ಕುಣಿಗಲ್‌ನಲ್ಲಿ ಅಪ್ರಾಪ್ತೆ ಮೇಲೆ 8 ವರ್ಷ ಲೈಂಗಿಕ ದೌರ್ಜನ್ಯ ಆರೋಪ; ಹಂಗರಹಳ್ಳಿ ಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿ ಬಂಧನ-allegation of sexual assault of minor girl hangarahalli chowdeshwari mutt bala manjunatha swamiji arrested rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕುಣಿಗಲ್‌ನಲ್ಲಿ ಅಪ್ರಾಪ್ತೆ ಮೇಲೆ 8 ವರ್ಷ ಲೈಂಗಿಕ ದೌರ್ಜನ್ಯ ಆರೋಪ; ಹಂಗರಹಳ್ಳಿ ಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿ ಬಂಧನ

ಕುಣಿಗಲ್‌ನಲ್ಲಿ ಅಪ್ರಾಪ್ತೆ ಮೇಲೆ 8 ವರ್ಷ ಲೈಂಗಿಕ ದೌರ್ಜನ್ಯ ಆರೋಪ; ಹಂಗರಹಳ್ಳಿ ಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿ ಬಂಧನ

ಅಪ್ರಾಪ್ತೆಗೆ 8 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕುಣಿಗಲ್ ಪಟ್ಟಣದ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧಿಪತಿ ಬಾಲಮಂಜುನಾಥ ಸ್ವಾಮೀಜಿಯನ್ನ ಪೊಲೀಸರು ಬಂಧಿಸಿದ್ದಾರೆ.

7 ವರ್ಷಗಳ ಕಾಲ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕುಣಿಗಲ್ ತಾಲೂಕಿನ ಹಂಗರಹಳ್ಳಿ ಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿಯನ್ನು ಬಂಧಿಸಲಾಗಿದೆ.
7 ವರ್ಷಗಳ ಕಾಲ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕುಣಿಗಲ್ ತಾಲೂಕಿನ ಹಂಗರಹಳ್ಳಿ ಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿಯನ್ನು ಬಂಧಿಸಲಾಗಿದೆ.

ಕುಣಿಗಲ್ (ತುಮಕೂರು): ಸತತ 7 ವರ್ಷಗಳಿಂದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಕುಣಿಗಲ್ ಪಟ್ಟಣದ ಹಂಗರಹಳ್ಳಿಯ ವಿದ್ಯಾಚೌಡೇಶ್ವರಿ ಮಠದ ಪೀಠಾಧಿಪತಿ 35 ವರ್ಷದ ಬಾಲಮಂಜುನಾಥ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೊಗಳನ್ನು ಮಾಡಿ ಬೆದರಿಕೆ ಹಾಕಿದ ಆರೋಪದಲ್ಲಿ ಸ್ವಾಮೀಜಿಯ ವೈಯಕ್ತಿಕ ಸಹಾಯಕ ಅಭಿಷೇಕ್ (31) ಎಂಬುವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಬಾಲಮಂಜುನಾಥ ಸ್ವಾಮೀಜಿಯನ್ನು ಗುರುವಾರ (ಮಾರ್ಚ್ 7) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ವೈಯಕ್ತಿಕ ಸಹಾಯಕ ಹಾಗೂ ಇತರೆ ಐವರು ರಹಸ್ಯವಾಗಿ ತನ್ನ ಅಶ್ಲೀಲ ವಿಡಿಯೊಗಳನ್ನು ಸೆರೆ ಹಿಡಿದಿದ್ದಾರೆ ಎಂದು ಸ್ವಾಮೀಜಿ 2024ರ ಫೆಬ್ರವರಿ 10 ರಂದು ತುಮಕೂರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೊಗಳ ಮೂಲಕ ಬ್ಲಾಕ್‌ಮೇಲ್ ಮಾಡುವ ಮೂಲಕ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ವಾಮೀಜಿ ಮಹಿಳಾ ವೈದ್ಯರಿಂದ ಚರ್ಮ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಆರು ಜನರು ತಮ್ಮ ವಿಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದರು.

20 ವರ್ಷದ ಭಕ್ತೆಯ ಮೇಲೆ ಎಂಟು ವರ್ಷಗಳಿಂದ ಸ್ವಾಮೀಜಿ ಅತ್ಯಾಚಾರ ಆರೋಪ

ದೂರಿನ ಆಧಾರದ ಮೇಲೆ, ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಸುಲಿಗೆ ಮತ್ತು ಬೆದರಿಕೆ ಹಾಕಿದ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅಭಿಷೇಕ್ ಅವರನ್ನು ಪ್ರಶ್ನಿಸಿದಾಗ ಸ್ವಾಮೀಜಿ ಕಳೆದ ಕೆಲವು ವರ್ಷಗಳಿಂದ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಠದ ಆವರಣದಲ್ಲಿ ಕಳೆದ ಎಂಟು ವರ್ಷಗಳಿಂದ ಸ್ವಾಮೀಜಿ 20 ವರ್ಷದ ಭಕ್ತೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಅವನು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರಲ್ಲಿ ಒಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಆಗ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ಹುಲಿಯೂರು ದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಗುರುವಾರ ರಾತ್ರಿ ತುಮಕೂರು ಎಸ್ಪಿ ಕೆ.ವಿ.ಅಶೋಕ್ ನೇತೃತ್ವದ ಪೊಲೀಸ್ ತಂಡ ಮಠದ ಬಾಲಮಂಜುನಾಥ ಸ್ವಾಮೀಜಿಯನ್ನು ಬಂಧಿಸಿದೆ. ಬಂಧಿಸಿ ಸ್ವಾಮೀಜಿಯನ್ನು ಶುಕ್ರವಾರ ಕುಣಿಗಲ್ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ವಾಮೀಜಿ ಇತರ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಅಶೋಕ್ ಅವರು ಮಾಹಿತಿ ನೀಡಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point