ಕನ್ನಡ ಸುದ್ದಿ  /  Karnataka  /  1050 Assistant Professor Posts In Govt Graduate Colleges Will Be Filled Soon: C. N. Ashwath Narayan

Karnataka Lecturer Recruitment: ಪದವಿ ಕಾಲೇಜುಗಳಲ್ಲಿ 1050 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಶೀಘ್ರ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1050 ಸಹಾಯಕ ಪ್ರಾಧ್ಯಾಪಕರ ಹುದ್ದೆ ಆಯ್ಕೆಗೆ ಲಿಖಿತ ಪರೀಕ್ಷೆ ಮುಗಿದಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದುʼʼ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

ಸಚಿವ ಅಶ್ವತ್ಥ್‌ ನಾರಾಯಣ್‌
ಸಚಿವ ಅಶ್ವತ್ಥ್‌ ನಾರಾಯಣ್‌

ಬೆಂಗಳೂರು: ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಇನ್ನಷ್ಟು ಅಭ್ಯರ್ಥಿಗಳು ಶೀಘ್ರದಲ್ಲಿ ನೇಮಕಗೊಳ್ಳಲಿದ್ದಾರೆ. ಈ ಕುರಿತು ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ. "ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1050 ಸಹಾಯಕ ಪ್ರಾಧ್ಯಾಪಕರ ಹುದ್ದೆ ಆಯ್ಕೆಗೆ ಲಿಖಿತ ಪರೀಕ್ಷೆ ಮುಗಿದಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದುʼʼ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 6500 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5000 ಹುದ್ದೆಗಳು ಭರ್ತಿಯಾಗಿವೆ ಎಂದು ಹೇಳಿದ ಅವರು "ಹೊಸದಾಗಿ 1050 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಲಿಖಿತ ಪರೀಕ್ಷೆ ನಡೆಸಲಾಗಿದೆ" ಎಂದು ವಿವರ ನೀಡಿದರು. ಶಾಸಕ ಡಾ.ಅವಿನಾಶ್ ಉಮೇಶ್ ಜಾಧವ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅವರು ಈ ಮಾಹಿತಿ ನೀಡಿದ್ದಾರೆ.

ಬಾಕಿ ಉಳಿದ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಯಾವಾಗ ಬೋಧಕರ ಕೊರತೆ ಕಂಡುಬರುವುದೋ, ಎಲ್ಲಿ ಕೊರತೆ ಕಂಡುಬರುವುದೋ ಅಂತಹ ಕಡೆ ಆದ್ಯತೆಯ ಮೇರೆಗೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೆಲವು ಕಡೆ 80-90ರಷ್ಟು ವಿದ್ಯಾರ್ಥಿಗಳಿಗೆ ಒಬ್ಬರೇ ಪ್ರಾಧ್ಯಾಪಕರಿದ್ದಾರೆ ಇಂತಹ ಕಡೆಗೂ ಗಮನ ನೀಡಿ ಎಂದು ಸಚಿವರಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.

`ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹುದ್ದೆಗಳನ್ನು ಭರ್ತಿ ಮಾಡಲು ಹೆಚ್ಚುವರಿಯಾಗಿ 8000 ಹುದ್ದೆಗಳ ಅವಶ್ಯಕತೆ ಇರುತ್ತದೆ. ಕೊರತೆ ಇರುವಲ್ಲಿ ಅತಿಥಿ ಉಪನ್ಯಾಸಕರ ಮೂಲಕವೂ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆʼʼ ಎಂದು ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

ವಿಶ್ವೇಶ್ವರಯ್ಯ ಕಾರ್ಖಾನೆ ಉಳಿವು ಅಗತ್ಯ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ದಕ್ಷಿಣ ಭಾರತದ ಪ್ರತಿಷ್ಠಿತ ಕಾರ್ಖಾನೆ. ಇಲ್ಲಿ ಉತ್ಪಾದನೆಯಾಗುವ ಉಕ್ಕು ಉತ್ಕøಷ್ಟ. ಇದಕ್ಕೆ ಮುಖ್ಯವಾದ ಕಾರಣ ಅದಿರು. ಕುದುರೆಮುಖದ ಅದಿರಿನಿಂದ ಇಲ್ಲಿ ಕಬ್ಬಿಣ ತಯಾರು ಮಾಡಲಾಗುತ್ತಿತ್ತು. ವಿ.ಐ.ಎಸ್.ಎಲ್ ಕಾರ್ಖಾನೆಯ ಹಿನ್ನೆಡೆ, ಹಿನ್ನೆಲೆ ವಿವರಗಳ ಅಗತ್ಯವಿಲ್ಲ. ಈ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಅವಕಾಶ ನೀಡುವುದಿಲ್ಲ, ಕಾನೂನಾತ್ಮಕ ಕ್ರಮಗಳನ್ನು ವಹಿಸಿ ಸರ್ಕಾರ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಹೇಳಿದರು.

ವಿಧಾನಸೌಧದಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‍ನ ಭದ್ರಾವತಿ ಶಾಸಕ ಸಂಗಮೇಶ್ ರವರು ಭದ್ರಾವತಿಯ ವಿಎಸ್‍ಐಎಲ್ ಕಾರ್ಖಾನೆಯನ್ನು ಮುಚ್ಚಲಾಗುತ್ತಿದೆ ಈ ಕಾರ್ಖಾನೆ ಮೊದಲು ರಾಜ್ಯ ಸರ್ಕಾರದ ಅಧೀನದಲ್ಲಿದ್ದು, 1989ರಲ್ಲಿ ಸದರಿ ಕಾರ್ಖಾನೆಯನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಇದರಿಂದ ಸ್ಥಳೀಯರಿಗೆ ಉದ್ಯೋಗವಕಾಶಗಳು ಕೈತಪ್ಪಲಿದ್ದು ಯಾವುದೇ ಕಾರಣಕ್ಕೂ ವಿ.ಎಸ್.ಐಎಲ್ ಕಾರ್ಖಾನೆಯನ್ನು ಮುಚ್ಚದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಸದನದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದಕ್ಕೆ ಮಾಜಿ ಮುಖ್ಯಮಂತ್ರಿಗಳು ಆಗಿರುವ ಶಾಸಕ ಬಿ.ಎಸ್.ವೈ ಅವರು ವಿ.ಎಸ್.ಐ.ಎಲ್ ಕಾರ್ಖಾನೆಯ ಅಗತ್ಯತೆ ಬಗ್ಗೆ ಸದನಕ್ಕೆ ಮನವರಿಕೆ ಮಾಡಿಕೊಟ್ಟರು.

ವಿ.ಎಸ್.ಐ.ಎಲ್ ಕಾರ್ಖಾನೆ ದಕ್ಷಿಣ ಭಾರತದಲ್ಲಿ ಇರುವ ಹಳೆಯ ಉಕ್ಕಿನ ಕಾರ್ಖಾನೆ. ಅಲ್ಲಿ ಉತ್ಕøಷ್ಟ ಗುಣಮಟ್ಟದ ಉಕ್ಕು ತಯಾರಾಗುತ್ತಿತ್ತು. ಈ ಹಿಂದೆ ರಾಜ್ಯ ಸರ್ಕಾರ ಸದರಿ ಕಾರ್ಖಾನೆಯನ್ನು ಮುಂದುವರೆಸಲು ಸಾಧ್ಯವಿಲ್ಲವೆಂದು ಖಾಸಗಿಯವರಿಗೆ ನೀಡಲಾಯಿತು, ಖಾಸಗಿಯವರು ಸಹ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾನು ಈಗಾಗಲೇ ಮಂತ್ರಿಗಳ ಜೊತೆ ಈ ವಿಷಯದ ಕುರಿತು ಚರ್ಚಿಸಿದ್ದೇನೆ. ಸೇಲ್ ಬೋರ್ಡ್ ಮೀಟಿಂಗ್ ಸದರಿ ಕಾರ್ಖಾನೆಯನ್ನು ಮುಚ್ಚಬೇಕು ಎಂದು ಅಭಿಪ್ರಾಯಿಸಿದೆ. ಮೊದಲು ಕಾರ್ಖಾನೆಯನ್ನು ಮುಚ್ಚುವ ಅಥವಾ ಮಾರಾಟದ ಬಗ್ಗೆ ಸ್ಟೇ ತಂದರೆ ಸ್ವಲ್ಪ ಮಟ್ಟಿಗೆ ಆತಂಕ ತಪ್ಪುತ್ತದೆ. ಕಾರ್ಖಾನೆಯನ್ನು ನಡೆಸಲು ಮೊದಲು ಎಕ್ಸ್‍ಪ್ರೆಷನ್ ಆಫ್ ಇಂಟ್ರೆಸ್ಟ್ ಕಾಲ್ ಮಾಡಿ ಕಾರ್ಖಾನೆಯನ್ನು ಮುಚ್ಚದಂತೆ ರಾಜ್ಯ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಿ ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಹಾಗೂ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಿಗೂ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸದನಕ್ಕೆ ಮನವರಿಕೆ ಮಾಡಿದರು.

IPL_Entry_Point