Aero India 2025: ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ; ಬಿಬಿಎಂಪಿ ಮಹತ್ವದ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  Aero India 2025: ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ; ಬಿಬಿಎಂಪಿ ಮಹತ್ವದ ಆದೇಶ

Aero India 2025: ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ; ಬಿಬಿಎಂಪಿ ಮಹತ್ವದ ಆದೇಶ

Aero India 2025: ಬೆಂಗಳೂರು ಎರಡು ವರ್ಷಕ್ಕೆ ಒಮ್ಮೆ ನಡೆಯುವ ಏರ್‌ ಶೋಗೆ ಸಜ್ಜಾಗಿದೆ. ಏರೋ ಇಂಡಿಯಾ 2025 ಫೆಬ್ರವರಿಯಲ್ಲಿ ನಡೆಯಲಿರುವ ಕಾರಣ, ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ. ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ. ಈ ಕುರಿತು ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ.

ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ ಹೇರಿ ಬಿಬಿಎಂಪಿ ಮಹತ್ವದ ಆದೇಶ ಪ್ರಕಟಿಸಿದೆ.
ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ ಹೇರಿ ಬಿಬಿಎಂಪಿ ಮಹತ್ವದ ಆದೇಶ ಪ್ರಕಟಿಸಿದೆ.

Aero India 2025: ಬೆಂಗಳೂರು ಯಲಹಂಕ ವಾಯುನೆಲೆಯಲ್ಲಿ "ಏರ್ ಶೋ-2025” ಫೆಬ್ರವರಿಯಲ್ಲಿ ನಡೆಯಲಿದೆ ಹೀಗಾಗಿ, ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ, ಮಾಂಸಾಹಾರ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ತಿಳಿಸಿದ್ದಾರೆ.

ಜ 23 - ಫೆ 17ರ ತನಕ ಯಲಹಂಕದಲ್ಲಿ ಮಾಂಸ, ಮಾಂಸಾಹಾರ ಮಾರಾಟ ನಿಷೇಧ

ಯಲಹಂಕ ಏರ್ ಪೋರ್ಸ್ ಸ್ಟೇಷನಲ್ಲಿ ದಿನಾಂಕ: 10.02.2025 ರಿಂದ 14.02.2025 ರವರೆಗೆ ಅಂತರಾಷ್ಟ್ರೀಯ ಏರ್‌ ಶೋ ನಡೆಯಲಿದೆ. ಈ ಸಂಬಂಧ ಯಲಹಂಕ ವಲಯದ ಏರ್‌ಪೋರ್ಸ್‌ ಸ್ಟೇಷನ್‌ನ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವುದು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಹೇಳಿದ್ದಾರೆ.

ಆದುದರಿಂದ ಜನವರಿ 23 ರಿಂದ ಫೆ.17ರ ತನಕ ಎಲ್ಲ ವಿಧದ ಮಾಂಸಾಹಾರ ಮಾರಾಟ ಉದ್ದಿಮೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ರ ರೂಲ್ 91 ರಂತೆ ಮತ್ತು ಇತರ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಎಚ್ಚರಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಕ್ರೇನ್ ಎತ್ತರವನ್ನು ತಗ್ಗಿಸಲು ಸೂಚನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಫೆ 1 ರಿಂದ 14ರ ತನಕ ಅಂತಾರಾfಟ್ರೀಯ ಏರೋ ಇಂಡಿಯಾ 2025 ಪ್ರದರ್ಶನ ನಡೆಯಲಿದೆ. ಹಾಗಾಗಿ, ಏರ್ ಶೋ-2025 ನಡೆಯುತ್ತಿರುವ ಪ್ರಯುಕ್ತ ಯಲಹಂಕ ವಾಯುಸೇನಾ ನೆಲೆಯಿಂದ 10 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ. ಇದರಂತೆ, ಫೆಬ್ರವರಿ 1 ರಿಂದ ಫೆಬ್ರವರಿ 14 ರ ತನಕ ಕ್ರೇನ್‌ಗಳ ಎತ್ತರ ತಗ್ಗಿಸಬೇಕು ಹಾಗೂ ಕ್ರೇನ್ ಚಟುವಟಿಕೆ ನಿಲ್ಲಿಸಬೇಕು ಎಂದು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು ಮತ್ತು ಕಟ್ಟಡ ನಿರ್ಮಾಣ ಕಂಪನಿಗಳಿಗೆ ಬಿಬಿಎಂಪಿ ಸೂಚಿಸಿದೆ.

ಯಲಹಂಕ ವಾಯ ಸೇನಾ ನೆಲೆಯ 10 ಕಿ.ಮೀ. ಸುತ್ತಳತೆಗೆ ಈ ನಿಯಮ ಅನ್ವಯವಾಗಲಿದ್ದು, ಉಲ್ಲಂಘಿಸಿದ ಕಟ್ಟಡ ಮಾಲೀಕರು ಮತ್ತು ನಿರ್ಮಾಣ ಸಂಸ್ಥೆ ವಿರುದ್ಧ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ 1937ರ ರೂಲ್ 91 ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ನಗರ ಯೋಜನೆ-ಉತ್ತರ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Whats_app_banner