ಪುಟ್ಟಕ್ಕನ ಮಕ್ಕಳು, ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗಳಲ್ಲಿನ ಎರಡು ಪ್ರಮುಖ ಪಾತ್ರಗಳೇ ಬದಲು! ಇವರೇ ಹೊಸ ಎಂಟ್ರಿ
Zee Kannada Serials: ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹೊಸ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಪೂರ್ವ ನಾಗರಾಜ್ ಇದೀಗ, ಈ ಧಾರಾವಾಹಿಯಿಂದ ಹಿಂದೆ ಸರಿದಿದ್ದಾರೆ. ಇತ್ತ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಧನಲಕ್ಷ್ಮೀ ಪಾತ್ರವೂ ಬದಲಾಗಿ, ಈ ಎರಡೂ ಪಾತ್ರಕ್ಕೆ ಬೇರೆ ನಟಿಯರ ಎಂಟ್ರಿಯಾಗಿದೆ.

Zee Kannada Serials: ಕನ್ನಡ ಕಿರುತೆರೆಯಲ್ಲಿ ಪಾತ್ರಧಾರಿಗಳ ವಿಚಾರದಲ್ಲಿ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಕೆಲವರು ಕಾರಣಾಂತರಗಳಿಂದ ಸೀರಿಯಲ್‌ನಿಂದ ಹಿಂದೆ ಸರಿದರೆ, ಇನ್ನು ಕೆಲವರು ಬೇರೆ ವಾಹಿನಿಯಲ್ಲಿನ ಒಳ್ಳೊಳ್ಳೆಯ ಅವಕಾಶಗಳಿಗಾಗಿ ಕೈಯಲ್ಲಿರುವ ಸೀರಿಯಲ್ ಬಿಟ್ಟು ಹೋದ ಉದಾಹರಣೆಗಳೂ ಇವೆ. ಇತ್ತೀಚೆಗಷ್ಟೇ ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿನ ಮಲ್ಲಿ ಪಾತ್ರ ಬದಲಾಗಿತ್ತು. ಇದೀಗ ಇದೇ ಜೀ ಕನ್ನಡದ ಇನ್ನೆರಡು ಧಾರಾವಾಹಿಗಳಲ್ಲಿನ ಇಬ್ಬರು ಪ್ರಮುಖ ಪಾತ್ರಧಾರಿಗಳೇ ಬದಲಾಗಿದ್ದಾರೆ! ಯಾರವರು? ಇಲ್ಲಿದೆ ಮಾಹಿತಿ.
ಇತ್ತೀಚೆಗಷ್ಟೇ ಅಮೃತಧಾರೆ ಧಾರಾವಾಹಿಯಲ್ಲಿನ ಮಲ್ಲಿ ಪಾತ್ರಧಾರಿ ರಾಧಾ ಭಗವತಿ ಅವರಿಗೆ ಕಲರ್ಸ್ ಕನ್ನಡದಲ್ಲಿನ ಭಾರ್ಗವಿ ಸೀರಿಯಲ್‌ನಲ್ಲಿನ ನಾಯಕಿ ಚಾನ್ಸ್ ಸಿಕ್ಕಿತ್ತು. ಆ ಬೆನ್ನಲ್ಲೇ, ಮಲ್ಲಿ ಪಾತ್ರಕ್ಕೆ ಬೈ ಬೈ ಹೇಳಿ, ಜೀ ಕನ್ನಡದಿಂದ ಕಾಲು ಹೊರಗಿಟ್ಟಿದ್ದರು. ಇದೀಗ ಕಲರ್ಸ್‌ನಲ್ಲಿ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಶೀರ್ಷಿಕೆ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಮಲ್ಲಿ ಪಾತ್ರಕ್ಕೆ ರಾಧಾ ಭಗವತಿ ಅವರಿಂದ ತೆರವಾದ ಸ್ಥಾನಕ್ಕೆ ಅನ್ವಿತಾ ಸಾಗರ್ ಆಗಮಿಸಿದ್ದಾರೆ. ಈಗ ಮತ್ತೆ ಪುಟ್ಟಕ್ಕನ ಮಕ್ಕಳು ಮತ್ತು ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಎರಡು ಪಾತ್ರಗಳು ಬದಲಾಗಿವೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹೊಸ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಪೂರ್ವ ನಾಗರಾಜ್ ಇದೀಗ, ಈ ಧಾರಾವಾಹಿಯಿಂದ ಹಿಂದೆ ಸರಿದಿದ್ದಾರೆ. ಅಂದಹಾಗೆ, ಡಿಸಿ ಸ್ನೇಹಾ ಅಪಘಾತದ ಸಾವಿನ ಬಳಿಕ, ಆಕೆಯ ಜೀವಂತ ಹೃದಯವನ್ನು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸ್ನೇಹಾ ಹೆಸರಿನ ಯುವತಿಗೇ ಆ ಹೃದಯವನ್ನು ಅಳವಡಿಸಲಾಗಿತ್ತು. ಅಲ್ಲಿಂದ ಆಕೆ, ಪುಟ್ಟಕ್ಕನ ಜತೆಯಲ್ಲಿಯೇ ತನ್ನ ಕಾಲಕಳೆಯುತ್ತಾಳೆ. ಈಗ ಇದೇ ಸ್ನೇಹಾ ಪಾತ್ರ ಬದಲಾಗಿದೆ. ಜೀ ಕನ್ನಡ ಹೊಸ ಪ್ರೋಮೋದಲ್ಲಿ ಹೊಸ ಸ್ನೇಹಾ ಯಾರು ಎಂಬುದು ರಿವೀಲ್ ಆಗಿದೆ.
ಹಾಗಾದರೆ ಹೊಸ ಸ್ನೇಹಾ ಯಾರು?
ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಸೀರಿಯಲ್‌ನಲ್ಲಿ ಕಿಟ್ಟಿ ಹೆಂಡತಿ ರುಕ್ಮಿಣಿ ಪಾತ್ರದಲ್ಲಿ ನಟಿಸುತ್ತಿದ್ದ ವಿದ್ಯಾ ರಾಜ್, ಇದೀಗ ಜೀ ಕನ್ನಡಕ್ಕೆ ಆಗಮಿಸಿದ್ದಾರೆ. ಕನ್ನಡದ ಜತೆಗೆ ತೆಲುಗು ಸೀರಿಯಲ್ ಮತ್ತು ಕನ್ನಡದ ಸಿನಿಮಾಗಳಲ್ಲಿಯೂ ವಿದ್ಯಾ ರಾಜ್ ನಟಿಸಿದ್ದಾರೆ. ಉದಯಟಿವಿಯಲ್ಲಿನ ಕನ್ಯಾದಾನ ಸೀರಿಯಲ್‌ನಲ್ಲಿಯೂ ವಿದ್ಯಾ ನಟಿಸಿದ್ದರು. ಬಹದ್ದೂರ್ ಗಂಡು, ನಮಸ್ತೆ ಘೋಸ್ಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್‌ಪಿಯಲ್ಲಿ ಟಾಪ್ 5ರಲ್ಲಿ ಸ್ಥಾನಪಡೆದಿರುತ್ತದೆ. ಇದೀಗ ಇದೇ ಟಾಪ್ ಸೀರಿಯಲ್‌ನಿಂದ ಸುಬ್ರಮಣ್ಯನ ಅಕ್ಕ ಧನಲಕ್ಷ್ಮೀ ಪಾತ್ರ ಬದಲಾಗಿದೆ. ಧನಲಕ್ಷ್ಮೀ ಪಾತ್ರದಿಂದ ನಟಿ ಹರ್ಷಿತಾ ಹಿಂದೆ ಸರಿದಿದ್ದು, ಆ ಪಾತ್ರಕ್ಕೆ ನಟಿ ಶಿಲ್ಪಾ ಶೈಲೇಶ್ ಆಗಮಿಸಿದ್ದಾರೆ. ಒಟ್ಟಾರೆ, ಪದೇ ಪದೆ ಪಾತ್ರಗಳು ಹೀಗೆ ಬದಲಾಗುತ್ತಿರುವುದಕ್ಕೆ, ಈ ಸೀರಿಯಲ್‌ಗಳ ವೀಕ್ಷಕರು ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರೋಮೋಗಳಲ್ಲಿ ಮನಬಂದಂತೆ ಕಾಮೆಂಟ್ ಹಾಕುತ್ತಿದ್ದಾರೆ.
ಶ್ರಾವಣಿ ಸುಬ್ರಮಣ್ಯದ ಹೊಸ ಧನಲಕ್ಷ್ಮೀ ಇವರೇ..
ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಬಂದ ಹೊಸ ಸ್ನೇಹಾ

ವಿಭಾಗ