Seetha Rama Serial: ಸಿಹಿ ಸಾವಿನ ಸತ್ಯ ತಿಳಿಯಲು ಕುಡಿತ ಬಿಟ್ಟು ಅಖಾಡಕ್ಕಿಳಿದ ಸತ್ಯ ಚಿಕ್ಕಪ್ಪ; ಭಾರ್ಗವಿಗೆ ಇನ್ಮುಂದಿದೆ ಮಾರಿಹಬ್ಬ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿ ಸಾವಿನ ಸತ್ಯ ತಿಳಿಯಲು ಕುಡಿತ ಬಿಟ್ಟು ಅಖಾಡಕ್ಕಿಳಿದ ಸತ್ಯ ಚಿಕ್ಕಪ್ಪ; ಭಾರ್ಗವಿಗೆ ಇನ್ಮುಂದಿದೆ ಮಾರಿಹಬ್ಬ

Seetha Rama Serial: ಸಿಹಿ ಸಾವಿನ ಸತ್ಯ ತಿಳಿಯಲು ಕುಡಿತ ಬಿಟ್ಟು ಅಖಾಡಕ್ಕಿಳಿದ ಸತ್ಯ ಚಿಕ್ಕಪ್ಪ; ಭಾರ್ಗವಿಗೆ ಇನ್ಮುಂದಿದೆ ಮಾರಿಹಬ್ಬ

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿ ಆಟಕ್ಕೆ ಬ್ರೇಕ್‌ ಹಾಕಲು ಸತ್ಯನ ಎಂಟ್ರಿಯಾಗಿದೆ. ಕುಡಿತ ಬಿಟ್ಟು, ಸಿಹಿ ಸಾವಿನ ರಹಸ್ಯ ಬೇಧಿಸಲು ಸತ್ಯಜೀತ್‌ ದೇಸಾಯಿ ಅಣಿಯಾಗಿದ್ದಾನೆ. ಕುಡಿತ ಬಿಟ್ಟ ಪತಿಯ ಬದಲಾವಣೆ ಸಾಧನಾಗೂ ಅಚ್ಚರಿ ತರಿಸಿದೆ.

ಅಖಾಡಕ್ಕಿಳಿದ ಸತ್ಯ ಚಿಕ್ಕಪ್ಪ; ಭಾರ್ಗವಿಗೆ ಇನ್ಮುಂದಿದೆ ಮಾರಿಹಬ್ಬ
ಅಖಾಡಕ್ಕಿಳಿದ ಸತ್ಯ ಚಿಕ್ಕಪ್ಪ; ಭಾರ್ಗವಿಗೆ ಇನ್ಮುಂದಿದೆ ಮಾರಿಹಬ್ಬ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ದುರಂತ ಸಾವಾಗಿದೆ. ಆ ಸಾವಿನ ಹಿಂದೆ ಭಾರ್ಗವಿಯ ಕೈವಾಡ ಇದೆ ಎಂದು ವೀಕ್ಷಕರಿಗೆ ಗೊತ್ತಿರುವ ಸಂಗತಿ. ಆದರೆ, ಕಥೆಯಲ್ಲಿ ಅದೇ ಭಾರ್ಗವಿ ದೊಡ್ಡ ಕಳ್ಳಾಟ ಆಡುತ್ತಿದ್ದಾಳೆ. ಮಾಡುವುದೆಲ್ಲವ ಮಾಡಿ, ಏನೂ ಗೊತ್ತಿಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾಳೆ. ಸಿಹಿಯ ಸಾವಿನಿಂದ ಕಣ್ಣೀರಿಡುವ ನಾಟಕವನ್ನೂ ಮುಂದುವರಿಸಿದ್ದಾಳೆ. ಇತ್ತ ಸಿಹಿ ಇಲ್ಲದ ನೋವಿನಲ್ಲಿಯೇ ರಾಮ ಮಂಕಾಗಿದ್ದರೆ, ಸಿಹಿಯ ನೆನಪಿನಲ್ಲಿಯೇ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಸೀತಾ. ಹೀಗಿರುವಾಗಲೇ ಸಾವಿನ ಮನೆಗೆ ಈಗ ಸತ್ಯ ಚಿಕ್ಕಪ್ಪನ ಆಗಮನವಾಗಿದೆ. ಭಾರ್ಗವಿಗೂ ಒಳಗೊಳಗೆ ಬೆಂಕಿ ಬಿದ್ದಿದೆ.

ಸಿಹಿಯ ಸಾವಿನ ಬಳಿಕ ಸುಬ್ಬಿ ಅನ್ನೋ ಪಾತ್ರವೂ ಬೆಳಕಿಗೆ ಬಂದಿದೆ. ಸೀತಾಗೆ ಅವಳಿ ಮಕ್ಕಳು. ಆ ಪೈಕಿ ಒಂದು ಮಗು ಹುಟ್ಟಿದ ಕೂಡಲೇ ಸಾವನ್ನಪ್ಪಿತ್ತು ಎಂದು ಡಾಕ್ಟರ್‌ ಅನಂತಲಕ್ಷ್ಮೀ ಕೋರ್ಟ್‌ಗೆ ರಿಪೋರ್ಟ್‌ ಸಹ ಸಲ್ಲಿಸಿದ್ದರು. ಆದರೆ, ಈಗ ಸುಬ್ಬಿಯ ಆಗಮನದಿಂದ ವೀಕ್ಷಕರಲ್ಲಿದ್ದ ಕುತೂಹಲ ದುಪ್ಪಟ್ಟಾಗಿದೆ. ಇವಳೂ ಸೀತಾಳ ಮಗಳೇ ಇರಬಹುದಾ ಎಂದುಕೊಳ್ಳುತ್ತಿದ್ದಾರೆ. ಆ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಈಗ ಸಿಹಿಯ ಜಾಗವನ್ನು ಸುಬ್ಬಿ ತುಂಬ್ತಾಳಾ ಅನ್ನೋದೇ ಅಚ್ಚರಿ ಮೂಡಿಸಿದೆ. ಏಕೆಂದರೆ, ಸಿಹಿ ಬದುಕಿಲ್ಲ ಅನ್ನೋ ವಿಚಾರ ಮನೆಯವರಿಗೆ ಗೊತ್ತಿದೆ. ಆದರೆ, ಸಿಹಿಯನ್ನೇ ಹೋಲುವ ಸುಬ್ಬಿಯನ್ನು ಸೀತಾ ಮಾತ್ರವಲ್ಲದೆ ಸತ್ಯ ಚಿಕ್ಕಪ್ಪನೂ ಕಣ್ತುಂಬಿಕೊಂಡಿದ್ದಾನೆ.

ಹೊಸ ಹೆಜ್ಜೆ ಇರಿಸಿದ ಸತ್ಯ

ಸೀತಮ್ಮನನ್ನು ಕಣ್ತುಂಬಿಕೊಳ್ಳಲು ದೇಸಾಯಿ ಮನೆಗೆ ಬಂದಿದ್ದ ಸುಬ್ಬಿ, ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಮನೆಯಿಂದ ಹೊರ ಓಡುವಾಗ, ಸತ್ಯ ಚಿಕ್ಕಪ್ಪನ ಮುಂದಿನಿಂದಲೇ ಹಾದು ಹೋಗಿದ್ದಾಳೆ. ಈ ವಿಚಾರ ಗೊತ್ತಿದ್ದರೂ, ಕುಡಿದ ಮತ್ತಿನಲ್ಲಿದ್ದ ಸತ್ಯನ ಮಾತನ್ನು ಮನೆ ಮಂದಿ ನಂಬುವುದೂ ಇಲ್ಲ. ಜತೆಗೆ ಭಾರ್ಗವಿ ಮುಖವಾಡ ಕಳಚುವ ನಿಟ್ಟಿನಲ್ಲಿ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇರಿಸಿದ್ದಾನೆ ಸತ್ಯ. ಇನ್ಮೇಲೆ ಕುಡಿಯಬಾರದು ಅನ್ನೋ ನಿರ್ಧಾರಕ್ಕೆ ಬಂದಿದ್ದಾನೆ. ಗಂಡನ ಈ ಬದಲಾವಣೆ, ಪತ್ನಿ ಸಾಧನಾಗೆ ಅಚ್ಚರಿ ತರಿಸಿದೆ. ಅರ್ಧಕ್ಕೆ ಆತನನ್ನು ತಡೆದು ನಿಲ್ಲಿಸಿದ ಆಕೆ, ಯಾಕೆ ಈ ಬದಲಾವಣೆ ಎಂದು ಕೇಳಿದ್ದಾಳೆ.

ಸಿಹಿಯ ಸಾವಿನ ಸತ್ಯ!

ಅದಕ್ಕೆ ಉತ್ತರಿಸಿದ ಸತ್ಯ, ʼನಾವು ಕೆಲವೊಂದು ಸತ್ಯಗಳನ್ನು ಹುಡುಕಿಕೊಂಡು ಹೊರಟಾಗ, ಅದರಲ್ಲೂ ಬೇರೆಯವರ ತಪ್ಪುಗಳನ್ನು ಕೆದಕಲು ಹೊರಟಾಗ ಬಹಳ ಕೇರ್‌ಫುಲ್‌ ಆಗಿ ಇರಬೇಕು. ಅದಕ್ಕೆ ನಾನು ಇನ್ಮೇಲೆ ಕುಡಿಯೋದಿಲ್ಲ ಅಂತ ಡಿಸೈಡ್‌ ಮಾಡಿದ್ದೀನಿ" ಎಂದಿದ್ದಾನೆ ಸತ್ಯ. ಯಾವ ಸತ್ಯದ ಬಗ್ಗೆ ಮಾತನಾಡ್ತಿದ್ದೀರಾ? ಎಂದು ಸಾಧನಾ ಮರು ಪ್ರಶ್ನೆ ಮಾಡಿದ್ದಾಳೆ, ಸಿಹಿಯ ಸಾವಿನ ಸತ್ಯ! ಎಂದಿದ್ದಾನೆ ಸತ್ಯ. ಅಲ್ಲಿಗೇ ಸತ್ಯ ಈಗ ತನ್ನ ಹೊಸ ವರಸೆ ಆರಂಭಿಸಿದ್ದಾನೆ. ಭಾರ್ಗವಿಯ ವಿರುದ್ಧ ಸೆಣಸಲು ಅಖಾಡಕ್ಕಿಳಿದಿದ್ದಾನೆ.

ಈಗಾಗಲೇ ಭಾರ್ಗವಿಯ ಕಳ್ಳಾಟಗಳು ಸತ್ಯನಿಗೆ ತಿಳಿದಿವೆ. ಆದರೆ, ಅದ್ಯಾವುದನ್ನೂ ಹೇಳಿದರೂ, ಅದು ನಿಜ ಎಂದು ಒಪ್ಪುವವರು ದೇಸಾಯಿ ಮನೆಯಲ್ಲಿ ಯಾರೂ ಇಲ್ಲ. ಅದಕ್ಕೆ ಕಾರಣ ಸತ್ಯನ ಕುಡಿತದ ಚಟ. ಇದೀಗ ಅದೇ ಕುಡಿತಕ್ಕೆ ಬೈ ಬೈ ಹೇಳಿ, ಮುಖವಾಡ ಧರಿಸಿ ಆಟ ಶುರುವಿಟ್ಟುಕೊಂಡಿದ್ದಾನೆ. ಇನ್ಮುಂದೆ ಭಾರ್ಗವಿಯ ಒಂದೊಂದೆ ಸತ್ಯ, ಸತ್ಯನಿಂದಲೇ ಹೊರಬರುವುದಕ್ಕೆ ಹೆಚ್ಚು ದಿನಗಳು ಬೇಕಿಲ್ಲ. ಇನ್ನೊಂದು ಕಡೆ ಇದೆಲ್ಲದರ ಹಿಂದೆ ಭಾರ್ಗವಿಯೇ ಇದ್ದಾರೆ ಎಂಬ ಅನುಮಾನವೂ ಅಶೋಕನಿಗೆ ಕಾಡುತ್ತಿದೆ. ಇದೆಲ್ಲದಕ್ಕೂ ಮುಂದಿನ ದಿನಗಳಲ್ಲಿಯೇ ಉತ್ತರ ಸಿಗಲಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner