ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ತಡ ಯಾಕೆ, ಸಂದರ್ಶಕರ ನೋಂದಣಿ ಶುರುವಾಗಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ತಡ ಯಾಕೆ, ಸಂದರ್ಶಕರ ನೋಂದಣಿ ಶುರುವಾಗಿದೆ ನೋಡಿ

ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ತಡ ಯಾಕೆ, ಸಂದರ್ಶಕರ ನೋಂದಣಿ ಶುರುವಾಗಿದೆ ನೋಡಿ

Aero India 2025: ಏರೋ ಇಂಡಿಯಾ 2025ರ ಪ್ರದರ್ಶನ ಫೆ.10 ರಿಂದ 14ರ ತನಕ ನಡೆಯಲಿದೆ. ಇದಕ್ಕಾಗಿ ಸಂದರ್ಶಕರ ನೋಂದಣಿ ಶುರುವಾಗಿದ್ದು, ಟಿಕೆಟ್ ದರ ಮತ್ತು ನೋಂದಣಿ ವಿವರ ಇಲ್ಲಿದೆ.

ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ಸಂದರ್ಶಕರ ನೋಂದಣಿ ಶುರುವಾಗಿದೆ.
ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ಸಂದರ್ಶಕರ ನೋಂದಣಿ ಶುರುವಾಗಿದೆ.

Aero India 2025: ಬೆಂಗಳೂರು ಏರೋ ಇಂಡಿಯಾ 2025 ಪ್ರದರ್ಶನಕ್ಕೆ ಸಜ್ಜಾಗತೊಡಗಿದೆ. ಏರೋ ಇಂಡಿಯಾ 2025 ವೀಕ್ಷಿಸಲು ಇಚ್ಛಿಸುವ ಸಂದರ್ಶಕರ ನೋಂದಣಿ ಈಗ ಶುರುವಾಗಿದೆ. ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿಯಲ್ಲಿ 10 ರಿಂದ 14 ರ ತನಕ ಐದು ದಿನಗಳ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ವ್ಯಾಪಾರ ಮತ್ತು ಸಾಮಾನ್ಯ ಪಾಸ್‌ಗಾಗಿ ಸಂದರ್ಶಕರ ಪಾಸ್‌ ವಿತರಿಸುವುದಕ್ಕಾಗಿ ಸಂದರ್ಶಕರ ನೋಂದಣಿ ಪ್ರಕ್ರಿಯೆ ಶುರುವಾಗಿದೆ ಎಂದು ಆಯೋಜಕರು ಘೋಷಿಸಿದ್ದಾರೆ. ಸಂದರ್ಶಕರ ನೋಂದಣಿ ಏರೋ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕವೇ ಮಾಡಬೇಕು.

ಏರೋ ಇಂಡಿಯಾ 2025; ಫೆ.10 ರಿಂದ 14 ರ ತನಕ ವೈಮಾನಿಕ ಪ್ರದರ್ಶನ

ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿಯಲ್ಲಿ 10 ರಿಂದ 14 ರ ತನಕ ಐದು ದಿನಗಳ ಕಾಲ ಏರೋ ಇಂಡಿಯಾ 2025 ನಡೆಯಲಿದೆ. ಇದರಲ್ಲಿ ಫೆಬ್ರವರಿ 10 ರಿಂದ 14ರ ತನಕ ವೈಮಾನಿಕ ಪ್ರದರ್ಶನವಿರಲಿದೆ. ಮೊದಲ ಮೂರು ದಿನ ವ್ಯಾಪಾರ ವ್ಯವಹಾರಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಫೆಬ್ರವರಿ 13 ಮತ್ತು 14 ರಂದು ಸಾರ್ವಜನಿಕರು ಏರೋ ಇಂಡಿಯಾಕ್ಕೆ ಭೇಟಿ ನೀಡಬಹುದು. ಸಾಮಾನ್ಯ, ವ್ಯಾಪಾರ ಮತ್ತು ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶದಲ್ಲಿ ಕುಳಿತು ಏರ್ ಶೋ ವೀಕ್ಷಣೆಗೆ ಮೂರು ವರ್ಗಗಳ ಟಿಕೆಟ್‌ಗಳು ಲಭ್ಯವಿರುತ್ತವೆ.

ಏರೋ ಇಂಡಿಯಾ 2025 ಟಿಕೆಟ್ ದರ ಎಷ್ಟು

ವ್ಯವಹಾರದ ದಿನಗಳಿಗಾಗಿ ವ್ಯಾಪಾರ ಸಂದರ್ಶಕರ ಪಾಸ್‌ಗಳು ಭಾರತೀಯ ಪ್ರಜೆಗಳಿಗೆ 5000 ರೂಪಾಯಿ, ವಿದೇಶಿಯರಿಗೆ 150 ಅಮೆರಿಕನ್ ಡಾಲರ್‌ಗೆ ಲಭ್ಯ ಇವೆ. ಅದೇ ರೀತಿ, ಸಾರ್ವಜನಿಕ ಪ್ರವೇಶದ ದಿನಗಳಿಗಾಗಿ ಸಾಮಾನ್ಯ ಪಾಸ್‌ಗಳು ಭಾರತೀಯ ಪ್ರಜೆಗಳಿಗೆ 2,500 ರೂಪಾಯಿಗೆ ಮತ್ತು ವಿದೇಶಿ ಪ್ರಜೆಗಳಿಗೆ 50 ಡಾಲರ್‌ಗೆ ಲಭ್ಯವಿದೆ. ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶದ ಟಿಕೆಟ್‌ ಬುಕಿಂಗ್‌ಗಳು ಶುರುವಾಗಬೇಕಷ್ಟೆ.

ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶದ ಟಿಕೆಟ್‌ ಪಡೆದುಕೊಂಡರೆ, ಏರೋ ಡಿಸ್‌ಪ್ಲೇ ವಿಷುಯಲ್ ಏರಿಯಾಗೆ ಮಾತ್ರ ಪ್ರವೇಶಿಸಬಹುದು. ಸಾಮಾನ್ಯ ಸಂದರ್ಶಕರ ಪಾಸ್ ತೆಗೆದುಕೊಂಡರೆ ಪ್ರದರ್ಶನ ಪ್ರದೇಶ ಮತ್ತು ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶಕ್ಕೂ ಪ್ರವೇಶಿಸಬಹುದು. ಏರ್ ಡಿಸ್ಪ್ಲೇ ವೀಕ್ಷಣಾ ಪ್ರದೇಶದ ಟಿಕೆಟ್‌ ದರ ಭಾರತೀಯ ಪ್ರಜೆಗಳಿಗೆ 1000 ರೂಪಾಯಿ ಮತ್ತು ವಿದೇಶಿ ಪ್ರಜೆಗಳಿಗೆ 50 ಡಾಲರ್‌ಗೆ ಲಭ್ಯ ಇವೆ. ಟಿಕೆಟ್‌ ದರ ಜಿಎಸ್‌ಟಿಯನ್ನು ಒಳಗೊಂಡಿದೆ ಎಂದು ಏರೋ ಇಂಡಿಯಾ ಆಯೋಜಕರು ತಿಳಿಸಿದ್ದಾರೆ. ಟಿಕೆಟ್ ಖರೀದಿಗೆ ಏರೋ ಇಂಡಿಯಾ 2025 ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಬೇಕು.

ಏರೋ ಇಂಡಿಯಾ 2025 ಪ್ರದರ್ಶನವು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಗೆ ತನಕ ನಡೆಯಲಿದೆ. ಇಲ್ಲಿ, ಭಾರತ ಮತ್ತು ವಿದೇಶದಿಂದ ಮಿಲಿಟರಿ ಮತ್ತು ನಾಗರಿಕ ವಿಮಾನಗಳನ್ನು ಒಳಗೊಂಡ ವೈಮಾನಿಕ ಪ್ರದರ್ಶನವನ್ನು ಪ್ರತಿದಿನ ಎರಡು ಬಾರಿ, ಬೆಳಿಗ್ಗೆ ಒಮ್ಮೆ ಮತ್ತು ಮಧ್ಯಾಹ್ನ ಒಮ್ಮೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಏರೋ ಇಂಡಿಯಾ 2023 ಹೀಗಿತ್ತು

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಈ ಹಿಂದೆ ಅಂದರೆ ಎರಡು ವರ್ಷ ಹಿಂದೆ 2023ರಲ್ಲಿ ಏರೋ ಇಂಡಿಯಾ ಪ್ರದರ್ಶನ ನಡೆದಿತ್ತು. 2023ರ ಏರೋ ಇಂಡಿಯಾದಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಿದ್ದವು. 809ರಷ್ಟು ಪ್ರದರ್ಶಕರಿದ್ದರು. ಏಳು ಲಕ್ಷಕ್ಕೂ ಹೆಚ್ಚು ಜನ ಏರೋ ಇಂಡಿಯಾ 2023ಕ್ಕೆ ಭೇಟಿ ನೀಡಿದ್ದರು. 75000 ಕೋಟಿ ರೂಪಾಯಿ ಮೌಲ್ಯದ 250ಕ್ಕೂ ಹೆಚ್ಚು ವ್ಯಾಪಾರ ಒಡಂಬಡಿಕೆಗಳಾಗಿದ್ದವು ಎಂದು ಏರೋ ಇಂಡಿಯಾದ ಆಯೋಜಕರು ತಿಳಿಸಿದ್ದಾರೆ.

Whats_app_banner