Aero India 2025: ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲವೇ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಕರ್ನಾಟಕ  /  Aero India 2025: ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲವೇ? ಇಲ್ಲಿದೆ ಉತ್ತರ

Aero India 2025: ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲವೇ? ಇಲ್ಲಿದೆ ಉತ್ತರ

Aero India 2025: ಬೆಂಗಳೂರಿನ ಯಲಹಂಕದಲ್ಲಿ ಫೆ 10 ರಿಂದ 14 ರ ತನಕ ನಡೆಯಲಿರುವ ಏರೋ ಇಂಡಿಯಾದಲ್ಲಿ ಭಾರತೀಯ ವಾಯುಪಡೆ ವಿಮಾನಗಳ ಪ್ರದರ್ಶನ ಪ್ರಮುಖ ಆಕರ್ಷಣೆ. ವಿಶ್ವದ ಬಲಾಢ್ಯ ವಾಯುಪಡೆಗಳ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನ ಎಂಬುದನ್ನು ತಿಳಿಯಲು ಇದೊಂದು ನಿಮಿತ್ತ.

ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲ ಸಹಜ. ಅದನ್ನು ತಣಿಸುವ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲ ಸಹಜ. ಅದನ್ನು ತಣಿಸುವ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

Aero India 2025: ಬೆಂಗಳೂರು ಯಲಹಂಕದಲ್ಲಿ ಏರೋ ಇಂಡಿಯಾ ಪ್ರದರ್ಶನಕ್ಕೆ ದಿನಗಣನೆ ಶುರುವಾಗಿದೆ. ಫೆ 10 ರಿಂದ 14ರ ತನಕ ನಡೆಯಲಿರುವ ಏರ್ ಶೋದಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಪ್ರದರ್ಶನ ನೀಡಲಿವೆ. ಮೊದಲ ಮೂರು ದಿನ ಜಾಗತಿಕ ನಾಯಕರು, ರಕ್ಷಣಾ ಕ್ಷೇತ್ರದ ವ್ಯಾಪಾರೋದ್ಯಮಿಗಳಿಗೆ ಪ್ರದರ್ಶನ ವ್ಯಾಪಾರ ಒಪ್ಪಂದಗಳಿಗೆ ವೇದಿಕೆಯಾಗಲಿದೆ. ಇನ್ನೆರಡು ದಿನ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಇರಲಿದೆ. ಈ ಸಂದರ್ಭದಲ್ಲಿ ವಿಶ್ವದ ಬಲಾಢ್ಯ ವಾಯುಪಡೆಗಳ ಅವಲೋಕನ ಮಾಡುವುದಕ್ಕೆ ಹಾಗೂ ಅವುಗಳ ಪೈಕಿ ಭಾರತದ ವಾಯುಪಡೆಯ ಸ್ಥಾನ ಎಷ್ಟನೇಯದ್ದು ಎಂದು ತಿಳಿದುಕೊಳ್ಳುವುದಕ್ಕೆ ಈ ಹೊತ್ತು ಒಂದು ನಿಮಿತ್ತ.

ವಿಶ್ವದ ಪ್ರಮುಖ 10 ರಾಷ್ಟ್ರಗಳ ವಾಯುಪಡೆಯಲ್ಲಿರುವ ವಿಮಾನಗಳೆಷ್ಟು

ವಿಶ್ವದ ಪ್ರಮುಖ 10 ರಾಷ್ಟ್ರಗಳ ವಾಯುಪಡೆಯಲ್ಲಿ ಬಹಳಷ್ಟು ವಿಮಾನಗಳಿವೆ. ಈ ಪೈಕಿ ಗರಿಷ್ಠ ವಿಮಾನಗಳು ಅಮೆರಿಕದ ವಾಯುಪಡೆಯಲ್ಲಿವೆ. ಭಾರತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಮರಿಕ- 13,043, ರಷ್ಯಾ - 4,292, ಚೀನಾ - 3,309, ಭಾರತ - 2,229, ದಕ್ಷಿಣ ಕೊರಿಯಾ- 1,592, ಜಪಾನ್ - 1,443, ಪಾಕಿಸ್ತಾನ - 1,399, ಈಜಿಪ್ಟ್‌ - 1,093, ಟರ್ಕಿ- 1,083, ಫ್ರಾನ್ಸ್‌ - 976 ವಿಮಾನಗಳಿರುವುದಾಗಿ ವರ್ಲ್ಡ್‌ ಡೈರೆಕ್ಟರಿ ಆಫ್ ಮಾಡರ್ನ್‌ ಮಿಲಿಟರಿ ಏವಿಯೇಷನ್‌ನ 2024ರ ವರದಿ ಹೇಳಿದೆ.

ವಿಶ್ವದ ಅಗ್ರ 5 ಬಲಾಢ್ಯ ವಾಯುಪಡೆಗಳಿವು

1) ಅಮೆರಿಕ ವಾಯುಪಡೆ: ಅಮೆರಿಕದ ವಾಯುಪಡೆಯಲ್ಲಿ 13,043 ವಿಮಾನಗಳಿವೆ. ಜಗತ್ತಿನ ಅತಿ ಬಲಿಷ್ಠ ವಾಯಪಡೆಯಾಗಿ ಅಮೆರಿಕದ ವಾಯುಪಡೆಯೆ ಇದೆ. ಜಾಗತಿಕ ರಕ್ಷಣಾ ವೆಚ್ಚದ ಶೇಕಡ 40ರಷ್ಟು ಅಮೆರಿಕದ ರಕ್ಷಣಾವೆಚ್ಚವಿದೆ. ಅಮೆರಿಕ ವಾಯುಪಡೆಯಲ್ಲಿ ಅತ್ಯಾಧುನಿಕ ಫೈಟರ್‌ ಜೆಟ್‌ಗಳು, ಬಾಂಬರ್‌ಗಳು, ಡ್ರೋನ್‌ಗಳು ಕೂಡ ಇವೆ. ಜಾಗತಿಕ ಸೇನಾ ಕಾರ್ಯಾಚರಣೆಗಳಲ್ಲಿ ಅಮೆರಿಕ ವಾಯುಪಡೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

2) ರಷ್ಯಾ ವಾಯುಪಡೆ: ಜಗತ್ತಿನ ಎರಡನೇ ಅತಿಬಲಿಷ್ಠ ವಾಯುಪಡೆ ರಷ್ಯಾದ್ದು. ರಷ್ಯಾ ವಾಯುಪಡೆಯಲ್ಲಿ 4,292 ವಿಮಾನಗಳಿವೆ. ಇದರಲ್ಲಿ ಅತ್ಯಾಧುನಿಕ ಫೈಟರ್‌ಜೆಟ್‌ಗಳು, ಬಾಂಬರ್‌ಗಳು ಸ್ಟ್ರಾಟಜಿಕ್ ವಿಮಾನಗಳು ಕೂಡ ಇವೆ. ಪೂರ್ವ ಯುರೋಪ್ ಮತ್ತು ಕೇಂದ್ರ ಏಷ್ಯಾ ಮೇಲೆ ತನ್ನ ಪ್ರಾಬಲ್ಯವನ್ನು ರಷ್ಯಾ ಮೆರೆಯುತ್ತಿದೆ. ಪ್ರಾದೇಶಿಕ ಹಾಗೂ ಜಾಗತಿಕ ಬಿಕ್ಕಟ್ಟಿನಲ್ಲಿ ಸಂದರ್ಭದಲ್ಲಿ ರಷ್ಯಾ ಸೇನೆ ಪ್ರಮುಖ ಪಾತ್ರವಹಿಸುತ್ತದೆ.

3) ಚೀನಾ ವಾಯುಪಡೆ: ಜಗತ್ತಿನ ವಾಯುಪಡೆಗಳ ಪೈಕಿ ಹೆಚ್ಚು ಸುಧಾರಿತ ಯುದ್ಧ ವಿಮಾನಗಳನ್ನು ಹೊಂದಿರುವಂಥದ್ದು ಚೀನಾ ವಾಯುಪಡೆ. ಇದರಲ್ಲಿ 3,309 ವಿಮಾನಗಳಿವೆ. ಫೈಟರ್‌ಜೆಟ್‌ಗಳು ಡ್ರೋನ್‌ಗಳು ಕೂಡ ಇವೆ. ಜಾಗತಿಕ ರಕ್ಷಣಾ ಕ್ಷೇತ್ರದಲ್ಲಿ ಚೀನಾ ಸ್ಥಿರವಾಗಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಲೇ ಬಂದಿದೆ. ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹಾಗೂ ಜಾಗತಿಕವಾಗಿ ಕೂಡ ಚೀನಾ ವಾಯುಪಡೆ ತನ್ನದೇ ಛಾಪು ಮೂಡಿಸಿದೆ.

4) ಭಾರತೀಯ ವಾಯುಪಡೆ: ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತದ ವಾಯುಪಡೆ ಸಾಕಷ್ಟು ಮುಂದುವರಿದಿದೆ. ಭಾರತೀಯ ವಾಯುಪಡೆಯಲ್ಲಿ 2,229 ವಿಮಾನಗಳಿವೆ. ಸುಧಾರಿತ ಫೈಟರ್‌ ಜೆಟ್‌ಗಳು ಹಾಗೂ ಏರ್ ಡಿಫೆನ್ಸ್ ಸಿಸ್ಟಮ್‌ಗಳನ್ನು ಹೊಂದಿರುವ ಭಾರತೀಯ ವಾಯುಪಡೆ ಈಗ ಜಾಗತಿಕ ರಕ್ಷಣಾ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಹಿಂದೂ ಮಹಾ ಸಾಗರದ ಭಾಗದಲ್ಲಿ ಭಾರತ ಮಹತ್ವದ ಪಾತ್ರವಹಿಸುತ್ತದೆ. ಪ್ರಾದೇಶಿಕ ಭದ್ರತೆ ಹಾಗೂ ಜಾಗತಿಕ ಸುರಕ್ಷೆ ವಿಚಾರ ಬಂದಾಗ ಭಾರತೀಯ ವಾಯುಪಡೆ ಮಹತ್ವ ಪಡೆದುಕೊಳ್ಳುತ್ತದೆ.

5) ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ವಾಯುಪಡೆಯು ವಿಶ್ವದ ಕೆಲವು ಅತ್ಯಾಧುನಿಕ ವಿಮಾನಗಳನ್ನು ಹೊಂದಿದೆ. ವಾಯು ರಕ್ಷಣಾ ಮತ್ತು ಕಾರ್ಯತಂತ್ರದ ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಿ, ಕೊರಿಯನ್ ಪರ್ಯಾಯ ದ್ವೀಪದ ಸುರಕ್ಷತೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಈ ವಾಯುಪಡೆಯಲ್ಲಿ 1592 ವಿಮಾನಗಳಿವೆ. ಪ್ರಾದೇಶಿಕ ಬೆದರಿಕೆಗಳ ವಿರುದ್ಧ, ವಿಶೇಷವಾಗಿ ಉತ್ತರ ಕೊರಿಯಾದಿಂದ ರಕ್ಷಿಸುವಲ್ಲಿ ದಕ್ಷಿಣ ಕೊರಿಯಾ ವಾಯುಪಡೆ ಮಹತ್ವದ್ದು.

ಏರೋ ಇಂಡಿಯಾ 2025: ಫೆ 10 ರಿಂದ 14 ರ ತನಕ

ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿಯಲ್ಲಿ 10 ರಿಂದ 14 ರ ತನಕ ಐದು ದಿನಗಳ ಕಾಲ ಏರೋ ಇಂಡಿಯಾ 2025 ನಡೆಯಲಿದೆ. ಈ ಅವಧಿಯಲ್ಲಿ ವೈಮಾನಿಕ ಪ್ರದರ್ಶನವಿರಲಿದೆ. ಮೊದಲ ಮೂರು ದಿನ ವ್ಯಾಪಾರ ವ್ಯವಹಾರಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಫೆಬ್ರವರಿ 13 ಮತ್ತು 14 ರಂದು ಸಾರ್ವಜನಿಕರು ಏರೋ ಇಂಡಿಯಾಕ್ಕೆ ಭೇಟಿ ನೀಡಬಹುದು. ಸಾಮಾನ್ಯ, ವ್ಯಾಪಾರ ಮತ್ತು ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶದಲ್ಲಿ ಕುಳಿತು ಏರ್ ಶೋ ವೀಕ್ಷಣೆಗೆ ಮೂರು ವರ್ಗಗಳ ಟಿಕೆಟ್‌ಗಳನ್ನು ಒದಗಿಸಲಾಗಿದೆ.

Whats_app_banner