ದುರ್ಗದ ಹೆಣ್ಣ.. ದಾಳಿಂಬೆ ಹಣ್ಣ..; ಗಗನಾ ಸಲುವಾಗಿ ಆನ್‌ಸ್ಪಾಟ್ ಹಾಡು ಕಟ್ಟಿದ ಸರಿಗಮಪ ಬಾಳು ಬೆಳಗುಂದಿ, ಇಲ್ಲಿದೆ ಲಿರಿಕ್ಸ್
ಸರಿಗಮಪ ಶೋನಲ್ಲಿ ಚಿತ್ರದುರ್ಗದ ಮಹಾನಟಿ ಖ್ಯಾತಿಯ ಗಗನಾ ಕುರಿತು ಆನ್ ಸ್ಪಾಟ್ ಹಾಡೊಂದನ್ನು ರಚಿಸಿದ್ದಾರೆ ಗಾಯಕ ಬಾಳು ಬೆಳಗುಂದಿ. ಹೀಗಿದೆ ಆ ಹಾಡಿನ ಸಾಹಿತ್ಯ.

Balu Belagundi: ಸರಿಗಮಪ ಶೋನಲ್ಲಿ ತಮ್ಮ ಹಾಡಿನ ಮೂಲಕವೇ ನಾಡಿನ ಗಮನ ಸೆಳೆದಿದ್ದಾರೆ ಗಾಯಕ ಬಾಳು ಬೆಳಗುಂದಿ. ಸಂಗೀತದ ಹಿನ್ನೆಲೆಯಿಂದ ಬಾರದಿದ್ದರೂ, ತಮ್ಮ ಸುಮಧುರ ಕಂಠದ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿಸಿಕೊಂಡಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಬಾಳು ಬಲು ಅಚ್ಚು ಮೆಚ್ಚು. ಜನಪದ ಶೈಲಿಯಲ್ಲಿ ಹಾಡುಗಳನ್ನು ರಚಿಸುತ್ತ, ಅವುಗಳಿಗೆ ತಮ್ಮದೇ ಧಾಟಿಯಲ್ಲಿ ಧ್ವನಿ ನೀಡುತ್ತ ಫೇಮಸ್ ಆಗಿದ್ದಾರೆ ಬಾಳು. ಈಗ ಸರಿಗಮಪ ವೇದಿಕೆ ಮೇಲೆ ತಮ್ಮ ಮಿಂಚಿನ ಓಟ ಮುಂದುವರಿಸಿದ್ದಾರೆ. ಚಿತ್ರದುರ್ಗದ ಗಗನಾಳನ್ನು ಹಾಡಿ ಹೊಗಳಿದ್ದಾರೆ.
ಜೀ ಕನ್ನಡದಲ್ಲಿ ಕಳೆದ ವರ್ಷದಿಂದ ಆರಂಭವಾದ ಮೊದಲ ಸೀಸನ್‌ನ ಮಹಾನಟಿ ಶೋ ಸೂಪರ್ ಹಿಟ್ ಆಗಿತ್ತು. ಆ ಶೋ ಮೂಲಕ ಹೊರಬಂದ ಪ್ರತಿಭೆ ಚಿತ್ರುದುರ್ಗ ಮೂಲದ ಗಗನಾ. ಆ ಶೋ ಬಳಿಕ ಜೀ ಕನ್ನಡದ ಸಾಲು ಸಾಲು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲೂ ಮಿಂಚಿದ್ದಾರೆ ಗಗನಾ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಇತ್ತೀಚಿಗಿನ ಜೀ ಎಂಟರ್ಟ್ರೈನರಸ್ ಕಾರ್ಯಕ್ರಮದಲ್ಲಿಯೂ ಎಲ್ಲರ ಗಮನ ಸೆಳೆದಿದ್ದರು. ಈಗ ಸರಿಗಮಪದಲ್ಲೂ ಮುಂದುವರಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಮೂಲದ ಸ್ಪರ್ಧಿ ಬಾಳು ಬೆಳಗುಂದಿ ಅವರ ವಿಶೇಷತೆ ಏನೆಂದರೆ, ಬರೀ ಅವರೊಬ್ಬರ ಗಾಯಕ ಅಲ್ಲ. ಆ ಗಾಯನದ ಜತೆಗೆ ತಾವೇ ಸ್ವತಃ ಹಾಡುಗಳಿಗೆ ಸಾಹಿತ್ಯ ಬರೆದು ಹಾಡುತ್ತಾರೆ. ಇದೀಗ ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರದ ಸರಿಗಮಪ ಮಹಾ ಮನರಂಜನೆ ಶೋನಲ್ಲಿ, ಗಗನಾ ಅವರ ಬಗ್ಗೆ ಬಾಳು ಬೆಳಗುಂದಿ ತಮ್ಮದೇ ಧಾಟಿಯಲ್ಲಿ ಸಾಹಿತ್ಯ ಪೋಣಿಸಿ ಹಾಡು ರಚಿಸಿದ್ದಾರೆ. ವೇದಿಕೆ ಮೇಲೆ ಅದೇ ಹಾಡನ್ನು ಹೇಳಿ, ಗಗನಾ ಅವರನ್ನೂ ನಿಬ್ಬೆರಗು ಮಾಡಿದ್ದಾರೆ. ಇಲ್ಲಿದೆ ನೋಡಿ ಬಾಳು ಬರೆದ ಆನ್‌ಸ್ಪಾಟ್ ಹಾಡಿನ ಸಾಹಿತ್ಯ.
ಗಗನಾ ಬಗ್ಗೆ ಬಾಳು ಬರೆದ ಸಾಲು
ದುರ್ಗದ ಹೆಣ್ಣ, ದಾಳಿಂಬೆ ಹಣ್ಣ..
ಲೈಟಿಂಗ್ ಹೊಳದಂಗ ಹೊಳೀತಾವ ಕಣ್ಣ...
ನಿನ್ನ ಸೊಂಟ.. ಐತಿ ಸಣ್ಣ
ಸದ್ಯದಾಗ ಆಗತಿ ಹೀರೋಯಿನ್...
ಮಹಾನಟಿಯ ಮಹಾರಾಣಿ
ಅರಿಯದ ಹುಡುಗರ ಜೀವಾನೀ..
ಗಗನ ಗಗನ ಗಗನ ಗಗನ ಮಸ್ತ ಕಾಣತಿ..
ಎಲ್ಲ ಕಡೆ ಬರೀ ನಿಂದ ಹವಾ ನಡದೇತಿ..
ಗಗನ ಗಗನ ಗಗನ ಗಗನ ಮಸ್ತ ಕಾಣತಿ..
ಎಲ್ಲ ಕಡೆ ಬರೀ ನಿಂದ ಹವಾ ನಡದೇತಿ..
ದುರ್ಗದ ಹೆಣ್ಣ, ದಾಳಿಂಬೆ ಹಣ್ಣ..
ಲೈಟಿಂಗ್ ಹೊಳದಂಗ ಹೊಳೀತಾವ ಕಣ್ಣ...
ನಿನ್ನ ಸೊಂಟ.. ಐತಿ ಸಣ್ಣ
ಸದ್ಯದಾಗ ಆಗತಿ ಹೀರೋಯಿನ್...
