Aerial Ladder Platform: ಬೆಂಗಳೂರು ಅಗ್ನಿಶಾಮಕ ಸೇವೆಗೆ ಏರಿಯಲ್ ಲ್ಯಾಡರ್ ಪ್ಲಾಟ್‌ಫಾರಂ ಬಲ; ಹಾಗಂದರೇನು- ಏನು ವಿಶೇಷ? ವಿವರ ಇಲ್ಲಿದೆ
- Aerial Ladder Platform: ಬೆಂಗಳೂರು ಮಹಾನಗರದಲ್ಲಿ ಅಗ್ನಿ ಅವಘಡಗಳು ಕಡಿಮೆ ಏನಲ್ಲ. ಬಹುಮಹಡಿ ಕಟ್ಟಡಗಳು ಇರುವ ಕಾರಣ ಅಗ್ನಿಶಾಮಕ ಸೇವೆ ಕೂಡ ಸುಧಾರಿತ ಉಪಕರಣಗಳನ್ನು ಹೊಂದಬೇಕಾದ್ದು, ಅನಿವಾರ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಏರಿಯಲ್ ಲ್ಯಾಡರ್ ಪ್ಲಾಟ್‌ಫಾರಂ ಉದ್ಘಾಟಿಸಿದರು. ಏನಿದು ಏರಿಯಲ್ ಲ್ಯಾಡರ್ ವೆಹಿಕಲ್ (Aerial Ladder Vehicle)?

(1 / 5)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಅಗ್ನಿಶಾಮಕದಳಕ್ಕೆ ಏರಿಯಲ್ ಲ್ಯಾಡರ್ ವೆಹಿಕಲ್ (Aerial Ladder Vehicle) ಅನ್ನು ಹಸ್ತಾಂತರಿಸಿದರು. ಈ ವಾಹನ ಸೌಲಭ್ಯ ಹೊಂದಿದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಮುಂಬೈನಲ್ಲಿ ಈ ವಾಹನ ಮೊದಲು ಅಗ್ನಿಶಾಮಕ ಸೇವೆಯ ಬಳಕೆಗೆ ಸೇರ್ಪಡೆಯಾಗಿತ್ತು.
(2 / 5)
ಅಗ್ನಿ ಅವಘಡ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದರೆ ಅಂತಹ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಕೆಯಾಗುವ ವಾಹನವನ್ನು ಏರಿಯಲ್ ಲ್ಯಾಡರ್ ವೆಹಿಕಲ್ ಎನ್ನುತ್ತಾರೆ. ರಾಜ್ಯದಲ್ಲಿ ಸದ್ಯ ಬಳಕೆಯಾಗುತ್ತಿರುವ ವಾಹನ 55 ಮೀಟರ್ ಉದ್ದದ ಲ್ಯಾಡರ್ ಹೊಂದಿದೆ. ಆದರೆ ಬಹುಮಡಿ ಕಟ್ಟಡಗಳಲ್ಲಿ ಅವಘಡಗಳಾದಾಗ ಕ್ಷಿಪ್ರ ಕಾರ್ಯಾಚರಣೆಗೆ ಹಳೆಯ ವಾಹನಗಳು ಅನುಕೂಲಕರವಲ್ಲ. ಹಾಗಾಗಿ 90 ಮೀಟರ್ ಎತ್ತರದ ಲ್ಯಾಡರ್ ಹೊಂದಿರುವ ವಾಹನ ಸದ್ಯದ ಅಗತ್ಯ. ಇದನ್ನು ಫಿನ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.
(3 / 5)
ಸಂಪೂರ್ಣ ಹೈಡ್ರಾಲಿಕ್ ವ್ಯವಸ್ಥೆ ಇರುವ ಲ್ಯಾಡರ್ ವೆಹಿಕಲ್ ಮೂಲಕ 90 ಮೀಟರ್ ಎತ್ತರದಲ್ಲಿ ಕೂಡ ಸಿಬ್ಬಂದಿ ಅನಾಯಾಸವಾಗಿ ಕೆಲಸ ನಿರ್ವಹಿಸಬಹುದು. ತುರ್ತು ಸಮಯದಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ರಕ್ಷಣಾ ಕಾರ್ಯಚರಣೆ ಕೂಡ ನಡೆಸಬಹುದು.
(4 / 5)
ಅಗ್ನಿಶಾಮಕ ಇಲಾಖೆ 2020ರಲ್ಲಿ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಮುಂದಾಗಿತ್ತು. ರಾಜ್ಯ ಸರಕಾರ ಅಂದಾಜು 30 ಕೋಟಿ ರೂಪಾಯಿ ಮೌಲ್ಯದ ಲ್ಯಾಡರ್ ವಾಹನವನ್ನು ಫಿನ್ಲೆಂಡ್ ದೇಶದಿಂದ ಖರೀದಿಸಿದೆ.
ಇತರ ಗ್ಯಾಲರಿಗಳು