Seetha Rama Serial: ಒಂದು ಕರುಳ ಸತ್ಯ, ಇನ್ನೊಂದು ಕರಾಳ ಸತ್ಯ! ಸಿಹಿಯದ್ದು ಕೊಲೆ ಎಂದ ಅಶೋಕ, ಆಪ್ತಮಿತ್ರನ ಮಾತು ನಂಬ್ತಾನಾ ಶ್ರೀರಾಮ?
Seetha Rama Serial: ಸೀತಾ ರಾಮ ಸೀರಿಯಲ್ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಸಿಹಿಯ ಆಕ್ಸಿಡೆಂಟ್ ಹಿಂದೆ ಯಾರದ್ದೋ ಕೈವಾಡವಿದೆ ಎಂದು ರಾಮನ ಮುಂದೆ ಅಶೋಕ್ ಹೇಳಿದರೂ, ಅದನ್ನು ರಾಮ್ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತೊಂದು ಕಡೆ ಅಮ್ಮ ಅಮ್ಮ ಎಂದು ಸುಬ್ಬಿಯ ಕನವರಿಕೆ ಮುಂದುವರಿದಿದೆ. ಇನ್ನೇನು ಈ ಸುಬ್ಬಿ ಸೀತಾಳ ಮಡಿಲು ಸೇರ್ತಾಳಾ? ಕಾದು ನೋಡಬೇಕು.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಅಡಗಿ ಕೂತ ಸತ್ಯಗಳು ಒಂದೊಂದಾಗಿ ಹೊರ ಬರುವ ಸುಳಿವು ಸಿಕ್ಕಂತಿದೆ. ಸಿಹಿ ಇಲ್ಲದ ನೋವಿನಲ್ಲಿ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಸೀತಾ, ಗೊಂಬೆಯನ್ನೇ ತನ್ನ ಸಿಹಿ ಎಂದು ನಂಬಿದ್ದಾಳೆ. ಇತ್ತ ಸೀತಾಳ ಸ್ಥಿತಿ ನೋಡಿ ದಿಕ್ಕು ತೋಚದಂತಾಗಿದ್ದಾನೆ ರಾಮ. ಸಿಹಿ ಇಲ್ಲದ ಸತ್ಯ ಸೀತಾಗೆ ಗೊತ್ತೇ ಇಲ್ಲ. ಆ ಸತ್ಯವನ್ನು ಸೀತಾಗೆ ಹೇಳುವುದು ಹೇಗೆ ಎಂಬ ಗೊಂದಲದಲ್ಲಿದ್ದಾನೆ ಶ್ರೀರಾಮ. ಸೀತಾ ಲೈಫ್‌ನಲ್ಲಿ ಸಿಹಿ ಮತ್ತೆ ಬರಬೇಕು ಎಂದು ಡಾಕ್ಟರ್ ಹೇಳಿದ ಮಾತೂ ರಾಮನ ತಲೆಯಲ್ಲಿದೆ. ಇತ್ತ ಗೆದ್ದು ಬೀಗಿದ ಖುಷಿಯಲ್ಲಿದ್ದಾಳೆ ಭಾರ್ಗವಿ.
ಸಿಹಿಯದ್ದು ಕೊಲೆ ಎಂದ ಅಶೋಕ
ಸೀತಾಳನ್ನು ಸೈಕಿಯಾಟ್ರಿಸ್ಟ್ ಬಳಿ ಕರೆದೊಯ್ದಿದ್ದ ರಾಮ, ಮುಂದಿನ ದಿನಗಳಲ್ಲಿ ನಿಧಾನಕ್ಕೆ ವಾಸ್ತವ ಸ್ಥಿತಿ ಅರಿವು ಮಾಡಿಸಬೇಕು ಎಂದಿದ್ದಾರೆ. ಈ ವಿಚಾರವನ್ನು ಅಶೋಕನ ಮುಂದೆ ಹೇಳಿಕೊಂಡು ಕುಗ್ಗಿದ್ದಾನೆ ರಾಮ್. ಈ ಮಾತುಕತೆಯ ನಡುವೆಯೇ, ಕರಾಳ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾನೆ. ನನಗ್ಯಾಕೋ ಸಿಹಿಯ ಆಕ್ಸಿಡೆಂಟ್ ಮರ್ಡರ್ ಅಂತ ಅನಿಸ್ತಿದೆ ಎಂದಿದ್ದಾನೆ. ಅಶೋಕನ ಮಾತು ಕೇಳಿ ಅರೇ ಕ್ಷಣ ಶಾಕ್ ಆಗಿದ್ದಾನೆ.
ಅಶೋಕನ ಮಾತು ಕೇಳಿ ರಾಮ್ ಅಚ್ಚರಿಗೊಳಗಾಗಿದ್ದಾನೆ. ಈ ಕೂಡಲೇ ಪೊಲೀಸ್ ಕಂಪ್ಲೇಂಟ್ ಕೊಡೋಣ ಎಂದಿದ್ದಾನೆ. ಈಗಾಗಲೇ ನಾನು ಸಿಹಿಯನ್ನ ಕಳೆದುಕೊಂಡಿದ್ದೇನೆ, ಈಗ ಈ ವಿಚಾರವನ್ನೇ ಸೀತಾ ಮುಂದೆ ಹೇಳಿ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಲು ಆಗಲ್ಲ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ. ಇತ್ತ ಅಶೋಕ, ಇದರಲ್ಲಿ ಭಾರ್ಗವಿ ಚಿಕ್ಕಿಯ ಭಾರ್ಗವಿಯ ಕೈವಾಡ ಇದ್ದೇ ಇದೆ. ಇದನ್ನು ಸಾಬೀತು ಪಡಿಸಲೇಬೇಕು. ಅವರಿಗೆ ಶಿಕ್ಷೆ ಕೊಡಿಸಲೇಬೇಕು ಎಂದಿದ್ದಾನೆ.
ಇನ್ನೂ ಆಗದ ಸಿಹಿ ಕಾರ್ಯ
ಸಿಹಿಯ ಕಾರ್ಯ ಇನ್ನೂ ಮಾಡೇ ಇಲ್ಲ ಅನ್ನೋ ಕಾರಣಕ್ಕೆ, ತಾತ ಸೂರ್ಯಪ್ರಕಾಶ್ ಎಲ್ಲರನ್ನ ಕರೆದು ಮಾತಿಗಿಳಿದಿದ್ದಾನೆ. ಹೇಗಾದ್ರೂ ಮಾಡಿ ಸೀತಾಳನ್ನು ಒಪ್ಪಿಸು ಎಂದಿದ್ದಾನೆ. ಇನ್ನೊಂದು ಕಡೆ, ಈ ಕಾರ್ಯ ಮಾಡದಿದ್ದರೆ, ನಮ್ಮ ಸಿಹಿಗೆ ಸದ್ಗತಿ ಹೇಗೆ ಸಿಗುತ್ತೆ ಹೇಳೂ ಎಂದಿದ್ದಾಳೆ ಭಾರ್ಗವಿ. ಸಿಹಿಗೋಸ್ಕರ ಒಂದು ಪೂಜೆ ಇಟ್ಟುಕೊಳ್ಳೋಣ ಎಂದು ತಾತ ಹೇಳ್ತಿದ್ದಾರೆ ಎಂದು ಏನೋ ಒಂದು ಹೇಳಿ, ಮಾತು ಮರೆಸಿದ್ದಾನೆ ರಾಮ.
ಇತ್ತ ಇನ್ನೊಂದು ಬದಿಯಲ್ಲಿ ಅಮ್ಮನ ತಲುಪುವ ಕನಸು ಕಾಣುತ್ತಿದ್ದಾಳೆ ಸುಬ್ಬಿ. ಸ್ಲೇಟ್ ಮೇಲೆ ಅಮ್ಮ ಅನ್ನೋ ಅಕ್ಷರದ ಮೇಲೆ ತಿದ್ದಿ ಅಕ್ಷರದಲ್ಲಿಯೇ ಅಮ್ಮನ ಕಾಣುತ್ತಿದ್ದಾಳೆ. ಕುಂತರೂ ಅಮ್ಮ, ನಿಂತರೂ ಅಮ್ಮ ಎಂದು ಕನವರಿಸುತ್ತಿದ್ದಾಳೆ. ಅಮ್ಮ ಮಗಳ ಫೋಟೋ ಫ್ರೇಮ್‌ನಲ್ಲಿ ಸೀತಾಳ ಫೋಟೋ ಅಂಟಿಸಿಕೊಂಡು, ನನ್ನ ಅಮ್ಮ ನನ್ನ ಜತೆಗಿದ್ದಾಳೆ ಎಂದು ಅಮ್ಮನ ಜಪ ಮಾಡುತ್ತಿದ್ದಾಳೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)