ಹಸೆಮಣೆ ಏರುವ ಮೊದಲೇ ಶ್ರಾವಣಿ ಕತ್ತಲ್ಲಿ ತಾಳಿ; ಇಷ್ಟಕ್ಕೆಲ್ಲ ಕಾರಣ ಯಾರು ಎಂಬ ಪ್ರಶ್ನೆಗೆ ಶ್ರಾವಣಿ ಕೊಟ್ಟ ಉತ್ತರ ಸುಬ್ಬು!
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಮಹಾತಿರುವು, ಹಸೆಮಣೆ ಏರುವ ಮೊದಲೇ ಶ್ರಾವಣಿ ಕತ್ತಲ್ಲಿ ತಾಳಿ. ಇದಕ್ಕೆಲ್ಲ ಕಾರಣ ಎಂಬ ಪ್ರಶ್ನೆಗೆ ಶ್ರಾವಣಿ ಕೊಟ್ಟ ಉತ್ತರ ಮಾತ್ರ ಸುಬ್ಬು. ಈ ನಿರ್ಧಾರದಿಂದ ಇಬ್ಬರ ಬದುಕೇ ಬದಲಾಗಲಿದೆ.
![ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಮಹಾತಿರುವು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಮಹಾತಿರುವು](https://images.hindustantimes.com/kannada/img/2024/12/27/550x309/fsu_1735284897663_1735284904493.png)
ಶ್ರಾವಣಿ ತಾನು ಸುಬ್ಬುವನ್ನೇ ಮದುವೆ ಆಗುತ್ತೇನೆ ಎಂದು ಅಂದುಕೊಂಡು ತುಂಬಾ ಸಂತೋಷದಲ್ಲಿರುತ್ತಾಳೆ. ಆದರೆ ಮದುವೆಗೆ ಇನ್ನು ಸ್ವಲ್ಪವೇ ಸಮಯ ಇದೆ ಎನ್ನುವಾಗ ಅವಳಿಗೆ ತನ್ನ ತಂದೆ ನೋಡಿದ ಹಾಗೂ ಈಗ ನಾನು ಮದುವೆಯಾಗುತ್ತಿರುವ ಗಂಡು ಬೇರೆ, ಅವನು ಸುಬ್ಬು ಅಲ್ಲ ಎಂದು ಅರ್ಥವಾಗುತ್ತದೆ. ಸತ್ಯ ತಿಳಿದ ನಂತರ ಅವಳ ಭಾವನೆಗಳೇ ಬದಲಾಗುತ್ತದೆ. ಈ ಹಿಂದೆ ಎಷ್ಟು ಖುಷಿಯಿಂದ ಇದ್ದಳೋ ಅದರ ಎರಡು ಪಟ್ಟು ಹೆಚ್ಚು ದುಃಖ ಅವಳಿಗಾಗಿದೆ. ಹೀಗಿರುವಾಗ ಅವಳು ಮದುವೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಏನಾದರೂ ಮಾಡಲೇಬೇಕಾದ ಪ್ರಸಂಗ ಎದುರಾಗಿದೆ.
ಶ್ರಾವಣಿ ದಿಟ್ಟ ನಿರ್ಧಾರ
ಸುಬ್ಬು ಇದ್ಯಾವುದರ ಅರಿವೂ ಇಲ್ಲದೆ, ಶ್ರಾವಣಿ ಮದುವೆಗೆ ಬೇಕಾದ ಎಲ್ಲ ತಯಾರಿಯನ್ನು ತಾನೇ ಓಡಾಡಿಕೊಂಡು ಮಾಡುತ್ತಾ ಇದ್ದಾನೆ. ಇನ್ನು ಶ್ರಾವಣಿಯನ್ನು ಎಲ್ಲರೂ ಸೇರಿ ತುಂಬಾ ಅಂದವಾಗಿ ರೆಡಿ ಮಾಡಿದ್ದಾರೆ. ಮದುವೆ ಗಂಡು ಮದನ್ ರೆಡಿಯಾಗಿ ಬಾಸಿಂಗ್ ಕಟ್ಟಿಕೊಂಡು ಹಸೆಮಣೆ ಮೇಲೆ ಕುಳಿತುಕೊಂಡಿದ್ದಾನೆ. ಸಪ್ತಪದಿ ತುಳಿಯಲು ಎಲ್ಲ ಸಿದ್ಧತೆ ನಡೆದಿದೆ. ಶ್ರಾವಣಿ ಎಲ್ಲಿ ತಿಂಡಿ ತಿನ್ನೋದನ್ನು ಮರೆತು ಹಸಿವಿನಿಂದ ಇರುತ್ತಾಳೋ ಏನೋ ಎಂಬ ಕಾಳಜಿಗೆ ಸುಬ್ಬು ತಿಂಡಿ ತಂದು ಕೊಟ್ಟು ತನ್ನ ಕೆಲಸಕ್ಕೆ ಮರಳಿದ್ದಾನೆ. ಇಷ್ಟೆಲ್ಲ ಆದರೂ ಶ್ರಾವಣಿ ಮಾತ್ರ ಆಕಾಶವೇ ತಲೆ ಮೇಲೆ ಬಿದ್ದಂತೆ ಇದ್ದಾಳೆ.
ಹಸೆಮಣೆ ಏರುವ ಮೊನ್ನವೇ ಇತ್ತು ತಾಳಿ
ಇನ್ನು ಅವಳನ್ನು ಹಸೆಮಣೆಗೆ ಕರೆದಾಗ ಯಾವ ಕೂಗಾಟ ಅಥವಾ ಕಣ್ಣೀರೂ ಏನೂ ಇಲ್ಲದೆ ನಡೆದುಕೊಂಡು ಬರುತ್ತಾಳೆ. ಈ ಮದುವೆ ನನಗೆ ಬೇಡ ಎಂದು ಒಂದು ಮಾತನ್ನೂ ಆಡುವುದಿಲ್ಲ. ಬದಲಾಗಿ ಅವಳು ತನ್ನ ಕತ್ತಲ್ಲಿದ್ದ ತಾಳಿಯನ್ನು ಕಾಣಿಸುತ್ತಾಳೆ. ಶ್ರಾವಣಿ ಹಸೆಮಣೆ ಏರುವುದಕ್ಕೂ ಮುನ್ನವೇ ಕತ್ತಲ್ಲೊಂದು ತಾಳಿ ಕಟ್ಟಿಕೊಂಡಿದ್ದಾಳೆ. ಇನ್ನೇನು ಮದುಮಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಅವಳೇ ತನ್ನ ಕತ್ತಲ್ಲಿದ್ದ ತಾಳಿಯನ್ನು ತೋರಿಸುತ್ತಾಳೆ. ಅವಳ ತಂದೆ ವೀರೇಂದ್ರನಿಗಂತೂ ಇದನ್ನು ನೋಡಿ ಎಲ್ಲಿಲ್ಲದ ಕೋಪ ಬರುತ್ತದೆ. ಆ ಕ್ಷಣವೇ ಅವಳನ್ನು ಸೀಳಿ ಹಾಕಬೇಕು ಎನ್ನುವಷ್ಟು ಕೋಪ ಇದ್ದರೂ “ಯಾರು ನಿನಗೆ ತಾಳಿ ಕಟ್ಟಿದವರು?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಶ್ರಾವಣಿ ಹಸೆಮಣೆಯಿಂದ ಎದ್ದು ಹಿಂದೆ ಹೆಜ್ಜೆ ಇಡುತ್ತಾ ಸುಬ್ಬು ಹತ್ತಿರ ಹೋಗಿ ಅವನ ಕೈ ಹಿಡಿದುಕೊಳ್ಳುತ್ತಾಳೆ. ಆಗ ಎಲ್ಲರಿಗೂ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
![Whats_app_banner Whats_app_banner](https://kannada.hindustantimes.com/static-content/1y/wBanner.png)