Zee Kutumba Awards 2024: ಭೂಮಿಕಾ ಜೊತೆ ಮಾತುಕತೆ; ಬೇಜಾರಾದಾಗ ಛಾಯಾ ಸಿಂಗ್ ಏನ್ಮಾಡ್ತಾರಂತೆ ಗೊತ್ತಾ? ನೀವೇ ನೋಡಿ
Zee Kutumba Awards 2024: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಗಿ ಮಿಂಚುತ್ತಿರುವ ಛಾಯಾ ಸಿಂಗ್ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಬೆಸ್ಟ್ ನಾಯಕ ನಟಿಯಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ರಂಗು ಕಳೆಗಟ್ಟಿದೆ. ವರ್ಷದ ಹಬ್ಬವನ್ನು ಅಷ್ಟೇ ಅದ್ಧೂರಿಯಾಗಿಯೇ, ಕಲರ್ಫುಲ್ ಆಗಿಯೇ ಆಚರಿಸುತ್ತಿದೆ ಜೀ ಕನ್ನಡ ಬಳಗ. ಅದರಂತೆ ಧಾರಾವಾಹಿಗಳ ನಟ, ನಟಿಯರನ್ನು ಮಾತನಾಡಿಸಲಾಗುತ್ತಿದೆ. ಅಮೃತಧಾರೆ ಧಾರಾವಾಹಿಯ ಭೂಮಿ ಪಾತ್ರಧಾರಿ ಛಾಯಾ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದಾಗ ಛಾಯಾ ಸಿಂಗ್ ಏನಂದ್ರು ನೋಡಿ.
ಅಮೃತೃಧಾರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಛಾಯಾ ಸಿಂಗ್ ಅವರ ಜೊತೆ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತುಕತೆ ಮಾಡಿದಾಗ ತುಂಬಾ ತಾಳ್ಮೆ ಇರುವ ಭೂಮಿ ಎಂದು ಹೇಳಲಾಗುತ್ತದೆ. ಅದೇ ರೀತಿ ಯಶಸ್ವಿಯಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೀರಾ ಹೇಗನಿಸುತ್ತಿದೆ ಎಂದು ನಿರೂಪಕಿ ಕೇಳುತ್ತಾರೆ. ಆಗ ಛಾಯಾ ಸಿಂಗ್ ಅವರು “ನನಗೆ ತುಂಬಾ ಖುಷಿ ಇದೆ. ಈ ಅವಾರ್ಡ್ ಕಾರ್ಯಕ್ರಮ ಮೂರು ತಿಂಗಳಿಗೊಮ್ಮೆ ಬರ್ಲಿ ಅಂತ ನಾನು ಅಂದ್ಕೊತೀನಿ. ಯಾಕಂದ್ರೆ ಅಷ್ಟು ಇಷ್ಟ ನನಗೆ ಈ ಸಂಭ್ರಮ ಅದೂ ಅಲ್ದೆ ಎಲ್ಲರನ್ನೂ ಮಾತಾಡ್ಸೋಕೆ ಸಿಗುತ್ತೆ. ಖುಷಿಯಿಂದ ಕಳಿಯಬಹುದು” ಎಂದು ಹೇಳುತ್ತಾರೆ.
ಇನ್ನು ಛಾಯಾ ಸಿಂಗ್ ಅವರು ಈ ಹಿಂದೆ ಸುಂಟರಗಾಳಿ ಹಾಡಿಗೆ ಡಾನ್ಸ್ ಮಾಡಿರುವುದನ್ನು ಇಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ನೀವು ಯಾವಾಗಲೂ ಅದೇ ರೀತಿ ಡಾನ್ಸ್ ಮಾಡ್ತಾ ಇರಿ ನೋಡೋಕೆ ಖುಷಿ ಆಗುತ್ತೆ ಎಂದು ಹೇಳುತ್ತಾರೆ. ಆಗ ಅವರು “ಖಂಡಿತ ನನಗೆ ಉಸಿರು ಅದು" ಎಂದು ಹೇಳುತ್ತಾರೆ. ನನಗೆ ಸ್ವಲ್ಪ ಬೇಜಾರಾದ್ರೂ ಸಾಕು ನಾನು ಮ್ಯೂಸಿಕ್ ಹಾಕಿ ಡಾನ್ಸ್ ಮಾಡೋಕೆ ಸ್ಟಾರ್ಟ್ ಮಾಡ್ತೀನಿ ಎಂದು ಹೇಳುತ್ತಾರೆ.
ನಂತರ ಒಂದು ಫನ್ ಗೇಮ್ ಇರುತ್ತದೆ. ಒಂದು ಕಥೆ ಸ್ಕ್ರೀನ್ ಮೇಲೆ ಬರುತ್ತದೆ. ಅದನ್ನು ಭೂಮಿಕಾ ಓದಬೇಕು. ಆಗ ಸಿಂಗಾರಿ ಮತ್ತು ಬಂಗಾರಿ ಅಂತ ಒಂದು ಕಥೆ ಪ್ಲೇ ಆಗುತ್ತದೆ. ಅದನ್ನು ಬೇಗ ಬೇಗ ಓದುತ್ತಾರೆ. ನಂತರ ಅದರ ತಾತ್ಪರ್ಯ ಏನು ಎಂದು ಅವರು ಹೇಳಬೇಕಾಗಿರುತ್ತದೆ. ಇದೇ ರೀತಿ ಮಜವಾಗಿ ಆ ಗೇಮ್ ಆಡಿದ್ದಾರೆ. ಅವರು ಬೆಸ್ಟ್ ನಟಿ ಪ್ರಶಸ್ತಿಗೆ ನಾಮಿನೇಟ್ ಕೂಡ ಆಗಿದ್ದರು. ನಂತರದಲ್ಲಿ ಆ ಪ್ರಶಸ್ತಿ ಅವರಿಗೇ ಲಭಿಸಿದೆ.
ಆ್ಯಕ್ಟಿಂಗ್ನಲ್ಲಷ್ಟೇ ಅಲ್ಲ, ಗೇಮ್ ಆಡೋದ್ರಲ್ಲೂ ಸೂಪರ್ ಆಗಿದ್ದಾರೆ ಭೂಮಿಕಾ. ಇಲ್ಲಿದೆ ನೋಡಿ ವಿಡಿಯೋ