ಒಂದೇ ಶೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್‌- ರಕ್ಷಕ್‌ ಬುಲೆಟ್‌; ಬ್ಯಾಚುಲರ್‌ಗಳ ಶಾಪ ವಿಮೋಚನೆಗೆ ಕ್ರೇಜಿಸ್ಟಾರ್‌ ಸ್ಪೇಷಲ್ ಕ್ಲಾಸ್‌
ಕನ್ನಡ ಸುದ್ದಿ  /  ಮನರಂಜನೆ  /  ಒಂದೇ ಶೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್‌- ರಕ್ಷಕ್‌ ಬುಲೆಟ್‌; ಬ್ಯಾಚುಲರ್‌ಗಳ ಶಾಪ ವಿಮೋಚನೆಗೆ ಕ್ರೇಜಿಸ್ಟಾರ್‌ ಸ್ಪೇಷಲ್ ಕ್ಲಾಸ್‌

ಒಂದೇ ಶೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್‌- ರಕ್ಷಕ್‌ ಬುಲೆಟ್‌; ಬ್ಯಾಚುಲರ್‌ಗಳ ಶಾಪ ವಿಮೋಚನೆಗೆ ಕ್ರೇಜಿಸ್ಟಾರ್‌ ಸ್ಪೇಷಲ್ ಕ್ಲಾಸ್‌

ಜೀ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿಯೇ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಶುರುವಾಗಲಿದೆ. ಮೊದಲ ಪ್ರೋಮೋ ಮೂಲಕ ಕುತೂಹಲ ಮೂಡಿಸಿದ್ದ ಈ ಶೋ ಇದೀಗ ಎರಡನೇ ಪ್ರೋಮೋ ಹೊರತಂದಿದೆ. ವಿಶೇಷ ಏನೆಂದರೆ, ಬಿಗ್‌ಬಾಸ್‌ನಲ್ಲಿದ್ದ ರಕ್ಷಕ್‌ ಬುಲೆಟ್‌ ಮತ್ತು ಡ್ರೋನ್‌ ಪ್ರತಾಪ್‌ ಸಹ ಈ ಶೋನಲ್ಲಿ ಇರಲಿದ್ದಾರೆ.

ಒಂದೇ ಶೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್‌- ರಕ್ಷಕ್‌ ಬುಲೆಟ್‌
ಒಂದೇ ಶೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್‌- ರಕ್ಷಕ್‌ ಬುಲೆಟ್‌

Bharjari Bachelors Season 2: ಜೀ ಕನ್ನಡದಲ್ಲೀಗ ಹೊಸ ರಿಯಾಲಿಟಿ ಶೋನ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಕಳೆದ ವರ್ಷದಿಂದ ಆರಂಭವಾದ ಭರ್ಜರಿ ಬ್ಯಾಚುಲರ್ಸ್‌, ಇದೀಗ ತನ್ನ ಎರಡನೇ ಆವೃತ್ತಿ ಜತೆಗೆ ಆಗಮಿಸುತ್ತಿದೆ. ಈಗಾಗಲೇ ಕಿರು ಪ್ರೋಮೋಗಳ ಮೂಲಕ ಕಾಮಿಡಿಗೆ ಕಿಚ್ಚು ಹಚ್ಚಿದ್ದ ಈ ಶೋ, ಇದೀಗ ಮತ್ತಷ್ಟು ಹೊಸತನದಿಂದ ಕೂಡಿರಲಿದೆ ಎಂಬುದಕ್ಕೆ, ಹೊಸ ಪ್ರೋಮೋ ಇಂದು (ಫೆ. 6) ಬಿಡುಗಡೆಯಾಗಿದೆ. ಅಚ್ಚರಿ ಏನೆಂದರೆ ಈ ಸಲದ ಈ ಶೋನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ ಸಹ ಭಾಗವಹಿಸಲಿದ್ದಾರೆ.

ಹೌದು, ಈ ಸಲದ ಭರ್ಜರಿ ಬ್ಯಾಚುಲರ್ಸ್‌ ಹೊಸ ಹೊಸ ಕಂಟೆಸ್ಟಂಟ್‌ಗಳಿಂದ ಕಳೆಗಟ್ಟಿದೆ. ಅಚ್ಚರಿಯ ರೀತಿಯಲ್ಲಿ ಎರಡನೇ ಆವೃತ್ತಿಯಲ್ಲಿ ಕಾಮಿಡಿ ಕಿಕ್‌ ಹೆಚ್ಚಿಸಲು, ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡ ಕೆಲವರು ಈ ಸಲದ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಮಿಂಚಲಿದ್ದಾರೆ. ಹೀಗಿರುವಾಗಲೇ ಈಗ ಎರಡನೇ ಪ್ರೋಮೋ ಬಿಡುಗಡೆ ಆಗಿದ್ದು, ಜಡ್ಜ್‌ಗಳ ದರ್ಶನವೂ ಆಗಿದೆ. ಇನ್ನೂ ಒಂದಷ್ಟು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಹಾಗಾದರೆ ಹೊಸ ಪ್ರೋಮೋದಲ್ಲಿ ಏನಿದೆ? ನೋಡೋಣ ಬನ್ನಿ.

ಏನಿದೆ ಹೊಸ ಪ್ರೋಮೋದಲ್ಲಿ?

ಹೀಗೆ ಶುರುವಾಗಲಿದೆ ಪ್ರೋಮೋ, “10 ಸಾವಿರ ವರ್ಷಗಳ ಹಿಂದೆ ಸುಂದರಿಯನ್ನು ಪಟಾಯಿಸಲು, ಆದಿ ಮಾನವ ಗಾಡಿಯೊಂದನ್ನು ಕಂಡು ಹಿಡಿದ. ಗಾಡಿ ಮನದಾಳ ಸೇರುವ ಬದಲು ಪಾತಾಳಕ್ಕೆ ಬಿದ್ದಿತು. ಪ್ರೀತಿಯ ಕಿಚ್ಚು ಹಚ್ಚಲು ಬಂದವನು, ಬೆಂಕಿಯಲ್ಲಿ ಹೊಗೆಯಾಗಿ ಹೋದ. ಹೂವು ತಂದವ ಮಿಂಚಿ ಮರೆಯಾಗಿ ಹೋದ. ಇವರ ಪ್ರೀತಿಯ ಹಸಿವು ಸ್ವಯಂವರಕ್ಕೂ ಬಂತು. ಗದೆ ಹಿಡಿದವನಿಗೆ ಒದೆ ಬಿತ್ತು. ಶಾರೀರ ಶರೀರವನ್ನೇ ನುಂಗಿ ಬಿಟ್ಟಿತ್ತು. ರಾಣಿಗೆ ಪ್ರೇಮದ ಬಾಣ ಬಿಟ್ಟ, ಮಹಾರಾಜನನ್ನೇ ಯಮಲೋಕಕ್ಕೆ ಕಳಿಸಿಬಿಟ್ಟ. ಕಾಡಿನಿಂದ ನಾಡಿಗೆ ಬಂದರೂ, ಇವರೆಲ್ಲ ಬ್ಯಾಚುಲರ್ಸ್‌ಗಳಾಗಿಯೇ ಉಳಿದರು”

ಹುಲಿ ಕಾರ್ತಿಕ್‌, ಪ್ರವೀಣ್‌ ಜೈನ್‌ ಆಗಮನ

ಈ ಬ್ಯಾಚುಲರ್‌ಗಳ ಬದುಕಿಗೆ ಬಣ್ಣ ತುಂಬಲು, ತೀರ್ಪುಗಾರರಾಗಿ ಕ್ರೇಜಿಸ್ಟಾರ್‌ ರವಿಚಂದ್ರನ್‌, ರಚಿತಾ ರಾಮ್‌ ಎಂಟ್ರಿಕೊಟ್ಟಿದ್ದಾರೆ. “ಈ ರೀತಿಯಾದ್ರೆ, ಯಾವ ಹುಡುಗಿಯೂ ಬೀಳಲ್ಲ. ನಮ್ಮ ಕ್ಲಾಸ್‌ ಸೇರಿಕೊಳ್ಳಿ, ನಾನು ಕ್ಲಾಸ್‌ ತೆಗೋಳ್ತಿನಿ” ಎಂದಿದ್ದಾರೆ ಕ್ರೇಜಿಸ್ಟಾರ್‌. ಸದ್ಯ ಈ ಹಿಂದಿನ ಪ್ರೋಮೋದಲ್ಲಿ ಒಂದಷ್ಟು ಸ್ಪರ್ಧಿಗಳನ್ನು ಪರಿಚಯಿಸಿದ್ದ ಈ ಶೋ, ಇದೀಗ ಮತ್ತೆ ನಾಲ್ವರನ್ನು ಇಂಟ್ರಡ್ಯೂಸ್‌ ಮಾಡಿದೆ. ಪ್ರವೀಣ್‌ ಜೈನ್‌, ಹುಲಿ ಕಾರ್ತಿಕ್‌, ಗಾಯಕ ಸುನೀಲ್‌, ಡ್ರೋನ್‌ ಪ್ರತಾಪ್ ಸಹ ಈ ಸಲದ ಶೋನಲ್ಲಿರಲಿದ್ದಾರೆ.

ಡ್ರೋನ್‌ ಪ್ರತಾಪ್-‌ ರಕ್ಷಕ್‌ ಬುಲೆಟ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಗಳಾಗಿ ಬಿಗ್‌ ಮನೆಗೆ ಎಂಟ್ರಿಕೊಟ್ಟಿದ್ದ ರಕ್ಷಕ್‌ ಬುಲೆಟ್‌ ಮತ್ತು ಡ್ರೋನ್‌ ಪ್ರತಾಪ್‌, ಇದೀಗ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಬಿಗ್‌ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ ಅವರನ್ನೇ ಟಾರ್ಗೆಟ್‌ ಮಾಡಿ, ವೀಕ್ಷಕರಿಂದಲೂ ಟೀಕೆಗೆ ಗುರಿಯಾಗಿದ್ದರು ರಕ್ಷಕ್. ‌ಇದೀಗ ಇದೇ ಜೋಡಿ ಒಂದೇ ಶೋನಲ್ಲಿ ಸ್ಪರ್ಧಿಗಳಾಗಲಿದ್ದಾರೆ. ಮೊದಲ ಪ್ರೋಮೋದಲ್ಲಿ ರಕ್ಷಕ್‌ ಕಾಣಿಸಿಕೊಂಡಿದ್ದರೆ, ಇದೀಗ ಬಂದ ಎರಡನೇ ಪ್ರೋಮೋದಲ್ಲಿ ಡ್ರೋನ್‌ ಪ್ರತಾಪ್‌ ಜತೆಗೆ ಇನ್ನೂ ಒಂದಷ್ಟು ಬ್ಯಾಚುಲರ್ಸ್‌ಗಳ ಎಂಟ್ರಿಯಾಗಿದೆ. ಇನ್ನೇನು ಶೀಘ್ರದಲ್ಲಿ ಈ ಶೋ ಆರಂಭವಾಗಲಿದೆ. ಕಳೆದ ಸಲ ಅಕುಲ್‌ ಬಾಲಾಜಿ ಈ ಶೋವನ್ನು ಮುನ್ನಡೆಸಿದ್ದರು. ಈ ಸಲ ನಿರಂಜನ್‌ ದೇಶಪಾಂಡೆ ನಿರೂಪಣೆ ಮಾಡಲಿದ್ದಾರೆ.

Whats_app_banner