Saregamapa vs Bigg Boss: ಟಿಆರ್‌ಪಿ ಓಟದಲ್ಲಿ ಬಿಗ್‌ ಬಾಸ್‌ ಹಿಂದಿಕ್ಕಿದ ಸರಿಗಮಪ; ಟಿಆರ್‌ಪಿಯಲ್ಲಿ ಕಿಚ್ಚನ ದಾಖಲೆ ಮುರಿದ ಕೋಗಿಲೆಗಳು
ಕನ್ನಡ ಸುದ್ದಿ  /  ಮನರಂಜನೆ  /  Saregamapa Vs Bigg Boss: ಟಿಆರ್‌ಪಿ ಓಟದಲ್ಲಿ ಬಿಗ್‌ ಬಾಸ್‌ ಹಿಂದಿಕ್ಕಿದ ಸರಿಗಮಪ; ಟಿಆರ್‌ಪಿಯಲ್ಲಿ ಕಿಚ್ಚನ ದಾಖಲೆ ಮುರಿದ ಕೋಗಿಲೆಗಳು

Saregamapa vs Bigg Boss: ಟಿಆರ್‌ಪಿ ಓಟದಲ್ಲಿ ಬಿಗ್‌ ಬಾಸ್‌ ಹಿಂದಿಕ್ಕಿದ ಸರಿಗಮಪ; ಟಿಆರ್‌ಪಿಯಲ್ಲಿ ಕಿಚ್ಚನ ದಾಖಲೆ ಮುರಿದ ಕೋಗಿಲೆಗಳು

Bigg Boss TRP: ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಾದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್‌ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಇವೆರಡ ಟಿಆರ್‌ಪಿ ವಿವರ ಇಲ್ಲಿದೆ ಗಮನಿಸಿ.

ಟಿಆರ್‌ಪಿ ಓಟದಲ್ಲಿ ಬಿಗ್‌ ಬಾಸ್‌ ಹಿಂದಿಕ್ಕಿದ ಸರಿಗಮಪ
ಟಿಆರ್‌ಪಿ ಓಟದಲ್ಲಿ ಬಿಗ್‌ ಬಾಸ್‌ ಹಿಂದಿಕ್ಕಿದ ಸರಿಗಮಪ

ಕನ್ನಡ ಕಿರುತೆರೆಯಲ್ಲಿ 10 ಸೀಸನ್‌ಗಳನ್ನು ಪೂರೈಸಿ 11ನೇ ಸೀಸನ್‌ ಅನ್ನು ಯಶಸ್ವಿಯಾಗಿ ದಾಟುತ್ತಿರುವ ಬಿಗ್‌ ಬಾಸ್‌ ರಿಯಾಲಿಟಿ ಶೋ ಟಿಆರ್‌ಪಿ ಓಟದಲ್ಲಿ ಯಾವಾಗಲೂ ಮುಂದಿರುತ್ತಿತ್ತು, ಹಿಂದೆಂದೂ ಮಾಡಿರದ ಹೊಸ ದಾಖಲೆಯೊಂದನ್ನು ಸೀಸನ್‌ 11 ಮಾಡಿತ್ತು. ಅತಿ ಹೆಚ್ಚು ಅಂದರೆ 12.3 ಟಿಆರ್‌ಪಿ ಗಳಿಸಿತ್ತು ಆಗ ಬಿಗ್ ಬಾಸ್‌ ಆರಂಭವಾಗಿ ಐದು ವಾರಗಳು ಕಳೆದಿತ್ತು. ಆದರೆ ಈ ದಾಖಲೆಯನ್ನೂ ಸಹ ಈ ಬಾರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋ ಮುರಿದಿದೆ. ಈ ಬಾರಿ ಜನರಿಂದಲೇ ಆಯ್ಕೆಯಾದ ಸ್ಪರ್ಧಿಗಳನ್ನು ಮತ್ತೆ ಆಯ್ಕೆ ಮೆಗಾ ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ. ಹಲವು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಸಾಕಷ್ಟು ವೀಕ್ಷಕರು ಕಿಚ್ಚ ಸುದೀಪ್ ಎಪಿಸೋಡ್‌ ಹೋಸ್ಟ್‌ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ಬಿಗ್‌ ಬಾಸ್‌ನ ವಾರಾಂತ್ಯದ ಎಪಿಸೋಡ್‌ಗಳನ್ನು ನೋಡುತ್ತಾರೆ.

ಸರಿಗಮಪ Vs ಬಿಗ್‌ ಬಾಸ್‌

ಬಿಗ್‌ ಬಾಸ್‌ ರಿಯಾಲಿಟಿ ಶೋ ಬಹುತೇಕರ ನೆಚ್ಚಿನ ಶೋ ಆಗಿದ್ದು ಯಾವಾಗಲೂ ಟಿಆರ್‌ಪಿ ಓಟದಲ್ಲಿ ಮುಂದಿರುತ್ತಿತ್ತು. ಆದರೆ ಬಿಗ್‌ ಬಾಸ್‌ ಸರಿಗಮಪಕ್ಕಿಂತ ಹಿಂದಿದೆ. ವಾರದ ಟಿಆರ್‌ಪಿ ರೇಸ್‌ನಲ್ಲಿ ಬಿಗ್‌ ಬಾಸ್‌ ರಿಯಾಲಿಟಿ ಶೋ ಹಿಂದಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ಅನ್ನು ಹಿಂದಿಕ್ಕಿದೆ. ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ರೌಂಡ್ ಆರಂಭವಾಗಿದೆ. ಇನ್ನು ಸರಿಗಮಪದಲ್ಲಿ ಮೆಗಾ ಆಡಿಷನ್ ಮೂಲಕ ಹಾಡುವ ಸ್ಪರ್ಧಿಗಳು ಯಾರ್ಯಾರು ಎಂದು ನಿರ್ಧಾರವಾಗಿದೆ.

ಸರಿಗಮಪ ಟಿಆರ್‌ಪಿ ಎಷ್ಟು?

ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಎರಡೂ ರಿಯಾಲಿಟಿ ಶೋಗಳನ್ನು ಜನರು ವೀಕ್ಷಿಸುತ್ತಾರೆ. ಆದರೆ ಸರಿಗಮಪ ಪಡೆದುಕೊಂಡಿರುವ ಟಿಆರ್‌ಪಿ 13.1. ಬಿಗ್‌ ಬಾಸ್‌ ಪಡೆದುಕೊಂಡಿರುವ ಟಿಆರ್‌ಪಿ 10.8. ವಾರ ವಾರವೂ ವಿವಿಧ ರೀತಿಯ ಟಾಸ್ಕ್‌ಗಳ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆಯುವ ಬಿಗ್‌ ಬಾಸ್‌ ಸರಿಗಮದಷ್ಟು ಟಿಆರ್‌ಪಿ ಪಡೆಯಲು ಸಾಧ್ಯವಾಗಲಿಲ್ಲ.

ವಾರದ ದಿನಗಳಲ್ಲಿ ಗಳಿಸಿದ್ದೆಷ್ಟು?

ಬಿಗ್‌ ಬಾಸ್‌ ವಾರದ ಏಳೂ ದಿನಗಳ ಕಾಲ ಪ್ರಸಾರವಾಗುವ ಕಾರಣ ವಾರದ ದಿನಗಳಲ್ಲಿ 9.0 ಟಿಆರ್‌ಪಿ ಪಡೆದುಕೊಂಡಿದೆ. ವಾರಾಂತ್ಯದಲ್ಲಿ ಸುದೀಪ್ ಬಿಗ್‌ ಬಾಸ್‌ ನಿರೂಪಣೆ ಮಾಡಿ ಒಂದಿಡೀ ವಾರದ ವಿಮರ್ಶೆ ಮಾಡುವ ಕಾರಣ ವಾರಾಂತ್ಯದಲ್ಲಿ ಮಾತ್ರ ಬಿಗ್‌ ಬಾಸ್‌ ವೀಕ್ಷಿಸುವ ವೀಕ್ಷಕರೂ ಇದ್ದಾರೆ. ಒಟ್ಟಾರೆ ಬಿಗ್‌ಬಾಸ್‌ಗೆ ಕಳೆದ ವಾರಾಂತ್ಯದಲ್ಲಿ ಸಿಕ್ಕ ಟಿಆರ್‌ಪಿ ಸರಿಗಮಪ ರಿಯಾಲಿಟಿ ಶೋಗಿಂತ ಕಡಿಮೆಯಾಗಿದೆ.

Whats_app_banner