ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಬಿಕ್ಕಟ್ಟು, ಬೇಗುದಿ, ಬಣ ಬಡಿದಾಟ ಮುಂದುವರಿಯುತ್ತಿದ್ದು ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಗೋಚರಿಸುತ್ತಿದೆ. ರಾಜ್ಯ ಮಟ್ಟದ ನಾಯಕರ ಕಚ್ಚಾಟದಿಂದಾಗಿ ಕಾರ್ಯಕರ್ತರೂ ರೋಸಿ ಹೋಗಿದ್ದು ಪಕ್ಷದ ಬಗ್ಗೆ ನಿರುತ್ಸಾಹ ಹೊಂದಿರುವುದು ಕಂಡುಬರುತ್ತಿದೆ. (ಬರಹ: ಅರುಣ್ ಕುಮಾರ್, ಬೆಂಗಳೂರು)