13 ಸ್ಪರ್ಧಿಗಳು, ಒಂದೇ ಸಿಂಹಾಸನ; ಸರಿಗಮಪ ಫಿನಾಲೆ ತಲುಪುವ ಮೊದಲ ಸ್ಪರ್ಧಿ ಯಾರು, ಯಾರಿಗೆ ಸಿಗಲಿದೆ ಟಿಕೆಟ್‌ ಟು ಫಿನಾಲೆ?
ಕನ್ನಡ ಸುದ್ದಿ  /  ಮನರಂಜನೆ  /  13 ಸ್ಪರ್ಧಿಗಳು, ಒಂದೇ ಸಿಂಹಾಸನ; ಸರಿಗಮಪ ಫಿನಾಲೆ ತಲುಪುವ ಮೊದಲ ಸ್ಪರ್ಧಿ ಯಾರು, ಯಾರಿಗೆ ಸಿಗಲಿದೆ ಟಿಕೆಟ್‌ ಟು ಫಿನಾಲೆ?

13 ಸ್ಪರ್ಧಿಗಳು, ಒಂದೇ ಸಿಂಹಾಸನ; ಸರಿಗಮಪ ಫಿನಾಲೆ ತಲುಪುವ ಮೊದಲ ಸ್ಪರ್ಧಿ ಯಾರು, ಯಾರಿಗೆ ಸಿಗಲಿದೆ ಟಿಕೆಟ್‌ ಟು ಫಿನಾಲೆ?

ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋ ಫಿನಾಲೆಗೆ ಸಮೀಪಿಸುತ್ತಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಜನರ ಕುತೂಹಲ ಹೆಚ್ಚಾಗುವುದರ ಜೊತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣವಾಗುತ್ತಿದೆ. ಈ ವಾರ (ಮೇ 17 ಮತ್ತು 18) ನಡೆಯಲಿರುವ 'ಟಿಕೆಟ್ ಟು ಫಿನಾಲೆ'ಯಲ್ಲಿ ಒಟ್ಟು 13 ಸ್ಪರ್ಧಿಗಳು ಕಣದಲ್ಲಿದ್ದಾರೆ. ಇವರ ಪೈಕಿ ಯಾರಿಗೆ ಫಿನಾಲೆ ಟಿಕೆಟ್‌ ಎಂಬುದೇ ಸದ್ಯದ ಕುತೂಹಲ.

13 ಸ್ಪರ್ಧಿಗಳು, ಒಂದೇ ಸಿಂಹಾಸನ; ಸರಿಗಮಪ ಫಿನಾಲೆ ತಲುಪುವ ಮೊದಲ ಸ್ಪರ್ಧಿ ಯಾರು, ಯಾರಿಗೆ ಸಿಗಲಿದೆ ಟಿಕೆಟ್‌ ಟು ಫಿನಾಲೆ?
13 ಸ್ಪರ್ಧಿಗಳು, ಒಂದೇ ಸಿಂಹಾಸನ; ಸರಿಗಮಪ ಫಿನಾಲೆ ತಲುಪುವ ಮೊದಲ ಸ್ಪರ್ಧಿ ಯಾರು, ಯಾರಿಗೆ ಸಿಗಲಿದೆ ಟಿಕೆಟ್‌ ಟು ಫಿನಾಲೆ?

ಕನ್ನಡದ ಕಿರುತೆರೆ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸರಿಗಮಪ ರಿಯಾಲಿಟಿ ಶೋ. 6 ವರುಷದಿಂದ 60 ವರ್ಷದ ವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿರುವ ಈ ಸೀಸನ್ ವಿಭಿನ್ನ ಪರಿಕಲ್ಪನೆಯಿಂದ ಮತ್ತಷ್ಟು ಇಂಟೆರೆಸ್ಟಿಂಗ್ ಆಗಿ ಮೂಡಿಬರುತ್ತಿದೆ. ಅಷ್ಟೇ ಅಲ್ಲದೇ ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಜನಪ್ರಿಯ ಆಂಕರ್ ಅನುಶ್ರೀ ಈ ಆವೃತ್ತಿಯ ಅತೀ ದೊಡ್ಡ ಹೈಲೈಟ್.

ಇದೀಗ ಇದೇ ರಿಯಾಲಿಟಿ ಶೋ ಫಿನಾಲೆಗೆ ಸಮೀಪಿಸುತ್ತಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಜನರ ಕುತೂಹಲ ಹೆಚ್ಚಾಗುವುದರ ಜೊತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣವಾಗುತ್ತಿದೆ. ಈ ವಾರ (ಮೇ 17 ಮತ್ತು 18) ನಡೆಯಲಿರುವ 'ಟಿಕೆಟ್ ಟು ಫಿನಾಲೆ'ಯಲ್ಲಿ ಒಟ್ಟು 13 ಸ್ಪರ್ಧಿಗಳು ಕಣದಲ್ಲಿದ್ದಾರೆ.

ಸ್ಪರ್ಧಾ ಕಣದಲ್ಲಿರುವ ಸ್ಪರ್ಧಿಗಳು ಇವರೇ

ಬಾಳು ಬೆಳಗುಂದಿ, ಭೂಮಿಕಾ, ದ್ಯಾಮೇಶ, ಕಾರ್ತಿಕ್, ಲಹರಿ, ಮನೋಜ್, ಅಮೋಘ ವರ್ಷ, ರಶ್ಮಿ ಡಿ, ಸುಧೀಕ್ಷಾ, ದೀಪಕ್, ಆಗಮ ಶಾಸ್ತ್ರೀ, ಶಿವಾನಿ ಮತ್ತು ಆರಾಧ್ಯ ರಾವ್. ಈ ಸ್ಪರ್ಧಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ೀ 13 ಸ್ಪರ್ಧಿಗಳಲ್ಲಿ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯಲಿರುವ ಆ ಒಬ್ಬ ಲಕ್ಕಿ ಸ್ಪರ್ಧಿ ಯಾರು ಎಂಬುದಕ್ಕೂ ಇದೇ ವಾರ ಉತ್ತರ ಸಿಗಲಿದೆ.

ಇದೇ ವಾರಾಂತ್ಯಕ್ಕೆ ಟಿಕೆಟ್‌ ಟು ಫಿನಾಲೆ

ಅಷ್ಟೇ ಅಲ್ಲದೇ, ಈ ವಾರ ನಡೆಯಲಿರುವ ಟಿಕೆಟ್ ಟು ಫಿನಾಲೆ ಎಪಿಸೋಡ್‌ಗೆ ಮತ್ತಷ್ಟು ರಂಗು ನೀಡಲು ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಮತ್ತು ನಾಯಕ ನಟಿ ಅದಿತಿ ಪ್ರಭುದೇವ ಬರ್ತಿದ್ದಾರೆ. ಶರಣ್ ಅವರ ಕಾಮಿಡಿ, ಅದಿತಿ ಪ್ರಭುದೇವ ಅವರ ಚಾರ್ಮ್ 'ಟಿಕೆಟ್ ಟು ಫಿನಾಲೆ' ಎಪಿಸೋಡ್‌ನ ಕಲರ್ ಫುಲ್ ಮಾಡೋದು ಅಲ್ಲದೇ ಸ್ಪರ್ಧಿಗಳ ಹುಮ್ಮಸ್ಸನ್ನು ಹೆಚ್ಚಿಸಲಿದೆ.

ಒಟ್ಟು 13 ಸ್ಪರ್ಧಿಗಳ ಪೈಕಿ ಒಬ್ಬರಿಗೆ ನೇರವಾಗಿ ಫಿನಾಲೆ ಟಿಕೆಟ್‌ ಸಿಗಲಿದೆ. ಕಠಿಣ ಸ್ಪರ್ಧೆಯ ನಡುವೆಯೂ ಯಾರಿಗೆ ಸಿಗಲಿದೆ 'ಟಿಕೆಟ್ ಟು ಫಿನಾಲೆ'? ಇದೆಲ್ಲದಕ್ಕೂ ಉತ್ತರ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7:30 ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ 'ಸರಿಗಮಪ ಟಿಕೆಟ್ ಟು ಫಿನಾಲೆ' ಸಂಚಿಕೆಯಲ್ಲಿ ಗೊತ್ತಾಗಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.