ಕನ್ನಡ ಸುದ್ದಿ  /  Karnataka  /  Ananth Kumar Birth Anniversary: Ananth Kumar Himself Was Motivational Force - Fulfill His Desire Of The Future Said Speaker Vishveshwara Hegade Kageri

Ananth Kumar birth anniversary: ಅನಂತ ಪ್ರೇರಕ ಶಕ್ತಿ- ಭವಿಷ್ಯದ ಅಪೇಕ್ಷೆ ಈಡೇರಿಸಿ; ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

Anantha Prerana: ಅನಂತಕುಮಾರ್‌ ಅವರು ಭವಿಷ್ಯದ ಬಗ್ಗೆ ವ್ಯಕ್ತಪಡಿಸುತ್ತಿದ್ದ ಅಪೇಕ್ಷೆಯನ್ನು ಈಡೇರಿಸುವತ್ತ ಕಂಕಣಬದ್ದರಾಗಿರಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿದಿವಂಗತ ಅನಂತಕುಮಾರ್‌ 63 ನೇ ಜನ್ಮದಿನಾಚರಣೆಗೆ ಪ್ರೇರಣದಾಯಕ ಕಾರ್ಯಕ್ರಮಗಳುವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಅನಂತಯಾನ ಪುಸ್ತಕ ಲೋಕಾರ್ಪಣೆ

Ananth Kumar birth anniversary: ದಿವಂಗತ ಅನಂತಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಬಿ.ಸಿ.ನಾಗೇಶ್‌, ಆರೆಸ್ಸೆಸ್‌ನ ವಿ.ನಾಗರಾಜ, ಪ್ರೊ.ಪಿ.ವಿ.ಕೃಷ್ಣಭಟ್‌, ತೇಜಸ್ವಿನಿ ಅನಂತಕುಮಾರ್‌ ಮತ್ತು ಇತರೆ ಗಣ್ಯರು.
Ananth Kumar birth anniversary: ದಿವಂಗತ ಅನಂತಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಬಿ.ಸಿ.ನಾಗೇಶ್‌, ಆರೆಸ್ಸೆಸ್‌ನ ವಿ.ನಾಗರಾಜ, ಪ್ರೊ.ಪಿ.ವಿ.ಕೃಷ್ಣಭಟ್‌, ತೇಜಸ್ವಿನಿ ಅನಂತಕುಮಾರ್‌ ಮತ್ತು ಇತರೆ ಗಣ್ಯರು.

ಬೆಂಗಳೂರು (Ananth Kumar birth anniversary) : ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌ ಅವರದ್ದು ಚುಂಬಕ

ವ್ಯಕ್ತಿತ್ವ. ಅವರು ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದಂತಹ ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸುತ್ತ ಕಂಕಣಬದ್ದರಾಗಿರಬೇಕು ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಅವರು, ಇಂದು ದಿವಂಗತ ಅನಂತಕುಮಾರ್‌ ಅವರ 63 ನೇ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಅನಂತ ಪ್ರೇರಣ (Anantha Prerana) ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, 1963 ಸುಮಾರು 40 ವರ್ಷಗಳ ಒಡನಾಟ ನಮ್ಮದು. ಪಿಯುಸಿ ಫಸ್ಟ್‌ ಇಯರ್‌ನಲ್ಲಿ ಇರುವಾಗ ನನ್ನ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಕ್ಷಣದಿಂದ ನನ್ನ ಒಡನಾಟ ಅನಂತಕುಮಾರ್‌ ಜತೆ ಆಗಿದೆ. ಅನಂತ ಕುಮಾರ್‌ ಅವರದ್ದು ಆಕರ್ಷಕ ವ್ಯಕ್ತಿತ್ವ. ಅವರ ಒಡನಾಟ ನೆನೆಪು ಮಾಡಿಕೊಳ್ಳುವುದು ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದರು.

<p>ಅನಂತ ಯಾನ ಪುಸ್ತಕ ಬಿಡುಗಡೆ&nbsp;</p>
ಅನಂತ ಯಾನ ಪುಸ್ತಕ ಬಿಡುಗಡೆ&nbsp;

ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ್ದೇನೆ, ಬಹಳಷ್ಟು ಪರಿಶ್ರಮ ಈ ಪುಸ್ತಕದ ಹಿಂದೆ ಇದೆ. ನಮ್ಮೆಲ್ಲರ ಭಾವನೆಗಳ ಜೊಡಣೆ ಪುಸ್ತಕದಲ್ಲಿ ಆಗಿದೆ. ಅನಂತ ಕುಮಾರ್‌ ನೆನಪು ಸದಾ ಹಸಿರಾಗಿರಬೇಕು, ಅದಕ್ಕೆ ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳ ಹೆಚ್ಚಾಗಬೇಕು. ಅವರ ನೆನೆಪು ಎಂದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೇರಣೆ ಪಡೆದು ಮುಂದಕ್ಕೆ ಹೋಗುವಂತಹದ್ದು.

ಅವರು ಕಂಡಿದ್ದ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸಲು ಕಂಕಣಬದ್ದರಾಗಿಬೇಕು. ಅವರು ನಮ್ಮೊಂದಿಗೆ ಇಂದು ಇಲ್ಲ, ಅವರು ಮಾಡಿರುವ ಕೆಲಸದ ಮೂಲಕ ಅವರು ಇನ್ನು ನಮ್ಮ ಮಧ್ಯೆ ಇದ್ದಾರೆ. ತೇಜಸ್ವಿನಿ ಅನಂತಕುಮಾರ್‌ ಅವರ ಕ್ರೀಯಾಶೀಲ ಕಾರ್ಯಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು.

ಅನಂತಕುಮಾರ್‌ ಅವರ ಹಿಂದಿನ ಶಕ್ತಿಯಾಗಿ ಕಾರ್ಯನಿರ್ವಹಿಸಿದವರು ತೇಜಸ್ವಿನಿ. ಸಮಾಜಕ್ಕೆ ಒಳ್ಳೆಯದಾಗಬೇಕು ಎನ್ನುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾಗಿದೆ. ಎಲ್ಲ ರಂಗಗಳು ತಮ್ಮ ಆದರ್ಶಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲದ್ದೇವೆ. ಇದರಿಂದ ಹೊರಬಂದು ಒಳ್ಳೆಯ ಆದರ್ಶ ಕಾಣಬೇಕಾದರೆ ಅನಂತಕುಮಾರ್‌ ಅವರಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗಿದೆ. ಲಕ್ಷಾಂತರ ಜನರಲ್ಲಿ ಒಳ್ಳೆಯ ವ್ಯಕ್ತಿತ್ವಕ್ಕೆ ಪ್ರೇರಣೆಯಾದವರು ಅನಂತಕುಮಾರ್‌. ಅವರ ಎಲ್ಲಾ ಚಟುವಟಿಕೆಗಳಿಗೆ ಕೈಜೋಡಿಸಿ ಅನುಷ್ಠಾನಗೊಳಿಸಬೇಕಾಗಿದೆ. ನಾಳಿನ ಕಾರ್ಯಕ್ರಮದಲ್ಲೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌, ವಿಶ್ರಾಂತ ನ್ಯಾಯಮೂರ್ತಿ ಎನ್‌ ಕುಮಾರ್‌, ಪದ್ಮಶ್ರೀ ದೊಡ್ಡರಂಗೇಗೌಡ್ರು, ಕ.ರಾ.ಗ್ರಾ.ಪ ವಿಶ್ವವಿದ್ಯಾಲಯದ ಉಪಕುಲಪತಿ ವಿಷ್ಣುಕಾತ್‌ ಚಟ್ಪಲ್ಲಿ, ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ ವಿ ಕೃಷ್ಣ ಭಟ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಪ್ರದರ್ಶಿನಿಯನ್ನು ಉದ್ಘಾಟಿಸಿದರು.

<p>ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಅವರು ಪ್ರದರ್ಶಿನಿ ಉದ್ಘಾಟಿಸಿದರು.&nbsp;</p>
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಅವರು ಪ್ರದರ್ಶಿನಿ ಉದ್ಘಾಟಿಸಿದರು.&nbsp;

ನಾಳೆ ಬೆಳಗ್ಗೆ 11 ಗಂಟೆಗೆ ಅನಂತ್ ಕುಮಾರ್ ಅವರ ಜತೆ ಕೆಲಸ ಮಾಡಿದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮವಿದ್ದು, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.

IPL_Entry_Point