ಅತಿಥಿ ಉಪನ್ಯಾಸಕರ ಹುದ್ದೆಗೆ ಇಂದಿನಿಂದ ಅರ್ಜಿ ಆಹ್ವಾನ; ಕೌನ್ಸೆಲಿಂಗ್ ಮೂಲಕ ನೇಮಕ, ಕೊನೆಯ ದಿನಾಂಕ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಅತಿಥಿ ಉಪನ್ಯಾಸಕರ ಹುದ್ದೆಗೆ ಇಂದಿನಿಂದ ಅರ್ಜಿ ಆಹ್ವಾನ; ಕೌನ್ಸೆಲಿಂಗ್ ಮೂಲಕ ನೇಮಕ, ಕೊನೆಯ ದಿನಾಂಕ ಹೀಗಿದೆ

ಅತಿಥಿ ಉಪನ್ಯಾಸಕರ ಹುದ್ದೆಗೆ ಇಂದಿನಿಂದ ಅರ್ಜಿ ಆಹ್ವಾನ; ಕೌನ್ಸೆಲಿಂಗ್ ಮೂಲಕ ನೇಮಕ, ಕೊನೆಯ ದಿನಾಂಕ ಹೀಗಿದೆ

Guest Lecturer Vacancy: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಇಂದಿನಿಂದ (ಆಗಸ್ಟ್​ 31) ಅರ್ಜಿ ಆಹ್ವಾನಿಸಿದೆ.

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕವೇ ಗೆಸ್ಟ್​ ಲೆಕ್ಚರರ್​ಗಳ ನೇಮಕಕ್ಕೆ ಸೂಚನೆ ನೀಡಿದೆ.

ಇಂದಿನಿಂದ (ಆಗಸ್ಟ್​ 31ರ) ಆನ್​ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಕೊನೆಯ ದಿನಾಂಕ ಸೆಪ್ಟೆಂಬರ್​ 7. ಅಲ್ಲದೆ, ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳು ಆಯಾ ಕಾಲೇಜಿನಲ್ಲೇ ಮುಂದುವರಿಯಲು ಇಚ್ಛಿಸಿದರೆ ಮುಂದುವರೆಯಬಹುದು.

ಅವರಿಗೆ ಯಾವುದೇ ಕೌನ್ಸೆಲಿಂಗ್ ನಡೆಸದೆ ಮುಂದುವರಿಯಲು ಅವಕಾಶ ನೀಡಲಾಗಿದೆ. ಹೀಗೆ ಮುಂದುವರೆಯುವ ಅಭ್ಯರ್ಥಿಗಳಿಗೆ ಕಂಟಿನ್ಯೂಷನ್ ಆಪ್ಷನ್ ಅನ್ನು ಆಯ್ಕೆ ಮಾಡುವ ಮುನ್ನ ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರಿಂದ ಕಾರ್ಯಭಾರ ಮಾಹಿತಿ ಪಡೆಯುವಂತೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಬಳಿಕ ಉಳಿಯುವ ಹುದ್ದೆಗಳಿಗೆ ಮತ್ತೊಂದು ಸುತ್ತಿನಲ್ಲಿ ಕೌನ್ಸೆಲಿಂಗ್ ನಡೆಸುವ ಮೂಲಕ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗುತ್ತದೆ. ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು.

ಈ ಮಾನದಂಡಗಳಿಗೆ ಅನುಗುಣವಾಗಿ ವೇಯ್ಟೇಜ್ ನೀಡಬೇಕು. ಸೇವಾವಧಿ ಮತ್ತು ವಿದ್ಯಾರ್ಹತೆಗೆ ಅನುಗುಣವಾಗಿ ಗೌರವಧನ ನಿಗದಿಪಡಿಸಬೇಕು. ಗೌರವಧನ ಕನಿಷ್ಠ 31 ಸಾವಿರದಿಂದ 40 ಸಾವಿರ ರೂ.ವರೆಗೆ ನಿಗದಿ ಮಾಡಲಾಗಿದೆ.

ಕಲಾ, ವಾಣಿಜ್ಯ ಮತ್ತು ಭಾಷಾ ವಿಷಯಗಳಿಗೆ ಗರಿಷ್ಠ 15 ಗಂಟೆಗಳು ಹಾಗೂ ವಿಜ್ಞಾನ ವಿಷಯಗಳು ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರ ಹಂಚಿಕೆ ಮಾಡಲಾಗುತ್ತದೆ.

ನಿಗದಿತ ಅವಧಿಗಿಂತ ಕಡಿಮೆ ಕಾರ್ಯಭಾರ ಇದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವ ಧನ ಪರಿಗಣಿಸಬೇಕು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿ ಸಲ್ಲಿಸುವ ಮತ್ತು ಆಯ್ಕೆಯ ಕುರಿತು ವಿವರ

ಆಗಸ್ಟ್ 31 ರಿಂದ ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ

ಸೆಪ್ಟೆಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನ

ಸೆಪ್ಟೆಂಬರ್​ 8 ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ

ಸೆಪ್ಟೆಂಬರ್ 9, 10 ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ

ಸೆಪ್ಟೆಂಬರ್​ 11 ಕಾರ್ಯಾಭಾರ ಪ್ರಕಟ

ಸೆಪ್ಟೆಂಬರ್ 17 ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಕೌನ್ಸೆಲಿಂಗ್

 

Whats_app_banner