Lakshmi Nivasa Serial: ʻನೋಡು ನೋಡು ಜಾನು ಹೇಗೆ ಸೈಕೋ ಆಗಿ ಬದಲಾಗ್ತಿದ್ದಾಳೆʼ; ಜಯಂತ್ ಶಾಕ್, ಚಿನ್ನುಮರಿ ರಾಕ್
Lakshmi Nivasa Serial: ಸೈಕೋ ಜಯಂತನ ಉಪಟಳಕ್ಕೆ ಬ್ರೇಕ್ ಹಾಕಲು, ಅವನದೇ ಹಾದಿ ಹಿಡಿದಿದ್ದಾಳೆ ಜಾಹ್ನವಿ. ಇನ್ನೊಂದು ಕಡೆ, ಭಾವನಾ ಮತ್ತು ಸಿದ್ಧೇಗೌಡ ನಡುವೆ ಪ್ರೀತಿಯ ಹೊಸ ಅಧ್ಯಾಯ ಶುರುವಾಗಿದೆ.

Lakshmi Nivasa Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8ಕ್ಕೆ ಲಕ್ಷ್ಮೀ ನಿವಾಸ ಧಾರಾವಾಹಿ ಪ್ರಸಾರವಾಗುತ್ತಿದೆ. ಒಂದು ಗಂಟೆಯ ಈ ಸೀರಿಯಲ್, ಹಲವು ಕವಲುಗಳಾಗಿ, ಐದಾರು ಕಥೆಗಳ ರೂಪದಲ್ಲಿ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದೆ. ರೋಚಕ ಟ್ವಿಸ್ಟ್ ಮೂಲಕ ಮುಂದೇನಾಗಲಿದೆ ಎಂಬ ಕುತೂಹಲಕ್ಕೂ ಒಗ್ಗರಣೆ ಹಾಕುತ್ತಿದೆ ಈ ಸೀರಿಯಲ್. ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಇದೇ ಧಾರಾವಾಹಿಯ ಎರಡು ಜೋಡಿಗಳು ದೂರದ ಶ್ರೀಲಂಕಾಕ್ಕೆ ಹಾರಿವೆ. ಲಂಕಾ ಪ್ರವಾಸದಲ್ಲಿನ ವಿಶೇಷ ಪ್ರೋಮೋವನ್ನು ಜೀ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.
ಸಿದ್ಧೇಗೌಡ ಮತ್ತು ಭಾವನಾ, ಖುಷಿ ಖುಷಿಯಾಗಿ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದಾರೆ. ಮನೆಯವರೇ ಈ ಜೋಡಿಯನ್ನು ಹನಿಮೂನ್‌ಗೆಂದು ಕಳಿಸಿಕೊಟ್ಟಿದೆ. ಶ್ರೀಲಂಕಾದಲ್ಲಿ ಹೀಗೆ ಸುತ್ತಾಡುತ್ತಿರುವಾಗಲೇ, ಭಾವನಾ ಕೊರಳಿಲ್ಲನ ಮಾಂಗಲ್ಯ ಮಾಯವಾಗಿದೆ. ಆ ಮಾಂಗಲ್ಯದ ಸಲುವಾಗಿ, ಸೀತಾ ದೇವಿ ಬಳಿ ನಿಂತು ಬೇಡಿಕೊಂಡಿದ್ದಾಳೆ ಭಾವನಾ. ಅಷ್ಟೊತ್ತಿಗೆ, ಓಡೋಡಿ ಬಂದ ಸಿದ್ದೇಗೌಡ, ಕೈಯಲ್ಲಿ ತಾಳಿ ಹಿಡಿದು ತಂದಿದ್ದಾನೆ. ಇದೆಲ್ಲಿ ಸಿಕ್ತು? ಎಂದು ಭಾವನಾ ಕೇಳುತ್ತಿದ್ದಂತೆ, "ಈ ತಾಳಿ ಮೇಲೆ ನಿಮ್ಮ ಹೆಸರನ್ನೇ ಬರೆದಿದೆ ಮೇಡಂ ಅವ್ರೇ" ಎಂದಿದ್ದಾನೆ. ಈ ತಾಳಿನಾ ನೀವೇ ಕಟ್ಟಿಬಿಡಿ ಎಂದೂ ಹೇಳಿದ್ದಾಳೆ. ಅಲ್ಲಿಗೆ ಪ್ರೀತಿಯ ಹೊಸ ಅಧ್ಯಾಯ ಶುರುವಾಗಿದೆ.
ಜಯಂತ್ ವಿರುದ್ಧ ಜಾನು ಸೇಡು..
ಇತ್ತ ಜಯಂತನ ವರ್ತನೆಗೆ ಜಾನು ಮನಸ್ಸು ಕರಗಿಲ್ಲ. ಜಯಂತನ ನಿಜ ಬಣ್ಣ ತಿಳಿಯುತ್ತಿದ್ದಂತೆ, ಅಸಹಾಯಕ ಸ್ಥಿತಿಗೆ ಜಾರಿದ್ದಾಳೆ. ಆಕೆಯ ಮನಸ್ಸನ್ನು ಗೆಲ್ಲಬೇಕು, ಮೆಚ್ಚಿಸಬೇಕು ಅನ್ನೋ ಕಾರಣಕ್ಕೆ ಹಾಲಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಹಾಕಿ ಹೊಸ ಸ್ಥಳಕ್ಕೆ ಕರೆತಂದಿದ್ದಾನೆ. ಆದರೆ, ಜಯಂತನ ಪ್ಲಾನ್ ಉಲ್ಟಾ ಹೊಡೆದಿದೆ. ಜಾನು ಬಲೆಯಲ್ಲಿ ಜಯಂತ್ ಬಂಧಿಯಾಗಿದ್ದಾನೆ. ಬೃಹತ್ ಹಡಗಿನಲ್ಲಿ ಜಯಂತ್ ಮತ್ತು ಜಾನು ಇಬ್ಬರೇ ಪ್ರಯಾಣಿಸಿದ್ದಾರೆ. ಅಲ್ಲೇ ಇದ್ದ ಕುರ್ಚಿ ಮೇಲೆ ಜಯಂತ್‌ನನ್ನು ಕೂರಿಸಿ, ಹಗ್ಗದಿಂದ ಕಟ್ಟಿದ್ದಾಳೆ. "ಪ್ರೀತಿ ಅಂದರೆ ಅಮೃತ ಅಂದುಕೊಂಡಿದ್ದೆ" ಎಂದು ಜಾನು ಹೇಳಿದರೆ, "ಪ್ರೀತಿ ಅಂದರೆ ಹೀಗೆಲ್ಲ ಕಟ್ಟಿ ಹಾಕೋದು ತಪ್ಪಲ್ವ?" ಎಂದಿದ್ದಾನೆ ಜಯಂತ್.
ಸೈಕೋ ಆದ್ಲಾ ಚಿನ್ನುಮರಿ?
ನೀವು ನನ್ನನ್ನು ಕಟ್ಟಿ ಹಾಕಿದ್ರೆ ಸರಿ, ನಾನು ಕಟ್ಟಿ ಹಾಕಬಾರದಾ? ಎಂದು ಜಾನು ಪ್ರಶ್ನೆ ಮಾಡಿದ್ದಾಳೆ. ಅಷ್ಟೇ ಅಲ್ಲ ಅಲ್ಲೇ ಇದ್ದ ಹರಿತವಾದ ಚಾಕು ಹಿಡಿದು ಜಯಂತ್ ಬಳಿ ಬಂದಿದ್ದಾಳೆ ಜಾನು. ಅಷ್ಟೊತ್ತಿಗೆ ಜಯಂತ್ ಮುಖದಲ್ಲಿ ಭಯ ಮೂಡಿದೆ. ಈ ವಿಶೇಷ ಶ್ರೀಲಂಕಾದ ಏಪಿಸೋಡ್‌ಗಳು ಇಂದಿನಿಂದ ಒಂದು ವಾರಗಳ ಕಾಲ ಜೀ ಕನ್ನಡದಲ್ಲಿ ಪ್ರಸಾರವಾಗಲಿವೆ. ಇನ್ನೊಂದು ಕಡೆ, ಜಾನು ಹೀಗೆ ಏಕಾಏಕಿ ಬದಲಾಗಿದ್ದೇ ತಡ ವೀಕ್ಷಕ ವಲಯವೂ ಅಚ್ಚರಿ ವ್ಯಕ್ತಪಡಿಸಿದೆ. ಬಗೆಬಗೆ ಕಾಮೆಂಟ್ ಹಾಕುತ್ತಿದ್ದಾರೆ.
ವೀಕ್ಷಕರ ವಲಯದಲ್ಲಿ ಬಗೆಬಗೆ ಚರ್ಚೆ
- ನೋಡಿ ಜಾನು ಸೈಕೊ ಅಗಿ ಬದಲಾಗ್ತಿದ್ದಾಳೆ ಸೈಕೊಗಳಿಗೆ ಸೈಕೊ ಆಗಿನೆ ಉತ್ತರ ಕೊಡಬೇಕು ಸೂಪರ್ ಜಾನೂ.
- ಜಾನು ರಾಕ್, ಜಯಂತ್ ಶಾಕ್
- ಅಂತೂ ಇಂತೂ ನಮ್ ಗೌಡ್ರು ಪ್ರೀತಿ ಗೆ ಜಯ ಸಿಕ್ಕಿತು. ಜಾನು ಒಳ್ಳೆ ಕೆಲ್ಸ ಮಾಡ್ತಾ ಇದ್ದೀಯ ಚುಚ್ಚಿ ಸಾಯ್ಸು ಅವನ ಬಿಡಬೇಡ ಪಾಪಿ ಅವನು
- ಚಿನ್ನುಮರಿ ಸೂಪರ್ ಕಣೇ ಮಾ
- ಚಿನ್ನುಮರಿ ಸೂಪರ್ ಇಂತ ಒಂದು ಸೀನ್ ಗೆ ಕಾಯ್ತಾ ಇದ್ವಿ
- ಸಿದ್ದೇಗೌಡ್ರು ಭಾವನಾ ಪ್ರೀತಿಯ ರಾಜ್ಯಭಾರ ತುಂಬಾ ಜೋರಾಗಿ ನಡಿತಾ ಇದೆ. ಜಾನಕ್ಕ ಒಳ್ಳೆ ಕೆಲಸ ಮಾಡಿದೆ ಅವನ ಕಥೆ ಮುಗಿಸು ಆದಷ್ಟು ಬೇಗ
- ಅಮ್ಮ ತಾಯಿ ನೀನೂ ಸೈಕೋ ಆಗೋಕೆ ಹೋಗಬೇಡ, ನಿಂಗೆ ಅದು ಸೂಟ್ ಆಗಲ್ಲ.
- ಜಾನು ನೀನು ಗಂಡ ಅಂತ ನೋಡಲೇ ಬೇಡ ಎಷ್ಟೋ ಜನರ ಸಾವಿಗೆ ಕಾರಣನಾದ ಈ ಸೈಕೋಗೆ ಇದೆ ಉತ್ತರ ಬಿಡಬೇಡ ಜಾನು
ಹೀಗೆ ಬಗೆಬಗೆ ಕಾಮೆಂಟ್ ಮೂಲಕ ಸೀರಿಯಲ್ ವೀಕ್ಷಕರು ಕಾಮೆಂಟ್ ಹಾಕುತ್ತಿದ್ದಾರೆ.

ವಿಭಾಗ