ಕನ್ನಡ ಸುದ್ದಿ  /  Karnataka  /  Amit Shah To Inaugurate Bharat Mata Mandir In Amaragiri, Udayagiri Karnataka

Amit Shah: ದೇಶದಲ್ಲಿ ಭಾರತ ಮಾತೆಯ ಎರಡನೇ ಮಂದಿರ ಇಂದು ಈಶ್ವರಮಂಗಲದ ಅಮರಗಿರಿಯಲ್ಲಿ ಉದ್ಘಾಟನೆ, ಹನುಮಗಿರಿ, ಅಮರಗಿರಿಯ ವಿಶೇಷವೇನು ಗೊತ್ತೆ?

ಇಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದು, ಈಶ್ವರಮಂಗಲದ ಹನುಮಗಿರಿಗೆ ಭೇಟಿ ನೀಡಿ, ಬಳಿಕ ಅಮರಗಿರಿಗೆ ಭೇಟಿ ನೀಡಲಿದ್ದಾರೆ. ಅಮರಗಿರಿ ಮತ್ತು ಹನುಮಗಿರಿಯ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Amit Shah: ದೇಶದಲ್ಲಿ ಭಾರತ ಮಾತೆಯ ಎರಡನೇ ಮಂದಿರ ಈಶ್ವರಮಂಗಲದ ಹನುಮಗಿರಿಯಲ್ಲಿ ಉದ್ಘಾಟನೆ
Amit Shah: ದೇಶದಲ್ಲಿ ಭಾರತ ಮಾತೆಯ ಎರಡನೇ ಮಂದಿರ ಈಶ್ವರಮಂಗಲದ ಹನುಮಗಿರಿಯಲ್ಲಿ ಉದ್ಘಾಟನೆ

ಪುತ್ತೂರು: ಇಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದು, ಈಶ್ವರಮಂಗಲದ ಹನುಮಗಿರಿಗೆ ಭೇಟಿ ನೀಡಿ, ಬಳಿಕ ಅಮರಗಿರಿಗೆ ಭೇಟಿ ನೀಡಲಿದ್ದಾರೆ. ಭಾರತ ಮಾತೆಗಾಗಿ ದೇಶದಲ್ಲಿ ನಿರ್ಮಾಣಗೊಂಡ ಎರಡನೇ ಮಂದಿರದಲ್ಲಿ ದ್ವೀಪಪ್ರಜ್ವಲ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಮರಗಿರಿಯ ಭಾರತ ಮಾತೆ ಮಂದಿರ ಮತ್ತು ಹನುಮಗಿರಿ ಪಂಚಮುಖಿ ಆಂಜನೇಯ ದೇಗುಲದ ಕುರಿತು ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಈಶ್ವರಮಂಗಲದಲ್ಲಿಂದು ಅಮಿತ್‌ ಶಾ

ಇಂದು ಅಮಿತ್‌ ಶಾ ಅವರು ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಈಶ್ವರಮಂಗಲದಲ್ಲಿರಲಿದ್ದಾರೆ. ಮಧ್ಯಾಹ್ನ 1.25ಕ್ಕೆ ಕಣ್ಣೂರು ಅಂತಾರಾಷ್ಡ್ರೀಯ ವಿಮಾನ ನಿಲ್ದಾಣದಿಂದ ಅಮಿತ್‌ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಮಂಗಲಕ್ಕೆ ಆಗಮಿಸಲಿದ್ದಾರೆ. ಇವರು ಮಧ್ಯಾಹ್ನ 1.50ಕ್ಕೆ ಈಶ್ವರಮಂಗಲದ ಗಜಾನನ ಶಾಲೆಯ ಮೈದಾನದಲ್ಲಿ ಇಳಿಯಲಿದ್ದಾರೆ. ಇಲ್ಲಿ ಇವರಿಗಾಗಿಯೇ ವಿಶೇಷವಾಗಿ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಅಲ್ಲಿಂದ ಹನುಮಗಿರಿ ಪಂಚಮುಖಿ ಆಂಜನೇಯ ದೇಗುಲಕ್ಕೆ ಅಮಿತ್‌ ಶಾ ಭೇಟಿ ನೀಡಲಿದ್ದಾರೆ. ಬಳಿಕ ಅಮರಗಿರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಭಾರತ ಮಾತೆ ಪ್ರತಿಮೆ, ಅಮರ ಜವಾನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಪುತ್ತೂರಿಗೆ ತೆರಳುವರು.

ಭಾರತ ಮಾತೆಯ ಎರಡನೇ ಮಂದಿರ

ಈಶ್ವರಮಂಗಲದಲ್ಲಿ ನಿರ್ಮಾಣಗೊಂಡಿರುವ ಭಾರತ ಮಾತೆಯ ಮಂದಿರವು ಭಾರತದ ಎರಡನೇಯ ಭಾರತ ಮಾತೆಯ ಮಂದಿರ ಎನ್ನುವುದು ವಿಶೇಷ. ಈಗಾಗಲೇ ಕನ್ಯಾಕುಮಾರಿಯಲ್ಲಿ ಭಾರತ ಮಾತಾ ಮಂದಿರವಿದೆ. ಧರ್ಮಶ್ರೀ ಪ್ರತಿಷ್ಠಾನವು ಈ ಮಂದಿರ ನಿರ್ಮಿಸಿದೆ. ಭಾರತ ಮಾತೆಯ ವಿಗ್ರಹ, ಜೈ ಜವಾನ್- ಜೈ ಕಿಸಾನ್ ಘೋಷಣೆಗೆ ಪೂರಕವಾಗಿ ಯೋಧ ಹಾಗೂ ರೈತನ ಪ್ರತಿಮೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಚಳವಳಿ ಮಾಡಿದ ವೀರರ ಚಿತ್ರಗಳು ಇಲ್ಲಿವೆ. ಮಂದಿರದ ಹೊರಗೆ ತ್ರಿವರ್ಣಧ್ವಜವಿಡಿದ ಯೋಧನ ಪ್ರತಿಮೆಯಿದೆ. ಇಲ್ಲಿಗೆ ಆಗಮಿಸಿದವರಲ್ಲಿ ದೇಶಭಕ್ತಿ, ಭಾರತದ ಕುರಿತು ಜಾಗೃತಿ ಉಂಟಾಗುವಂತೆ ಈ ಭಾರತ ಮಾತಾ ಮಂದಿರ ನಿರ್ಮಿಸಲಾಗಿದೆ.

ಮಂದಿರದ ಸುತ್ತಲಿನ ವಾತಾವರಣವು ರಮಣೀಯವಾಗಿದೆ. ಕಲ್ಲಿನ ಮೆಟ್ಟಿಲು, ಹುಲ್ಲು ಹಾಸು, ಸುಂದರ ಪ್ರವೇಶದ್ವಾರ ಗಮನ ಸೆಳೆಯುತ್ತದೆ. ಪ್ರತಿ ಶನಿವಾರ, ಭಾನುವಾರ ಅಮರಗಿರಿ ಓಪನ್‌ ಇರಲಿದೆ. ರಾತ್ರಿ ವೇಳೆ ವಿದ್ಯುತ್‌ ಅಲಂಕಾರವಿರುತ್ತದೆ.

ಹನುಮಗಿರಿ ಪಂಚಮುಖಿ ಆಂಜನೇಯ

ಈಶ್ವರಮಂಗಲದ ಜನಪ್ರಿಯತೆಯನ್ನು ಅಲ್ಲಿನ ಹನುಮಗಿರಿಯು ಹೆಚ್ಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯಲ್ಲಿನ ಪಡುವನ್ನೂರು ಮತ್ತು ನೆಟ್ಟನಿಗೆ ಗ್ರಾಮಗಳ ಗಡಿ ಪ್ರದೇಶದಲ್ಲಿ “ಹನುಮಗಿರಿ” ಎಂದು ಕರೆಯಲ್ಪಡುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರವಿದೆ. ಧರ್ಮಶ್ರೀ ಪ್ರತಿಷ್ಠಾನವು ಈ ಕ್ಷೇತ್ರವನ್ನು ಸ್ಥಾಪಿಸಿದ್ದು, ಪ್ರತಿನಿತ್ಯ ಸಾಕಷ್ಟು ಭಕ್ತರನ್ನು, ಪ್ರವಾಸಿಗರನ್ನು ಸೆಳೆಯುತ್ತಿದೆ. ಆಂಜನೇಯ ವಿಗ್ರಹವು ೧೧ ಅಡಿ ಎತ್ತರವಿದ್ದು ಕಾರ್ಕಳದ ಕೃಷ್ಣಶಿಲೆಯಿಂದ ರೂಪಗೊಂಡ ಏಕಶಿಲಾ ವಿಗ್ರಹವಾಗಿದೆ. ದಕ್ಷಿಣಕ್ಕೆ ನರಸಿಂಹ, ಉತ್ತರಕ್ಕೆ ವರಾಹ, ಊರ್ಧ್ವಮುಖಕ್ಕೆ ಹಯಗ್ರೀವ, ಪಶ್ಚಿಮಕ್ಕೆ ಗರುಡ ಇರುವ ಪಂಚಮುಖಿ ಆಂಜನೇಯ ವಿಗ್ರಹವು ಶನಿದೋಷ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದೆ.