Dharwad News: ಧಾರವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್‌, ಇಬ್ಬರು ಮಹಿಳೆಯರ ಸೇರಿ ಮೂವರ ಸಾವು, 12 ಮಂದಿಗೆ ಗಾಯ
ಕನ್ನಡ ಸುದ್ದಿ  /  ಕರ್ನಾಟಕ  /  Dharwad News: ಧಾರವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್‌, ಇಬ್ಬರು ಮಹಿಳೆಯರ ಸೇರಿ ಮೂವರ ಸಾವು, 12 ಮಂದಿಗೆ ಗಾಯ

Dharwad News: ಧಾರವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್‌, ಇಬ್ಬರು ಮಹಿಳೆಯರ ಸೇರಿ ಮೂವರ ಸಾವು, 12 ಮಂದಿಗೆ ಗಾಯ

Dharwad News: ಧಾರವಾಡ ಬಳಿ ಕ್ರೂಸರ್‌ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಧಾರವಾಡ ಬಳಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಧಾರವಾಡ ಬಳಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಧಾರವಾಡ: ಧಾರವಾಡ ತಾಲೂಕಿನ ಕಲಕೇರಿ ಬಳಿ ಸಂಭವಿಸಿದ ಕ್ರೂಸರ್ ಅಪಘಾತದಲ್ಲಿ ಮೂವರು ಅಸು ನೀಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಿಮ್ಸ್‌ಗೆ ದಾಖಲಾದವರ ಪೈಕಿ ಶಾಂತವ್ವ ಕಲ್ಲಪ್ಪ ನೀರಲಕಟ್ಟಿ(74) ಎಂಬ ಮಹಿಳೆ ಶನಿವಾರ ರಾತ್ರಿಯೇ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಭಾನುವಾರ ಬೆಳಗಿನ ಜಾವ ಮಂಜುಳಾ ಬಸವಣ್ಣೆಪ್ಪ ಬಮ್ಮಿಗಟ್ಟಿ(54) ಹಾಗೂ ರವಿ ಶೆಟ್ಟೆಪ್ಪ ಮಡಿವಾಳರ (47)ಎಂಬಾತ ಮೃತಪಟ್ಟಿದ್ದಾರೆ. ಇದರಿಂದ ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಧಾರವಾಡದ ಕೋಳಿಕೇರಿಯ 15 ಜನರು ಕ್ರೂಸರ್ ನಲ್ಲಿ ಕಲಕೇರಿ ಗ್ರಾಮಕ್ಕೆ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆಂದು ಹೊರಟಿದ್ದರು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ಹಲವರಿಗೆ ಗಾಯವಾಗಿ ಮೂವರು ಕೊನೆಯುಸಿರೆಳೆದಿದ್ದಾರೆ.

ಧಾರವಾಡ ತಾಲ್ಲೂಕಿನ ಹೊಸ ಯಲ್ಲಾಪುರದ ಕೋಳಿಕೇರಿಯವರು ಕ್ರೂಸರ್‌ನಲ್ಲಿ ಸಂಬಂಧಿಕರ ಅಂತ್ಯಕ್ರಿಯೆಗೆ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್‌ ಮರಕ್ಕೆ ಅಪ್ಪಳಿಸಿತು. ಡಿಕ್ಕಿ ಹೊಡೆದ ರಭಸಕ್ಕೆ ಹಲವರಿಗೆ ಗಾಯಗಳಾದರೆ ಮೂವರ ಸ್ಥಿತಿ ಚಿಂತಾಜನಕವಾಗಿತ್ತು. ಇದರಲ್ಲಿ ಶಾಂತವ್ವ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿಯೆ ಕೊನೆಯುಸಿರೆಳೆದರು. ಮಂಜುಳಾ ಹಾಗು ರವಿ ಎನ್ನುವವರು ಭಾನುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಧಾರವಾಡ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಅನಸೂಯ, ಕೃಷ್ಣ, ನಿರಂಜನ, ಸರೋಜಾ, ಮಹದೇವಪ್ಪ, ವೀರಣ್ಣ, ಶಿವಾನಂದ, ಶೋಭಾ, ಜಯಶ್ರೀ, ಮಂಜಣ್ಣ ಅವರಿಗೂ ಗಾಯಗಳಾಗಿದ್ದು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟ ಮೂವರ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಹೊಸ ಯಲ್ಲಾಪುರದ ಕೋಳಿಕೇರಿಯಲ್ಲಿ ಮೃತ ದೇಹಗಳನ್ನು ತಂದಾಗ ಆಕ್ರಂದನ ಮುಗಿಲುಮುಟ್ಟಿತ್ತು. ಸಾವಿನಲ್ಲಿ ಭಾಗಿಯಾಗಲು ಹೋದವರು ಹೆಣವಾಗಿ ಬಂದರು ಎಂದು ಸಂಬಂಧಿಕರು ಕಣ್ಣೀರಾದರು.

ಈ ಕುರಿತು ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Whats_app_banner