್ರಗಳೇ ತುಂಬ ಇಷ್ಟ, ಅದಕ್ಕೆ ನಾನು ಹೆಚ್ಚು ಬೆಲೆ ಕೊಡ್ತೀನಿ.
- ಕಿರುತೆರೆಯಲ್ಲಿ ಸಂಭಾವನೆ ಸರಿಯಾಗಿ ಸಿಗುತ್ತಲಿದೆಯಾ?
ನಮ್ಮ ಜೀವನದಲ್ಲಿಯೂ ಏರಿಳಿತ ಇದ್ದೇ ಇರುತ್ತದೆ. ನಮ್ಮ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರೊಡಕ್ಷನ್ಸ್‌ನಲ್ಲಿ ಸರಿಯಾಗಿ ಸಂಭಾವನೆ ಸಿಗುತ್ತಲಿದೆ.
- ಸಿನಿಮಾ ಮಾಡುವ ಆಲೋಚನೆ ಇದೆಯಾ? ಬೇರೆ ಭಾಷೆಗೂ ಹೋಗ್ತೀರಾ?
ಖಂಡಿತ. ಒಳ್ಳೆಯ ಪಾತ್ರಕ್ಕೋಸ್ಕರ ಕಾಯುತ್ತಿದ್ದೇನೆ. ಹೌದು, ನಾನು ಎಲ್ಲ ಭಾಷೆಯಲ್ಲಿ ನಟಿಸಲು ರೆಡಿ ಇದ್ದೇನೆ. ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ.
- ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಯಾಕೆ ಬಿಟ್ರಿ?
ಡ್ಯಾನ್ಸ್ ಮಾಡುವಾಗ ಕಾಲಿಗೆ ಸಮಸ್ಯೆ ಆಯ್ತು, ಡ್ಯಾನ್ಸ್ ಕಂಟಿನ್ಯು ಮಾಡಿದ್ರೆ ಇನ್ನೂ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಶೋನಿಂದ ಹೊರಗಡೆ ಬಂದೆ. ನಮಗೆ ಧಾರಾವಾಹಿ ಕೂಡ ಮುಖ್ಯ ಆಗುತ್ತದೆ. ಕಾಲು ನೋವು ಇಟ್ಕೊಂಡು ಡ್ಯಾನ್ಸ್ ಶೋ ಮಾಡುತ್ತ, ಸೀರಿಯಲ್ ಮಾಡೋದು ಕಷ್ಟ ಆಗುತ್ತಿತ್ತು.
(ಸಂದರ್ಶನ: ಪದ್ಮಶ್ರೀ ಭಟ್, ಪಂಚಮಿ ಟಾಕ್ಸ್)