Agni veer Recruitment 2025: ಅಗ್ನಿವೀರ್ ಹುದ್ದೆಗೆ ಇನ್ನೂ ಅರ್ಜಿ ಸಲ್ಲಿಸಲಿಲ್ಲವೇ, ನೇಮಕಾತಿಗೆ ಅರ್ಜಿ ತುಂಬುವ ಅವಧಿ 2 ವಾರ ವಿಸ್ತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  Agni Veer Recruitment 2025: ಅಗ್ನಿವೀರ್ ಹುದ್ದೆಗೆ ಇನ್ನೂ ಅರ್ಜಿ ಸಲ್ಲಿಸಲಿಲ್ಲವೇ, ನೇಮಕಾತಿಗೆ ಅರ್ಜಿ ತುಂಬುವ ಅವಧಿ 2 ವಾರ ವಿಸ್ತರಣೆ

Agni veer Recruitment 2025: ಅಗ್ನಿವೀರ್ ಹುದ್ದೆಗೆ ಇನ್ನೂ ಅರ್ಜಿ ಸಲ್ಲಿಸಲಿಲ್ಲವೇ, ನೇಮಕಾತಿಗೆ ಅರ್ಜಿ ತುಂಬುವ ಅವಧಿ 2 ವಾರ ವಿಸ್ತರಣೆ

Agni veer Recruitment 2025: ಭಾರತೀಯ ಸೇನೆಯು ಅಗ್ನಿವೀರ್‌ ನೇಮಕ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದರೂ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಅಗ್ನಿವೀರ್‌ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಅಗ್ನಿವೀರ್‌ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

Agni veer Recruitment 2025:ಭಾರತೀಯ ಸೇನೆಯು ಅಗ್ನಿವೀರ್‌ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕಳೆದ ತಿಂಗಳೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಿತ್ತು. ಈಗಾಗಲೇ ಅರ್ಜಿ ಸ್ವೀಕಾರ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನೋಂದಣಿ ದಿನಾಂಕವನ್ನು ಏಪ್ರಿಲ್ 25ಕ್ಕೆ ವಿಸ್ತರಿಸಲಾಗಿದೆ. ಈ ವರ್ಷದಿಂದ ಹೊಸದಾಗಿ ಕೆಲವು ಪರೀಕ್ಷೆಯನ್ನು ಪರಿಚಯಿಸಲಾಗಿದೆ. ಅಗ್ನಿವೀರ್ ಜನರಲ್ ಡ್ಯೂಟಿ, ತಾಂತ್ರಿಕ, ಕ್ಲರ್ಕ್/ಸ್ಟೋರ್ ಕೀಪರ್ ಮತ್ತು ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಿಇಇ ಪರೀಕ್ಷೆ 13 ಭಾಷೆಗಳಲಲ್ಲಿ ಎದುರಿಸಲು ಅವಕಾಶ ಮಾಡಲಾಗಿದೆ.

ಸೇನೆಯಲ್ಲಿ ಅಗ್ನಿವೀರರು ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು/ಇತರೆ ಶ್ರೇಣಿಗಳ ನೇಮಕಾತಿಗಾಗಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನೋಂದಣಿ ದಿನಾಂಕವನ್ನು ಏಪ್ರಿಲ್ 25 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಈ ಕೊನೆಯ ದಿನಾಂಕ ಏಪ್ರಿಲ್ 10 ಆಗಿತ್ತು. ವಿಶೇಷವೆಂದರೆ ಈ ಬಾರಿ ಫಿಟ್‌ನೆಸ್ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆಯ ಜೊತೆಗೆ, ಅಭ್ಯರ್ಥಿಗಳು ಹೊಂದಾಣಿಕೆ ಪರೀಕ್ಷೆಗೂ ಒಳಗಾಗಬೇಕಾಗುತ್ತದೆ ಎನ್ನುವುದು ಭಾರತೀಯ ಸೇನೆಯ ಅಧಿಕಾರಿಗಳು ನೀಡುವ ವಿವರಣೆ.

ಅಭ್ಯರ್ಥಿಗಳಿಗೆ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 10 ನೇ ಪಾಸ್ ಮತ್ತು 8 ನೇ ಪಾಸ್ ವಿಭಾಗಗಳ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಮಾಡಲಾಗುತ್ತಿದೆ. ಇದರ ನಂತರ, ಜಂಟಿ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗುವುದು. ಈ ಹಿಂದೆ ಜಂಟಿ ಪ್ರವೇಶ ಪರೀಕ್ಷೆಯ ನೋಂದಣಿ ದಿನಾಂಕವನ್ನು ಏಪ್ರಿಲ್ 10 ಎಂದು ನಿಗದಿಪಡಿಸಲಾಗಿತ್ತು. ಈಗ ಅದನ್ನು ಏಪ್ರಿಲ್ 25 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲ ತಿಳಿಸಲಾಗಿದೆ.

ಅರ್ಹ ಅಭ್ಯರ್ಥಿಗಳು 2 ವಿಭಾಗಗಳಲ್ಲಿ ಅರ್ಜಿ ಸಲ್ಲಿಸಲು ಉಂಟು ಅವಕಾಶ

17 ವರ್ಷ ಆರು ತಿಂಗಳಿನಿಂದ 21 ವರ್ಷ ವಯಸ್ಸಿನ ಅಭ್ಯರ್ಥಿಗಳು ಅಗ್ನಿವೀರ್ ನೇಮಕಾತಿಗೆ ಅರ್ಹರು. ಪಾಲಿಟೆಕ್ನಿಕ್ ಮತ್ತು ಐಟಿಐ ಡಿಪ್ಲೊಮಾ ಹೊಂದಿರುವವರು ಹೆಚ್ಚುವರಿ ಬೋನಸ್ ಅಂಕಗಳೊಂದಿಗೆ ಅಗ್ನಿವೀರ್ ತಾಂತ್ರಿಕ ವ್ಯಾಪಾರಕ್ಕೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು ತಮ್ಮ ಅರ್ಹತೆಯ ಆಧಾರದ ಮೇಲೆ ಎರಡು ವಿಭಾಗಗಳಲ್ಲಿ ಅಗ್ನಿವೀರ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಅವರು ಎರಡು ಪ್ರತ್ಯೇಕ ನಮೂನೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದವರು ಎರಡು ಜಂಟಿ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ, ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ಆದ್ಯತೆಯನ್ನು ನಿರ್ಧರಿಸಬೇಕಾಗುತ್ತದೆ.

ಈ ಬಾರಿ ಅಗ್ನಿವೀರ್ ನೇಮಕಾತಿಯಲ್ಲಿ, 1.6 ಕಿಮೀ ಓಟದ ಪರೀಕ್ಷೆಯಲ್ಲಿ ಹೆಚ್ಚುವರಿ ರನ್ ಟೈಮಿಂಗ್‌ನೊಂದಿಗೆ ನಾಲ್ಕು ರೇಸ್ ಗ್ರೂಪ್ ಎನ್‌ಕ್ಲೋಸರ್‌ಗಳನ್ನು ಪರಿಚಯಿಸಲಾಗುತ್ತಿದೆ. ದೈಹಿಕ ಸದೃಢತಾ ಪರೀಕ್ಷೆ (PFT) ಮತ್ತು ದೈಹಿಕ ಮಾಪನ ಪರೀಕ್ಷೆ (PMT)ಯಲ್ಲಿ ಅರ್ಹತೆ ಪಡೆಯುವ ಎಲ್ಲಾ ಅಭ್ಯರ್ಥಿಗಳು ಹೊಂದಾಣಿಕೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು ಭಾರತೀಯ ಸೇನೆಯ ಸವಾಲುಗಳಿಗೆ ಹೊಂದಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬುದನ್ನು ನೋಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹಂತ ಹಂತವಾಗಿ ಈ ಎಲ್ಲಾ ಪರೀಕ್ಷೆಗಳು ನಡೆದ ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ದೈಹಿಕ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಕೆಲವೇ ದಿನಗಳಲ್ಲಿ ಆಯ್ಕೆ ಪತ್ರ ಸ್ವೀಕರಿಸಿ ಸೇವೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner